ಬಡ್ತಿ ಹೊಂದಿದ ಅ ಧಿಕಾರಿಗಳಿಗೆ ಬೀಳ್ಕೊಡುಗೆ
ನಗರದ ಕಂದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರೇಡ್-2 ತಹಶೀಲ್ದಾರ್‌ರಾಗಿ ಬಡ್ತಿ ಹೊಂದಿದ ವಿಶ್ವನಾಥ ಮತ್ತು ಷಣ್ಮುಖಪ್ಪರನ್ನು ಸನ್ಮಾನಿಸಲಾಯಿತು.
Team Udayavani, Jan 31, 2021, 4:26 PM IST
ಸಿರುಗುಪ್ಪ: ಸರ್ಕಾರಿ ಕೆಲಸದಲ್ಲಿ ಪ್ರಾಮಾಣಿಕತೆ, ನಿಷ್ಟೆ ಇರಬೇಕು, ಆಗಮಾತ್ರ ಸಾರ್ವಜನಿಕರ ಕೆಲಸ ಕಾರ್ಯಗಳು ಉತ್ತಮವಾಗಿ ನಡೆಯಲು ಸಾಧ್ಯವಾಗುತ್ತದೆ ಎಂದು ಗ್ರೇಡ್-2 ತಹಶೀಲ್ದಾರ್ ರಾಗಿ ಬಡ್ತಿಹೊಂದಿದ ವಿಶ್ವನಾಥ ತಿಳಿಸಿದರು.
ನಗರದ ಕಂದಾಯ ಭವನದಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ವತಿಯಿಂದ ತಾಲೂಕಿನ ಕರೂರು ನಾಡಕಚೇರಿ ಉಪತಹಶೀಲ್ದಾರ್‌ರಾಗಿ ಕಾರ್ಯನಿರ್ವಹಿಸುತ್ತಿದ್ದ ವಿಶ್ವನಾಥ ಅವರು ಕಾರಟಗಿ ತಾಲೂಕು ಕಚೇರಿಗೆ ಗ್ರೇಡ್-2 ತಹಶೀಲ್ದಾರ್‌ರಾಗಿ ಮತ್ತು ಹಚ್ಚೊಳ್ಳಿ ನಾಡಕಚೇರಿ ಉಪತಹಶೀಲ್ದಾರ್‌ರಾಗಿ ಕಾರ್ಯನಿರ್ವಹಿಸುತ್ತಿದ್ದ ಷಣ್ಮುಖಪ್ಪ ಅವರು ಸಿಂಧನೂರು ತಾಲೂಕು ಕಚೇರಿಗೆ ಗ್ರೇಡ್ -2 ತಹಶೀಲ್ದಾರ್‌ರಾಗಿ ಬಡ್ತಿ ಹೊಂದಿ ವರ್ಗಾವಣೆಗೊಂಡ ಅಧಿ ಕಾರಿಗಳಿಗೆ ಏರ್ಪಡಿಸಿದ್ದ ಬೀಳ್ಕೊಡಿಗೆ ಸಮಾರಂಭದಲ್ಲಿ ಮಾತನಾಡಿ, ಸರ್ಕಾರಿ ಕಚೇರಿಗಳಿಗೆ ಬರುವ ಜನರಿಗೆ ನಾವು ಉತ್ತಮವಾಗಿ ಕೆಲಸ ಕಾರ್ಯಗಳನ್ನು ಮಾಡಿಕೊಡುವುದು ನಮ್ಮ ಕರ್ತವ್ಯವಾಗಿದೆ. ನಮ್ಮ ಕರ್ತವ್ಯವನ್ನು ಪ್ರಾಮಾಣಿಕತೆ ನಿಷ್ಟೆಯಿಂದ ಮಾಡಿದರೆ ದೇವರ ಕೃಪೆ ದೊರೆಯುತ್ತದೆ ಎಂದು ಹೇಳಿದರು.
ಗ್ರೇಡ್-2 ತಹಶೀಲ್ದಾರರಾಗಿ ಬಡ್ತಿ ಹೊಂದಿದ ವಿಶ್ವನಾಥ ಮತ್ತು ಷಣ್ಮುಖಪ್ಪರನ್ನು ಸನ್ಮಾನಿಸಲಾಯಿತು. ಗ್ರಾಮಲೆಕ್ಕಾ ಧಿಕಾರಿಗಳ ಸಂಘದ ತಾಲೂಕು ಅಧ್ಯಕ್ಷ ವಿರುಪಾಕ್ಷಪ್ಪ, ಕಂದಾಯ ಅಧಿಕಾರಿಗಳಾದ ಮಂಜುನಾಥ, ಉಮಾಮಹೇಶ್ವರರಾವ್ ಮತ್ತು ಗ್ರಾಮಲೆಕ್ಕಾ ಧಿಕಾರಿಗಳು, ಕಂದಾಯ ಇಲಾಖೆ ಸಿಬ್ಬಂದಿ ಇದ್ದರು.