ಟಾಸ್ಕ್ ಫೋರ್ಸ್‌ ಸಮಿತಿಯಿಂದ ಜಾಗೃತಿ

ಹುಡೇಂ ಗ್ರಾಮದಲ್ಲಿ ಸಾವಿರ ಮನೆಗಳಿಗೆ ಭೇಟಿ, ಕೋವಿಡ್ ವೈರಸ್‌ ನಿಯಂತ್ರಣಕ್ಕೆ ಸೂಚನೆ

Team Udayavani, Apr 11, 2020, 4:17 PM IST

11-April-25

ಬಳ್ಳಾರಿ: ಟಾಸ್ಕ್ಫೋರ್ಸ್‌ ಸಮಿತಿ ಸದಸ್ಯರು ಕೂಡ್ಲಿಗಿ ತಾಲೂಕು ಹುಡೇಂ ಗ್ರಾಮದಲ್ಲಿ ಕೋವಿಡ್ ನಿಯಂತ್ರಣಕ್ಕೆ ಜಾಗೃತಿ ಮೂಡಿಸಿದರು.

ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹುಡೇಂ ಗ್ರಾಮದಲ್ಲಿ ಒಂದು ಸಾವಿರಕ್ಕೂ ಅಧಿಕ ಮನೆಗಳಿಗೆ ಭೇಟಿ ನೀಡಿದ ಗ್ರಾಪಂ ಮಟ್ಟದ ಟಾಸ್ಕ್ ಫೋರ್ಸ್‌ ಸಮಿತಿ ಸದಸ್ಯರು ಕೋವಿಡ್  ವೈರಸ್‌ ನಿಯಂತ್ರಣ ಕುರಿತು ಜಾಗೃತಿ ಮೂಡಿಸಿದರು.

ಗ್ರಾಪಂ ಅಧ್ಯಕ್ಷ ಪಿ.ಮಂಜುನಾಥ ಮಾತನಾಡಿ, ಜೀವ ಉಳಿದರೆ ಜೀವನ ಎನ್ನುವುದನ್ನು ಅರಿತು ಕರೋನಾ ವೈರಸ್‌ ನಿಯಂತ್ರಣಕ್ಕಾಗಿ ಎಲ್ಲರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಜಾಗ್ರತೆ ವಹಿಸಬೇಕು ಎಂದು ತಿಳಿಸಿದರು. ತಾ.ಪಂ ಸದಸ್ಯ ಜಿ.ಪಾಪನಾಯಕ ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ವೈರಸ್‌ ಪಾಸಿಟಿವ್‌ ಪ್ರಕರಣ ಕಂಡುಬಂದಿರುವುದರಿಂದ ಗಡಿ ಗ್ರಾಮಗಳಲ್ಲೂ ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ. ಮನೆಯಲ್ಲಿರುವ ಮೂಲಕ ಲಾಕ್‌ಡೌನ್‌ ಆದೇಶ ಪಾಲಿಸಬೇಕು. ಗುಂಪುಗೂಡುವುದನ್ನು ಸ್ವಯಂ ಪ್ರೇರಿತರಾಗಿ ತಡೆಯಬೇಕು. ಅಲ್ಲದೆ, ದಿನಕ್ಕೆ 8-10 ಬಾರಿ ಕೈಗಳನ್ನು ಸೋಪ್‌ನಿಂದ ತೊಳೆಯುವ ಮೂಲಕ ರೋಗ ಹರಡುವುದನ್ನು ತಡೆಯಬೇಕು ಎಂದು ಮನೆ, ಮನೆಗೂ ಭೇಟಿ ನೀಡಿದ ಅರಿವು ಮೂಡಿಸಿದರು.

ಆಯುರ್ವೇದಿಕ್‌ ಆಸ್ಪತ್ರೆ ವೈದ್ಯಾಧಿಕಾರಿ ಶಿವಲಿಂಗಪ್ಪ, ಪಿಡಿಒ ಮೂಕಪ್ಪ, ಕರುನಾಡು ಸ್ವಯಂ ಸೇವಾ ಸಂಸ್ಥೆ ಕಾರ್ಯದರ್ಶಿ ಹುಡೇಂ ಕೃಷ್ಣಮೂರ್ತಿ, ಗ್ರಂಥಾಲಯ ಮೇಲ್ವಿಚಾರಕ ತುಡುಮ ಗುರುರಾಜ್‌, ಗ್ರಾಪಂ ಸದಸ್ಯ ರಸೂಲ್‌ಸಾಬ್‌, ಮುಖಂಡರಾದ ರಾಮಚಂದ್ರಪ್ಪ, ಸೂರಯ್ಯ, ನಡುಗಡ್ಡೆ ತಿಪ್ಪೇಸ್ವಾಮಿ, ಗ್ರಾಪಂ ಸಿಬ್ಬಂದಿ ತಿಪ್ಪೇರುದ್ರಪ್ಪ, ಪಾಲಯ್ಯ, ಅಂಜಿನಪ್ಪ, ಮಲಿಯಪ್ಪ, ದಕ್ಷಿಣಮೂರ್ತಿ, ಎಎನ್‌ಎಂಗಳಾದ ಪ್ರೇಮಾ, ಸ್ವಾಮಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

ಹುಡೇಂ ಗ್ರಾಮದ ಒಂದು ಸಾವಿರಕ್ಕೂ ಅದಿಕ ಮನೆಗಳಿಗೆ ಟಾಸ್ಕ್ ಫೋರ್ಸ್‌ ಸಮಿತಿ ಪದಾಧಿಕಾರಿಗಳು ಭೇಟಿ ನೀಡಿ ಕೊರೊನಾ ವೈರಸ್‌ ನಿಯಂತ್ರಣಕ್ಕೆ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಜಾಗೃತಿ ಮೂಡಿಸಿದರು. ಅಲ್ಲದೆ, ಹೋಟೆಲ್‌ ಮತ್ತು ಅಂಗಡಿ ಮಾಲೀಕರಿಗೆ ಲಾಕ್‌ಡೌನ್‌ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಯಿತು.

ಟಾಪ್ ನ್ಯೂಸ್

ಕಾಂಗ್ರೆಸ್ ಶಾಸಕರಿಗೆ ಟಿಕೆಟ್ ಕೈ ತಪ್ಪುವ ಭೀತಿ; ಚುನಾವಣಾ ಸಿದ್ದತೆ ಆರಂಭಿಸಿದ ಕೈ ಪಡೆ

ಕಾಂಗ್ರೆಸ್ ಶಾಸಕರಿಗೆ ಟಿಕೆಟ್ ಕೈ ತಪ್ಪುವ ಭೀತಿ; ಚುನಾವಣಾ ಸಿದ್ದತೆ ಆರಂಭಿಸಿದ ಕೈ ಪಡೆ

ಜಿ.ಪಂ-ತಾ.ಪಂ ಚುನಾವಣೆ: ವಿಚಾರಣೆ ಮೇ 23ಕ್ಕೆ ಮುಂದೂಡಿಕೆ

ಜಿ.ಪಂ-ತಾ.ಪಂ ಚುನಾವಣೆ: ವಿಚಾರಣೆ ಮೇ 23ಕ್ಕೆ ಮುಂದೂಡಿಕೆ

1-fdsfdsfds

ಕಿರುತೆರೆ ನಟಿ ಚೇತನಾ ಸಾವು!: ಬೊಜ್ಜು ತೆಗೆಯುವ ಶಸ್ತ್ರಚಿಕಿತ್ಸೆ ಮುಳುವಾಯಿತೇ ?

ಸಾಗರ : ಶಾಲೆಗೆ ಹೋಗುವುದಾಗಿ ಹೇಳಿ ಹೋದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಆತ್ಮಹತ್ಯೆ

ಸಾಗರ: ಶಾಲೆಗೆ ಹೋಗುತ್ತೇನೆಂದು ಹೋದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯ ಶವ ಕೆರೆಯಲ್ಲಿ ಪತ್ತೆ

cm-ibrahim.

ಪರಿಷತ್ ಸ್ಥಾನದ ಮೇಲೆ ಕಣ್ಣಿಟ್ಟ ಸಿ.ಎಂ.ಇಬ್ರಾಹಿಂ; ಜೆಡಿಎಸ್ ನಾಯಕರಿಗೆ ಕಸಿವಿಸಿ

sensex

1,300 ಅಂಕಗಳ ಏರಿಕೆ ಕಂಡ ಸೆನ್ಸೆಕ್ಸ್ ; 16,200 ಮಟ್ಟವನ್ನು ಮರಳಿ ಪಡೆದ ನಿಫ್ಟಿ

21

ಹೆತ್ತವರ ಅಪಸ್ವರ ಲೆಕ್ಕಿಸದೇ ಹಿಂದೂ ಯುವಕ, ಮುಸ್ಲಿಂ ಯುವತಿ ವಿವಾಹಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jatha

ಡೆಂಘೀ ತಡೆಗೆ ಸಹಭಾಗಿತ್ವ ಅಗತ್ಯ

3hijab

ಹಿಜಾಬ್‌: ಪರೀಕ್ಷೆ ಬರೆಯದೆ ಇಬ್ಬರು ವಾಪಸ್

harapanahalli

ಶಾಲಾ ಕೊಠಡಿ ಶಿಥಿಲ: ಭಯದಲ್ಲೇ ಪಾಠ!

gul-mohar

ಮನಸೆಳೆಯುತ್ತಿವೆ ಗುಲ್‌ಮೋಹರ್‌ ಹೂಗಳು

kuragodu

ಮೂಲ ಸೌಕರ್ಯ ವಂಚಿತ ಸಿದ್ಧಮ್ಮನಹಳ್ಳಿ ಶಾಲೆ

MUST WATCH

udayavani youtube

ಉದ್ಘಾಟನೆಗೆ ಶಾಸಕರೇ ಬರಬೇಕಂತೆ; ಕಾಫಿನಾಡಲ್ಲಿ ರಸ್ತೆಗೆ ಬೀಗ ಹಾಕಿದ ಬಿಜೆಪಿ ಸದಸ್ಯರು!

udayavani youtube

ಜ್ಞಾನವಾಪಿ ಮಸೀದಿ ಸರ್ವೇ ಸಂಪೂರ್ಣ; ಬಾವಿಯಲ್ಲಿ ‘ಶಿವಲಿಂಗ’ಪತ್ತೆ

udayavani youtube

ದತ್ತ ಜಯಂತಿ ಸಮಯದಲ್ಲಿ ಹೋಮದ ಹೊಗೆ.. ಬೇರೆ ಸಮಯದಲ್ಲಿ ಮಾಂಸದ ಹೊಗೆ

udayavani youtube

ಶಾಲಾ ಪ್ರಾರಂಭೋತ್ಸವ ಹಿರಿಯಡ್ಕ ಸರಕಾರಿ ಪಬ್ಲಿಕ್ ಸ್ಕೂಲ್ ನಲ್ಲಿ ಮಕ್ಕಳಿಗೆ ಸಂಭ್ರಮದ ಸ್ವಾಗತ

udayavani youtube

ಶಂಕರನಾರಾಯಣ : ಶಾಲಾರಂಭದ ದಿನದಂದೇ ಸರಕಾರಿ ಶಾಲೆಯಲ್ಲಿ ಪ್ರತಿಭಟನೆ ಬಿಸಿ

ಹೊಸ ಸೇರ್ಪಡೆ

20fever

ಜ್ವರ ಇದ್ದಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ

ಕಾಸರಗೋಡು ಅಪರಾಧ ಸುದ್ದಿಗಳು

ಕಾಸರಗೋಡು ಅಪರಾಧ ಸುದ್ದಿಗಳು

19land

ಶಾಲಾ ಕಟ್ಟಡ ಕಾಮಗಾರಿಗೆ ಭೂಮಿಪೂಜೆ

ಸಾಗರ: ಹೊಟ್ಟೆಯೊಳಗಿದ್ದ ಏಳು ಕೆಜಿಯ ಗಡ್ಡೆಯನ್ನು ಯಶಸ್ವಿಯಾಗಿ ಹೊರ ತೆಗೆದ ವೈದ್ಯರು

ಸಾಗರ: ಹೊಟ್ಟೆಯೊಳಗಿದ್ದ ಏಳು ಕೆಜಿಯ ಗಡ್ಡೆಯನ್ನು ಯಶಸ್ವಿಯಾಗಿ ಹೊರ ತೆಗೆದ ವೈದ್ಯರು

18raichur

ರಾಯಚೂರು ನಗರಸಭೆಗೆ ಮತ್ತೆ ಹಳೇ ಕಮಿಷನರ್‌?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.