Udayavni Special

ಕೃಷಿ ಕಾಯ್ದೆ ಹಿಂಪಡೆಯದಿದ್ದ ರೆ ಸಂಸತ್‌ ಬಜೆಟ್‌ ಕಲಾಪಕ್ಕೆ ಅಡ್ಡಿ

ರಾಜ್ಯಸಭಾ ಸದಸ್ಯ, ಕಾಂಗ್ರೆಸ್‌ ನಾಯಕ ಡಾ| ಸೈಯದ್‌ ನಾಸೀರ್‌ ಹುಸೇನ್‌ ಎಚ್ಚ ರಿಕೆ

Team Udayavani, Jan 28, 2021, 5:40 PM IST

28-27

ಬಳ್ಳಾರಿ: ರೈತ-ಕಾರ್ಮಿಕ ವಿರೋಧಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯದಿದ್ದಲ್ಲಿ ಜ. 29ರಿಂದ ಆರಂಭವಾಗಲಿರುವ ಸಂಸತ್‌ ಬಜೆಟ್‌ ಅಧಿವೇಶನ ನಡೆಯಲು ಅವಕಾಶ ನೀಡುವುದಿಲ್ಲ ಎಂದು ರಾಜ್ಯಸಭಾ ಸದಸ್ಯ ಡಾ|ಸೈಯದ್‌ ನಾಸೀರ್‌ ಹುಸೇನ್‌ ಎಚ್ಚರಿಸಿದರು.
ನಗರದ ಬುಧವಾರ ರೈತ ಮುಖಂಡರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ಕೃಷಿ-ಕಾರ್ಮಿಕ ತಿದ್ದುಪಡಿ ಕಾಯ್ದೆಗಳನ್ನು
ಸಂಸತ್‌ನಲ್ಲಿ ಪಾಸ್‌ ಮಾಡುವಾಗಲೂ ಕಾಂಗ್ರೆಸ್‌, ಟಿಆರ್‌ಎಸ್‌, ವೈಎಸ್‌ಆರ್‌, ಅಕಾಲಿದಳ, ಬಿಜು ಜನತಾದಳ ಸೇರಿ ಎನ್‌ಡಿಎ ಮೈತ್ರಿಕೂಟದ
ಪಕ್ಷಗಳ ಸಂಸದರು ವಿರೋಧ ವ್ಯಕ್ತಪಡಿಸಿದ್ದರು.

ಈ ಕಾಯ್ದೆಗಳನ್ನು ಮತದಾನದ ಮೂಲಕ ಪಾಸ್‌ ಮಾಡುವಂತೆ ಒತ್ತಾಯಿಸಿದರೂ ಕೇಳದ ಆಡಳಿತ ಪಕ್ಷದವರು, ತಮ್ಮನ್ನು ಸೇರಿ ಎಂಟು ಜನ ಸಂಸದರನ್ನು ಸಂಸತ್‌ನಿಂದ ಅಮಾನತುಗೊಳಿಸಿ ಅಸಂವಿಧಾನಿಕವಾಗಿ ಬಿಲ್‌ಗ‌ಳನ್ನು ಪಾಸ್‌ ಮಾಡಿದರು ಎಂದು ದೂರಿದರು.
ನಾವೆಲ್ಲರೂ ಸಂಸತ್‌ ಎದುರು ಪ್ರತಿಭಟನೆ ನಡೆಸಿದ್ದು, ಇದೀಗ ರೈತ ಸಂಘಟನೆಗಳು ನಿರಂತರವಾಗಿ ಹೋರಾಟ ನಡೆಸುತ್ತಿವೆ. ಆದರೂ,
ಕೇಂದ್ರ ಸರ್ಕಾರ ಕಾಯ್ದೆಗಳನ್ನು ಹಿಂಪಡೆಯುತ್ತಿಲ್ಲ ಎಂದರೆ ಅದು ಬಂಡವಾಳಶಾಹಿಗಳ ಪರವಾಗಿದೆ. ಜ. 29ರಿಂದ ಸಂಸತ್‌ನಲ್ಲಿ ಬಜೆಟ್‌ ಅ ಧಿವೇಶನ ಆರಂಭವಾಗಲಿದೆ. ಈ ಅ ಧಿವೇಶನದಲ್ಲಿ ತಿದ್ದುಪಡಿ ಕಾಯ್ದೆಗಳನ್ನು ವಾಪಸ್‌ ಪಡೆಯದಿದ್ದಲ್ಲಿ ಬಜೆಟ್‌ ಮಂಡನೆಗೆ ಮಾತ್ರ ಅವಕಾಶ ನೀಡಿ ಅ ಧಿವೇಶನ ನಡೆಯಲು ಅವಕಾಶ ಕೊಡುವುದಿಲ್ಲ ಎಂದರು. ದೆಹಲಿಯಲ್ಲಿ ರೈತರ ಟ್ರಾಕ್ಟರ್‌ ಜಾಥಾ ವೇಳೆ ನಡೆದ ಹಿಂಸಾಚಾರವನ್ನು
ನಾನು ಸೇರಿ ನಮ್ಮ ಕಾಂಗ್ರೆಸ್‌ ಪಕ್ಷ ಖಂಡಿಸುತ್ತದೆ ಎಂದರು.

ಬಳ್ಳಾರಿ ಜಿಲ್ಲೆಯ ವಿಭಜನೆಗೆ ಸಂಬಂಧಿಸಿದಂತೆ 30 ಸಾವಿರಕ್ಕೂ ಹೆಚ್ಚು ಆಕ್ಷೇಪಣೆಗಳನ್ನು ಸಲ್ಲಿಸಲಾಗಿದೆ. ಜಿಲ್ಲೆ ವಿಭಜನೆ ಬಗ್ಗೆ ಕೇವಲ ವಿರೋಧಿ ಸಿದರೆ ಸಾಲದು, ನಮ್ಮ ಜೊತೆ ಹೋರಾಟಕ್ಕೆ ಬನ್ನಿ ಎಂದು ಬಿಜೆಪಿ ಶಾಸಕರಿಗೆ ಸವಾಲು ಹಾಕಿದರು.
ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿಯ ಸಿರೆಗೇರಿ ಪನ್ನರಾಜ್‌, ಸಮಿತಿ ಮುಖಂಡ ಟಿ.ಜಿ. ವಿಠಲ್‌, ರೈತ ಮುಖಂಡ ಆರ್‌. ಮಾಧವರೆಡ್ಡಿ
ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಜಿಪಂ ಸದಸ್ಯರಾದ ಮುಂಡ್ರಿಗಿ ನಾಗರಾಜ, ಎ.ಮಾನಯ್ಯ, ಕಾಂಗ್ರೆಸ್‌ ಯುವಮುಖಂಡ ವೆಂಕಟೇಶ್‌ ಹೆಗಡೆ, ಸಮಿತಿಯ ಕೆ.ಎರ್ರಿಸ್ವಾಮಿ ಸೇರಿ ಹಲವರು ಇದ್ದರು.

ಓದಿ : ಬೇಂದ್ರೆ ಕನ್ನಡ ಸಾಹಿತ್ಯದ ಮೇರು ಶಿಖರ

ಟಾಪ್ ನ್ಯೂಸ್

ಈ ರಾಶಿಯವರಿಗಿಂದು ಸಾರ್ವಜನಿಕ ಕಾರ್ಯದಲ್ಲಿ ಅವಮಾನ ಅಪಮಾನ ಪ್ರಸಂಗ ಎದುರಾಗಬಹುದು!

ಈ ರಾಶಿಯವರಿಗಿಂದು ಸಾರ್ವಜನಿಕ ಕಾರ್ಯದಲ್ಲಿ ಅವಮಾನ ಅಪಮಾನ ಪ್ರಸಂಗ ಎದುರಾಗಬಹುದು!

ಲಸಿಕೆ ನೀಡಲು 30,000 ಕೋಟಿ ಬೇಕು

ಲಸಿಕೆ ನೀಡಲು 30,000 ಕೋಟಿ ಬೇಕು

ರಾಷ್ಟ್ರೀಯ ತುರ್ತು ಪರಿಸ್ಥಿತಿಯಂತಿದೆ

ರಾಷ್ಟ್ರೀಯ ತುರ್ತು ಪರಿಸ್ಥಿತಿಯಂತಿದೆ

ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ?

ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ?

ಮೇಯಲ್ಲಿ ಹೆಚ್ಚು ಕೇಸ್‌!

ಮೇಯಲ್ಲಿ ಹೆಚ್ಚು ಕೇಸ್‌!

ರಾಜಕೀಯ ಪಥ ಬದಲಿಸಿದ ಅಣ್ಣಾ ಆಂದೋಲನಕ್ಕೆ ದಶಕ

ರಾಜಕೀಯ ಪಥ ಬದಲಿಸಿದ ಅಣ್ಣಾ ಆಂದೋಲನಕ್ಕೆ ದಶಕ

Untitled-3

ಪುಸ್ತಕಗಳೂ ಓದುವ ಅಭಿರುಚಿಯೂ..ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22-13

ಮರಿಯಮ್ಮನಹಳ್ಳಿ: 39 ಮಂದಿಗೆ ಕೊರೊನಾ

22-12

ಶ್ರೀರಾಮನ ಕಲ್ಯಾಣೋತ್ಸ ವದಿಂದ ಲೋಕಕ್ಕೆ ಕಲ್ಯಾಣ

22-11

ಕೋವಿಡ್‌ ಆದೇಶ ಕಟ್ಟು ನಿಟ್ಟಾಗಿ ಜಾರಿಗೊಳಿಸಿ

21-21

ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಗ್ರಹಣ!

21-20

ಪಾಲಿಕೆಯಲ್ಲಿ ಮತ್ತೆ ಕಾಂಗ್ರೆಸ್‌ ಅ ಧಿಕಾರಕ್ಕೆ : ಕೊಂಡಯ್ಯ

MUST WATCH

udayavani youtube

ಬೈಕ್ ಗೆ ನಾಯಿಯನ್ನು ಕಟ್ಟಿ ಹೆದ್ದಾರಿಯಲ್ಲೇ ಎಳೆದುಕೊಂಡು ಹೋದ ಸವಾರರು ! |

udayavani youtube

ಅಘೋಷಿತ ಲಾಕ್ ಡೌನ್ ವಿರುದ್ಧ ಮಾಜಿ ಸಿಎಂ ಕುಮಾರ ಸ್ವಾಮಿ ಕೆಂಡಾಮಂಡಲ

udayavani youtube

ಮಂಗಳೂರಿನ ಮಾರುಕಟ್ಟೆ ಸುಧಾರಣೆ ಕುರಿತು ಉದಯವಾಣಿ ಫೋನ್ ಇನ್

udayavani youtube

ಕೊರೊನಾ 1 ವರುಷ !

udayavani youtube

ಆಕ್ಸಿಜನ್ ಮಹಾರಾಷ್ಟ್ರಕ್ಕೆ ಕಳುಹಿಸುವುದಕ್ಕೆ ಎಂ.ಬಿ.ಪಾಟೀಲ ಆಕ್ಷೇಪ

ಹೊಸ ಸೇರ್ಪಡೆ

ಈ ರಾಶಿಯವರಿಗಿಂದು ಸಾರ್ವಜನಿಕ ಕಾರ್ಯದಲ್ಲಿ ಅವಮಾನ ಅಪಮಾನ ಪ್ರಸಂಗ ಎದುರಾಗಬಹುದು!

ಈ ರಾಶಿಯವರಿಗಿಂದು ಸಾರ್ವಜನಿಕ ಕಾರ್ಯದಲ್ಲಿ ಅವಮಾನ ಅಪಮಾನ ಪ್ರಸಂಗ ಎದುರಾಗಬಹುದು!

ಕರಾವಳಿಯಲ್ಲೂ ಆಕ್ಸಿಜನ್‌ಗೆ ಹೆಚ್ಚಿದ ಬೇಡಿಕೆ!

ಕರಾವಳಿಯಲ್ಲೂ ಆಕ್ಸಿಜನ್‌ಗೆ ಹೆಚ್ಚಿದ ಬೇಡಿಕೆ!

ಲಸಿಕೆ ನೀಡಲು 30,000 ಕೋಟಿ ಬೇಕು

ಲಸಿಕೆ ನೀಡಲು 30,000 ಕೋಟಿ ಬೇಕು

ರಾಷ್ಟ್ರೀಯ ತುರ್ತು ಪರಿಸ್ಥಿತಿಯಂತಿದೆ

ರಾಷ್ಟ್ರೀಯ ತುರ್ತು ಪರಿಸ್ಥಿತಿಯಂತಿದೆ

ಶೇ.50ರಷ್ಟು ಉಪನ್ಯಾಸಕರ ಹಾಜರಾತಿ ಕಡ್ಡಾಯ

ಶೇ.50ರಷ್ಟು ಉಪನ್ಯಾಸಕರ ಹಾಜರಾತಿ ಕಡ್ಡಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.