Udayavni Special

ಉದ್ಯೋಗ ಖಾತ್ರಿ ಮೇಲೆ ಅಭ್ಯರ್ಥಿಗಳ ಕಣ್ಣು!

ಕಾಮಗಾರಿ ಅನುಮೋದನೆ ನೀಡುವಲ್ಲಿ ಗ್ರಾಪಂ ಸದಸ್ಯರ ಪಾತ್ರ ಪ್ರಮುಖ,ರಂಗೇರಿದ ಚುನಾವಣೆ ಕಾವು

Team Udayavani, Dec 16, 2020, 6:57 PM IST

BALLARY-TDY-1

ಸಿರುಗುಪ್ಪ: ತಾಲೂಕಿನಲ್ಲಿ ನರೇಗಾ (ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ) ಕಾಮಗಾರಿಗಳಿಗೆ ಮಂಜೂರಾಗುವ ಅನುದಾನದ ಮೇಲೆ ಕಣ್ಣಿಟ್ಟಿರುವ ರಾಜಕೀಯ ಮುಖಂಡರು   ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಇದರಿಂದಾಗಿ ಈ ಬಾರಿಯ ಗ್ರಾಪಂ ಚುನಾವಣೆಯಲ್ಲಿ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ.

ತಾಲೂಕಿನ 27 ಗ್ರಾಮ ಪಂಚಾಯಿತಿಗಳ 489 ಸ್ಥಾನಗಳಿಗೆ ಡಿ. 22ರಂದು ಚುನಾವಣೆನಡೆಯಲಿದೆ. ಮಾಜಿ ಸದಸ್ಯರ ಜತೆಗೆ ಹೊಸಬರು ಹೆಚ್ಚಾಗಿ ಸ್ಪರ್ಧಿಸುತ್ತಿರುವುದು ಕಂಡುಬರುತ್ತಿದೆ.ಹಳ್ಳಿ ರಾಜಕಾರಣ ದಿನದಿಂದ ದಿನಕ್ಕೆ ರಂಗೇರುತ್ತಿದೆ.ಅನೇಕ ಹಳ್ಳಿಗಳಲ್ಲಿ ಜಾತಿ ಮತ್ತು ಕೋಮು ಆಧಾರಿತಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಕೆಲವು ಗ್ರಾಮಗಳಲ್ಲಿ ಸ್ಪರ್ಧಾಕಾಂಕ್ಷಿಗಳು ಅವಿರೋಧ ಆಯ್ಕೆಗೆ ಕಸರತ್ತು ನಡೆಸಿದ್ದರು. ದೇವಸ್ಥಾನ ಅಭಿವೃದ್ಧಿ ಸಮಿತಿಗೆಲಕ್ಷಾಂತರ ರೂ. ಹಣ ನೀಡಲು ಮುಂದಾಗಿದ್ದಾರೆ. ಹಳ್ಳಿಗಳ ಅಭಿವೃದ್ಧಿಯ ಹಿತದೃಷ್ಟಿಯಿಂದ ನರೇಗಾ ಯೋಜನೆಯಲ್ಲಿ ಕೃಷಿ ಜಮೀನು ಬದು ನಿರ್ಮಾಣ, ಕೃಷಿ ಹೊಂಡ, ಎರೆಹುಳು ತೊಟ್ಟಿ, ಬಚ್ಚಲುಗುಂಡಿ,ಪೌಷ್ಠಿಕ ಕೈತೋಟ, ತೆಂಗುಪುನಶ್ಚೇತನ, ತೆಂಗು ಪ್ರದೇಶವಿಸ್ತರಣೆ, ಬಾಳೆ, ಮಾವು, ಸಪೋಟ, ಸೀಬೆ, ನುಗ್ಗೆ, ಹುಣಸೆ, ಡ್ರ್ಯಾಗನ್‌ ಫ್ರೊಟ್‌, ದಾಳಿಂಬೆ, ಪಪ್ಪಾಯ ಬೆಳೆಯಲು, ರೇಷ್ಮೆಹುಳು ಸಾಕಾಣಿಕೆ, ದನದ ಕೊಟ್ಟಿಗೆ, ಕುರಿಶೆಡ್‌ ನಿರ್ಮಾಣ ಮತ್ತು ಕಲ್ಯಾಣಿ ಪುನಶ್ಚೇತನ, ಆಟದ ಮೈದಾನ ನಿರ್ಮಾಣ, ಕೆರೆ ಹೂಳೆತ್ತುವುದು, ರಾಜಕಾಲುವೆ ಅಭಿವೃದ್ಧಿ ಕೆಲಸಕ್ಕೆ ಅವಕಾಶ ನೀಡಲಾಗುತ್ತಿದೆ. ನರೇಗಾ ಯೋಜನೆಗೆ ಗ್ರಾಮ ಪಂಚಾಯಿತಿಗಳಿಗೆ ದೊಡ್ಡಮಟ್ಟದ ಅನುದಾನ ಮಂಜೂರಾಗುತ್ತಿದೆ. ಇಂಥ ಕಾಮಗಾರಿಗಳ ಅನುಮೋದನೆ ನೀಡುವಲ್ಲಿ ಗ್ರಾಪಂ ಸದಸ್ಯರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ಜನಸೇವೆ ಹೆಸರಿನಲ್ಲಿ ಗ್ರಾಮದಲ್ಲಿ ಪ್ರಭಾವ ಬೀರುವ ಅವಕಾಶವು ಸದಸ್ಯರಿಗೆ ಸಿಕ್ಕಿದೆ. ಇದರಿಂದಾಗಿ ಸದಸ್ಯರಾಗಲು ಅನೇಕರು ಆಸೆಪಡುತ್ತಿದ್ದಾರೆ. ನರೇಗಾ ಯೋಜನೆಯ ಜಾಬ್‌ಕಾರ್ಡ್ ಗಳು ಫಲಾನುಭವಿಗಳಿಗಿಂತ ಹೆಚ್ಚಾಗಿ ಗ್ರಾಮ ಪಂಚಾಯಿತಿ ಸದಸ್ಯರ ಬಳಿ ಇವೆ. ಗುತ್ತಿಗೆದಾರರ ಜತೆಗಿನ ಜನಪ್ರತಿನಿಧಿ ಗಳ ಹೊಂದಾಣಿಕೆ ಗ್ರಾಮೀಣ ಪ್ರದೇಶಗಳಲ್ಲಿ ಗುಟ್ಟಾಗಿ ಉಳಿದಿಲ್ಲ, ಗ್ರಾಮ ಪಂಚಾಯಿತಿಗೆ ಮಂಜೂರಾಗುವ ಅನುದಾನದಲ್ಲಿ ಬಹುತೇಕ ಖರ್ಚಾಗುತ್ತಿದೆ, ಆದರೆ ಅಭಿವೃದ್ಧಿ ಮಾತ್ರ ಕಣ್ಣಿಗೆ ಕಾಣುತ್ತಿಲ್ಲ.

ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೋಟ್ಯಾಂತರ ರೂ. ಹಣ ಗ್ರಾಪಂಗಳಿಗೆ ಹರಿದು ಬರುತ್ತಿದೆ. ಆದರೆ ಆ ಹಣವು ವೆಚ್ಚ ವಾದರೂ ಅಭಿವೃದ್ಧಿ ಮಾತ್ರ ಹಳ್ಳಿಗಳಲ್ಲಿ ಮರೀಚಿಕೆಯಾಗಿದೆ ಎಂದು ಬಗ್ಗೂರು ಗ್ರಾಮಸ್ಥ ವಾ. ಹುಲುಗಯ್ಯ ಆರೋಪಿಸಿದ್ದಾರೆ.

 

-ಆರ್‌.ಬಸವರೆಡ್ಡಿ ಕರೂರು

ಟಾಪ್ ನ್ಯೂಸ್

halapp-acgar

ವಿಜಯಪುರ: ಭೂಕಂಪದ ಆತಂಕ ಬೇಡವೆಂದ ಸಚಿವ ಹಾಲಪ್ಪ ಆಚಾರ್

70

ಮಂಡ್ಯ ಮೈಶುಗರ್ ಕಾರ್ಖಾನೆ ಪುನಶ್ಚೇತನ: ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ

ಗಂಗಾವತಿ: ಸಾಣಾಪುರ್ ಲೇಕ್; ಜಂಪಿಂಗ್ ಮಾಡಲು ಹೋಗಿ ಇಬ್ಬರು ಐಟಿ ಉದ್ಯೋಗಿಗಳು ನೀರು ಪಾಲು

ಗಂಗಾವತಿ: ಸಾಣಾಪುರ್ ಲೇಕ್; ಜಂಪಿಂಗ್ ಮಾಡಲು ಹೋಗಿ ಇಬ್ಬರು ಐಟಿ ಉದ್ಯೋಗಿಗಳು ನೀರು ಪಾಲು

ಹಾಲಪ್ಪ ಆಚಾರ್

ಕಳೆದ ಬಾರಿ ಎಂ.ಸಿ.ಮನಗೂಳಿ ಗೆದ್ದಿದ್ದು ಕೊನೆಯ ಚುನಾವಣೆಯೆಂಬ ಅನುಕಂಪದಿಂದ: ಹಾಲಪ್ಪ ಆಚಾರ್

captain

ರೈತರ ಹೋರಾಟಕ್ಕೆ ಸೌಹಾರ್ದಯುತ ಪರಿಹಾರ?: ಮತ್ತೆ ಶಾ-ಕ್ಯಾಪ್ಟನ್ ಭೇಟಿ

ಯುವರಾಜ್ ಸಿಂಗ್ ಬಂಧನಕ್ಕೆ ಕಾರಣವಾಯ್ತು ಯುಜಿ ಚಾಹಲ್ ಟಿಕ್ ಟಾಕ್ ವಿಡಿಯೋ!

ಯುವರಾಜ್ ಸಿಂಗ್ ಬಂಧನಕ್ಕೆ ಕಾರಣವಾಯ್ತು ಯುಜಿ ಚಾಹಲ್ ಟಿಕ್ ಟಾಕ್ ವಿಡಿಯೋ!

hgfhjhjgfdsa

ನಟ ಯಶ್ ಅವರನ್ನು ಹಿಂದಿಕ್ಕಿ ಮುಂದೆ ಸಾಗಿದ ರಶ್ಮಿಕಾ ಮಂದಣ್ಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

hampi news

ಹಂಪಿಗೆ ಹರಿದು ಬಂದ ಜನಸಾಗರ!

ಕೊಟ್ಟೂರಿನಲ್ಲಿ ದಸರಾ ಮಹೋತ್ಸವ  

ಕೊಟ್ಟೂರಿನಲ್ಲಿ ದಸರಾ ಮಹೋತ್ಸವ  

ballari news

16ರಂದು ಗ್ರಾಮ ವಾಸ್ತವ್ಯ

ballari news

ಅನ್ನದಾತನ ಕೈಹಿಡಿದ ಚೆಂಡು ಹೂ

ballari news

ಕುಲಪತಿ ವಿರುದ್ಧ ಕ್ರಮಕ್ಕೆ ಅಲ್ಲಂ ಪತ್ರ

MUST WATCH

udayavani youtube

ವಿಶೇಷ ಚೇತನ ಅಭಿಮಾನಿಯೊಬ್ಬನನ್ನು ಕಾಣಲು ಬಂದ ರಿಯಲ್ ಸ್ಟಾರ್ ಉಪೇಂದ್ರ!

udayavani youtube

ಅರರೆ… ಬಾಳೆ ಕಾಯಿ ಶ್ಯಾವಿಗೆ.. ರುಚಿ ಬಾಯಿಗೆ, ಉತ್ತಮ ಆರೋಗ್ಯಕ್ಕೆ

udayavani youtube

ದಾಂಡೇಲಿ : ಜನಮನ ಸೂರೆಗೊಂಡ ದನಗರ ಗೌಳಿ ನೃತ್ಯ

udayavani youtube

ಭತ್ತದ ಕೃಷಿ ಭರಪೂರ ಲಾಭ ತಂದು ಕೊಡುತ್ತಾ ?

udayavani youtube

ಸಮಾಜ ಮೆಚ್ಚುವಂತೆ ಬಾಳುವೆ: ಆರ್ಯನ್‌ ಖಾನ್ |UDAYAVANI NEWS BULLETIN|17/10/2021

ಹೊಸ ಸೇರ್ಪಡೆ

17gudi1_1710bg_2

ವರಾಹಗಿರಿ ಬೆಟ್ಟ ಪ್ರವಾಸಿ ತಾಣ ಮಾಡಲು ಸಿದ್ಧ

13

ಶಾಸಕ ಪಾಟೀಲ್‌ ಹೇಳಿಕೆಗೆ ರಾಜಕೀಯ ಧ್ವನಿ

halapp-acgar

ವಿಜಯಪುರ: ಭೂಕಂಪದ ಆತಂಕ ಬೇಡವೆಂದ ಸಚಿವ ಹಾಲಪ್ಪ ಆಚಾರ್

70

ಮಂಡ್ಯ ಮೈಶುಗರ್ ಕಾರ್ಖಾನೆ ಪುನಶ್ಚೇತನ: ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ

ಗಂಗಾವತಿ: ಸಾಣಾಪುರ್ ಲೇಕ್; ಜಂಪಿಂಗ್ ಮಾಡಲು ಹೋಗಿ ಇಬ್ಬರು ಐಟಿ ಉದ್ಯೋಗಿಗಳು ನೀರು ಪಾಲು

ಗಂಗಾವತಿ: ಸಾಣಾಪುರ್ ಲೇಕ್; ಜಂಪಿಂಗ್ ಮಾಡಲು ಹೋಗಿ ಇಬ್ಬರು ಐಟಿ ಉದ್ಯೋಗಿಗಳು ನೀರು ಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.