Udayavni Special

ಜಿಂದಾಲ್‌ಗೆ ಪರಭಾರೆ ಮಾಡಿರುವ ಭೂಮಿ ಹಿಂಪಡೆಯಿರಿ

Team Udayavani, May 5, 2021, 10:47 PM IST

5-18

ಹೊಸಪೇಟೆ: ಜಿಂದಾಲ್‌ ಕಂಪನಿಗೆ ಪರಭಾರೆ ಮಾಡಿರುವ 3667 ಎಕರೆ ಭೂಮಿಯನ್ನು ಸರ್ಕಾರ ಮರಳಿ ಪಡೆಯಬೇಕು ಎಂದು ಆಗ್ರಹಿಸಿ, ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿ ಕಾರಿಗಳು ಮಂಗಳವಾರ ತಹಶೀಲ್ದಾರ್‌ ದ್ವಾರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ನೂರಾರು ವರ್ಷಗಳಿಂದ ಸಾವಿರಾರು ಎಕರೆಗಳಲ್ಲಿ ಅರಣ್ಯ ಭೂಮಿ ಮತ್ತು ಸರ್ಕಾರಿ ಜಮೀನುಗಳಲ್ಲಿ ಅನೇಕ ವರ್ಷಗಳಿಂದ ಸಾಗುವಳಿ ಮಾಡುವ ಮೂಲಕ ದೇಶಕ್ಕೆ ಅನ್ನ ನೀಡುವ ಬಡ ರೈತರ ಕುಟುಂಬಗಳಿಗೆ ಪಟ್ಟ ಪಹಣಿ ನೀಡದೇ ವಿಳಂಬ ನೀತಿ ಅನುಸರಿಸುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಏಕಾಏಕಿ ಜಿಂದಾಲ್‌ ಕಂಪನಿಗೆ ಸಾವಿರಾರು ಎಕರೆ ಭೂಮಿ ಪರಪಾರೆ ಮಾಡಿರುವುದು ಸರಿಯಾದ ಕ್ರಮವಲ್ಲ. ಭೂಮಿ ಪರಪಾರೆ ಕಾರಣರಾದ ಸಚಿವರೆಲ್ಲರೂ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಈ ಹಿಂದೆ ಸಮ್ಮಿಶ್ರ ಸರಕಾರ ಆಡಳಿತ ಸಂದರ್ಭದಲ್ಲಿ ಈಗಿನ ಬಿಜೆಪಿ ಪಕ್ಷ ವಿರೋಧ ಪಕ್ಷವಾಗಿ ಪರಭಾರೆ ವಿರುದ್ಧ ಹೋರಾಟ ಮಾಡಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್‌ ಅವರು ಅಂದಿನ ಸರ್ಕಾರದಲ್ಲಿ ಶಾಸಕರ ಸ್ಥಾನಕ್ಕೆ ರಾಜಿನಾಮೆ ನೀಡಿ ವಿರೋಧ ವ್ಯಕ್ತಪಡಿಸಿದ್ದರು. ಇಂದು ಅವರೇ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದರೂ ಕೋವಿಡ್‌ ನೆಪದಲ್ಲಿ ನುಣುಚಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಸರ್ಕಾರ ಕೂಡಲೇ ಪರಭಾರೆ ಮಾಡಿರುವ ಭೂಮಿಯನ್ನು ಸರ್ಕಾರ ವಾಪಸ್ಸು ಪಡೆಯುವ ಮೂಲಕ ಜಿಲ್ಲೆಯ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದರು.

ಬೇಡಿಕೆಗಳು: ಜಿಲ್ಲಾ ಉಸ್ತುವಾರಿ ಸಚಿವರು ಈ ಕೂಡಲೇ ಜಿಲ್ಲಾಡಳಿತದ ಜಿಲ್ಲಾ ಧಿಕಾರಿಗೆ ಆದೇಶ ಮಾಡದಂತೆ ಕ್ರಮವಹಿಸಬೇಕು. ಅರಣ್ಯ ಮತ್ತು ಸರಕಾರಿ ಜಮೀನುಗಳಲ್ಲಿ ನೂರಾರು ವರ್ಷಗಳಿಂದ ಸಾಗುವಳಿ ಮಾಡುವ ಸಾವಿರಾರು ಎಕರೆ ರೈತರ ಜಮೀನುಗಳಿಗೆ ಪಟ್ಟಾ ವಿತರಿಸಬೇಕು. ಮುಂಗಾರು ಬಿತ್ತನೆ ಆರಂಭ ಮುನ್ಸೂಚನೆ ಇರುವುದರಿಂದ ಕೃಷಿ ಇಲಾಖೆಯಲ್ಲಿ ಬೀಜ, ರಸಗೊಬ್ಬರ ಸಿ.ಟಿ. ಕಾಂಪ್ಲೆಕ್ಸ್‌ ಇತ್ಯಾದಿಗಳು ಕಡಿಮೆಯಾಗದಂತೆ ದಾಸ್ತಾನು ಮಾಡಿ ಕೋವಿಡ್‌ ಇರುವುದರಿಂದ ತಾಲೂಕಿನ ರೈತರಿಗೆ ಉಚಿತವಾಗಿ ನೀಡಬೇಕು.

ಸ್ಥಳೀಯ ಐಎಸ್‌ಆರ್‌ ಸಕ್ಕರೆ ಕಾರ್ಖಾನೆ ಸರಕಾರದ ಸ್ವಾ ಧೀನದಲ್ಲಿ ಆರಂಭಿಸಲು ಮುಂದಾಗಬೇಕು. ಇತ್ತೀಚಿಗೆ ಆಕಾಲಿಕ ಮಳೆಯಿಂದಾಗಿ ಹಾನಿಗೊಳಗಾದ ಬೆಳೆಗಳಿಗೆ ಸೂಕ್ತ ಪರಿಹಾರ ಮತ್ತು ಆತ್ಮಹತ್ಯೆ ಮಾಡಕೊಂಡ ರೈತ ಕುಟುಂಬಗಳಿಗೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಆರ್‌.ಎಸ್‌. ಬಸವರಾಜ, ಎನ್‌.ಯಲ್ಲಾಲಿಂಗ ಮತ್ತಿತರರಿದ್ದರು.

ಟಾಪ್ ನ್ಯೂಸ್

ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆ ನಡೆಸಿದ ಸಿಎಂ ಯಡಿಯೂರಪ್ಪ ‌

ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆ ನಡೆಸಿದ ಸಿಎಂ ಯಡಿಯೂರಪ್ಪ ‌

ಶಕೀಬ್ ಉಗ್ರ ರೂಪ: ಅಂಪೈರ್ ವಿರುದ್ಧ ಕೋಪಕ್ಕೆ ವಿಕೆಟ್ ಕಿತ್ತೆಸೆದ ಬಾಂಗ್ಲಾ ಆಲ್ ರೌಂಡರ್

ಶಕೀಬ್ ಉಗ್ರ ರೂಪ: ಅಂಪೈರ್ ವಿರುದ್ಧ ಕೋಪಕ್ಕೆ ವಿಕೆಟ್ ಕಿತ್ತೆಸೆದ ಬಾಂಗ್ಲಾ ಆಲ್ ರೌಂಡರ್

GST council Meeting:ಬ್ಲ್ಯಾಕ್ ಫಂಗಸ್ ಔಷಧಕ್ಕೆ ತೆರಿಗೆ ಇಲ್ಲ, ಕೋವಿಡ್ ಲಸಿಕೆಗೆ ಶೇ.5 GST

GST council Meeting:ಬ್ಲ್ಯಾಕ್ ಫಂಗಸ್ ಔಷಧಕ್ಕೆ ತೆರಿಗೆ ಇಲ್ಲ, ಕೋವಿಡ್ ಲಸಿಕೆಗೆ ಶೇ.5 GST

pralhad joshi

ನಾಯಕತ್ವ ಬದಲಾವಣೆ ಚರ್ಚೆ ಅಪ್ರಸ್ತುತ: ಪ್ರಹ್ಲಾದ್ ಜೋಶಿ

ಮುಂಬಯಿಯಲ್ಲಿ ಧಾರಾಕಾರ ಮಳೆ: ಸ್ಥಳೀಯ ರೈಲು, ಬಸ್ ಸಂಚಾರ ಸ್ಥಗಿತ; ಹಲವೆಡೆ ಜಲಾವೃತ

ಮುಂಬಯಿಯಲ್ಲಿ ಧಾರಾಕಾರ ಮಳೆ: ಸ್ಥಳೀಯ ರೈಲು, ಬಸ್ ಸಂಚಾರ ಸ್ಥಗಿತ; ಹಲವೆಡೆ ಜಲಾವೃತ

‘ಲಸಿಕೆ ಹಾಕಿಸಿಕೊಂಡರೆ ಪುರುಷತ್ವ ಹೋಗುತ್ತದೆ’:ಆರೋಗ್ಯ ಸಿಬ್ಬಂದಿಗಳ ಜತೆ ಗ್ರಾಮಸ್ಥರ ವಾಗ್ವಾದ

‘ಲಸಿಕೆ ಹಾಕಿಸಿಕೊಂಡರೆ ಪುರುಷತ್ವ ಹೋಗುತ್ತದೆ’:ಆರೋಗ್ಯ ಸಿಬ್ಬಂದಿಗಳ ಜತೆ ಗ್ರಾಮಸ್ಥರ ವಾಗ್ವಾದ

9654

ಜಿಂಕೆ ಬೇಟೆಯಾಡಿದ ವ್ಯಕ್ತಿಯ ಬಂಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

‘ಲಸಿಕೆ ಹಾಕಿಸಿಕೊಂಡರೆ ಪುರುಷತ್ವ ಹೋಗುತ್ತದೆ’:ಆರೋಗ್ಯ ಸಿಬ್ಬಂದಿಗಳ ಜತೆ ಗ್ರಾಮಸ್ಥರ ವಾಗ್ವಾದ

‘ಲಸಿಕೆ ಹಾಕಿಸಿಕೊಂಡರೆ ಪುರುಷತ್ವ ಹೋಗುತ್ತದೆ’:ಆರೋಗ್ಯ ಸಿಬ್ಬಂದಿಗಳ ಜತೆ ಗ್ರಾಮಸ್ಥರ ವಾಗ್ವಾದ

ತೈಲ ಬೆಲೆ ನಿಯಂತ್ರಿಸುವಲ್ಲಿ ಸರ್ಕಾರ ವಿಫಲ

ತೈಲ ಬೆಲೆ ನಿಯಂತ್ರಿಸುವಲ್ಲಿ ಸರ್ಕಾರ ವಿಫಲ

ಅವಳಿ ಜಿಲ್ಲೆಗಳಲ್ಲಿ 449 ಗ್ರಾಮಗಳು ಕೋವಿಡ್‌ ಮುಕ್ತ

ಅವಳಿ ಜಿಲ್ಲೆಗಳಲ್ಲಿ 449 ಗ್ರಾಮಗಳು ಕೋವಿಡ್‌ ಮುಕ್ತ

ಅಪೌಷ್ಟಿಕ ಮಕ್ಕಳಿಗೆ ಬಾಲಚೈತನ್ಯ ಸಹಕಾರಿ

11-19

ಪ್ರತಿ ತಾಲೂಕಿನಲ್ಲೂ ಬಾಲ ಚೈತನ್ಯ ಆರೈಕೆ ಕೇಂದ್ರ

MUST WATCH

udayavani youtube

ಅಂದು ರಸ್ತೆಯಲ್ಲಿ ಉರುಳಾಡಿದ ಶೋಭಾ ಕರಾಂದ್ಲಾಜೆ ಇಂದು ಎಲ್ಲಿದ್ದಾರೆ? ವಿನಯ್ ಕುಮಾರ್ ಸೊರಕೆ

udayavani youtube

ಜೆಸಿಬಿ ಮೂಲಕ ಬಡವರ ಶೆಡ್ ತೆರವುಗೊಳಿಸಿದ ನಗರಸಭೆ

udayavani youtube

ಜಮ್ಮುವಿನ ಸೋಪೋರಿನಲ್ಲಿ ಭಯತ್ಪಾದಕರಿಂದ ದಾಳಿ. ಐವರ ಹತ್ಯೆ

udayavani youtube

ನನಗೆ ಕೋವಿಡ್ ವ್ಯಾಕ್ಸಿನ್ ಬೇಡ, ಅದು ನನಗೆ ಆಗಲ್ಲ

udayavani youtube

Article 370 ಕುರಿತು ಪಾಕಿಸ್ತಾನಿ ಪ್ರಜೆಗೆ ದಿಗ್ವಿಜಯ ಸಿಂಗ್ ಹೇಳಿದ ಮಾತು ಲೀಕ್

ಹೊಸ ಸೇರ್ಪಡೆ

11 bgk-4b

ಎಪ್ಪತ್ತೈದು ದಿನಗಳಿಂದ ಬೆಳಗುತ್ತಿದೆ ನಂದಾದೀಪ  

ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆ ನಡೆಸಿದ ಸಿಎಂ ಯಡಿಯೂರಪ್ಪ ‌

ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆ ನಡೆಸಿದ ಸಿಎಂ ಯಡಿಯೂರಪ್ಪ ‌

698

14ರಿಂದ ಅವಶ್ಯಕ ವಸ್ತು ಮಾರಾಟಕ್ಕೆ ಮಾತ್ರ ಅವಕಾಶ

3000 ಮಂದಿಗೆ ಆಹಾರದ ಕಿಟ್‌

3000 ಮಂದಿಗೆ ಆಹಾರದ ಕಿಟ್‌

ಶಕೀಬ್ ಉಗ್ರ ರೂಪ: ಅಂಪೈರ್ ವಿರುದ್ಧ ಕೋಪಕ್ಕೆ ವಿಕೆಟ್ ಕಿತ್ತೆಸೆದ ಬಾಂಗ್ಲಾ ಆಲ್ ರೌಂಡರ್

ಶಕೀಬ್ ಉಗ್ರ ರೂಪ: ಅಂಪೈರ್ ವಿರುದ್ಧ ಕೋಪಕ್ಕೆ ವಿಕೆಟ್ ಕಿತ್ತೆಸೆದ ಬಾಂಗ್ಲಾ ಆಲ್ ರೌಂಡರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.