ಪಾಲಿಕೆ ಆಯುಕ್ತರ ವಿರುದ್ದ ದಿಢೀರ್ ಪ್ರತಿಭಟನೆ
Team Udayavani, Jun 24, 2022, 8:54 PM IST
ಬಳ್ಳಾರಿ: ಪ್ಲಾಸ್ಟಿಕ್ ರದ್ಧತಿ ಸಂಬಂಧ ಬೆಳಗ್ಗೆ 11 ಗಂಟೆಗೆನಿಗದಿಯಾಗಿದ್ದ ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿಸಭೆಯ ವಿಷಯದಲ್ಲಿ ಪಾಲಿಕೆ ಆಯುಕ್ತರಾದ ಪ್ರೀತಿಗೆಹೊÉಟ್ ಅವರು ನಡೆದುಕೊಂಡಿದ್ದರ ವಿರುದ್ಧಮೇಯರ್, ಉಪ ಮೇಯರ್, ಸ್ಥಾಯಿ ಸಮಿತಿಅಧ್ಯಕ್ಷರು ದಿಢೀರ್ ಪ್ರತಿಭಟನೆ ಮೂಲಕ ಆಕ್ರೋಶಹೊರಹಾಕಿದ ಘಟನೆ ಇಂದು ನಡೆದಿದೆ.
ಬೆಳಗ್ಗೆ ನಿಗದಿಯಾಗಿದ್ದ ಸಭೆಗೆ ಸರಿಯಾದಸಮಯಕ್ಕೆ ಮೇಯರ್ ರಾಜೇಶ್ವರಿ, ಉಪಮೇಯರ್ ಮಾಲನ್ ಬಿ, ಸ್ಥಾಯಿ ಸಮಿತಿ ಅಧ್ಯಕ್ಷರುಆಗಮಿಸಿದ್ದರು. 12 ಗಂಟೆ ಆದರೂ ಆಯುಕ್ತರುಸಭೆಗೆ ಬರಲಿಲ್ಲ. ಕಾದು ಕಾದು ಸುಸ್ತಾದ ಮೇಯರ್‌ಮತ್ತವರ ಸಂಗಾತಿಗಳು ಕೆಲ ಹೊತ್ತು ತಮ್ಮ ತಮ್ಮಕೊಠಡಿಗಳಿಗೆ ಹೋಗಿದ್ದಾರೆ.
ಈ ವೇಳೆ ಆಗಮಿಸಿದಆಯುಕ್ತರು ಮೇಯರ್, ಉಪ ಮೇಯರ್,ಸ್ಥಾಯಿ ಸಮಿತಿ ಅಧ್ಯಕ್ಷರು ಇಲ್ಲದೇ ಇದ್ದರೂಸಭೆ ಆರಂಭಿಸಿದ್ದಾರೆ. ಇದರಿಂದ ಕುಪಿತಗೊಂಡಮೇಯರ್, ಉಪ ಮೇಯರ್, ಸ್ಥಾಯಿ ಸಮಿತಿಅಧ್ಯಕ್ಷರು ಪಾಲಿಕೆ ಸಭಾಂಗಣದ ಮುಂದೆ ನೆಲದಮೇಲೆ ಕುಳಿತು ಪ್ರತಿಭಟನೆ ವ್ಯಕ್ತಪಡಿಸಿದರು.