ಜಿಂದಾಲ್‌ ಆಕ್ಸಿಜನ್‌ ಘಟಕ ಪರಿಶೀಲನೆ


Team Udayavani, May 9, 2021, 10:20 PM IST

9-21

ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕು ತೋರಣಗಲ್ಲು ಜಿಂದಾಲ್‌ನಲ್ಲಿ ಉತ್ಪಾದಿಸಲಾಗುತ್ತಿರುವ ಆಕ್ಸಿಜನ್‌ ಘಟಕ ಮತ್ತು ಜಿಂದಾಲ್‌ ಬಳಿ ನಿರ್ಮಿಸಲಾಗುತ್ತಿರುವ ಸಾವಿರ ಬೆಡ್‌ಗಳ ತಾತ್ಕಾಲಿಕ ಕೋವಿಡ್‌ ಆಸ್ಪತ್ರೆಯನ್ನು ಮಧ್ಯಮ ಮತ್ತು ಬೃಹತ್‌ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌, ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ಸಿಂಗ್‌ ಅವರು ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.

ಆಕ್ಸಿಜನ್‌ ಉತ್ಪಾದನೆ ಮಾಹಿತಿಯನ್ನು ಪಡೆದುಕೊಂಡ ಸಚಿವರು, ಕೈಗಾರಿಕೆಗೆ ಬಳಸಲಾಗುತ್ತಿರುವ ಆಕ್ಸಿಜನ್‌ ಪ್ರಮಾಣ ಕಡಿತಗೊಳಿಸಿ ವೈದ್ಯಕೀಯ ಕ್ಷೇತ್ರಕ್ಕೆ ಹೆಚ್ಚು ಒದಗಿಸಲು ಸೂಚನೆ ನೀಡಿದರು. ಈಗ ಉತ್ಪಾದಿಸಲಾಗುತ್ತಿರುವ ಆಕ್ಸಿಜನ್‌ ಪ್ರಮಾಣವನ್ನು 1 ಸಾವಿರದಿಂದ 1200 ಮೆಟ್ರಿಕ್‌ ಟನ್‌ವರೆಗೆ ಹೆಚ್ಚಿಸಲು ಜಿಂದಾಲ್‌ ಅ ಧಿಕಾರಿಗಳಿಗೆ ಸೂಚಿಸಿದರು.

ಕೋವಿಡ್‌ಗಿಂತ ಮುಂಚೆ ನಿತ್ಯ 350ರಿಂದ 400 ಮೆಟ್ರಿಕ್‌ ಟನ್‌ ಆಕ್ಸಿಜನ್‌ ಉತ್ಪಾದಿಸಿ ಕೈಗಾರಿಕೆ, ವೈದ್ಯಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಬಳಸಿಕೊಳ್ಳಲಾಗುತ್ತಿತ್ತು. ಕೋವಿಡ್‌ ಹಿನ್ನೆಲೆಯಲ್ಲಿ ಹಂತಹಂತವಾಗಿ ಆಕ್ಸಿಜನ್‌ ಉತ್ಪಾದನಾ ಪ್ರಮಾಣ ಹೆಚ್ಚಿಸಿ ಸದ್ಯ 900 ಟನ್‌ವರೆಗೆ ನಿತ್ಯ ಆಕ್ಸಿಜನ್‌ ಉತ್ಪಾದಿಸಲಾಗುತ್ತಿದೆ ಎಂದು ಜಿಂದಾಲ್‌ ಅಧಿ ಕಾರಿ ಪ್ರಭು ಅವರು ಸಚಿವ ಶೆಟ್ಟರ್‌ ಅವರಿಗೆ ಮಾಹಿತಿ ನೀಡಿದರು.

ರಾಜ್ಯದಲ್ಲಿರುವ ಈಗಿನ ಸೋಂಕಿನ ಲಕ್ಷಣಗಳನ್ನು ಗಮನಿಸಿದರೆ ನಿತ್ಯ 1700 ಮೆಟ್ರಿಕ್‌ ಟನ್‌ ಆಕ್ಸಿಜನ್‌ ಕರ್ನಾಟಕಕ್ಕೆ ಅಗತ್ಯವಿದೆ. ಕೇಂದ್ರ ಸರ್ಕಾರ 1200 ಮೆಟ್ರಿಕ್‌ ಟನ್‌ ಆಕ್ಸಿಜನ್‌ ಹಂಚಿಕೆ ಮಾಡಲು ಒಪ್ಪಿಕೊಂಡಿದ್ದು, ಅಷ್ಟು ಪ್ರಮಾಣದಲ್ಲಿ ರಾಜ್ಯಕ್ಕೆ ಸರಬರಾಜಾದಲ್ಲಿ ಉತ್ತಮ ರೀತಿಯಿಂದ ನಿರ್ವಹಣೆ ಮಾಡಬಹುದಾಗಿದೆ ಎಂದು ಸಚಿವ ಜಗದೀಶ್‌ ಶೆಟ್ಟರ್‌ ತಿಳಿಸಿದರು.

ಜಿಂದಾಲ್‌ ಸೇರಿದಂತೆ ರಾಜ್ಯದ ಇತರೆ ಉದ್ದಿಮೆಗಳಿಗೂ ಆಕ್ಸಿಜನ್‌ ಉತ್ಪಾದನಾ ಪ್ರಮಾಣ ಹೆಚ್ಚಿಸುವಂತೆ ಸೂಚನೆ ನೀಡಲಾಗಿದೆ. ಭದ್ರಾವತಿ, ರಾಯಚೂರು, ಕೊಪ್ಪಳದಲ್ಲಿ ಸ್ಥಗಿತವಾಗಿರುವ ಆಕ್ಸಿಜನ್‌ ಉತ್ಪಾದಿಸುವ ಕೈಗಾರಿಕೆಗಳನ್ನು ಪುನಃ ಆರಂಭಿಸಲು ಸೂಚಿಸಲಾಗಿದೆ ಎಂದರು.

ಜಿಂದಾಲ್‌ ಕಾರ್ಖಾನೆಯು ಪ್ರತಿನಿತ್ಯ 900 ಮೆಟ್ರಿಕ್‌ ಟನ್‌ ಆಕ್ಸಿಜನ್‌ ಉತ್ಪಾದಿಸುತ್ತಿದ್ದು, ಅದರಲ್ಲಿ ರಾಜ್ಯಕ್ಕೆ ಪ್ರತಿನಿತ್ಯ 650 ಮೆಟ್ರಿಕ್‌ ಟನ್‌ ಇಲ್ಲಿಂದ ಸರಬರಾಜಾಗುತ್ತಿದೆ ಎಂದ ಸಚಿವ ಜಗದೀಶ್‌ ಶೆಟ್ಟರ್‌, ಜಿಂದಾಲ್‌ ಕಾರ್ಖಾನೆ ಸಂಕಷ್ಟದ ಸಮಯದಲ್ಲಿ ಇಡೀ ರಾಜ್ಯಕ್ಕೆ ಆಕ್ಸಿಜನ್‌ ಪೂರೈಕೆ ಮಾಡುವ ಮೂಲಕ ಒಳ್ಳೆ ಕೆಲಸ ಮಾಡುತ್ತಿದೆ. ಜಿಂದಾಲ್‌ನ ಇತರೆ ಸ್ಟೀಲ್‌ ಉತ್ಪಾದನಾ ಕಾರ್ಯಗಳಿಗೆ ಆಕ್ಸಿಜನ್‌ ಕಡಿಮೆ ಮಾಡಿ, ವೈದ್ಯಕೀಯ ಕ್ಷೇತ್ರಕ್ಕೆ ಹೆಚ್ಚಿನ ಆಕ್ಸಿಜನ್‌ ಉತ್ಪಾದನೆ ಮಾಡಿ ನೀಡುವಂತೆ ತಿಳಿಸಲಾಗಿದ್ದು ಅವರು ಒಪ್ಪಿಕೊಂಡಿದ್ದಾರೆ ಎಂದರು.

ಎಲ್ಲ ಕಡೆ ಹಾಸಿಗೆಗಳು ಭರ್ತಿಯಾಗುತ್ತಿವೆ. ಹಾಸಿಗೆಗಳು ಸಿಗದೆ ಜನರು ಪರದಾಡುತ್ತಿದ್ದಾರೆ. ಆಕ್ಸಿಜನ್‌ ಪೂರೈಕೆ ಜಾಸ್ತಿಯಾದಂತೆ ಹಾಸಿಗೆಗಳ ಸೃಷ್ಟಿಯೂ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಜಿಂದಾಲ್‌ ಸಂಸ್ಥೆಯಲ್ಲಿ ಆರು ಕಂಪನಿಗಳು ಆಕ್ಸಿಜನ್‌ ಉತ್ಪಾದನೆಯಲ್ಲಿ ತೊಡಗಿಕೊಂಡಿವೆ. ಇದರ ಜೊತೆಗೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಆಕ್ಸಿಜನ್‌ ಉತ್ಪಾದಿಸಲಾಗುತ್ತಿದೆ. ಇದರಿಂದ ರಾಜಕ್ಕೆ ಆಕ್ಸಿಜನ್‌ ಪೂರೈಸಲಾಗುತ್ತದೆ. ನಮ್ಮಲ್ಲಿ ಉತ್ಪಾದನೆಯಾಗುವ ಆಕ್ಸಿಜನ್‌ ಕೇವಲ ನಮ್ಮ ರಾಜ್ಯಕ್ಕೆ ಮಾತ್ರ ಬಳಸಿಕೊಳ್ಳಲು ಅವಕಾಶ ಕೊಡಿ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಕೂಡ ಮಾಡಲಾಗಿದೆ. ಇದಕ್ಕೆ ಕೇಂದ್ರ ಗ್ರೀನ್‌ ಸಿಗ್ನಲ್‌ ನೀಡಿದರೆ ರಾಜ್ಯದಲ್ಲಿ ಆಕ್ಸಿಜನ್‌ ಕೊರತೆ ಕಡಿಮೆಯಾಗುತ್ತದೆ ಎಂದರು.

ನಂತರ ಜಿಂದಾಲ್‌ನಲ್ಲಿ ಸಚಿವರು, ಶಾಸಕರು, ಸಂಸದರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಜಿಲ್ಲೆಯ ಕೋವಿಡ್‌ ಸ್ಥಿತಿಗತಿ, ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ಇದಕ್ಕೂ ಮುಂಚೆ ಅವರು ಜಿಂದಾಲ್‌ ಎದುರುಗಡೆ ನಿರ್ಮಾಣ ಮಾಡಲಾಗುತ್ತಿರುವ 1 ಸಾವಿರ ಆಕ್ಸಿಜನ್‌ ಹಾಸಿಗೆಯುಳ್ಳ ತಾತ್ಕಾಲಿಕ ಆಸ್ಪತ್ರೆ ನಿರ್ಮಾಣ ಕಾರ್ಯ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಸಂಸದ ವೈ. ದೇವೇಂದ್ರಪ್ಪ, ಶಾಸಕರಾದ ಜಿ. ಸೋಮಶೇಖರ್‌ ರೆಡ್ಡಿ, ಈ. ತುಕಾರಾಂ, ಜಿಲ್ಲಾ ಧಿಕಾರಿ ಪವನಕುಮಾರ್‌ ಮಾಲಪಾಟಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿ ಕಾರಿ ಸೈದುಲು ಅಡಾವತ್‌, ಅಪರ ಜಿಲ್ಲಾಧಿ ಕಾರಿ ಪಿ.ಎಸ್‌. ಮಂಜುನಾಥ ಸೇರಿದಂತೆ ಇತರೆ ಅಧಿ ಕಾರಿಗಳು ಇದ್ದರು.

ಟಾಪ್ ನ್ಯೂಸ್

ಬ್ಲ್ಯಾಕ್‌ ಮ್ಯಾಜಿಕ್‌: 5 ವರ್ಷದ ಬಾಲಕಿಯನ್ನು ಥಳಿಸಿ ಹತ್ಯೆಗೈದ ಹೆತ್ತವರು

ಬ್ಲ್ಯಾಕ್‌ ಮ್ಯಾಜಿಕ್‌: 5 ವರ್ಷದ ಬಾಲಕಿಯನ್ನು ಥಳಿಸಿ ಹತ್ಯೆಗೈದ ಹೆತ್ತವರು

ವಿಜಯೇಂದ್ರ

ಡಿಕೆಶಿ ಮೇಕೆದಾಟು ಯಾತ್ರೆಗೆ ಪ್ರತಿಯಾಗಿ ಸಿದ್ದರಾಮೋತ್ಸವ ಮಾಡಿದ್ದಾರೆ: ವಿಜಯೇಂದ್ರ ವ್ಯಂಗ್ಯ

ಪತ್ರಾ ಚವ್ಲಾ ಪ್ರಕರಣ: ಸಂಜಯ್ ರಾವತ್ ನ್ಯಾಯಾಂಗ ಬಂಧನ ಆ.22ರವರೆಗೆ ವಿಸ್ತರಣೆ

ಪತ್ರಾ ಚವ್ಲಾ ಪ್ರಕರಣ: ಸಂಜಯ್ ರಾವತ್ ನ್ಯಾಯಾಂಗ ಬಂಧನ ಆ.22ರವರೆಗೆ ವಿಸ್ತರಣೆ

ಮಾನ ಮರ್ಯಾದೆ ಇದೆಯೇನ್ರಿ…? ಕಾಮಗಾರಿ ವಿಳಂಬಸಿದ ಅಧಿಕಾರಿಗಳ ವಿರುದ್ಧ ಬೈರತಿ ಬಸವರಾಜ್ ಗರಂ

ಮಾನ ಮರ್ಯಾದೆ ಇದೆಯೇನ್ರಿ…? ಕಾಮಗಾರಿ ವಿಳಂಬಿಸಿದ ಅಧಿಕಾರಿಗಳ ವಿರುದ್ಧ ಬೈರತಿ ಬಸವರಾಜ್ ಗರಂ

ಕಾಮನ್ವೆಲ್ತ್ ಬಾಡ್ಮಿಂಟನ್: ಬಂಗಾರದ ಬರ ನೀಗಿಸಿದ ಪಿ.ವಿ.ಸಿಂಧು

ಕಾಮನ್ವೆಲ್ತ್ ಬಾಡ್ಮಿಂಟನ್: ಬಂಗಾರದ ಬರ ನೀಗಿಸಿದ ಪಿ.ವಿ.ಸಿಂಧು

yatnal

ಸಿದ್ದರಾಮಯ್ಯ- ಡಿಕೆಶಿ ಆಲಿಂಗನ: ಯತ್ನಾಳ್ ವ್ಯಂಗ್ಯವಾಗಿ ಹೇಳಿದ್ದೇನು?

ಬಿಜೆಪಿಯವರಿಗೆ ತಾಕತ್ತಿದ್ದರೆ ಸಿದ್ದರಾಮೋತ್ಸವದ ಅರ್ಧದಷ್ಟು ಜನ ಸೇರಿಸಲಿ: ಎಂ ಬಿ ಪಾಟೀಲ್

ಬಿಜೆಪಿಯವರಿಗೆ ತಾಕತ್ತಿದ್ದರೆ ಸಿದ್ದರಾಮೋತ್ಸವದ ಅರ್ಧದಷ್ಟು ಜನ ಸೇರಿಸಲಿ: ಎಂ ಬಿ ಪಾಟೀಲ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪ್ಪಿಕೊಂಡಾಗಲೆಲ್ಲ ದೇಶದಲ್ಲಿ ಕಾಂಗ್ರೆಸ್‌ ಸೋತಿದೆ: ರಾಮುಲು

ಅಪ್ಪಿಕೊಂಡಾಗಲೆಲ್ಲ ದೇಶದಲ್ಲಿ ಕಾಂಗ್ರೆಸ್‌ ಸೋತಿದೆ: ರಾಮುಲು

1-aaa

ಶಾಸಕರೇ ತ್ಯಾಜ್ಯ ಘಟಕ,ಭವನ,ಗ್ರಂಥಾಲಯಗಳಿಗೆ ಉದ್ಘಾಟನೆ ಭಾಗ್ಯ ಯಾವಾಗ?

ಮನೆಯಂಗಳದಲ್ಲಿ ರಾಷ್ಟ್ರಧ್ವಜ ಹಾರಿಸಿ

ಮನೆಯಂಗಳದಲ್ಲಿ ರಾಷ್ಟ್ರಧ್ವಜ ಹಾರಿಸಿ

ನವಜಾತ ಶಿಶುವಿಗೆ ತಾಯಿ ಹಾಲು ಶ್ರೇಷ್ಠ

ನವಜಾತ ಶಿಶುವಿಗೆ ತಾಯಿ ಹಾಲು ಶ್ರೇಷ್ಠ

ಧಾರಾಕಾರ ಮಳೆಗೆ ಜಮೀನು, ಶಾಲೆಗಳು ಜಾಲವೃತ : ಸೇತುವೆ ಮುಳುಗಡೆಯಾಗಿ ಸಂಚಾರ ಸ್ಥಗಿತ.!

ಧಾರಾಕಾರ ಮಳೆಗೆ ರೈತರ ಜಮೀನು, ಶಾಲೆಗಳು ಜಾಲವೃತ : ಸೇತುವೆ ಮುಳುಗಡೆಯಾಗಿ ಸಂಚಾರ ಸ್ಥಗಿತ!

MUST WATCH

udayavani youtube

ಅಕ್ರಮ ಗೋಹತ್ಯೆ ತಡೆಯಲು ಯೋಗಿ ಮಾದರಿಗೆ ಮುಂದಾದ ಚಿಕ್ಕಮಗಳೂರು ನಗರಸಭೆ

udayavani youtube

NEWS BULLETIN 08-08-2022

udayavani youtube

ಕಾಮನ್‌ವೆಲ್ತ್‌ ಪದಕ ವೀರ ಗುರುರಾಜ್‌ ಗೆ ಉಡುಪಿ ಜಿಲ್ಲಾಡಳಿತದಿಂದ ಸನ್ಮಾನ

udayavani youtube

ಮೈಸೂರು ದಸರಾ : ಮಳೆಯ ನಡುವೆಯೇ ಗಜ ಪಯಣಕ್ಕೆ ಸಂಭ್ರಮದ ಚಾಲನೆ…

udayavani youtube

ಮಳೆಗಾಲದಲ್ಲಿ ಇಲ್ಲಿ ಸತ್ತವರ ಅಂತಿಮ ಯಾತ್ರೆ ಮಾತ್ರ ನರಕಯಾತನೆ..

ಹೊಸ ಸೇರ್ಪಡೆ

ಬ್ಲ್ಯಾಕ್‌ ಮ್ಯಾಜಿಕ್‌: 5 ವರ್ಷದ ಬಾಲಕಿಯನ್ನು ಥಳಿಸಿ ಹತ್ಯೆಗೈದ ಹೆತ್ತವರು

ಬ್ಲ್ಯಾಕ್‌ ಮ್ಯಾಜಿಕ್‌: 5 ವರ್ಷದ ಬಾಲಕಿಯನ್ನು ಥಳಿಸಿ ಹತ್ಯೆಗೈದ ಹೆತ್ತವರು

1-sdsa-ds

ಹರ್ ಘರ್ ತಿರಂಗಾ: ಕಲಬುರಗಿಯಲ್ಲಿ ಸೈಕಲ್ ಮ್ಯಾರಥಾನ್‍

1-sf-sfsdf

ಪಣಜಿ: ಶ್ರೀ ಸ್ವಾಮಿ ಸಮರ್ಥ ಮಂದಿರದಲ್ಲಿ ಕಾಶಿ ವಿಶ್ವನಾಥ ಲಿಂಗ ಸ್ಥಾಪನೆ

ಜಿಲ್ಲೆಯಲ್ಲಿ ಬಹುತೇಕ ಕೆರೆಗಳು ಭರ್ತಿ

ಜಿಲ್ಲೆಯಲ್ಲಿ ಬಹುತೇಕ ಕೆರೆಗಳು ಭರ್ತಿ

ವಿಜಯೇಂದ್ರ

ಡಿಕೆಶಿ ಮೇಕೆದಾಟು ಯಾತ್ರೆಗೆ ಪ್ರತಿಯಾಗಿ ಸಿದ್ದರಾಮೋತ್ಸವ ಮಾಡಿದ್ದಾರೆ: ವಿಜಯೇಂದ್ರ ವ್ಯಂಗ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.