ಕಲ್ಯಾಣ ಭಾಗಕ್ಕೆ ಆದ ಅನ್ಯಾಯ ಸರಿಪಡಿಸಿ
Team Udayavani, Jul 1, 2022, 4:21 PM IST
ಬಳ್ಳಾರಿ: ರಾಜ್ಯ ಸರ್ಕಾರ 371ಜೆ ಅನುಷ್ಠಾನಕ್ಕಾಗಿಇದೇ ಜೂ.15ರಂದು ಹೊರಡಿಸಿರುವಸುತ್ತೋಲೆಯಲ್ಲಿರುವ ಗೊಂದಲ ನಿವಾರಿಸಬೇಕು,ಇದರಿಂದ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಆಗುತ್ತಿರುವಅನ್ಯಾಯ ಸರಿಪಡಿಸಬೇಕು ಎಂದು ಆಗ್ರಹಿಸಿನಗರದ ಡಿಸಿ ಕಚೇರಿ ಆವರಣದಲ್ಲಿ ಹೈದರಾಬಾದ್‌ಕರ್ನಾಟಕ ಹೋರಾಟ ಸಮಿತಿ ಜಿಲ್ಲಾ ಘಟಕದಿಂದಗುರುವಾರ ಪ್ರತಿಭಟನೆ ನಡೆಸಲಾಯಿತು.
ರಾಜ್ಯ ಸರ್ಕಾರವು ಈಚೆಗೆ ಜೂನ್ 15ರಂದುಸುತ್ತೋಲೆಯೊಂದನ್ನು ಹೊರಡಿಸಿದೆ. ಇದರಪ್ರಕಾರ ಈಗಾಗಲೇ ನಡೆಯುತ್ತಿರುವ ಎಲ್ಲನೇಮಕಾತಿಗಳು ಹಿಂದಿನ ಸುತ್ತೋಲೆಯಂತೆ, ಇನ್ನುಮುಂದೆ ನಡೆಯುವ ನೇಮಕಾತಿಗಳನ್ನು ಗೆಜೆಟೆಡ್‌ಪ್ರೊಬೇಷನರ್ ಹುದ್ದೆಗಳಿಗೆ ವೃಂದಗಳ ಆಯ್ಕೆಗೆಅವಕಾಶ, ಇನ್ನುಳಿದ ಹುದ್ದೆಗಳಿಗೆ ಎರಡೆರಡುಅಧಿ ಸೂಚನೆ, ಎರಡು ಅರ್ಜಿ, ಎರಡು ಶುಲ್ಕ,ಎರಡು ಪರೀಕ್ಷೆ, ಎರಡು ಆಯ್ಕೆ ಪಟ್ಟಿ ರಚಿಸಲುಸೂಚಿಸಲಾಗಿದೆ.
ಇದರಿಂದ ನೇಮಕಾತಿ ಪ್ರಾಧಿಕಾರಗಳು ಮತ್ತು ಅಭ್ಯರ್ಥಿಗಳಲ್ಲಿ ಗೊಂದಲಗಳುಉಂಟಾಗುತ್ತಿದೆ. ಪ್ರತಿಯೊಂದು ನೇಮಕಾತಿಗಳುನ್ಯಾಯಾಲಯಗಳ ಪಟ್ಟಿ ಏರುತ್ತಿವೆ. ಆದ್ದರಿಂದಕಲ್ಯಾಣ ಕರ್ನಾಟಕ ಭಾಗಕ್ಕೆ ಸಿಕ್ಕಿರುವ ಸಂವಿಧಾನಬದ್ಧ ಹಕ್ಕು ಕಸಿದುಕೊಂಡಂತಾಗುತ್ತದೆ ಎಂದುಹೋರಾಟ ಸಮಿತಿಯ ಅಧ್ಯಕ್ಷ ಪನ್ನರಾಜ್ ಸಿರಿಗೇರಿಅಸಮಾಧಾನ ವ್ಯಕ್ತಪಡಿಸಿದ್ದಾರೆ.