Udayavni Special

ಆಕ್ಸಿಜನ್‌ ಬ್ಯಾಂಕ್‌-ಸ್ಯಾನಿಟೈಸರ್‌ ಟ್ಯಾಂಕ್‌ಗೆ ಚಾಲನೆ


Team Udayavani, Jun 15, 2021, 9:45 PM IST

15-12

ಬಳ್ಳಾರಿ: ಕೋವಿಡ್‌ ಸೋಂಕಿತರು ಎದುರಿಸುತ್ತಿರುವ ಆಕ್ಸಿಜನ್‌ ಕೊರತೆಯನ್ನು ನೀಗಿಸಲು ಕಾಂಗ್ರೆಸ್‌ನ ರಾಜ್ಯಸಭೆ ಸದಸ್ಯ ಡಾ| ಸೈಯದ್‌ ನಾಸೀರ್‌ ಹುಸೇನ್‌ ಅವರು ಉಚಿತವಾಗಿ ತೆರೆದಿರುವ ಆಕ್ಸಿಜನ್‌ ಬ್ಯಾಂಕ್‌ ಮತ್ತು ನಗರದಲ್ಲಿ ಸಿಂಪಡಿಸಲು ವ್ಯವಸ್ಥೆ ಮಾಡಿರುವ ಸ್ಯಾನಿಟೈಸರ್‌ ಟ್ಯಾಂಕ್‌ನ್ನು ಕಾಂಗ್ರೆಸ್‌ನ ಹಿರಿಯ ಮುಖಂಡ, ವಿಧಾನ ಪರಿಷತ್‌ ಸದಸ್ಯ ಕೆ.ಸಿ.ಕೊಂಡಯ್ಯ ಅವರು ಶಾದಿಮಹಲ್‌ ಸಭಾಂಗಣದಲ್ಲಿ ಸೋಮವಾರ ಚಾಲನೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಡಾ| ಸೈಯದ್‌ ನಾಸೀರ್‌ ಹುಸೇನ್‌ ಅವರು, ಬಳ್ಳಾರಿಯಲ್ಲಿ ವ್ಯಾಪಕವಾಗಿ ಹರಡಿದ್ದ ಕೋವಿಡ್‌ ಸೋಂಕು ಸದ್ಯ ನಿಧಾನವಾಗಿ ನಿಯಂತ್ರಣಕ್ಕೆ ಬರುತ್ತಿದೆ. ಹಾಗಂತ ಪೂರ್ಣವಾಗಿ ನಿರ್ಮೂಲನೆಯಾಗಿಲ್ಲ. ಮೊದಲನೇ ಅವಧಿಗಿಂತ ಎರಡನೇ ಅಲೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚು ಸಾವು-ನೋವು ಸಂಭವಿಸಿವೆ. ಸಕಾಲಕ್ಕೆ ಆಕ್ಸಿಜನ್‌ ಸಿಗದೆ ಸಾಕಷ್ಟು ಜನರು ಸೋಂಕಿಗೆ ಬಲಿಯಾಗಿದ್ದಾರೆ. ಕೋವಿಡ್‌ ಸಾವಿನಲ್ಲಿ ಬಳ್ಳಾರಿ ಜಿಲ್ಲೆ ಎರಡನೇ ಸ್ಥಾನದಲ್ಲಿತ್ತು.

ಇದೀಗ ಮೂರನೇ ಅಲೆ ಬರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಮುಂದೆಯೂ ಆಕ್ಸಿಜನ್‌ ಕೊರತೆಯಾಗಬಾರದು ಎಂಬ ಉದ್ದೇಶದಿಂದ ಈ ಆಕ್ಸಿಜನ್‌ ಬ್ಯಾಂಕ್‌ ತೆರೆಯಲಾಗಿದೆ. ಇದಕ್ಕಾಗಿ ಒಂದು ಕಾನ್ಸಂಟ್ರೇಟ್‌, ಜಂಬೊ ಸಿಲಿಂಡರ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಇಬ್ಬರು ತಂತ್ರಜ್ಞರುಳ್ಳ ತಾಂತ್ರಿಕ ತಂಡ ಇದನ್ನು ನಿರ್ವಹಿಸಲಿದ್ದಾರೆ.

ಕೋವಿಡ್‌ ಸೋಂಕು ಸಾರ್ವಜನಿಕವಾಗಿ ಹಬ್ಬದಂತೆ ಸ್ಯಾನಿಟೈಸರ್‌ ಸಿಂಪಡಿಸಲು ಒಂದು ಸ್ಯಾನಿಟೈಸರ್‌ ಟ್ಯಾಂಕರ್‌ನ್ನು ವ್ಯವಸ್ಥೆ ಮಾಡಲಾಗಿದೆ. ಆಕ್ಸಿಜನ್‌ ಮತ್ತು ಸ್ಯಾನಿಟೈಸರ್‌ ಸಾರ್ವಜನಿಕರಿಗೆ ಉಚಿತವಾಗಿ ಲಭಿಸಲಿದ್ದು, 9888114888 ಸಂಖ್ಯೆಗೆ ಕರೆ ಮಾಡಿದಲ್ಲಿ ನಮ್ಮ ತಂಡದವರು ತಂದು ನಿರ್ವಹಿಸಲಿದ್ದಾರೆ ಎಂದ ಅವರು, ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯ ಮುಖಂಡರ ಸಲಹೆ, ಸೂಚನೆಗಳ ಮೇರೆಗೆ ಈ ಆಕ್ಸಿಜನ್‌ ಬ್ಯಾಂಕ್‌ ತೆರೆದು, ಸ್ಯಾನಿಟೈಸರ್‌ ಟ್ಯಾಂಕ್‌ ವ್ಯವಸ್ಥೆ ಮಾಡಲಾಗಿದೆ ಎಂದವರು ವಿವರಿಸಿದರು.

ನಗರದ 39 ವಾರ್ಡ್‌ಗಳಿಗೂ ನೂತನ ಪಾಲಿಕೆ ಸದಸ್ಯರ ನೆರವಿನಿಂದ 3.60 ಲಕ್ಷ ಕೆಜಿಯಷ್ಟು 60 ಸಾವಿರ ತರಕಾರಿ ಕಿಟ್‌ಗಳನ್ನು ಬಡಜನರಿಗೆ ವಿತರಿಸಲಾಗಿದೆ. ಪ್ರತಿದಿನ ಸುಮಾರು 2 ಸಾವಿರಕ್ಕೂ ಹೆಚ್ಚು ಊಟದ ಪಾಕೇಟ್‌ಗಳನ್ನು ವಿತರಿಸಲಾಗಿದೆ ಎಂದವರು ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ಕೆ.ಸಿ. ಕೊಂಡಯ್ಯ, ನಗರ ಜಿಲ್ಲಾಧ್ಯಕ್ಷ ಜಿ.ಎಸ್‌. ಮಹಮ್ಮದ್‌ ರμàಕ್‌, ಜಿಪಂ ಸದಸ್ಯ ಮುಂಡ್ರಿಗಿ ನಾಗರಾಜ್‌, ಜೆ.ಎಸ್‌. ಆಂಜನೇಯಲು ಮಾತನಾಡಿದರು. ಬುಡಾ ಮಾಜಿ ಅಧ್ಯಕ್ಷರಾದ ನಿರಂಜನ ನಾಯ್ಡು, ಹುಮಾಯೂನ್‌ ಖಾನ್‌, ಪಕ್ಷದ ಮುಖಂಡರಾದ ಅಸುಂಡಿ ನಾಗರಾಜಗೌಡ, ಕಲ್ಲುಕಂಬ ಪಂಪಾಪತಿ, ಅಯಾಜ್‌ ಅಹಮ್ಮದ್‌, ಅಸುಂಡಿ ವನ್ನೂರಪ್ಪ, ವೆಂಕಟೇಶ್‌ ಹೆಗಡೆ, ಯತೀಂದ್ರಗೌಡ, ಅರುಣ್‌ ಕುಮಾರ್‌, ಎಲ್‌. ಮಾರೆಣ್ಣ ಇದ್ದರು.

ಟಾಪ್ ನ್ಯೂಸ್

ಮತ್ತೆ ಹುಟ್ಟಿ ಬನ್ನಿ: ಭಾರತದ ಬ್ಯಾಡ್ಮಿಂಟನ್ ದಂತಕಥೆ ನಂದು ನಾಟೇಕರ್ ವಿಧಿವಶ

ಮತ್ತೆ ಹುಟ್ಟಿ ಬನ್ನಿ: ಭಾರತದ ಬ್ಯಾಡ್ಮಿಂಟನ್ ದಂತಕಥೆ ನಂದು ನಾಟೇಕರ್ ವಿಧಿವಶ

fsgfguhjggf

ಯಡಿಯೂರಪ್ಪ ಕಣ್ಣೀರಿನ ಬಗ್ಗೆ ಬಹಿರಂಗಪಡಿಸಲಿ : ಡಿ.ಕೆ ಶಿವಕುಮಾರ್

dgfhgfhgffs

ಕರ್ನಾಟಕವು ಮಹದಾಯಿ ನದಿ ನೀರನ್ನು ತಿರುಗಿಸಿಕೊಂಡಿರುವುದು ಸತ್ಯ : ಫಿಲಿಪ್ ನೇರಿ

fghfhfvcxx

ರಾಜ್ಯಕ್ಕೆ ನ್ಯಾಯ ಒದಗಿಸುವ ಕೆಲಸ ನಿಮ್ಮ ಆದ್ಯತೆಯಾಗಲಿ : ಬೊಮ್ಮಾಯಿಗೆ ಸಿದ್ದರಾಮಯ್ಯ ಸಲಹೆ

uiyui7uyta

ನೂತನ ಸಿಎಂ ಮೊದಲ ಸಂಪುಟ ಸಭೆ : ಬಂಪರ್ ಆಫರ್ ಘೋಷಿಸಿದ ಬೊಮ್ಮಾಯಿ..!

bidar-news-3

ಜಮೀನಿನ ಮ್ಯುಟೇಶನ್ ಮಾಡಲು 15 ಲಕ್ಷ ರೂ.‌ ಲಂಚ : ಗ್ರೇಡ್ 1 ತಹಸೀಲ್ದಾರ್ ಎಸಿಬಿ ಬಲೆಗೆ..!

ಬುಡಮೇಲಾದ ವಿರೋಧಿ ಬಣದ ಲೆಕ್ಕಾಚಾರ….ರಾಜೀನಾಮೆ ಕೊಟ್ಟು ಗೆದ್ದ ಬಿಎಸ್ ವೈ!

ಬುಡಮೇಲಾದ ವಿರೋಧಿ ಬಣದ ಲೆಕ್ಕಾಚಾರ….ರಾಜೀನಾಮೆ ಕೊಟ್ಟು ಗೆದ್ದ ಬಿಎಸ್ ವೈ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

27-13

ನೆರೆಪೀಡಿತ ಪ್ರದೇಶಗಳಿಗೆ ಅಧಿಕಾರಿಗಳ ತಂಡ ಭೇಟಿ

25-10

ತಾಳೆ ಬೆಳೆಯತ್ತಅನ್ನದಾತರ ಚಿತ್ತ

25-9

ತುಂಗಭದ್ರಾ ಜಲಾಶಯದಿಂದ ನೀರು ಬಿಡುಗಡೆ

jghjyy

ತುಂಬಿದ ತುಂಗಭದ್ರಾ: ಮುಳುಗಿದ ವಿಶ್ವವಿಶ್ಯಾತ ಹಂಪಿ

25-12

ಟಿ.ಬಿ.ಡ್ಯಾಂ ಭರ್ತಿಗೆ 8 ಅಡಿ ಬಾಕಿ

MUST WATCH

udayavani youtube

ಸಿಎಂ ಪಟ್ಟ ಅಲಂಕರಿಸಿದ ಬೊಮ್ಮಾಯಿ: ಕುಟುಂಬ ಸದಸ್ಯರಿಂದ ಸಂಭ್ರಮ

udayavani youtube

ಧೈರ್ಯದಿಂದ ಕೋವಿಡ್ ಲಸಿಕೆ ಪಡೆಯಿರಿ : ಗರ್ಭಿಣಿಯರಿಗೆ ನಟಿ ಚೈತ್ರಾ ರೈ ಸಲಹೆ

udayavani youtube

ನೆಲನೆಲ್ಲಿ ಗಿಡದ ಬಗ್ಗೆ ಪ್ರತಿಯೊಬ್ಬರೂ ತಿಳಿಯಲೇ ಬೇಕಾದ ಸಂಪೂರ್ಣ ಮಾಹಿತಿ

udayavani youtube

ರಾಜ್ ಕುಂದ್ರಾನಿಗೆ 14 ದಿನ ನ್ಯಾಯಾಂಗ ಬಂಧನ

udayavani youtube

ಕೊರೊನ ಅಂತ ನನ್ನ ಬಾಯಲ್ಲಿ ಹೇಳಲಿಕ್ಕೆ ಇಷ್ಟ ಇಲ್ಲ !

ಹೊಸ ಸೇರ್ಪಡೆ

ಮತ್ತೆ ಹುಟ್ಟಿ ಬನ್ನಿ: ಭಾರತದ ಬ್ಯಾಡ್ಮಿಂಟನ್ ದಂತಕಥೆ ನಂದು ನಾಟೇಕರ್ ವಿಧಿವಶ

ಮತ್ತೆ ಹುಟ್ಟಿ ಬನ್ನಿ: ಭಾರತದ ಬ್ಯಾಡ್ಮಿಂಟನ್ ದಂತಕಥೆ ನಂದು ನಾಟೇಕರ್ ವಿಧಿವಶ

sdfghdyhdgthdgh

ಕಾಪು : ಜಾತ್ರೆಯಿಲ್ಲದೇ ಸಾಂಪ್ರದಾಯಿಕ ಪೂಜೆ, ಹರಕೆ ಸಮರ್ಪಣೆಗೆ ಸೀಮಿತಗೊಂಡ ಆಟಿ ಮಾರಿಪೂಜೆ

ಖಾಲಿ ಹೊಟ್ಟೆಗೆ ಇವುಗಳನ್ನು ಸೇವಿಸಬೇಡಿ

ಆರೋಗ್ಯದ ಮೇಲೆ ಪರಿಣಾಮ…ಖಾಲಿ ಹೊಟ್ಟೆಗೆ ಇವುಗಳನ್ನು ಸೇವಿಸಬೇಡಿ

fsgfguhjggf

ಯಡಿಯೂರಪ್ಪ ಕಣ್ಣೀರಿನ ಬಗ್ಗೆ ಬಹಿರಂಗಪಡಿಸಲಿ : ಡಿ.ಕೆ ಶಿವಕುಮಾರ್

dgfhgfhgffs

ಕರ್ನಾಟಕವು ಮಹದಾಯಿ ನದಿ ನೀರನ್ನು ತಿರುಗಿಸಿಕೊಂಡಿರುವುದು ಸತ್ಯ : ಫಿಲಿಪ್ ನೇರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.