Udayavni Special

4 ವರ್ಷವಾದ್ರೂ ಮುಗಿಯದ ಕೆರೆ ನಿರ್ಮಾಣ ಕಾರ್ಯ

2500 ಮಿಲಿಯನ್‌ ಲೀಟರ್‌ ಸಾಮರ್ಥ್ಯದ ಜಲಸಂಗ್ರಹ ಕೆರೆ ನಿರ್ಮಾಣ ಕಾಮಗಾರಿಗೆ ಗ್ರಹಣ

Team Udayavani, May 6, 2021, 11:10 PM IST

6-16

„ಆರ್‌.ಬಸವರೆಡ್ಡಿ ಕರೂರು

ಸಿರುಗುಪ್ಪ: ನಗರದ ಒಂದು ಲಕ್ಷ ಜನಸಂಖ್ಯೆಗೆ ಕುಡಿಯುವ ನೀರು ಪೂರೈಕೆ ಮಾಡುವ ಜಲಮೂಲವಾದ ತುಂಗಭದ್ರಾ ನದಿಯು ಅನೇಕ ವರ್ಷಗಳಿಂದ ಬೇಸಿಗೆ ಸಮಯದಲ್ಲಿ ಸಂಪೂರ್ಣ ಬತ್ತಿ ಹೋಗುತ್ತಿರುವುದರಿಂದ ನಗರಕ್ಕೆ ಹರಿಗೋಲ್‌ ಘಾಟ್‌ನಿಂದ ತುಂಗಭದ್ರಾ ನದಿಯಲ್ಲಿರುವ ಜಾಕ್‌ ವೆಲ್‌ಗೆ ನೀರು ಹರಿಸಿ ಅಲ್ಲಿಂದ ನೀರು ಪೂರೈಕೆ ಮಾಡುವುದು ಇಂದಿಗೂ ಮುಂದುವರೆದಿದೆ.

ಆದರೆ ನಗರಕ್ಕೆ ಶುದ್ಧ ಕುಡಿಯುವ ನೀರೊದಗಿಸುವ ಉದ್ದೇಶದಿಂದ ಸುಮಾರು 118 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಕುಡಿಯುವ ನೀರಿನ ಕೆರೆಯ ನಿರ್ಮಾಣ ಕಾರ್ಯವು ಶೇ. 90ರಷ್ಟು ಮುಗಿದಿದ್ದು, ಕೇವಲ ಶೇ. 10ರಷ್ಟು ಮಾತ್ರ ಕಾಮಗಾರಿ ಬಾಕಿ ಉಳಿದಿದ್ದು, ನಗರದ ಜನರಿಗೆ ಕೆರೆಯ ಶುದ್ಧ ಕುಡಿಯುವ ನೀರು ಮರೀಚಿಕೆಯಾಗಿಯೇ ಉಳಿದಿದೆ.

ಮಾಜಿ ಶಾಸಕರಾದ ಬಿ.ಎಂ. ನಾಗರಾಜ ಅವ  ಧಿಯಲ್ಲಿ ಕೆರೆ ನಿರ್ಮಾಣ ಕಾರ್ಯಕ್ಕೆ 2017 ಜನವರಿ 23ರಂದು ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಭೂಮಿಪೂಜೆ ನೆರವೇರಿಸಿ 2018ರ ಮೇ 23ರೊಳಗೆ ಕೆರೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದ್ದು, ನಗರದ ಜನರಿಗೆ ಈ ಕೆರೆಯಿಂದ ನೀರು ಪೂರೈಕೆ ಮಾಡಲಾಗುವುದೆಂದು ಬಹಿರಂಗ ಸಭೆಯಲ್ಲಿ ತಿಳಿಸಿದ್ದರು.

ಅಂದಾಜು ರೂ. 28 ಕೋಟಿ 65ಲಕ್ಷರೂ. ವೆಚ್ಚದಲ್ಲಿ ಬಾಗೇವಾಡಿ ಉಪಕಾಲುವೆ ಮೂಲದಿಂದ ಕುಡಿಯುವ ನೀರು ಸರಬರಾಜು ಯೋಜನೆಯಡಿ 2500 ಮಿಲಿಯನ್‌ ಲೀಟರ್‌ ಸಾಮರ್ಥ್ಯದ ಜಲಸಂಗ್ರಹಣ ಕೆರೆ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿ 4 ವರ್ಷವಾದರೂ ಮುಗಿಯದ ಕಾರಣ ನಗರದ ಜನರಿಗೆ ಶಾಶ್ವತ ಕುಡಿಯುವ ನೀರಿನ ಕೆರೆ ಯೋಜನೆ ಕನಸಾಗಿಯೇ ಉಳಿದಿದೆ. ಅ ಧಿಕಾರಿಗಳ, ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಕೆರೆ ಕಾಮಗಾರಿ ಇನ್ನು ಬಾಕಿ ಉಳಿದಿದೆ. ಕೆರೆ ನಿರ್ಮಾಣಕ್ಕೆ ಬೇಕಾದ ರೂ. 28 ಕೋಟಿ 65ಲಕ್ಷ ರೂ. ಅನುದಾನವನ್ನು ಮಂಜೂರು ಮಾಡಿಸಿಕೊಂಡು ಬಂದ ಹಾಲಿ ಶಾಸಕ ಎಂ.ಎಸ್‌. ಸೊಮಲಿಂಗಪ್ಪನವರು ಕೆರೆ ಕಾಮಗಾರಿ ಶೀಘ್ರ ಮುಗಿಸಿಕೊಡಬೇಕೆಂದು ಗುತ್ತಿಗೆದಾರರು ಮತ್ತು ಸಂಬಂಧಿ ಸಿದ ಇಲಾಖೆಯ ಹಿರಿಯ ಅ ಧಿಕಾರಿಗಳನ್ನು ಬೇಟಿ ಮಾಡಿ ಚರ್ಚಿಸಿದ್ದಾರೆ.

ಆದರೆ ಬಾಕಿ ಇರುವ ಕಾಮಗಾರಿಯನ್ನು ಮುಗಿಸಲು ಇನ್ನೂ ಹೆಚ್ಚುವರಿ ಅನುದಾನವನ್ನು ನೀಡಬೇಕೆಂದು ಗುತ್ತಿಗೆದಾರರು ಪಟ್ಟುಹಿಡಿದಿದ್ದಾರೆ. ಈ ಬಗ್ಗೆ ನ್ಯಾಯಾಲಯದ ಮೆಟ್ಟಿಲನ್ನು ಗುತ್ತಿಗೆದಾರರು ತುಳಿದಿದ್ದಾರೆ. ಆದರೆ ಕಾಮಗಾರಿಯನ್ನು ಮುಗಿಸಿಕೊಡಿ ಹೆಚ್ಚುವರಿ ಹಣವನ್ನು ಕೊಡಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಶಾಸಕರು ಗುತ್ತಿಗೆದಾರರೊಂದಿಗೆ ಮಾತನಾಡಿ ತಿಳಿಸಿದ್ದಾರೆ.

ಆದರೆ ಗುತ್ತಿಗೆದಾರರು ಬಾಕಿ ಇರುವ ಕಾಮಗಾರಿಯನ್ನು ಮುಗಿಸಲು ಮುಂದಾಗಿಲ್ಲ. ಕಳೆದ ಅನೇಕ ವರ್ಷಗಳಿಂದ ಬೇಸಿಗೆ ಸಮಯದಲ್ಲಿ ತುಂಗಭದ್ರಾ ನದಿಯಲ್ಲಿ ನೀರು ಬತ್ತಿಹೋಗುವುದು, ಬೋರ್‌ವೆಲ್‌ಗ‌ಳಲ್ಲಿಯೂ ನೀರು ಕಡಿಮೆಯಾಗುವುದು ಸಾಮಾನ್ಯವಾಗಿದೆ. ಇದನ್ನೆಲ್ಲ ಮನಗಂಡ ಶಾಸಕ ಎಂ.ಎಸ್‌. ಸೋಮಲಿಂಗಪ್ಪ ಕೆರೆ ನಿರ್ಮಾಣ ಕಾರ್ಯಕ್ಕೆ ಬೇಕಾದ ಅನುದಾನವನ್ನು ಮಂಜೂರು ಮಾಡಿಸಿದ್ದರು.

ಆದರೆ ನಿರ್ಮಾಣ ಕಾರ್ಯ ಆರಂಭವಾಗಿ 4 ವರ್ಷ ಮುಗಿದರೂ ಕೆರೆ ನಿರ್ಮಾಣದ ಕಾಮಗಾರಿ ಮುಗಿದಿಲ್ಲ. ಪ್ರತಿ ಬೇಸಿಗೆಯಲ್ಲಿ ಕೆರೆ ನಿರ್ಮಾಣದ ಬಗ್ಗೆ ನಗರ ನಿವಾಸಿಗಳು ಚರ್ಚಿಸುವುದು ಸಾಮಾನ್ಯವಾಗಿದೆ.

ಸಿರುಗುಪ್ಪ ನಗರಕ್ಕೆ ನೀರು ಪೂರೈಕೆ ಮಾಡುವ ಕೆರೆ ನಿರ್ಮಾಣದ ಬಾಕಿ ಕಾರ್ಯವನ್ನು ಮುಗಿಸಿಕೊಡುವಂತೆ ಗುತ್ತಿಗೆದಾರರೊಂದಿಗೆ ಮಾತನಾಡಿದ್ದೇನೆ. ಆದರೆ ಗುತ್ತಿಗೆದಾರರು ಕಾಮಗಾರಿ ಮುಗಿಸಲು ಮುಂದಾಗಿಲ್ಲ. ಕೆರೆಯಿಂದ ನಗರಕ್ಕೆ ನೀರು ಪೂರೈಕೆ ಮಾಡುವ ಪೈಪ್‌ ಲೈನ್‌ ಹಾಗೂ ನೀರು ಶುದ್ಧೀಕರಣ ಘಟಕ, ನೀರು ಸಂಗ್ರಹ ಟ್ಯಾಂಕ್‌ಗಳ ನಿರ್ಮಾಣಕ್ಕೆ ರೂ. 10ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ.

ಎಂ.ಎಸ್‌. ಸೋಮಲಿಂಗಪ್ಪ, ಶಾಸಕ

ಟಾಪ್ ನ್ಯೂಸ್

ಕೊಪಾ ಅಮೆರಿಕ ಫುಟ್ ಬಾಲ್ : ಬ್ರಝಿಲ್‌ಗೆ ಭರ್ಜರಿ ಗೆಲುವು

ಕೊಪಾ ಅಮೆರಿಕ ಫುಟ್ ಬಾಲ್ : ಬ್ರಝಿಲ್‌ಗೆ ಭರ್ಜರಿ ಗೆಲುವು

ಪ್ರವಾಹ ನಿಯಂತ್ರಣಕ್ಕೆ ಮಹಾರಾಷ್ಟ್ರ ಅಧಿಕಾರಿಗಳ ಜೊತೆ ಸಭೆ

ಪ್ರವಾಹ ನಿಯಂತ್ರಣಕ್ಕೆ ಮಹಾರಾಷ್ಟ್ರ ಅಧಿಕಾರಿಗಳ ಜೊತೆ ಸಭೆ

ಬೆಳಗಾವಿ ಧಾರಾಕಾರ ಮಳೆ : ಮಾರ್ಕಂಡೇಯ ನದಿ ನೀರಿನಲ್ಲಿ ರೈತನೋರ್ವ ಕೊಚ್ಚಿ ಹೋದ ಶಂಕೆ

ಬೆಳಗಾವಿ : ಮಾರ್ಕಂಡೇಯ ನದಿ ನೀರಿನಲ್ಲಿ ರೈತನೋರ್ವ ಕೊಚ್ಚಿ ಹೋದ ಶಂಕೆ ; ಶೋಧ ಕಾರ್ಯ

ಅಂಬರ್‌ಗ್ರೀಸ್‌ ಮಾರಾಟ ಪ್ರಕರಣ ನಾಪತ್ತೆಯಾಗಿದ್ದ ಆರೋಪಿ ಸಾವು?

ಅಂಬರ್‌ಗ್ರೀಸ್‌ ಮಾರಾಟ ಪ್ರಕರಣ ನಾಪತ್ತೆಯಾಗಿದ್ದ ಆರೋಪಿ ಸಾವು?

ಮಹಾ ಮಳೆಗೆ ಜನಜೀವನ ಅಸ್ತವ್ಯಸ್ತ: ಗೋಡೆ ಕುಸಿದು ವ್ಯಕ್ತಿ ಸಾವು, ತುಂಬಿ ಹರಿಯುತ್ತಿದೆ ನದಿಗಳು

ಮಹಾ ಮಳೆಗೆ ಜನಜೀವನ ಅಸ್ತವ್ಯಸ್ತ: ಗೋಡೆ ಕುಸಿದು ವ್ಯಕ್ತಿ ಸಾವು, ತುಂಬಿ ಹರಿಯುತ್ತಿದೆ ನದಿಗಳು

ಶಾಸಕರ ಮೂಲಕ ರಾಜ್ಯದ ಜನತೆಯ ಕುಶಲೋಪರಿ ವಿಚಾರಿಸಿದ ಸ್ಪೀಕರ್ ಕಾಗೇರಿ

ಶಾಸಕರ ಮೂಲಕ ರಾಜ್ಯದ ಜನತೆಯ ಕುಶಲೋಪರಿ ವಿಚಾರಿಸಿದ ಸ್ಪೀಕರ್ ಕಾಗೇರಿ

54

ನಾಯಕತ್ವ ಬದಲಾವಣೆ ಬಗ್ಗೆ ಹೇಳಿಕೆ ಕೊಟ್ಟವರ ವಿರುದ್ಧ ಶೀಘ್ರವೇ ಕಠಿಣ ಕ್ರಮಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-14

ಆಟೋ ಚಾಲಕರಿಗೆ ಆಹಾರ ಕಿಟ್‌ ವಿತರಣೆ

18-13

ಹತ್ತಿ ಬೀಜಕ್ಕಾಗಿ ಸೀಮಾಂಧ್ರದತ್ತ ರೈತರ ಚಿತ್ತ

17-15

ಬೀಜ ಮಾರಾಟ ಮಳಿಗೆಗಳ ಮೇಲೆ ದಾಳಿ

17-14

ಧಾರ್ಮಿಕ ಕಾರ್ಯಗಳಿಂದ ಶ್ರೇಯಸ್ಸು: ಶ್ರೀಶೈಲ ಶ್ರೀ

17-13

ಜಿಂದಾಲ್‌ ಕೋವಿಡ್‌ ಆಸ್ಪತ್ರೆ ಸೇವೆ ಸ್ಥಗಿತ

MUST WATCH

udayavani youtube

Bus ಓಡಿಸ್ಲಿಕ್ಕೆ ಈ ಬಾರಿ ಸಾಧ್ಯ ಇಲ್ಲ!!

udayavani youtube

ದಿ. ನಟ ಸಂಚಾರಿ ವಿಜಯ್ ಗೆ ಫಿಲಂ ಚೇಂಬರ್ ನಿಂದ ಅಗೌರವ

udayavani youtube

ಮೈದುಂಬಿ ಧುಮ್ಮಿಕ್ಕುತ್ತಿದೆ ವಿಶ್ವವಿಖ್ಯಾತ ಜೋಗ ಜಲಪಾತ

udayavani youtube

ಯಾರೋ ಒಬ್ಬಿಬ್ಬರು ಮಾತನಾಡಿದರೆ ಗೊಂದಲವಾಗುವುದಿಲ್ಲ CM B S Yediyurappa

udayavani youtube

ಎರಡು ದಿನ ವಾರಾಂತ್ಯದ ಕರ್ಫ್ಯೂ: ಯಾವುದಕ್ಕೆಲ್ಲಾ ಅವಕಾಶವಿದೆ? ಯಾವುದಕ್ಕಿಲ್ಲ?

ಹೊಸ ಸೇರ್ಪಡೆ

ಕೊಪಾ ಅಮೆರಿಕ ಫುಟ್ ಬಾಲ್ : ಬ್ರಝಿಲ್‌ಗೆ ಭರ್ಜರಿ ಗೆಲುವು

ಕೊಪಾ ಅಮೆರಿಕ ಫುಟ್ ಬಾಲ್ : ಬ್ರಝಿಲ್‌ಗೆ ಭರ್ಜರಿ ಗೆಲುವು

ಪ್ರವಾಹ ನಿಯಂತ್ರಣಕ್ಕೆ ಮಹಾರಾಷ್ಟ್ರ ಅಧಿಕಾರಿಗಳ ಜೊತೆ ಸಭೆ

ಪ್ರವಾಹ ನಿಯಂತ್ರಣಕ್ಕೆ ಮಹಾರಾಷ್ಟ್ರ ಅಧಿಕಾರಿಗಳ ಜೊತೆ ಸಭೆ

ಬೆಳಗಾವಿ ಧಾರಾಕಾರ ಮಳೆ : ಮಾರ್ಕಂಡೇಯ ನದಿ ನೀರಿನಲ್ಲಿ ರೈತನೋರ್ವ ಕೊಚ್ಚಿ ಹೋದ ಶಂಕೆ

ಬೆಳಗಾವಿ : ಮಾರ್ಕಂಡೇಯ ನದಿ ನೀರಿನಲ್ಲಿ ರೈತನೋರ್ವ ಕೊಚ್ಚಿ ಹೋದ ಶಂಕೆ ; ಶೋಧ ಕಾರ್ಯ

18-21

ಮಲೆನಾಡಲ್ಲಿ ಮುಂಗಾರು ಮಳೆ ಅಬ್ಬರ

18-20

ಆನ್‌ಲೈನ್‌ ಕೋರ್ಸ್‌: ಕುವೆಂಪು ವಿವಿಗೆ ಅನುಮತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.