ವಿಮ್ಸ್ ಶವಾಗಾರಕ್ಕೆ ಹೊಸ ಫ್ರೀಜರ್
Team Udayavani, Jun 5, 2020, 11:15 AM IST
ಬಳ್ಳಾರಿ: ವಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಹೊಸದಾದ ಫ್ರೀಜರ್‌ನ್ನು ತಂದಿಟ್ಟಿರುವುದು
ಬಳ್ಳಾರಿ: ಇಲ್ಲಿನ ವಿಮ್ಸ್ ಶವಾಗಾರಕ್ಕೆ ಕೊನೆಗೂ ಒಂದು ಫ್ರೀಜರ್ ಬಂದಿದೆ. ಕಳೆದ ಹಲವು ದಿನಗಳಿಂದ ಶವ ಇಡಲು ಸಾಧ್ಯವಾಗದೆ ಅವಾಂತರಕ್ಕೆ ಕಾರಣವಾಗಿದ್ದ ಶವಾಗಾರಕ್ಕೆ ನಾಲ್ಕು ಶವಗಳನ್ನು ಇಡಬಲ್ಲ ಒಂದು ಹೊಸ ಫ್ರೀಜರ್‌ನ್ನು ಗುರುವಾರ ತಂದಿಡಲಾಗಿದ್ದು, ಫ್ರೀಜರ್ ಸಮಸ್ಯೆಗೆ ತಾತ್ಕಾಲಿಕ ತೆರೆಬಿದ್ದಂತಾಗಿದೆ.
ಶವಾಗಾರದಲ್ಲಿದ್ದ ಫ್ರೀಜರ್ ಗಳು ಕಳೆದ ಹಲವು ದಿನಗಳಿಂದ ಕೆಟ್ಟಿದ್ದವು. ದುರಸ್ತಿಗಾಗ ಇವುಗಳನ್ನು ಬೆಂಗಳೂರಿಗೆ ಕಳುಹಿಸಲಾಗಿತ್ತು. ಹೀಗಾಗಿ ಮೂರು ಬಾಡಿಗೆ ಫ್ರೀಜರ್‌ಗಳನ್ನು ತರಲಾಗಿತ್ತು. ಆದರೂ ಮೃತರ ಸಂಖ್ಯೆ ಹೆಚ್ಚಿದ್ದರೆ ಶವಗಳನ್ನು ಅನಿವಾರ್ಯವಾಗಿ ನೆಲದ ಮೇಲೆ ಮಲಗಿಸುವ ಅನಿವಾರ್ಯತೆ ಉಂಟಾಗಿತ್ತು. ಇದರಿಂದ ಕೂಡಲೇ ಎಚ್ಚೆತ್ತ ವಿಮ್ಸ್ ನಿರ್ದೇಶಕರು ಈಗ ಹೊಸ ಫ್ರೀಜರ್ ತರಿಸಿದ್ದಾರೆ. ಇನ್ನೂ ಇಂತಹ ಎರಡು ಫ್ರೀಜರ್ ತರಿಸಲು ಟೆಂಡರ್ ಕರೆಯಲಾಗಿದೆ. ಇನ್ನೊಂದು ವಾರದಲ್ಲಿ ಹಳೆಯ ಎರಡು ಫ್ರೀಜರ್ ದುರಸ್ತಿಯಾಗಲಿವೆ ಎಂದು ನಿರ್ದೇಶಕ ಡಾ| ದೇವಾನಂದ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ