ಅಗತ್ಯ ವಸ್ತು ಖರೀದಿಗೆ ಜನವೋ ಜನ

Team Udayavani, May 10, 2021, 10:21 PM IST

10-15

ಬಳ್ಳಾರಿ: ಮಹಾಮಾರಿ ಕೋವಿಡ್‌ ಸೋಂಕು ನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರ ಮೇ 10ರಸೋಮವಾರದಿಂದ 24ರ ವರೆಗೆ ಸಂಪೂರ್ಣ ಕಠಿಣ ನಿರ್ಬಂಧ ವಿಧಿಸಿರುವ ಹಿನ್ನೆಲೆಯಲ್ಲಿ ನಗರದ ಜನರು ಭಾನುವಾರವೇ ವಿವಿಧ ವಸ್ತುಗಳನ್ನು ಖರೀದಿಸಿದ್ದು, ವಾಣಿಜ್ಯ ಮಳಿಗೆ, ರಸ್ತೆಗಳು ಜನಜಂಗುಳಿಯಿಂದ ಕಂಗೊಳಿಸಿದವು. ಸೋಮವಾರದಿಂದ ಬೆಳಗ್ಗೆ ನಿಗದಿತ ಅವ ಧಿಯಲ್ಲಿ ಅಗತ್ಯ ವಸ್ತುಗಳಾದ ತರಕಾರಿ, ಹಣ್ಣು, ಹಾಲು, ಕಿರಾಣಿ ಮಳಿಗೆಗಳನ್ನು ಹೊರತುಪಡಿಸಿ ಉಳಿದಂತೆ ಬಟ್ಟೆ, ಫುಟ್‌ವೇರ್‌, ರೆಡಿಮೇಡ್‌ ಗಾರ್ಮೆಂಟ್ಸ್‌ ಸೇರಿ ಎಲ್ಲ ಅಂಗಡಿ, ವಾಣಿಜ್ಯ ಮಳಿಗೆಗಳು ಬಂದ್‌ ಆಗಲಿವೆ.

ಈ ಮುಂದಿನ 14 ದಿನಗಳ ಕಾಲ ಈ ಮಳಿಗೆಗಳು ತೆರೆಯದ ಹಿನ್ನೆಲೆಯಲ್ಲಿ ಮುಂಜಾಗ್ರತೆ ವಹಿಸಿರುವ ಜನರು, ಕಠಿಣ ನಿರ್ಬಂಧ ಮುನ್ನಾ ದಿನವಾದ ಭಾನುವಾರ ಅಡುಗೆ ಎಣ್ಣೆ, ಬೇಳೆ, ಇನ್ನಿತರೆ ದಿನಸಿ ವಸ್ತುಗಳನ್ನು ಜನರು ಖರೀದಿಸಲು ಮುಂದಾಗಿದ್ದಾರೆ.

ಪಾಲನೆಯಾಗದ ಅಂತರ: ಬಳ್ಳಾರಿ ನಗರ ಸೇರಿ ಜಿಲ್ಲೆಯಲ್ಲಿ ಮಹಮ್ಮಾರಿ ಕೋವಿಡ್‌ ಸೋಂಕು ಅಬ್ಬರಿಸುತ್ತಿದೆ. ಪ್ರತಿದಿನ 20ಕ್ಕೂ ಹೆಚ್ಚು ಜನರು ಬಲಿಯಾಗುತ್ತಿದ್ದು, ಸಾವಿರಾರು ಜನರು ಸೋಂಕು ಪತ್ತೆಯಾಗುತ್ತಿದೆ. ಇಷ್ಟೆಲ್ಲ ಆದರೂ, ವಾಣಿಜ್ಯ ಮಳಿಗೆಗಳ ಮುಂದೆ ಅಗತ್ಯ ವಸ್ತುಗಳನ್ನು ಖರೀದಿಸುವ ಜನರಲ್ಲಿ ಸಾಮಾಜಿಕ ಅಂತರವೇ ಕಾಣುತ್ತಿಲ್ಲ. ಮೊದಲ ಅವ ಧಿಯಲ್ಲಿದ್ದಂತೆ ಮಳಿಗೆಗಳ ಮುಂದೆ ಗ್ರಾಹಕರು ನಿಲ್ಲಲು ಬಣ್ಣದಿಂದ ವೃತ್ತಗಳನ್ನು ಸಹ ಬರೆದಿಲ್ಲ. ಹಾಗಾಗಿ ಮಳಿಗೆಗಳ ಮುಂದೆ ಜನರು ಗುಂಪುಗುಂಪಾಗಿ ನಿಲ್ಲುತ್ತಿದ್ದು ಸಾಮಾಜಿಕ ಅಂತರವನ್ನು ಗಾಳಿಗೆ ತೂರಿದ್ದಾರೆ.

ಹಳ್ಳಿ ಜನರಿಗೆ ಸಮಸ್ಯೆ: ಕಠಿಣ ನಿರ್ಬಂಧ ಅವಧಿ  ಯಲ್ಲಿ ಅಗತ್ಯ ವಸ್ತುಗಳ ಮಳಿಗೆಗಳು ತೆರೆಯಲು ಅವಧಿ ನಿಗದಿಪಡಿಸಿದ ಹಿನ್ನೆಲೆಯಲ್ಲಿ ನಗರದ ಜನರಿಗೆ ಅಷ್ಟಾಗಿ ತೊಂದರೆ ಎನಿಸದಿದ್ದರೂ ನಗರಕ್ಕೆ ಸುತ್ತಮುತ್ತಲಿರುವ ಗ್ರಾಮಗಳ ಜನರಿಗೆ ತೊಂದರೆಯಾಗಲಿದೆ. ಸುತ್ತಮುತ್ತಲಿನ ಗ್ರಾಮಗಳ ಜನರು ವಾರಕ್ಕೆ ಅಥವಾ ಹದಿನೈದು ದಿನಕ್ಕೋ ಅಥವಾ ತಿಂಗಳಿಗೊಮ್ಮೆ ರಜಾ ದಿನವಾದ ಭಾನುವಾರ ನಗರಕ್ಕೆ ಆಗಮಿಸಿ ಒಂದಷ್ಟು ದಿನಕ್ಕೆ ಆಗುವಷ್ಟು ಅಗತ್ಯ ವಸ್ತುಗಳನ್ನು ಖರೀದಿಸುವುದು ವಾಡಿಕೆ.

ಹಾಗಾಗಿ ಸೋಮವಾರದಿಂದ ಕಠಿಣ ನಿರ್ಬಂಧ ಆರಂಭವಾಗುವುದರಿಂದ ಬೆಳ್ಳಂಬೆಳಗ್ಗೆ ನಗರಕ್ಕೆ ಬರಲು ಆಗದ ಹಿನ್ನೆಲೆಯಲ್ಲಿ ಮುನ್ನಾದಿನವಾದ ಭಾನುವಾರ ನಗರಕ್ಕೆ ಆಗಮಿಸಿ ಅಗತ್ಯ ವಸ್ತುಗಳನ್ನು ಖರೀದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭಾನುವಾರ ನಗರದ ವಾಣಿಜ್ಯ ಮಳಿಗೆಗಳುಳ್ಳ ಬೆಂಗಳೂರು ರಸ್ತೆ, ಕಾರ್‌ ಬೀದಿ, ಬ್ರೂಸ್‌ಪೇಟೆ ವೃತ್ತ, ಗ್ರಾಹಂ ರಸ್ತೆ ಸೇರಿ ಇನ್ನಿತರೆ ರಸ್ತೆಗಳು ಜನಜಂಗುಳಿ, ವಾಹನ ದಟ್ಟಣೆಯಿಂದ ಕಂಡುಬಂತು.

ಅಂಗಡಿಗಳಿಗೆ ಫೋನ್‌ ನಂಬರ್‌: ಮೇ 10ರಿಂದ 14 ದಿನಗಳ ಕಾಲ ಕಠಿಣ ನಿರ್ಬಂಧ ಇರುವುದರಿಂದ ಬಟ್ಟೆ, ಗಾರ್ಮೆಂಟ್ಸ್‌, ಫುಟ್‌ವೇರ್‌ ಅಂಗಡಿಗಳು ಸಂಪೂರ್ಣ ಬಂದ್‌ ಆಗಲಿವೆ. ಆದರೆ, ಇದೇ ಮೇ 13ರಂದು ರಂಜಾನ್‌ ಹಬ್ಬ ಇರುವುದರಿಂದ ಬಟ್ಟೆ, ಗಾರ್ಮೆಂಟ್ಸ್‌, ಫುಟ್‌ವೇರ್‌ ಸೇರಿ ಇನ್ನಿತರೆ ಅಲಂಕಾರಿಕ ಮಳಿಗೆಗಳಿಗೆ ಹೆಚ್ಚು ವ್ಯಾಪಾರವಾಗಲಿದೆ. ರಂಜಾನ್‌ ಹಬ್ಬ ಮುಸಲ್ಮಾನರ ಪವಿತ್ರ ಹಾಗೂ ದೊಡ್ಡ ಹಬ್ಬವಾಗಿರುವುದರಿಂದ ತಲೆಯಲ್ಲಿ ಟೋಪಿಯಿಂದ ಹಿಡಿದು ಕಾಲಲ್ಲಿ ಚಪ್ಪಲಿಗಳವರೆಗೆ ಎಲ್ಲವನ್ನೂ ಹೊಸದನ್ನೇ ಖರೀದಿಸುತ್ತಾರೆ.

ಇದು ಬಟ್ಟೆ, ಗಾರ್ಮೆಂಟ್ಸ್‌, ಫುಟ್‌ವೇರ್‌ ಮಳಿಗೆಗಳಿಗೆ ಉತ್ತಮ ವ್ಯಾಪಾರ ವಹಿವಾಟು ಆಗುವುದರ ಜತೆಗೆ ಅಷ್ಟೇ ಲಾಭವನ್ನು ಸಹ ತಂದುಕೊಡಲಿದೆ. ಆದರೆ ರಂಜಾನ್‌ ಹಬ್ಬವನ್ನೇ ನೆಚ್ಚಿಕೊಂಡಿರುವ ಮಳಿಗೆಗಳ ಮಾಲೀಕರಿಗೆ ಕಠಿಣ ನಿರ್ಬಂಧದಿಂದ ನಷ್ಟ ಎದುರಿಸುವಂತಾಗಿದೆ. ಹೀಗಾಗಿ ಮಳಿಗೆಗಳ ಮುಂದೆ ಮಾಲೀಕರು ತಮ್ಮ ತಮ್ಮ ಮೊಬೈಲ್‌ ನಂಬರ್‌ಗಳನ್ನು ಬರೆದು ಸಂಪರ್ಕಿಸುವಂತೆ ಕೋರಿದ್ದಾರೆ.

ಟಾಪ್ ನ್ಯೂಸ್

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Mekedatu Dam ನಿರ್ಮಾಣಕ್ಕೆ ಕೇಂದ್ರMekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡಯುವೆ: ದೇವೇಗೌಡ

Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

Neha Hiremath Case; Protest by BJP-JDS-ABVP across the state

Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್

Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.