ಬಿಜೆಪಿ ಪ್ರಯತ್ನಕ್ಕೆ ಕೊನೆಗೂ ಸಿಗಲಿಲ್ಲ ಫ‌ಲ


Team Udayavani, May 1, 2021, 5:14 PM IST

ಬಿಜೆಪಿ ಪ್ರಯತ್ನಕ್ಕೆ ಕೊನೆಗೂ ಸಿಗಲಿಲ್ಲ ಫ‌ಲ

ಬಳ್ಳಾರಿ: ಈ ಬಾರಿ ಪಾಲಿಕೆ ಚುನಾವಣೆಯಲ್ಲಿ ಶತಾಯಗತಾಯ ಆಡಳಿತ ಚುಕ್ಕಾಣಿ ಹಿಡಿಯಲು ಪ್ರಯತ್ನಿಸಿದ್ದ ಬಿಜೆಪಿಗೆ ಶಾಸಕ ಸೋಮಶೇಖರರೆಡ್ಡಿ ಅವರು ಆಡಿದ ಮಾತುಗಳು ಮತ್ತು ಕೇಂದ್ರಸರ್ಕಾರದ ಅನಿಲ, ತೈಲ, ಅಗತ್ಯ ವಸ್ತುಗಳ ಬೆಲೆಗಳು ಏರಿಕೆಯಾಗಿದ್ದೇ ಮುಳುವಾಯಿತೇ…?

ಬಳ್ಳಾರಿ ಮಹಾನಗರ ಪಾಲಿಕೆಯ ಚುನಾವಣಾ ಫಲಿತಾಂಶ ಶುಕ್ರವಾರ ಹೊರಬಿದ್ದ ಬಳಿಕ ಸಾರ್ವಜನಿಕರಲ್ಲಿ ಕೇಳಿಬರುತ್ತಿದ್ದಮಾತುಗಳಿವು. ಕಳೆದ 2008ರಲ್ಲಿ ಪಾಲಿಕೆಯ 35ರಲ್ಲಿ 30 ವಾರ್ಡ್ ಗಳಲ್ಲಿ ಗೆದ್ದು ಪಾಲಿಕೆ ಚುಕ್ಕಾಣಿ ಹಿಡಿದಿದ್ದ ಬಿಜೆಪಿ 2013ರಲ್ಲಿ ಬಿಜೆಪಿ ಒಡೆದು ಬಿಎಸ್‌ಆರ್‌ ಆದ ಹಿನ್ನೆಲೆಯಲ್ಲಿ ಪಾಲಿಕೆಯಲ್ಲಿ ಅಧಿಕಾರಕಳೆದುಕೊಂಡಿತು. ಪರಿಣಾಮ ಅಂದು (2013ರಲ್ಲಿ) ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ 26 ವಾರ್ಡ್‌ಗಳಲ್ಲಿ ಜಯಗಳಿಸಿ ಪಾಲಿಕೆ ಚುಕ್ಕಾಣಿ ಹಿಡಿದರೆ ಕಡಿಮೆ ವಾರ್ಡ್‌ಗಳಲ್ಲಿ ಗೆದ್ದಿದ್ದ ಬಿಜೆಪಿ/ಬಿಎಸ್‌ ಆರ್‌ ವಿರೋಧ ಪಕ್ಷದಲ್ಲಿ ಕೂತಿತ್ತು.

ಇದೀಗ 8 ವರ್ಷಗಳ ಬಳಿಕ ಪಾಲಿಕೆಗೆ ಪುನಃ ಚುನಾವಣೆ ನಡೆದಿದ್ದು, ಏ.27ರಂದು ಮತದಾನ ನಡೆದು ಏ.30 ರಂದುಶುಕ್ರವಾರ ಫಲಿತಾಂಶ ಹೊರಬಿದ್ದಿದೆ. ನಗರದ 21 ವಾರ್ಡ್‌ಗಳಲ್ಲಿಕಾಂಗ್ರೆಸ್‌ ಗೆದ್ದಿದ್ದು, 13 ವಾರ್ಡ್‌ಗಳಲ್ಲಿ ಬಿಜೆಪಿ ಜಯಗಳಿಸಿದೆ.ಚುನಾವಣೆಯಲ್ಲಿ ಬಿಜೆಪಿಯವರು ಮತದ ಮೌಲ್ಯ ವೃದ್ಧಿಸಿ ಏನೆಲ್ಲತಂತ್ರಗಾರಿಕೆ ನಡೆಸಿದರೂ ನಿರೀಕ್ಷಿತ ಫಲಿತಾಂಶ ಬಾರದಿರುವುದು ಶಾಸಕ ಸೋಮಶೇಖರರೆಡ್ಡಿ ಅವರು ಅಲ್ಪಸಂಖ್ಯಾತರ ವಿರುದ್ಧನೀಡಿರುವ ಹೇಳಿಕೆ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯೇ ಕಾರಣವೆನ್ನಲಾಗುತ್ತಿದೆ.

ಪುನಃ ಹರಿದಾಡಿದ ರೆಡ್ಡಿ ವಿಡಿಯೋ; ಕೇಂದ್ರ ಸರ್ಕಾರ ಜಾರಿಗೆತರಲು ಮುಂದಾಗಿದ್ದ ಸಿಎಎ, ಎನ್‌ಆರ್‌ಸಿ ಸಂಬಂಧಿ ಸಿದಂತೆ ಕಳೆದ 2020 ಜನವರಿ 3ರಂದು ನಗರದ ಗಡಗಿ ಚನ್ನಪ್ಪ ವೃತ್ತದಲ್ಲಿ ಶಾಸಕಜಿ.ಸೋಮಶೇಖರರೆಡ್ಡಿ ಅಲ್ಪಸಂಖ್ಯಾತರ ವಿರುದ್ಧ ಪ್ರಚೋದನಕಾರಿಹೇಳಿಕೆ ನೀಡಿದ್ದರು. ಇದನ್ನು ವಿರೋ ಧಿಸಿದ್ದ ಅಲ್ಪಸಂಖ್ಯಾತಸಮುದಾಯದ ಮುಖಂಡರು, ಜನರು ರೆಡ್ಡಿ ವಿರುದ್ಧ ದೂರನ್ನೂ ನೀಡಿದ್ದರು.

ರೆಡ್ಡಿಯವರು ಹಿಂದುಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಈಹೇಳಿಕೆ ನೀಡಿದ್ದರೂ ಸಹ ಅಲ್ಪಸಂಖ್ಯಾತ ಸಮುದಾಯದವರಲ್ಲಿಮಾತ್ರ ಬಿಜೆಪಿ ಮೇಲೆ ಮತ್ತಷ್ಟು ಅಸಮಾಧಾನ ಹೆಚ್ಚಿಸುವಂತೆಮಾಡಿತು. ಅಲ್ಲದೇ, ಅಂದು ರೆಡ್ಡಿ ನೀಡಿದ್ದ ಹೇಳಿಕೆಯ ವೀಡಿಯೋತುಣುಕುಗಳು ಇದೀಗ ಪಾಲಿಕೆ ಚುನಾವಣೆ ವೇಳೆಯಲ್ಲೂಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಅಲ್ಪಸಂಖ್ಯಾತ ಮತಗಳನ್ನುಜಾಗೃತಿಗೊಳಿಸಿದೆ. ಜತೆಗೆ ವರ್ಷದ ಹಿಂದಿನ ರೆಡ್ಡಿ ಹೇಳಿಕೆಗೆ ಪಾಲಿಕೆಚುನಾವಣೆಯಲ್ಲೂ ಕಾಂಗ್ರೆಸ್‌ ಮುಖಂಡರು ಪ್ರಸ್ತಾಪಿಸಿದ್ದು,ಅಲ್ಪಸಂಖ್ಯಾತ ಮತಗಳು ಬಿಜೆಪಿಯಿಂದ ದೂರವಾಗಿ ಕಾಂಗ್ರೆಸ್‌ಗೆಸಾಲಿಡ್‌ಆಗಿ ಬೀಳುವಂತೆ ಮಾಡಿದೆ ಎನ್ನಲಾಗುತ್ತಿದೆ.

ಮನ್ನಣೆ ನೀಡದ ಮತದಾರ: ಪಾಲಿಕ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕಿಂತ ಬಿಜೆಪಿ ಮುಖಂಡರು ಅತಿಹೆಚ್ಚು ಪ್ರಚಾರ ನಡೆಸಿದರು.ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ಸಿಂಗ್‌, ಸಮಾಜ ಕಲ್ಯಾಣಸಚಿವ ಬಿ.ಶ್ರೀರಾಮುಲು, ಶಾಸಕ ಜಿ.ಸೋಮಶೇಖರರೆಡ್ಡಿ, ಮಾಜಿ ಸಂಸದರಾದ ಸಣ್ಣ ಫಕ್ಕೀರಪ್ಪ, ಜೆ.ಶಾಂತಾ ಅವರು ಹಲವು ವಾರ್ಡ್ಗಳಲ್ಲಿ ಹೆಚ್ಚು ಪ್ರಚಾರ ನಡೆಸಿದರು. ಕೇಂದ್ರದಲ್ಲಿ ಬಿಜೆಪಿಯ ಮೋದಿ,ರಾಜ್ಯದಲ್ಲಿ ಬಿಎಸ್‌ವೈ ನೇತೃತ್ವದ ಬಿಜೆಪಿ ಸರ್ಕಾರವಿದ್ದು, ಬಳ್ಳಾರಿಪಾಲಿಕೆಯಲ್ಲೂ ಬಿಜೆಪಿ ಅಧಿಕಾರ ಇದ್ದರೆ ಬಳ್ಳಾರಿ ನಗರ ಮತ್ತಷ್ಟುಅಭಿವೃದ್ಧಿಯಾಗಲಿದೆ ಎಂಬ ಸಚಿವರು, ಶಾಸಕರ ಮಾತುಗಳಿಗೆ ಮತದಾರರು ಮನ್ನಣೆ ನೀಡಿಲ್ಲ ಎನ್ನಬಹುದು.

ಒಗ್ಗೂಡದಿದ್ದರೂ “ಕೈ’ ಗೆಲುವು: ಸದಾ ಒಡೆದ ಮನೆ, ಮನೆಯೊಂದು ಮೂರು ಬಾಗಿಲು ಎಂಬ ಆರೋಪಗಳ ನಡುವೆಯೂ ಪಾಲಿಕೆಚುನಾವಣೆಯಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಿದೆ. ಪಾಲಿಕೆ ಚುನಾವಣೆಯಲ್ಲಿ ಟಿಕೆಟ್‌ ಹಂಚಿಕೆಯಲ್ಲೇ ಮುಖಂಡರ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳು ಮೂಡಿದ್ದವು. ಈ ಎಲ್ಲ ಅಸಮಧಾನಗಳ ನಡುವೆ ಹಾಗೂ ಕಾಂಗ್ರೆಸ್‌ ಟಿಕೆಟ್‌ ಲಭಿಸದ ಐವರುಕಾಂಗ್ರೆಸ್‌ ಬಂಡಾಯ ಪಕ್ಷೇತರ ಅಭ್ಯರ್ಥಿಗಳನ್ನು ಹೊರತುಪಡಿಸಿ 21 ಸ್ಥಾನಗಳಲ್ಲಿ ಕಾಂಗ್ರೆಸ್‌ನನ್ನು ಮತದಾರರು ಕೈ ಹಿಡಿದಿದ್ದಾರೆ.

 

-ವೆಂಕೋಬಿ ಸಂಗನಕಲ್ಲು

ಟಾಪ್ ನ್ಯೂಸ್

ಪಶ್ಚಿಮ ಘಟ್ಟಕ್ಕೆ ಬಫ‌ರ್‌ ಝೋನ್‌ ಅಪಾಯ?

ಪಶ್ಚಿಮ ಘಟ್ಟಕ್ಕೆ ಬಫ‌ರ್‌ ಝೋನ್‌ ಅಪಾಯ?

ದೇಶದ ಅಖಂಡತೆ ಒಡೆಯುವ ಮಾತು ಸರಿಯಲ್ಲ

ದೇಶದ ಅಖಂಡತೆ ಒಡೆಯುವ ಮಾತು ಸರಿಯಲ್ಲ

ರಾಜ್ಯಕ್ಕೆ ವರ್ಷಾಘಾತ: ಹಲವೆಡೆ ಗುಡ್ಡ ಕುಸಿದು ಸಂಚಾರಕ್ಕೆ ಅಡ್ಡಿ

ರಾಜ್ಯಕ್ಕೆ ವರ್ಷಾಘಾತ: ಹಲವೆಡೆ ಗುಡ್ಡ ಕುಸಿದು ಸಂಚಾರಕ್ಕೆ ಅಡ್ಡಿ

ಮುಂಗಾರು ಬಿರುಸು, ಖಾರಿಫ್ ಬಿತ್ತನೆ ಚುರುಕು

ಮುಂಗಾರು ಬಿರುಸು, ಖಾರಿಫ್ ಬಿತ್ತನೆ ಚುರುಕು

ಪ್ರತಿಕೂಲ ಹವಾಮಾನದ ಹಿನ್ನೆಲೆ: ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ

ಪ್ರತಿಕೂಲ ಹವಾಮಾನದ ಹಿನ್ನೆಲೆ: ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ

ಕರಾವಳಿಯಾದ್ಯಂತ ವ್ಯಾಪಕ ಮಳೆ ಹಲವೆಡೆ ಹಾನಿ, ರಸ್ತೆ ಸಂಪರ್ಕ ಕಡಿತ

ಕರಾವಳಿಯಾದ್ಯಂತ ವ್ಯಾಪಕ ಮಳೆ ಹಲವೆಡೆ ಹಾನಿ, ರಸ್ತೆ ಸಂಪರ್ಕ ಕಡಿತ

ಉಡುಪಿ ಜಿಲ್ಲಾದ್ಯಂತ ಅಬ್ಬರದ ಮಳೆ; ಜನಜೀವನ ಅಸ್ತವ್ಯಸ್ತ

ಉಡುಪಿ ಜಿಲ್ಲಾದ್ಯಂತ ಅಬ್ಬರದ ಮಳೆ; ಜನಜೀವನ ಅಸ್ತವ್ಯಸ್ತಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15ರಂದು “ಓ ಮೈ ಲವ್‌’ ಚಿತ್ರ ಬಿಡುಗಡೆ

15ರಂದು “ಓ ಮೈ ಲವ್‌’ ಚಿತ್ರ ಬಿಡುಗಡೆ

ದಶಕದ ಎಡಿಬಿ ಕಾಮಗಾರಿಗೆ ಗ್ರಹಣ

ದಶಕದ ಎಡಿಬಿ ಕಾಮಗಾರಿಗೆ ಗ್ರಹಣ

ಪ್ರಬಲ ಹೋರಾಟವೊಂದೇ ದಾರಿ; ಕೆ.ವಿ.ಭಟ್‌

ಪ್ರಬಲ ಹೋರಾಟವೊಂದೇ ದಾರಿ; ಕೆ.ವಿ.ಭಟ್‌

ಉದಯಪುರದ ಕನ್ನಯ್ಯಲಾಲ್ ಕೊಲೆ ಖಂಡಿಸಿ ಬಳ್ಳಾರಿ ಬಂದ್

ಉದಯಪುರದ ಕನ್ನಯ್ಯಲಾಲ್ ಕೊಲೆ ಖಂಡಿಸಿ ಬಳ್ಳಾರಿ ಬಂದ್

ವೀಕೇಂಡ್ : ದಕ್ಷಿಣಕಾಶಿ ಖ್ಯಾತಿಯ ಹಂಪಿಗೆ ಪ್ರವಾಸಿಗರ ದಂಡು, ದೇವರ ದರ್ಶನ ಪಡೆದ ಭಕ್ತರು

ವೀಕೇಂಡ್ : ದಕ್ಷಿಣಕಾಶಿ ಖ್ಯಾತಿಯ ಹಂಪಿಗೆ ಪ್ರವಾಸಿಗರ ದಂಡು, ದೇವರ ದರ್ಶನ ಪಡೆದ ಭಕ್ತರು

MUST WATCH

udayavani youtube

ಚಂದ್ರಶೇಖರ ಗುರೂಜಿ ಹತ್ಯೆ : ಕೇವಲ 4 ಗಂಟೆಯಲ್ಲಿ ಹಂತಕರ ಪತ್ತೆ

udayavani youtube

Lightings ನೋಡಿದಾಗ Shock ಆದೆ! – ಪ್ರೇಮಾ

udayavani youtube

ಚಂದ್ರಶೇಕರ್‌ ಗುರೂಜಿ ಹತ್ಯೆ: ಹಂತಕರ ಬಂಧನ

udayavani youtube

ಮಡಿಕೇರಿ : ಧಾರಾಕಾರ ಮಳೆಗೆ ರಸ್ತೆಗೆ ಉರುಳಿ ಬಿದ್ದ ಬಂಡೆ ಕಲ್ಲು, ತಪ್ಪಿದ ಭಾರಿ ದುರಂತ

udayavani youtube

ವಿಟ್ಲ ಸಾರಡ್ಕ ಬಳಿ ಕುಸಿದ ಗುಡ್ಡ : ಕರ್ನಾಟಕ – ಕೇರಳ ಸಂಚಾರ ಬಂದ್

ಹೊಸ ಸೇರ್ಪಡೆ

ಪಶ್ಚಿಮ ಘಟ್ಟಕ್ಕೆ ಬಫ‌ರ್‌ ಝೋನ್‌ ಅಪಾಯ?

ಪಶ್ಚಿಮ ಘಟ್ಟಕ್ಕೆ ಬಫ‌ರ್‌ ಝೋನ್‌ ಅಪಾಯ?

ದೇಶದ ಅಖಂಡತೆ ಒಡೆಯುವ ಮಾತು ಸರಿಯಲ್ಲ

ದೇಶದ ಅಖಂಡತೆ ಒಡೆಯುವ ಮಾತು ಸರಿಯಲ್ಲ

ರಾಜ್ಯಕ್ಕೆ ವರ್ಷಾಘಾತ: ಹಲವೆಡೆ ಗುಡ್ಡ ಕುಸಿದು ಸಂಚಾರಕ್ಕೆ ಅಡ್ಡಿ

ರಾಜ್ಯಕ್ಕೆ ವರ್ಷಾಘಾತ: ಹಲವೆಡೆ ಗುಡ್ಡ ಕುಸಿದು ಸಂಚಾರಕ್ಕೆ ಅಡ್ಡಿ

ಮುಂಗಾರು ಬಿರುಸು, ಖಾರಿಫ್ ಬಿತ್ತನೆ ಚುರುಕು

ಮುಂಗಾರು ಬಿರುಸು, ಖಾರಿಫ್ ಬಿತ್ತನೆ ಚುರುಕು

ಪ್ರತಿಕೂಲ ಹವಾಮಾನದ ಹಿನ್ನೆಲೆ: ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ

ಪ್ರತಿಕೂಲ ಹವಾಮಾನದ ಹಿನ್ನೆಲೆ: ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.