ಹಳ್ಳಿ ಜನರ ಬದುಕಿನಲ್ಲಡಗಿದೆ ಭಿನ್ನ ಸಂಸ್ಕೃತಿಗಳ ಆಚರಣೆ

ಕಸಾಪದಿಂದ ಹಮ್ಮಿಕೊಂಡಿದ್ದ ವೇದಾವತಿ ತೀರ ಕಾದಂಬರಿ ಬಿಡುಗಡೆ ಕಾರ್ಯಕ್ರಮವನ್ನು ವಿಮ್ಸ್‌ ಆಡಳಿತಾ ಧಿಕಾರಿ ಡಾ| ಎ.ಚನ್ನಪ್ಪ ಉದ್ಘಾಟಿಸಿದರು.

Team Udayavani, Jan 25, 2021, 5:58 PM IST

25-24

ಬಳ್ಳಾರಿ: ಸಂಸ್ಕೃತಿಯನ್ನು ಉಳಿಸುವ ಹಳ್ಳಿಜನರ ಬದುಕಿನಲ್ಲಿ ಭಿನ್ನ ಸಂಸ್ಕೃತಿಗಳ ಆಚರಣೆ ಆಗರವೇ ಅಡಗಿದೆ ಎಂದು ವಿಮ್ಸ್‌ ಆಡಳಿತಾಧಿ ಕಾರಿ ಡಾ| ಎ.ಚನ್ನಪ್ಪ ಅಭಿಪ್ರಾಯ ಪಟ್ಟರು.

ನಗರದ ರೇಡಿಯೋ ಪಾರ್ಕ್‌ನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಪದವಿ ಕಾಲೇಜಿನಲ್ಲಿ ಜಿಲ್ಲಾ ಕಸಾಪ ವತಿಯಿಂದ ಏರ್ಪಡಿಸಲಾಗಿದ್ದ ಡಾ| ಸಂಪಿಗೆ ನಾಗರಾಜರವರ ವೇದಾವತಿ ತೀರದಲ್ಲಿ ಕಾದಂಬರಿ ಕುರಿತ ವಿಚಾರ ಸಂಕಿರಣ
ಉದ್ಘಾಟಿಸಿ ಮಾತನಾಡಿದರು.

ಬಹುಸಂಸ್ಕೃತಿಯ ಗ್ರಾಮೀಣ ಬದುಕಿನಿಂದ ವ್ಯಕ್ತಿಯ ವ್ಯಕ್ತಿತ್ವ ವಿಕಸನವಾಗುವುದು. ಗ್ರಾಮೀಣ ಬದುಕಿನ ಪಲ್ಲಟಗಳ ಆಧುನಿಕತೆಯ ವೇಗವು ಯಾವ ರೀತಿಯಲ್ಲಿ ಬದಲಾವಣೆಗೊಂಡು ಹಳ್ಳಿಗಳು ಸಂಘರ್ಷದ ಹಾದಿಯಲ್ಲಿವೆ ಎಂಬುದನ್ನು ಈ ಕೃತಿಯು ಕಟ್ಟಿಕೊಟ್ಟಿದೆ. ಈ ಕೃತಿಯ ಉದ್ದಕ್ಕೂ ಗಾಂಧಿತತ್ವದ ಬೆಳಕು ಕಂಡು ಬರುತ್ತದೆ. ಈ ಕೃತಿಯು ಒಂದು ಹಳ್ಳಿಯ ಬದುಕನ್ನಷ್ಟೇ ಅಲ್ಲ. ಇಂದಿನ ಗ್ರಾಮ ಭಾರತದ ಜನರ ಮನಸ್ಸಿನ ಧಾವಂತಗಳ ಕನ್ನಡಿಯಾಗಿದೆ ಎಂದರು.

ಕಾದಂಬರಿಯ ಆಶಯಗಳನ್ನು ಕುರಿತು ಮಾತನಾಡಿದ ಉಪನ್ಯಾಸಕ ಟಿ.ಎಂ. ಲಿಂಗರಾಜ, ಮನುಷ್ಯನ ಸಾಮಾಜಿಕ ಬದುಕಿಗೂ ಸಾಹಿತ್ಯ ಪ್ರಕಾರವಾದ ಕಾದಂಬರಿಗೂ ತೀವ್ರ ನಂಟಿದೆ. ವ್ಯವಸ್ಥೆಯಲ್ಲಾಗುವ ಸ್ಥಿತ್ಯಂತರಗಳ ಅಭಿವ್ಯಕ್ತಿಗೆ ಕಾದಂಬರಿ ಸೂಕ್ತವಾಗಿದೆ.
“ವೇದಾವತಿ ತೀರದಲ್ಲಿ’ ಕಾದಂಬರಿಯು ಸಾಮಾಜಿಕ ಪರಿಸರದ ಹಿನ್ನೆಲೆ ಅನುಗುಣವಾಗಿ ಅಲ್ಲಿಯ ತಲೆಮಾರುಗಳಲ್ಲಾಗುವ ಅನೇಕ ಬದಲಾವಣೆಗಳನ್ನು ಚಿತ್ರಿಸುತ್ತದೆ. ಜೀವನದಿ ವೇದಾವತಿಯನ್ನು ಸಂಕೇತವನ್ನಾಗಿರಿಸಿ ಸಾಮಾಜಿಕ ಅಂತಃಕರಣದ ಗ್ರಾಮೀಣ ಪಾತ್ರಗಳು ಹಳ್ಳಿಯನ್ನು ಸಂರಕ್ಷಣೆ ಮಾಡುವ ಕಾರ್ಯವನ್ನು ಹಾಗೂ ಅಲ್ಲಿನ ಆರ್ಥಿಕ ಬದುಕನ್ನು ಸಬಲಗೊಳಿಸುವ ಮತ್ತು ಅಲ್ಲಿನ ಕೆಟ್ಟತನವನ್ನು ಹೋಗಲಾಡಿಸುವಲ್ಲಿ ಶ್ರಮಿಸಿವೆ ಎಂದು ಹೇಳಿದರು.

ಕಾದಂಬರಿಯ ವಸ್ತು ಮತ್ತು ವಿನ್ಯಾಸದ ಕುರಿತು ಮಾತನಾಡಿದ ಚಾಂದ್‌ಪಾಷ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಸಿದ್ದರಾಮಕಲ್ಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾದಂಬರಿಯು ಗಡಿಭಾಗದ ಅನೇಕ ಸಮಸ್ಯೆಗಳನ್ನು ಪ್ರತಿಬಿಂಬಿಸುತ್ತದೆ. ಹೇಗೆ ಹೊರ ರಾಜ್ಯದವರು ಇಲ್ಲಿ ನೆಲೆಸಿ ಗುತ್ತಿಗೆ ಕಾಮಗಾರಿಗಳನ್ನು ನಡೆಸುವ ಮೂಲಕ ದಬ್ಟಾಳಿಕೆ ಮಾಡುತ್ತಾರೆ ಎಂಬುದನ್ನು ಲೇಖಕರು ಸೂಚ್ಯವಾಗಿ ವಿವರಿಸುತ್ತದೆ. ಬಳ್ಳಾರಿ ಜಿಲ್ಲೆಯಲ್ಲಿ ಕೈಗಾರಿಕಾ ಸ್ಥಾಪನೆ, ವಿಮಾನ ನಿಲ್ದಾಣದಂಥ ಸಮಕಾಲೀನ ಸಂಗತಿಗಳ ಮೇಲೆ ಕಾದಂಬರಿ ಬೆಳಕು ಚೆಲ್ಲುತ್ತದೆ ಎಂದರು.

ಕಾದಂಬರಿಕಾರ ಡಾ| ಸಂಪಿಗೆ ನಾಗರಾಜ ಮಾತನಾಡಿದರು. ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ| ಕೆ. ಮಲ್ಲಿಕಾರ್ಜುನ, ವಕೀಲ ಬಂಡ್ರಾಳು ಎಂ. ಮೃತ್ಯುಂಜಯ ಸ್ವಾಮಿ, ಯುವ ಮುಖಂಡ ಕೆ.ಆರ್‌.ಮಲ್ಲೇಶ್‌, ಲೇಖಕ ಡಾ| ಬಿ.ಆರ್‌. ಮಂಜುನಾಥ, ಕೆ.ಎಂ.ಮಂಜುನಾಥ, ಗೌರವ ಕೋಶಾಧ್ಯಕ್ಷ ಟಿ.ಎಂ.ಪಂಪಾಪತಿ ಇದ್ದರು. ವಿದ್ಯಾರ್ಥಿನಿ ಸ್ವರ್ಣಾಂಜಲಿ ಪ್ರಾರ್ಥಿಸಿದರು. ಅನಿತ ಉತ್ತನೂರು ಸ್ವಾಗತಿಸಿದರು. ಶ್ರೀದೇವಿ ರೂಪಿಸಿದರು. ಡಾ| ಸಿ.ಕೊಟ್ರಪ್ಪ ವಂದಿಸಿದರು.

ಓದಿ: ನರೇಗಾ ಕೆಲಸದಲ್ಲಿ ಮಹಿಳೆಯರು ಪಾಲ್ಗೊಳ್ಳಲಿ

ಟಾಪ್ ನ್ಯೂಸ್

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

mamata

EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್

Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್

Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್‌

Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್‌

ವಿಜಯೇಂದ್ರ

Bellary; ಕಾಂಗ್ರೆಸ್ ಏನೇ ಹಾರಾಟ ಮಾಡಿದರೂ ನಮಗೆ ಲಾಭ ಆಗುತ್ತದೆ: ವಿಜಯೇಂದ್ರ

ಚುನಾವಣೆ ಬಳಿಕ ಕಾಂಗ್ರೆಸ್ ನವರು ಕೌರವರಾಗ್ತಾರೆ, ಬಿಜೆಪಿಯವರು ಪಾಂಡವರಾಗ್ತಾರೆ: ಶ್ರೀರಾಮುಲು

Election ಬಳಿಕ ಕಾಂಗ್ರೆಸ್ ನವರು ಕೌರವರಾಗ್ತಾರೆ, ಬಿಜೆಪಿಯವರು ಪಾಂಡವರಾಗ್ತಾರೆ: ಶ್ರೀರಾಮುಲು

Ballari; ಗುರು-ಶಿಷ್ಯ ಪರಂಪರೆಗೆ ವೀರಣ್ಣ ಜ್ವಲಂತ ಸಾಕ್ಷಿ

Ballari; ಗುರು-ಶಿಷ್ಯ ಪರಂಪರೆಗೆ ವೀರಣ್ಣ ಜ್ವಲಂತ ಸಾಕ್ಷಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

sens-2

ಸೆನ್ಸೆಕ್ಸ್‌ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.