ದುಪ್ಪಟ್ಟು ದರ ಕೊಟ್ಟರೂ ಸಿಕ್ಕಿಲ್ಲ ಮಾಸ್ಕ್


Team Udayavani, Mar 15, 2020, 12:45 PM IST

15-March-9

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲೂ ಆತಂಕ ಮೂಡಿಸಿರುವ ಕೊರೊನಾ ವೈರಸ್‌ ಎಫೆಕ್ಟ್ನಿಂದಾಗಿ ಸುರಕ್ಷತಾ ಕ್ರಮಕೈಗೊಳ್ಳಲು ಮುಂದಾಗುತ್ತಿರುವ ಜನರಿಗೆ ಔಷಧ ಅಂಗಡಿಗಳಲ್ಲಿ ಮಾಸ್ಕ್ಗಳ ಕೊರತೆ ಎದುರಾಗಿದೆ. ಒಂದುವೇಳೆ ಇದ್ದರೂ ಈ ಮೊದಲು ಇದ್ದ 10 ರೂ. ಬದಲಾಗಿ 30 ರೂ. ಅಥವಾ ಅದಕ್ಕೂ ಹೆಚ್ಚು ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

ಕೊರೊನಾ ವೈರಸ್‌ ಜಗತ್ತನೇ ಬೆಚ್ಚಿ ಬೀಳಿಸಿದೆ. ಭಾರತಕ್ಕೂ ಆವರಿಸಿರುವ ಈ ವೈರಸ್‌ ರಾಜ್ಯದಲ್ಲಿ ಈಗಾಗಲೇ ಒಬ್ಬರನ್ನು ಬಲಿ ತೆಗೆದುಕೊಂಡಿದ್ದು ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದೆ. ಮಾರಣಾಂತಿಕ ಕೊರೊನಾ ವೈರಸ್‌ ವ್ಯಾಪಿಸದಂತೆ ಈಗಾಗಲೇ ಸಾಕಷ್ಟು ಮುಂಜಾಗ್ರತಾ ಕ್ರಮಕೈಗೊಂಡಿರುವ ಜಿಲ್ಲಾಡಳಿತ, ಸಾರ್ವಜನಿಕರಲ್ಲೂ ಕೊರೊನಾ ವೈರಸ್‌ ಬಗ್ಗೆ ಎಚ್ಚರಿಕೆ ವಹಿಸಿ, ಆತಂಕ ಬೇಡ ಎಂದು ಜಾಗೃತಿ ಮೂಡಿಸುತ್ತಿದೆ. ಅದರಂತೆ ಸುರಕ್ಷತಾ ಕ್ರಮಕ್ಕೆ ಮುಂದಾಗುತ್ತಿರುವ ಜನರಿಗೆ ಔಷಧ ಮಳಿಗೆಗಳಲ್ಲಿ ಮಾಸ್ಕ್ಗಳು ಲಭಿಸುತ್ತಿಲ್ಲ. ಕೇಳಿದರೆ ಸ್ಟಾಕ್‌ ಇಲ್ಲ, ಖಾಲಿಯಾಗಿದೆ ಎಂಬ ಉತ್ತರ ಔಷಧ ಮಳಿಗೆಗಳ ಮಾಲೀಕರಿಂದ ಬರುತ್ತದೆ. ಇದು ಜನರಲ್ಲಿನ ಆತಂಕವನ್ನು ಮತ್ತಷ್ಟು ಹೆಚ್ಚಿಸಲು ಕಾರಣವಾಗಲಿದೆ.

ಹೆಚ್ಚಿನ ಬೆಲೆಗೆ ಮಾರಾಟ: ಕೊರೊನಾ ವೈರಸ್‌ನಿಂದ ಆತಂಕಕ್ಕೊಳಗಾಗಿರುವ ಪೋಷಕರು ಶಾಲೆಗೆ ಹೋಗುವ ತಮ್ಮ ಮಕ್ಕಳ ಸುರಕ್ಷತೆಗಾಗಿ ಮಾಸ್ಕ್ ಗಳನ್ನು ಖರೀದಿಸಲು ಹೋದರೆ ಔಷಧ ಮಳಿಗೆಗಳಲ್ಲಿ ಇಲ್ಲ, ಸ್ಟಾಕ್‌ ಖಾಲಿಯಾಗಿದೆ ಎನ್ನಲಾಗುತ್ತಿದೆ. ಹಲವಾರು ಮಳಿಗೆಗಳಿಗೆ ಹೋದರೂ ಇದೇ ಸಿದ್ಧ ಉತ್ತರ ಕೇಳಿಬರುತ್ತಿದೆ. ಹೆಚ್ಚಿನ ಹಣವನ್ನು ನೀಡುವುದಾಗಿ ಹೇಳಿದಾಗ 10 ರೂ. ಮೌಲ್ಯದ ಮಾಸ್ಕ್ಗಳನ್ನು 30ರಿಂದ 50ರೂಗಳವರೆಗೆ ಮಾರಾಟ ಮಾಡಲಾಗುತ್ತಿದೆ. ಅಥವಾ ತಮ್ಮ ಪರಿಚಿತರಿಗಷ್ಟೇ ಮಾಸ್ಕ್ ಗಳನ್ನು ನೀಡಲಾಗುತ್ತಿದೆ. ಔಷಧ ಮಳಿಗೆಗಳ ಈ ತಾರತಮ್ಯ ಕೊರೊನಾ ವೈರಸ್‌ ಮಾಸ್ಕ್ಗಳ ಮಾರಾಟವನ್ನು ದಂಧೆಯನ್ನಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಸ್ಥಳೀಯ ನಿವಾಸಿ ಸಿ. ಭೀಮಣ್ಣ ಬೇಸರ ವ್ಯಕ್ತಪಡಿಸಿದರು.

ಭಾರತದಲ್ಲಿ ಕೊರೊನಾ ವೈರಸ್‌ ಮೊದಲ ಪ್ರಕರಣ ಪತ್ತೆಯಾದ 24 ಗಂಟೆಗಳಲ್ಲೇ ಪ್ರತಿ ಮಾಸ್ಕ್ನ ಬೆಲೆ 12 ರೂಪಾಯಿ ಏರಿಕೆಯಾಗಿತ್ತು. ಈಗ ಸಾಮಾನ್ಯ ಮಾಸ್ಕ್ನ ದರ 28-30 ರೂಪಾಯಿಗಳಾಗಿದ್ದರೆ ಎನ್‌95 ಮಾಸ್ಕ್ನ ದರ 250-800 ರೂಪಾಯಿವರೆಗೆ ಏರಿಕೆಯಾಗಿದೆ. ಪ್ರತಿದಿನ 10-15 ಮಾಸ್ಕ್ಗಳು ಗರಿಷ್ಠ ಮಾರಾಟವಾಗುತ್ತಿದ್ದ ಮಾಸ್ಕ್ಗಳು ಕೊರೊನಾ ವೈರಸ್‌ ಎಫೆಕ್ಟ್ನಿಂದಾಗಿ ಮುಖಕ್ಕೆ ಧರಿಸುವ ಮಾಸ್ಕ್ ಎಲ್ಲೆಡೆ ಹೆಚ್ಚಾಗಿ ಬಳಕೆಯಾಗುತ್ತಿದೆ.

ಎಲ್ಲರೂ ಮಾಸ್ಕ್ ಕೊಳ್ಳಲು ಮಗಿಬೀಳುತ್ತಿದ್ದಾರೆ. ಪರಿಣಾಮ ಔಷಧ ಮಳಿಗೆಯಲ್ಲೇ ಮಾಸ್ಕ್ಗಳಿಗೆ ಬರ ಎದುರಾಗಲು ಕಾರಣವಾಗಿದೆ ಎಂದು ಔಷಧ ಮಳಿಗೆಯವರೊಬ್ಬರು ತಿಳಿಸುತ್ತಾರೆ.

ಎಲ್ಲರೂ ಮಾಸ್ಕ್ ಧರಿಸುವ ಅಗತ್ಯವಿಲ್ಲ: ಕೊರೊನಾ ವೈರಸ್‌ನಿಂದ ರಕ್ಷಿಸಿಕೊಳ್ಳಲು ಎಲ್ಲರೂ ಮಾಸ್ಕ್ ಮೊರೆ ಹೋಗುವುದು ಸಾಮಾನ್ಯ. ಆದರೆ, ಈ ಮಾಸ್ಕ್ಗಳನ್ನು ಎಲ್ಲರೂ ಧರಿಸುವ ಅಗತ್ಯವಿಲ್ಲ. ಕೊರೊನಾ ಪ್ರಕರಣ ದೃಢಪಟ್ಟಾಗ ಸೋಂಕು ಹರಡಿರುವವರ ಸುತ್ತಮುತ್ತಲೂ ಇರುವವರು ಮಾಸ್ಕ್ ಸೇರಿ ಇತರೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಅದನ್ನು ಹೊರತುಪಡಿಸಿ ಎಲ್ಲರೂ ಧರಿಸುವ ಅಗತ್ಯವಿಲ್ಲ. ಆದರೆ, ಸೋಂಕು ಹರಡಿಲ್ಲದಿದ್ದರೆ ಫೇಸ್‌ ಮಾಸ್ಕ್ ಬಳಸುವುದರಿಂದ ಯಾವುದೇ ಉಪಯೋಗವಿಲ್ಲ.

ಮಾಸ್ಕ್ ಧರಿಸಿದ್ದರೂ ಬೇರೆಯವರಿಂದ ನಿಮಗೆ ಕೊರೊನಾ ವೈರಸ್‌ ಸೋಂಕು ತಗುಲಬಹುದು. ಈಗಾಗಲೇ ಸೋಂಕಿತರಾಗಿದ್ದರೆ ನಿಮ್ಮಿಂದ ಇತರರಿಗೆ ವೈರಸ್‌ ಹರಡುವುದನ್ನು ನಿಯಂತ್ರಿಸಲು ಮಾಸ್ಕ್ ಧರಿಸಬೇಕು. ಹಾಗಾಗಿ ಎಲ್ಲರೂ ಮಾಸ್ಕ್ ಧರಿಸುವುದರಿಂದ ಉಪಯೋಗವಿಲ್ಲ.
ಡಾ| ಬಸಾರೆಡ್ಡಿ, ಜಿಲ್ಲಾ ತಜ್ಞವೈದ್ಯರು,
ಜಿಲ್ಲಾಸ್ಪತ್ರೆ ಬಳ್ಳಾರಿ

ಕೊರೊನಾ ವೈರಸ್‌ನಿಂದ ಎಚ್ಚರಿಕೆ ವಹಿಸಿ, ಆತಂಕ ಬೇಡ. ವೈರಸ್‌ನಿಂದ ರಕ್ಷಿಸಿಕೊಳ್ಳಲು ಎಲ್ಲರೂ ಮುಖಕ್ಕೆ ಮಾಸ್ಕ್ ಧರಿಸುವ ಅಗತ್ಯವಿಲ್ಲ. ಸೋಂಕಿತರ ಸುತ್ತಮುತ್ತಲೂ ಇರುವವರು ಮಾಸ್ಕ್ ಧರಿಸಬೇಕು. ಜತೆಗೆ ಸೋಂಕು ಇತರರಿಗೆ ಹರಡದಂತೆ ಸೋಂಕಿತರು ಮಾಸ್ಕ್ ಧರಿಸಬೇಕು. ಅಷ್ಟೇ ಹೊರತು ಎಲ್ಲರೂ ಮಾಸ್ಕ್ಧ ರಿಸುವುದು ಬೇಡ. ಇದರೊಂದಿಗೆ ಸ್ವತ್ಛತೆ ಸೇರಿ ಇನ್ನಿತರೆ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು.
ಡಾ| ಎಚ್‌.ಎಲ್‌. ಜನಾರ್ದನ್‌,
ಜಿಲ್ಲಾ ಆರೋಗ್ಯಾಧಿಕಾರಿ, ಬಳ್ಳಾರಿ

ವೆಂಕೋಬಿ ಸಂಗನಕಲ್ಲು

ಟಾಪ್ ನ್ಯೂಸ್

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್

Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್

Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್‌

Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್‌

ವಿಜಯೇಂದ್ರ

Bellary; ಕಾಂಗ್ರೆಸ್ ಏನೇ ಹಾರಾಟ ಮಾಡಿದರೂ ನಮಗೆ ಲಾಭ ಆಗುತ್ತದೆ: ವಿಜಯೇಂದ್ರ

ಚುನಾವಣೆ ಬಳಿಕ ಕಾಂಗ್ರೆಸ್ ನವರು ಕೌರವರಾಗ್ತಾರೆ, ಬಿಜೆಪಿಯವರು ಪಾಂಡವರಾಗ್ತಾರೆ: ಶ್ರೀರಾಮುಲು

Election ಬಳಿಕ ಕಾಂಗ್ರೆಸ್ ನವರು ಕೌರವರಾಗ್ತಾರೆ, ಬಿಜೆಪಿಯವರು ಪಾಂಡವರಾಗ್ತಾರೆ: ಶ್ರೀರಾಮುಲು

Ballari; ಗುರು-ಶಿಷ್ಯ ಪರಂಪರೆಗೆ ವೀರಣ್ಣ ಜ್ವಲಂತ ಸಾಕ್ಷಿ

Ballari; ಗುರು-ಶಿಷ್ಯ ಪರಂಪರೆಗೆ ವೀರಣ್ಣ ಜ್ವಲಂತ ಸಾಕ್ಷಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

Congress party: ಮಾಲೀಕಯ್ಯ ಗುತ್ತೇದಾರ್‌ ಇಂದು ಕಾಂಗ್ರೆಸ್‌ ಸೇರ್ಪಡೆ

Congress party: ಮಾಲೀಕಯ್ಯ ಗುತ್ತೇದಾರ್‌ ಇಂದು ಕಾಂಗ್ರೆಸ್‌ ಸೇರ್ಪಡೆ

Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

18

Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್‌

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.