ನನ್ನ ವಿರುದ್ಧ ಸ್ಪರ್ಧಿಸಲು ಶ್ರೀರಾಮುಲು ಕೇಸ್ ಕೊಡಿಸಿರಬಹುದು; ನಾಗೇಂದ್ರ ಆರೋಪ


Team Udayavani, May 14, 2022, 9:39 AM IST

nagendra

ಬಳ್ಳಾರಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗ್ರಾಮೀಣ ಕ್ಷೇತ್ರದಿಂದ ನನ್ನ  ವಿರುದ್ಧ ಸ್ಪರ್ಧಿಸುವ ಸಲುವಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರೇ ಆಸೀಫ್‌ ರಿಂದ ಈ ದೂರು ದಾಖಲಿಸಿರಬಹುದು ಎಂದು ಗ್ರಾಮೀಣ ಶಾಸಕ ಬಿ.ನಾಗೇಂದ್ರ ಗಂಭೀರವಾಗಿ ಆರೋಪಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಬಾವಮೈದ ಟಿ.ಜಿ.ಎರಿಸ್ವಾಮಿ ವಿರುದ್ದ ಕೌಲ್‌ಬಜಾರ್ ಪೊಲೀಸ್ ಠಾಣೆಯಲ್ಲಿ ಆಸೀಫ್ ದೂರು ನೀಡಿರುವ ವಿಚಾರ ಮಾಧ್ಯಮಗಳಿಂದ ತಿಳಿದು ಬಂದಿದೆ. ದೂರುದಾರ ಅಸೀಫ್ ನಮ್ಮ ಪಕ್ಷದ ಕಟ್ಟಾಳು. ಎರ‍್ರಿಸ್ವಾಮಿ-ಆಸೀಫ್ ಇಬ್ಬರೂ ಪರಮಾಪ್ತರಾಗಿದ್ದರು. ಇಬ್ಬರೂ ಸ್ನೇಹಿತರು ಎನ್ನುವುದಕ್ಕಿಂತ ಮಾವ-ಅಳಿಯನಂತೆ ಇದ್ದರು. ಆದರೆ, ಮೇಯರ್ ಸ್ಥಾನಕ್ಕಾಗಿ ಹಣ ಕೊಟ್ಟಿದ್ದಾರೆ ಎನ್ನುವ ಸುದ್ದಿಕೇಳಿ ನನಗೇ ದಿಗ್ಭ್ರಮೆಯಾಗಿದೆ ಎಂದು ತಿಳಿಸಿದ್ದಾರೆ.

ಪಾಲಿಕೆ ಸದಸ್ಯ ಆಸೀಫ್ ದೂರು ನೀಡಿರುವ ಬಗ್ಗೆ ತನಿಖೆ ನಡೆಸಿರುವೆ. ಆಸೀಫ್‌ ರನ್ನು ಬಿಜೆಪಿಗೆ ಸೆಳೆಯುವ ಸಲುವಾಗಿ, ಬಿಜೆಪಿಯ ಕೆಲ ನಾಯಕರು ಒತ್ತಡ ಹೇರಿ ದೂರು ಕೊಡಿಸಿದ್ದಾರೆ. ಎರ‍್ರಿಸ್ವಾಮಿ ನಮ್ಮ ಪಕ್ಷದ ಬಲಿಷ್ಠ ಶಕ್ತಿಯಾಗಿದ್ದು, ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಸದಸ್ಯರನ್ನು ಗೆಲ್ಲಿಸುವಲ್ಲಿ ಅವರದ್ದು ದೊಡ್ಡ ಶಕ್ತಿಯಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗ್ರಾಮೀಣ ಕ್ಷೇತ್ರದಿಂದ ನನ್ನ ವಿರುದ್ಧ ಸ್ಪರ್ಧಿಸುವ ಸಲುವಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಈ ರೀತಿ ಪ್ರಕರಣ ದಾಖಲಿಸಿರಬಹುದು ಎಂದು ಅನುಮಾನ ವ್ಯಕ್ತಪಡಿಸಿರುವ ಶಾಸಕ ಬಿ.ನಾಗೇಂದ್ರ ಇದು ತಂತ್ರಗಾರಿಕೆಯಲ್ಲ, ಕುತಂತ್ರಗಾರಿಕೆ. ನಮ್ಮ ಪಕ್ಷದ ಪಾಲಿಕೆ ಸದಸ್ಯರನ್ನು ಸೆಳೆಯಲು ಕುತಂತ್ರ ಮಾಡುತ್ತಿದ್ದಾರೆ. ಅದಕ್ಕಾಗಿ ಸದಸ್ಯರಿಗೆ ಆಮಿಷವನ್ನೂ ಒಡ್ಡುತ್ತಿದ್ದಾರೆ. ಪಾಲಿಕೆ ಸದಸ್ಯರನ್ನು ಬೆದರಿಕೆ ಹಾಕಿ, ಹಳೆ ಪ್ರಕರಣಗಳನ್ನು ಓಪೆನ್ ಮಾಡುವುದಾಗಿ ಭಯಭೀತರನ್ನಾಗಿ ಮಾಡುತ್ತಿದ್ದಾರೆ. ನಮ್ಮ ಪಕ್ಷದ ಸದಸ್ಯರು, ಮುಖಂಡರ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇದೇ ವೇಳೆ ಬಿಜೆಪಿಯವರ ಈ ಕುತಂತ್ರಕ್ಕೆ ನಮ್ಮ ಪಕ್ಷ ಬಗ್ಗಲ್ಲ ಎಂದ ಶಾಸಕ ಬಿ.ನಾಗೇಂದ್ರ, ನಮ್ಮ ಪಕ್ಷದ ನಾಯಕರು ಸಹ ನಮ್ಮ ಜೊತೆಗೆ ಇದ್ದಾರೆ. ನನ್ನ ವರ್ಚಸ್ಸು ಅಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿಯವರ ವರ್ಚಸ್ಸನ್ನು ಸಹ ಡ್ಯಾಮೇಜ್ ಮಾಡುವ ಪ್ರಯತ್ನಗಳನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ ಎಂದರು.

ಹಣ ಪಡೆದಿದ್ದು ನೋಡಿದ್ದೀರಾ?: ಟಿ.ಜಿ.ಎರ‍್ರಿಸ್ವಾಮಿ, ಆಸೀಫ್ ಒಟ್ಟಾಗಿ ಸಾಕಷ್ಟು ವ್ಯವಹಾರಗಳನ್ನು ಮಾಡಿದ್ದಾರೆ. ಮೇಯರ್ ಸ್ಥಾನಕ್ಕೆ ಹಣ ಪಡೆದಿದ್ದಾರೆ ಎನ್ನವುದನ್ನು ನೀವು ನೋಡಿದ್ದೀರಾ ಎಂದು ಪ್ರಶ್ನಿಸಿದ ನಾಗೇಂದ್ರ, ಯಾವ ಮೂಲಕ ಹಣ ಕೊಟ್ಟಿದ್ದಾರೆ. ಹಣ ಪಡೆದಿದ್ದಕ್ಕೆ ಏನು ಸಾಕ್ಷಿಯಿದೆ? ಮೇಯರ್ ಸ್ಥಾನಕ್ಕೆ ಯಾವುದೇ ಹಣಕಾಸು ವ್ಯವಹಾರ ನಡೆದಿಲ್ಲ. ಆಸೀಫ್ ಅವರ ಕೆಲಸ ಸಮಸ್ಯೆಗಳ ಬಗ್ಗೆ ನಾನು ಅವರ ಮನೆಗೆ ಹೋಗಿ ಅವರ ಆತಂರಿಕ ವಿಚಾರ ಬಗೆಹರಿಸಿ ಬಂದಿದ್ದೇನೆ. ಒಂದು ವೇಳೆ ಮೇಯರ್ ಸ್ಥಾನಕ್ಕಾಗಿ ಹಣಕಾಸು ವಿಚಾರ ಬಂದಿದ್ದರೆ ನನ್ನ ಗಮನಕ್ಕೆ ಬರುತಿತ್ತು. ಆಸೀಫ್‌ಗೆ ತಪ್ಪಿನ ಅರಿವು ಆದ ಮೇಲೆ ಎಲ್ಲವನ್ನೂ ಬಹಿರಂಗಪಡಿಸಬಹುದು. ನಾವೂ ಆಸೀಫ್‌ರನ್ನು ಮೇಯರ್ ಮಾಡಬೇಕೆಂದಿತ್ತು. ಆದರೆ, ಮೀಸಲಾತಿ ಬದಲಾಯಿತು ಎಂದು ಶಾಸಕ ನಾಗೇಂದ್ರ ಸ್ಪಷ್ಟಪಡಿಸಿದ್ದಾರೆ.

ಟಾಪ್ ನ್ಯೂಸ್

ಟೀ ಕತೆ ಮತ್ತು ಆರ್ಥಿಕತೆ

ಟೀ ಕತೆ ಮತ್ತು ಆರ್ಥಿಕತೆ

ಮೌಲ್ಯಮಾಪನಕ್ಕೂ ಸೂಕ್ತ ಮಾನದಂಡವಿರಲಿ

ಮೌಲ್ಯಮಾಪನಕ್ಕೂ ಸೂಕ್ತ ಮಾನದಂಡವಿರಲಿ

ಸೋಲು ಅಂತಿಮವಲ್ಲ; ಯಶಸ್ಸು ಶಾಶ್ವತವಲ್ಲ

ಸೋಲು ಅಂತಿಮವಲ್ಲ; ಯಶಸ್ಸು ಶಾಶ್ವತವಲ್ಲ

ಹಿಂದೂ ದೇವತೆಗಳಿಗೆ ಅವಮಾನ ಖಂಡನಾರ್ಹ

ಹಿಂದೂ ದೇವತೆಗಳಿಗೆ ಅವಮಾನ ಖಂಡನಾರ್ಹ

ಕುಂಬಳೆ : ಅನುಮಾನಾಸ್ಪದವಾಗಿ ಪತ್ತೆಯಾದ ಕಾರಿನೊಳಗೆ ಇತ್ತು ಸುತ್ತಿಗೆ

ಕುಂಬಳೆ : ಅನುಮಾನಾಸ್ಪದವಾಗಿ ಪತ್ತೆಯಾದ ಕಾರಿನೊಳಗೆ ಇತ್ತು ಸುತ್ತಿಗೆ

ಪಿಎಸ್ ಐ ನೇಮಕಾತಿ ಹಗರಣದ ಆರೋಪ : ಇಬ್ಬರು ಅಧಿಕಾರಿಗಳ ಅಮಾನತು

ಪಿಎಸ್ ಐ ನೇಮಕಾತಿ ಹಗರಣದ ಆರೋಪ : ಇಬ್ಬರು ಅಧಿಕಾರಿಗಳ ಅಮಾನತು

ಬಿಜೆಪಿ ನಾಯಕ ಕಪಿಲ್ ಮಿಶ್ರಾಗೆ ಕೊಲೆ ಬೆದರಿಕೆಯ ಇ ಮೇಲ್

ಬಿಜೆಪಿ ನಾಯಕ ಕಪಿಲ್ ಮಿಶ್ರಾಗೆ ಕೊಲೆ ಬೆದರಿಕೆಯ ಇ ಮೇಲ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಶಕದ ಎಡಿಬಿ ಕಾಮಗಾರಿಗೆ ಗ್ರಹಣ

ದಶಕದ ಎಡಿಬಿ ಕಾಮಗಾರಿಗೆ ಗ್ರಹಣ

ಪ್ರಬಲ ಹೋರಾಟವೊಂದೇ ದಾರಿ; ಕೆ.ವಿ.ಭಟ್‌

ಪ್ರಬಲ ಹೋರಾಟವೊಂದೇ ದಾರಿ; ಕೆ.ವಿ.ಭಟ್‌

ಉದಯಪುರದ ಕನ್ನಯ್ಯಲಾಲ್ ಕೊಲೆ ಖಂಡಿಸಿ ಬಳ್ಳಾರಿ ಬಂದ್

ಉದಯಪುರದ ಕನ್ನಯ್ಯಲಾಲ್ ಕೊಲೆ ಖಂಡಿಸಿ ಬಳ್ಳಾರಿ ಬಂದ್

ವೀಕೇಂಡ್ : ದಕ್ಷಿಣಕಾಶಿ ಖ್ಯಾತಿಯ ಹಂಪಿಗೆ ಪ್ರವಾಸಿಗರ ದಂಡು, ದೇವರ ದರ್ಶನ ಪಡೆದ ಭಕ್ತರು

ವೀಕೇಂಡ್ : ದಕ್ಷಿಣಕಾಶಿ ಖ್ಯಾತಿಯ ಹಂಪಿಗೆ ಪ್ರವಾಸಿಗರ ದಂಡು, ದೇವರ ದರ್ಶನ ಪಡೆದ ಭಕ್ತರು

ಹೊಸಪೇಟೆ: ಕನ್ನಯ್ಯಲಾಲ್ ಹತ್ಯೆ ಖಂಡಿಸಿ ಪ್ರತಿಭಟನೆ ; ಲಘು ಲಾಠಿ ಪ್ರಹಾರ, ಹಲವಾರು ವಶಕ್ಕೆ

ಹೊಸಪೇಟೆ: ಕನ್ನಯ್ಯಲಾಲ್ ಹತ್ಯೆ ಖಂಡಿಸಿ ಪ್ರತಿಭಟನೆ ; ಲಘು ಲಾಠಿ ಪ್ರಹಾರ, ಹಲವರು ವಶಕ್ಕೆ

MUST WATCH

udayavani youtube

ಸಿಧು ಮೂಸೆವಾಲಾ ಹಂತಕರು ಕಾರಿನಲ್ಲಿ ಗನ್ ಹಿಡಿದು ಸಂಭ್ರಮಿಸಿದ ವೀಡಿಯೋ ವೈರಲ್

udayavani youtube

ಚಾರ್ಮಾಡಿ : ರಸ್ತೆ ಮಧ್ಯೆಯೇ ಮೋಜು ಮಸ್ತಿ, ಪ್ರವಾಸಿಗರ ಪುಂಡಾಟಕ್ಕೆ ವಾಹನ ಸವಾರರು ಸುಸ್ತು

udayavani youtube

ಭಾರಿ ಮಳೆಗೆ ಹೆಬ್ಬಾಳ ಸೇತುವೆ ಮುಳುಗಡೆ : ಕಳಸ – ಹೊರನಾಡು ಸಂಪರ್ಕ ಕಡಿತ

udayavani youtube

ಇಬ್ಬರು ಶಸ್ತ್ರ ಸಜ್ಜಿತ ಲಷ್ಕರ್ ಉಗ್ರರನ್ನು ಹಿಡಿದು ಕೊಟ್ಟ ಕಾಶ್ಮೀರದ ಗ್ರಾಮಸ್ಥರು

udayavani youtube

ಜಿಂಕೆಯನ್ನು ನುಂಗಿದ್ದ 80 ಕೆ.ಜಿ. ತೂಕದ 14 ಅಡಿ ಉದ್ದದ ಹೆಬ್ಬಾವು!

ಹೊಸ ಸೇರ್ಪಡೆ

ಟೀ ಕತೆ ಮತ್ತು ಆರ್ಥಿಕತೆ

ಟೀ ಕತೆ ಮತ್ತು ಆರ್ಥಿಕತೆ

ಮೌಲ್ಯಮಾಪನಕ್ಕೂ ಸೂಕ್ತ ಮಾನದಂಡವಿರಲಿ

ಮೌಲ್ಯಮಾಪನಕ್ಕೂ ಸೂಕ್ತ ಮಾನದಂಡವಿರಲಿ

ಸೋಲು ಅಂತಿಮವಲ್ಲ; ಯಶಸ್ಸು ಶಾಶ್ವತವಲ್ಲ

ಸೋಲು ಅಂತಿಮವಲ್ಲ; ಯಶಸ್ಸು ಶಾಶ್ವತವಲ್ಲ

ಹಿಂದೂ ದೇವತೆಗಳಿಗೆ ಅವಮಾನ ಖಂಡನಾರ್ಹ

ಹಿಂದೂ ದೇವತೆಗಳಿಗೆ ಅವಮಾನ ಖಂಡನಾರ್ಹ

ಗದ್ದೆ ಬದಿಯಲ್ಲಿ ಕಾಲು ಜಾರಿ ಬಿದ್ದು ಯುವ ಕೃಷಿಕ ಸಾವು

ಗದ್ದೆ ಬದಿಯಲ್ಲಿ ಕಾಲು ಜಾರಿ ಬಿದ್ದು ಯುವ ಕೃಷಿಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.