Udayavni Special

ಬೀಜ ಮಾರಾಟ ಮಳಿಗೆಗಳ ಮೇಲೆ ದಾಳಿ


Team Udayavani, Jun 17, 2021, 10:23 PM IST

17-15

ಬಳ್ಳಾರಿ: ಮೆಣಸಿನಕಾಯಿ ಬಿತ್ತನೆ ಬೀಜಕ್ಕೆ ರೈತರಲ್ಲಿ ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ಬೀಜ ಮಾರಾಟದ ಮಳಿಗೆಗಳ ಮೇಲೆ ತೋಟಗಾರಿಕೆ ಇಲಾಖೆ ಅಧಿ  ಕಾರಿಗಳು ಮಂಗಳವಾರ ದಾಳಿ ನಡೆಸಿ ಸಿಂಜೆಂಟ್‌ ಕಂಪನಿಯ 2.2 ಕೆಜಿ ಬಿತ್ತನೆ ಬೀಜವನ್ನು ವಶಕ್ಕೆ ಪಡೆದಿದ್ದಾರೆ.

ಸಿಂಜೆಂಟ್‌ ಕಂಪನಿಯ 5531, 2043 ಬಿತ್ತನೆ ಬೀಜಕ್ಕೆ ಬೇಡಿಕೆ ಹೆಚ್ಚಾಗಿದ್ದು, ರೈತರು ಪ್ರತಿನಿತ್ಯ ತೋಟಗಾರಿಕೆ ಕಚೇರಿಗೆ ಅಲೆಯುತ್ತಿದ್ದಾರೆ. ಮಹಿಳೆಯರು ಸೇರಿ ರೈತರು ಬೀಜಕ್ಕಾಗಿ ಕಚೇರಿಗೆ ನುಗ್ಗುತ್ತಿದ್ದಾರೆ. ರೈತರಿಗೆ ವಿತರಿಸಲು ಸಮರ್ಪಕ ಬೀಜ ಇಲ್ಲದಿದ್ದರೆ, ಸಿಂಜೆಂಟ್‌ ಕಂಪನಿಯಿಂದ ಈಗಾಗಲೇ ವಿತರಣೆಯಾಗಿರುವ ಬಿತ್ತನೆ ಬೀಜಗಳು ಯಾರ ಬಳಿಯಿವೆ ಎಂದು ರೈತ ಸಂಘಟನೆಗಳ ಮುಖಂಡರು ಮಂಗಳವಾರ ಅಧಿಕಾರಿಗಳನ್ನು ಪ್ರಶ್ನಿಸಿದ್ದ ಹಿನ್ನೆಲೆಯಲ್ಲಿ ಅಮರ ಸಿದ್ದೇಶ್ವರ ಟ್ರೇಡಿಂಗ್‌ ಕಂಪನಿ, ಶ್ರೀಕೃಷ್ಣ ಟ್ರೇಡಿಂಗ್‌ ಕಂಪನಿ, ಸಿದ್ದಮ್ಮನಹಳ್ಳಿಯ ಶ್ರೀ ವೆಂಕಟೇಶ್ವರ ಟ್ರೇಡರ್ಸ್‌, ಬಳ್ಳಾರಿಯ ಸಿದ್ದೇಶ್ವರ ಏಜೆನ್ಸಿ, ತಿರುಮಲ ಎಂಟರ್‌ಪ್ರೈಸಸ್‌, ವೆಂಕಟೇಶ್ವರ ಸೀಡ್ಸ್‌ ಆ್ಯಂಡ್‌ ಫರ್ಟಿಲೈಸರ್ಸ್‌, ಲಕೀÒ$¾ನಗರ ಕ್ಯಾಂಪ್‌ನ ನಾಗಭೂಷನ ಆಗ್ರೋ ಏಜೆನ್ಸಿ, ಸೋಮ ಸಮುಸಮುದ್ರ ಗ್ರಾಮದ ವೆಂಕಟೇಶ್ವರ ಎಂಟರ್‌ಪ್ರೈಸಸ್‌ ಮಳಿಗೆಗಳ ಮೇಲೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಈ ವೇಳೆ ಸೋಮಸಮುದ್ರ ಗ್ರಾಮದ ವೆಂಕಟೇಶ್ವರ ಸೀಡ್ಸ್‌ ಆ್ಯಂಡ್‌ ಫರ್ಟಿಲೈಸರ್ಸ್‌ ಕಂಪನಿಯಲ್ಲಿ ಸಿಂಜೆಂಟ್‌ ಕಂಪನಿಯ 5531 ಬಿತ್ತನೆ ಬೀಜ 100 ಗ್ರಾಂಗಳ 2 ಪ್ಯಾಕೇಟ್‌, ಲಕೀÒ$¾ನಗರ ಕ್ಯಾಂಪ್‌ನ ನಾಗಭೂಷಣ ಆಗ್ರೊ ಏಜೆನ್ಸಿಯಲ್ಲಿ 2 ಕೆಜಿ ಸೇರಿ ಒಟ್ಟು 2.2 ಕೆಜಿ ಬಿತ್ತನೆ ಬೀಜವನ್ನು ವಶಕ್ಕೆ ಪಡೆಯಲಾಗಿದೆ ಎಂದು ಇಲಾಖೆ ಉಪನಿರ್ದೇಶಕ ಶರಣಪ್ಪ ಪಿ.ಭೋಗಿ ತಿಳಿಸಿದ್ದಾರೆ.

ಆದರೆ, ಬೀಜ ದೊರೆತ ಮಳಿಗೆಗಳ ಮೇಲೆ ಕ್ರಮಕೈಗೊಳ್ಳುವುದು, ದೂರು ದಾಖಲಿಸುವ ಬಗ್ಗೆ ಅ ಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಇಲ್ಲ. ಸೋಮವಾರ ರೈತರಿಗೆ ವಿತರಣೆ: ಸಿಂಜೆಂಟ್‌ ಕಂಪನಿಯ 5531, 2043 ಮೆಣಸಿನಕಾಯಿ ಬಿತ್ತನೆ ಬೀಜಕ್ಕೆ ರೈತರಲ್ಲಿ ಅದೊಂದು ಟ್ರೆಂಡ್‌ ಆಗಿದೆ. ಹಾಗಾಗಿ ಕಂಪನಿಯ ಡಿಸ್ಟ್ರಿಬ್ಯೂಟರ್‌ನೊಂದಿಗೆ ಮಾತನಾಡಿದ್ದೇವೆ. ಕಂಪನಿಯಿಂದ ಸ್ಟಾಕ್‌ ಬಂದಿಲ್ಲ. ಶನಿವಾರದೊಳಗೆ 5531, 2043 ಬೀಜಗಳು ತಲಾ 50 ಕೆಜಿಯಷ್ಟು ಕಳುಹಿಸುವುದಾಗಿ ತಿಳಿಸಿದ್ದಾರೆ.

ಒಂದು ವೇಳೆ ಬಂದಲ್ಲಿ ಸೋಮವಾರ ಬಳ್ಳಾರಿ ತಾಲೂಕು, ಕುರುಗೋಡು, ರೂಪನಗುಡಿ ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ವಿತರಿಸಲಾಗುವುದು ಎಂದು ಉಪನಿರ್ದೇಶಕ ಎಸ್‌.ಪಿ.ಭೋಗಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಇತರೆ ಬೀಜಗಳನ್ನೂ ಗಮನಹರಿಸಿ: ಸಿಂಜೆಂಟ್‌ ಕಂಪನಿಯ 5531, 2043 ಮೆಣಸಿನಕಾಯಿ ಬಿತ್ತನೆ ಬೀಜಕ್ಕೆ ರೈತರಲ್ಲಿ ಒಂದು ಟ್ರೆಂಡ್‌ ಆಗಿದೆ. ಆದರೆ, ಇದಕ್ಕೂ ಹೆಚ್ಚು ಇಳುವರಿ ನೀಡುವ ಅದೇ ಕಂಪನಿಯ, ಇತರೆ ಕಂಪನಿಗಳ ವಿವಿಧ ಬೀಜಗಳ ಬಗ್ಗೆಯೂ ರೈತರು ಗಮನ ಹರಿಸಬೇಕು ಎಂದ ಅವರು, ಸಿಂಜೆಂಟ್‌ ಕಂಪನಿಯ ರೆಡ್‌ಪಟ್ಟಿ, 2094 ಬಿತ್ತನೆ ಬೀಜಗಳು ಸಹ ಉತ್ತಮವಾಗಿ ಬೆಳೆಯುತ್ತವೆ. ಜತೆಗೆ ಲಕೀ, ಇಂಡೋಪೈ, ನುಸಿ ಸೀಡ್ಸ್‌ ಕಂಪನಿ ಸೇರಿ ಇನ್ನಿತರೆ ಹಲವು ಕಂಪನಿಗಳ ಬೀಜಗಳು ಸಹ ಇವೆ. ಈ ಬೀಜಗಳು 5531, 2043ಯಷ್ಟೇ ಪ್ರಮಾಣದಲ್ಲಿ ಇಳುವರಿ ನೀಡುತ್ತವೆ.

ಈ ಕಂಪನಿಗಳಿಗೆ ನೆರೆಯ ಆಂಧ್ರ, ರಾಜ್ಯದ ಹುಬ್ಬಳ್ಳಿ ಇನ್ನಿತರೆ ಭಾಗದಲ್ಲಿ ಈ ಬೀಜಗಳಿಗೆ ಬೇಡಿಕೆಯೇ ಇಲ್ಲ. ಹಾಗಾಗಿ ಆ ಬೀಜಗಳನ್ನು ಬಳ್ಳಾರಿಗೆ ಕಳುಹಿಸಲಾಗುತ್ತಿದೆ. ಹಾಗಾಗಿ ರೈತರು ಒಂದೇ ವಿಧದ ಬೀಜಕ್ಕೆ ಮುಗಿಬೀಳದೆ ಇತರೆ ಬೀಜಗಳ ಬಗ್ಗೆಯೂ ಗಮನ ಹರಿಸಬೇಕು ಎಂದವರು ರೈತರನ್ನು ಕೋರಿದ್ದಾರೆ.

ಟಾಪ್ ನ್ಯೂಸ್

ರಾಷ್ಟ್ರ ಧ್ವಜಕ್ಕೆ ಅಗೌರವ : ಕಣ್ಣು ಮುಚ್ಚಿ‌ಕುಳಿತ ಉಪ್ಪರಪೇಟ ಗ್ರಾಪಂ ಅಧಿಕಾರಿಗಳು

ರಾಷ್ಟ್ರ ಧ್ವಜಕ್ಕೆ ಅಗೌರವ : ಕಣ್ಣು ಮುಚ್ಚಿ‌ ಕುಳಿತ ಉಪ್ಪರಪೇಟೆ ಗ್ರಾಪಂ ಅಧಿಕಾರಿಗಳು

ಲಿಂಗನಮಕ್ಕಿ ಜಲಾಶಯದ ಒಂದು ಗೇಟ್ ನಿಂದ ನೀರು ಬಿಡುಗಡೆ: ಶರಾವತಿ ನದಿಗೆ ಬಾಗಿನ ಅರ್ಪಣೆ

ಲಿಂಗನಮಕ್ಕಿ ಜಲಾಶಯದ ಒಂದು ಗೇಟ್ ನಿಂದ ನೀರು ಬಿಡುಗಡೆ: ಶರಾವತಿ ನದಿಗೆ ಬಾಗಿನ ಅರ್ಪಣೆ

jk

ಬಸಣ್ಣನ ಆಸ್ಥಾನದಲ್ಲಿ ಯಾರಿಗೆ ಸಚಿವ ಸ್ಥಾನ?

haravale falls

ಪಣಜಿ : ಹರವಳೆ ಜಲಪಾತದಲ್ಲಿ ಬಿದ್ದು ಪಂಜಾಬ್ ಮೂಲದ ವ್ಯಕ್ತಿ ಸಾವು

ಸಹಜ ಉಸಿರಾಟಕ್ಕೆ ತ್ರಾಟಕ ಕ್ರಿಯೆ

ಸಹಜ ಉಸಿರಾಟಕ್ಕೆ ತ್ರಾಟಕ ಕ್ರಿಯೆ

ಮಾನ್ವಿತಾ ಕಣ್ಣಲ್ಲಿ ಹೊಸ ಕನಸು: ಹಳ್ಳಿ ಹುಡುಗಿ ಆದ ಟಗರು ಪುಟ್ಟಿ!

ಮಾನ್ವಿತಾ ಕಣ್ಣಲ್ಲಿ ಹೊಸ ಕನಸು: ಹಳ್ಳಿ ಹುಡುಗಿ ಆದ ಟಗರು ಪುಟ್ಟಿ!

ಮಾರುತಿ ಸುಝುಕಿಯ ಹೊಸ ಸೆಲೆರಿಯೊ ಬಿಡುಗಡೆಗೆ ಸಿದ್ಧ

ಮಾರುತಿ ಸುಝುಕಿಯ ಹೊಸ ಸೆಲೆರಿಯೊ ಬಿಡುಗಡೆಗೆ ಸಿದ್ಧಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

sfghgdhdg

ಜಿಪಂ ಕ್ಷೇತ್ರಕ್ಕೆ ಕಾಂಗ್ರೆಸ್‌ ನಿಂದ ಟಿಕೆಟ್‌ ನೀಡಲು ಮನವಿ

grjuyhds

ಆನಂದ ಸಿಂಗ್‌ ಗೆ ಡಿಸಿಎಂ ಸ್ಥಾನಕ್ಕಾಗಿ ಆನ್‌ ಲೈನ್‌ ಅಭಿಯಾನ

dfsdfjrgthfgf

ವಿದ್ಯಾರ್ಥಿಗಳಿಗೆ ಆಹಾರ ಸರಿಯಾಗಿ ಮುಟ್ಟಿಸಿ

ghgddaS

ಹಚ್ಚೊಳ್ಳಿ ನವಗ್ರಾಮಕ್ಕೆ ಜಿಲ್ಲಾಧಿಕಾರಿ ಭೇಟಿ

29-15

ನೂತನ ಸಿಎಂ: ಗರಿಗೆದರಿದ ನಿರೀಕ್ಷೆ

MUST WATCH

udayavani youtube

ಮಸ್ಕಿಯಲ್ಲೊಬ್ಬ ವಾನರ ಪ್ರೇಮಿ : ಮಸ್ಕಿ‌ ಪಟ್ಟಣದಲ್ಲಿ‌ ನಿತ್ಯವೂ ನಡೆಯುತ್ತಿರುವ ದೃಶ್ಯವಿದು

udayavani youtube

ರಸ್ತೆ ಮಧ್ಯೆಯೇ ಕಾರು ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಯುವತಿ

udayavani youtube

ಟೋಕಿಯೋ ಒಲಿಂಪಿಕ್ಸ್‌: ಕಂಚಿನ ಪದಕ ಗೆದ್ದ ಪಿವಿ ಸಿಂಧೂ!

udayavani youtube

ಜೋಗ ಜಲಪಾತಕ್ಕೆ ಹರಿದು ಬಂದ ಜನ ಸಾಗರ

udayavani youtube

ತನ್ನದೇ ಶಾಲೆ ಮುಂದೆ ವಿದ್ಯಾರ್ಥಿ ಹಸುಗಳ ಮಧ್ಯೆ! |

ಹೊಸ ಸೇರ್ಪಡೆ

hjklhjk

ಬೆಳಗಾವಿ: ಗಡಿ ದಾಟಲು ನೆಗೆಟಿವ್‌ ವರದಿ ಕಡ್ಡಾಯ

ರಾಷ್ಟ್ರ ಧ್ವಜಕ್ಕೆ ಅಗೌರವ : ಕಣ್ಣು ಮುಚ್ಚಿ‌ಕುಳಿತ ಉಪ್ಪರಪೇಟ ಗ್ರಾಪಂ ಅಧಿಕಾರಿಗಳು

ರಾಷ್ಟ್ರ ಧ್ವಜಕ್ಕೆ ಅಗೌರವ : ಕಣ್ಣು ಮುಚ್ಚಿ‌ ಕುಳಿತ ಉಪ್ಪರಪೇಟೆ ಗ್ರಾಪಂ ಅಧಿಕಾರಿಗಳು

ಲಿಂಗನಮಕ್ಕಿ ಜಲಾಶಯದ ಒಂದು ಗೇಟ್ ನಿಂದ ನೀರು ಬಿಡುಗಡೆ: ಶರಾವತಿ ನದಿಗೆ ಬಾಗಿನ ಅರ್ಪಣೆ

ಲಿಂಗನಮಕ್ಕಿ ಜಲಾಶಯದ ಒಂದು ಗೇಟ್ ನಿಂದ ನೀರು ಬಿಡುಗಡೆ: ಶರಾವತಿ ನದಿಗೆ ಬಾಗಿನ ಅರ್ಪಣೆ

jk

ಬಸಣ್ಣನ ಆಸ್ಥಾನದಲ್ಲಿ ಯಾರಿಗೆ ಸಚಿವ ಸ್ಥಾನ?

ದಾಂಡೇಲಿಯಲ್ಲಿ ಜನಜಾತ್ರೆಯಾದ ಕೋವಿಡ್ ಲಸಿಕಾ ಕೇಂದ್ರಗಳು

ದಾಂಡೇಲಿಯಲ್ಲಿ ಜನಜಾತ್ರೆಯಾದ ಕೋವಿಡ್ ಲಸಿಕಾ ಕೇಂದ್ರಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.