ಬಾಲ್ಯ ವಿವಾಹಕೆ ಸಹಕರಿಸಿದವರ ಮೇಲೂ ಪ್ರಕರಣ


Team Udayavani, Oct 21, 2020, 6:55 PM IST

BALLRY-TDY-1

ಬಳ್ಳಾರಿ: ಜಿಲ್ಲೆಯಲ್ಲಿ ಬಾಲ್ಯವಿವಾಹಕ್ಕೆ ಯತ್ನಿಸಿದ ಎರಡು ಕಡೆಯ ಕುಟುಂಬದವರು, ಸಹಕರಿಸಿದಪುರೋಹಿತರು, ಕಲ್ಯಾಣಮಂಟಪದವರು, ಮದುವೆ ಆಮಂತ್ರಣ ಮುದ್ರಕರು, ಅಡುಗೆ ಮಾಡಿದವರು ಸೇರಿದಂತೆ ಎಲ್ಲರ ಮೇಲೂ ನಿಯಮಾನುಸಾರ ಪ್ರಕರಣ ದಾಖಲಿಸಿ, ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌, ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಚೈಲ್ಡ್‌ಲೈನ್‌ ಸಲಹಾ ಸಮಿತಿ, ಸಮಗ್ರ ಮಕ್ಕಳ ರಕ್ಷಣಾ ಯೋಜನೆ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಕಳೆದ ಏಪ್ರಿಲ್‌ನಿಂದ ಸೆಪ್ಟೆಂಬರ್‌ ಅಂತ್ಯದವರೆಗೆ 247 ಬಾಲ್ಯವಿವಾಹಗಳನ್ನು ತಡೆಗಟ್ಟಲಾಗಿದೆ. 16 ಪ್ರಕರಣಗಳು ದಾಖಲಿಸಲಾಗಿದೆ ಮತ್ತು 231 ವೈಯಕ್ತಿಕ ಬಾಲ್ಯವಿವಾಹಗಳಲ್ಲಿ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರು ಮಾಹಿತಿಗೆ ಪ್ರತಿಕ್ರಿಯಿಸಿದ ಡಿಸಿ ನಕುಲ್‌, ಬಾಲ್ಯವಿವಾಹ ನಡೆಸಲು ಯತ್ನಿಸಿದವರ ಕುಟುಂಬಗಳ ವಿಷಯದಲ್ಲಿ ನಿರಂತರ ನಿಗಾವಹಿಸುವುದು ಅಗತ್ಯ ಎಂದು ಪ್ರತಿಪಾದಿಸಿದರು.

ಒಂದು ವೇಳೆ ಬಾಲ್ಯವಿವಾಹ ಮಾಡಿದ್ದು ಕಂಡುಬಂದಲ್ಲಿ ಎರಡು ಕುಟುಂಬಗಳು ಹಾಗೂ ಇದಕ್ಕೆ ಸಹಕರಿಸಿದವರ ಮೇಲೆ ಮತ್ತು ಅಲ್ಲಿನ ಗ್ರಾಮಲೆಕ್ಕಿಗ, ಅಂಗನವಾಡಿ ಕಾರ್ಯಕರ್ತೆ, ಪಿಡಿಒ, ಸಂಬಂಧಿಸಿದ ಪೊಲೀಸ್‌ ಪೇದೆ ಅವರನ್ನು ಹೊಣೆಗಾರಿಕೆ ಮಾಡಿ ಕ್ರಮಕೈಗೊಳ್ಳಬೇಕು. ಬಾಲ್ಯವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಅತ್ಯಂತ ಮುತುವರ್ಜಿ ಮತ್ತು ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಬೇಕು. ಬಾಲ್ಯವಿವಾಹ ತಡೆದ ಕುಟುಂಬಗಳೊಂದಿಗೆ ಟೆಲಿಕೌನ್ಸೆಲಿಂಗ್‌ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಗ್ರಾಪಂ ಮಟ್ಟದಲ್ಲಿ ಸಮಿತಿ ರಚಿಸಿ: ಬಾಲ್ಯವಿವಾಹ ತಡೆ ಮತ್ತು ಚೈಲ್ಡ್‌ಲೈನ್‌ ಸಲಹಾ ಸಮಿತಿಗೆ ಸಂಬಂ ಧಿಸಿದ ಸಮಿತಿಗಳನ್ನು ಗ್ರಾಪಂ ಮಟ್ಟದಲ್ಲಿಯೂ ರಚಿಸಬೇಕು. ಈ ಕುರಿತು ಪಂಚಾಯ್ತಿ ಅಭಿವೃದ್ಧಿ ಅಧಿ ಕಾರಿಗಳಿಗೆ ಕಾರ್ಯಾಗಾರ ಏರ್ಪಡಿಸಿ ಈ ವಿಷಯದಲ್ಲಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುವಂತೆ ತಿಳಿಸಬೇಕು. ಬಾಲ್ಯವಿವಾಹ, ಮಕ್ಕಳ ರಕ್ಷಣೆ, ಪೋಕ್ಸೋ ಕಾಯ್ದೆ ಕುರಿತು ನಗರ ಸ್ಥಳೀಯ ಸಂಸ್ಥೆಗಳ ಹಾಗೂ ಗ್ರಾಪಂಗಳ ಕಸತ್ಯಾಜ್ಯ ವಾಹನಗಳಲ್ಲಿ ಆಡಿಯೋ ಸಂದೇಶದ ಮೂಲಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.

ಪೋಕ್ಸೋ ಕಾಯ್ದೆ ಗಂಭೀರವಾಗಿ ಪರಿಗಣಿಸಿ: ಇದೇ ವೇಳೆ ಅಧಿಕಾರಿಗಳು ಪೋಕ್ಸೋ ಕಾಯ್ದೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದ ಡಿಸಿ ನಕುಲ್‌, ಪೋಕ್ಸೋ ಅಡಿ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ವಾರದೊಳಗೆ ಮಕ್ಕಳ ಕಲ್ಯಾಣ ಸಮಿತಿಗೆ ವರದಿ ಸಲ್ಲಿಸುವಂತೆ ಸಿಡಿಪಿಒ ಕ್ರಮ ವಹಿಸಬೇಕು. ವರದಿ ಯಾರ್ಯಾರು ನೀಡಿದ್ದಾರೆ. ಇನ್ಯಾರು ಬಾಕಿ ಇವೆ ಎಂಬುದರ ವರದಿಯನ್ನು ಸಲ್ಲಿಸುವಂತೆ ಸಮಿತಿಯವರಿಗೆ ತಿಳಿಸಿದರು.

41 ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲು: ಬಳ್ಳಾರಿ ಜಿಲ್ಲೆಯಲ್ಲಿ ಏಪ್ರಿಲ್‌ನಿಂದ ಸೆಪ್ಟೆಂಬರ್‌ ಅಂತ್ಯದವರೆಗೆ 41 ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿರುವ ಮಾಹಿತಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ ಅವರು ಸಭೆ ಗಮನಕ್ಕೆತಂದರು. ಈವರೆಗೆ 175 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ ಒಂದು ಪ್ರಕರಣ ಖುಲಾಸೆಯಾಗಿದೆ. ಇನ್ನೂ 174 ಪ್ರಕರಣಗಳು ಬಾಕಿ ಇವೆ. ಪೋಕ್ಸೋ ಕಾಯ್ದೆ ಅಡಿ ದಾಖಲಾದ ಪ್ರಕರಣಗಳ ಮಕ್ಕಳಿಗೆ ಪುನರ್‌ವಸತಿ ಕಲ್ಪಿಸಲಾಗುತ್ತಿದ್ದು, ಅವರ ತುರ್ತುಚಿಕಿತ್ಸೆ ಸಲುವಾಗಿ ಪರಿಹಾರ ಧನ ವಿತರಿಸಲಾಗುತ್ತಿದೆ. ಇದುವರೆಗೆ 35 ಫಲಾನುಭವಿಗಳು ಈ ಅಭಯ ನಿ ಧಿ ಅಡಿಯ 4.15ಲಕ್ಷ ರೂ. ಬಳಕೆ ಮಾಡಿಕೊಂಡಿದ್ದಾರೆ. ಇನ್ನೂ 1.79ಲಕ್ಷ ರೂ. ಅನುದಾನವಿದೆ ಎಂದು ಅವರು ಹೇಳಿದರು.

ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಸುದೀರ್ಘ‌ ಚರ್ಚೆಗಳು ನಡೆದವು. ಸಭೆಯಲ್ಲಿ ಜಿಪಂ ಸಿಇಒ ಕೆ.ಆರ್‌. ನಂದಿನಿ ಅವರು ಅನೇಕ ಸಲಹೆ-ಸೂಚನೆಗಳನ್ನು ಅಧಿ ಕಾರಿಗಳಿಗೆ ನೀಡಿದರು. ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

ಟಾಪ್ ನ್ಯೂಸ್

1-fff

ಬಿಜೆಪಿ ದಲಿತರು, ಮಹಿಳೆಯರು, ಅಲ್ಪಸಂಖ್ಯಾತರಿಗೆ ಟಿಕೇಟ್ ನೀಡಿಲ್ಲ: ಧ್ರುವನಾರಾಯಣ

ಪಿಂಚಣಿ ವಂಚಿತರಿಗಾಗಿ ಇಪಿಎಫ್ಒ ಹೊಸ ಪ್ಲ್ಯಾನ್

ಪಿಂಚಣಿ ವಂಚಿತರಿಗಾಗಿ ಇಪಿಎಫ್ಒ ಹೊಸ ಪ್ಲ್ಯಾನ್

1-hhjkjjlkl

ಅಭ್ಯರ್ಥಿ ಸತ್ತ ಬಳಿಕವೂ ಮತದಾನ; ಅನುಕಂಪದಲ್ಲಿ ಮತ ಹಾಕಿ ಗೆಲ್ಲಿಸಿದ ಗ್ರಾಮಸ್ಥರು !!

ರಾಜ್ಯದಲ್ಲಿ ಮತ್ತೆ ಬಿಜೆಪಿ-ಶಿವಸೇನೆ ಸರಕಾರ ಭವಿಷ್ಯ ನುಡಿದ ಅಠಾವಳೆ

ರಾಜ್ಯದಲ್ಲಿ ಮತ್ತೆ ಬಿಜೆಪಿ-ಶಿವಸೇನೆ ಸರಕಾರ: ಭವಿಷ್ಯ ನುಡಿದ ಅಠಾವಳೆ

cm

ಕೋವಿಡ್ ರೂಪಾಂತರ: ರಾಜ್ಯ ಸರಕಾರ ಕೈಗೊಂಡ ಪ್ರಮುಖ ತೀರ್ಮಾನಗಳು ಹೀಗಿವೆ

1-asads

ಕೋವಿಡ್ ರೂಪಾಂತರ: ಮಹಿಳಾ ಏಕದಿನ ವಿಶ್ವಕಪ್‌ ಅರ್ಹತಾ ಪಂದ್ಯಗಳು ರದ್ದು

ಗಂಗಾವತಿ: ಗೃಹಿಣಿಯ ಕೊಲೆ; ಅತ್ಯಾಚಾರದ ಶಂಕೆ

ಗಂಗಾವತಿ: ಗೃಹಿಣಿಯ ಕೊಲೆ; ಅತ್ಯಾಚಾರದ ಶಂಕೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಮನೆ ಕುಸಿದು ಮೃತಪಟ್ಟ ವೃದ್ಧೆ ಕುಟುಂಬಕ್ಕೆ ಪರಿಹಾರ ನೀಡಿ

ಹೆದ್ದಾರಿ ತಡೆದು ರೈತರಿಂದ ಪ್ರತಿಭಟನೆ

ಹೆದ್ದಾರಿ ತಡೆದು ರೈತರಿಂದ ಪ್ರತಿಭಟನೆ

ballari news

4 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ದ

28y-sathish

ಈ ಬಾರಿ ವೈ. ಸತೀಶ್ ಗೆಲುವು ನಿಶ್ಚಿತ: ಸಚಿವ ಆನಂದ್ ಸಿಂಗ್

kanakadasa jayanthi

ಸಂತ ಶ್ರೇಷ್ಠ ಕನಕದಾಸ ಜಯಂತಿ ಆಚರಣೆ

MUST WATCH

udayavani youtube

ಎರೆಹುಳು ಸಾಕಾಣಿಕೆ ಮಾಡಿ ಭೂಮಿಯ ಫಲವತ್ತತೆ ಹೆಚ್ಚಿಸಿ, ಕೈತುಂಬಾ ಆದಾಯವೂ ಗಳಿಸಿ

udayavani youtube

ಬೆಂಗಳೂರಿನಿಂದ ಪಾಟ್ನಾಕ್ಕೆ 139 ಪ್ರಯಾಣಿಕರನ್ನು ಹೊತ್ತ ವಿಮಾನ ತುರ್ತು ಭೂಸ್ಪರ್ಶ

udayavani youtube

Shree Chamundeshwari Kshetra Arikodi

udayavani youtube

ಮೈಮೇಲೆ ದೇವರು ಬಂದಿದ್ದಾರೆ ಎಂದು ಲಸಿಕೆ ಹಾಕಲು ಬಂದವರನ್ನೇ ಯಾಮಾರಿಸಿದ ವ್ಯಕ್ತಿ

udayavani youtube

ಕಾರು ಶೋರೂಂ ಒಳಗೆ ನುಗ್ಗಿದ ಕಾಡು ಹಂದಿ!

ಹೊಸ ಸೇರ್ಪಡೆ

1-fff

ಬಿಜೆಪಿ ದಲಿತರು, ಮಹಿಳೆಯರು, ಅಲ್ಪಸಂಖ್ಯಾತರಿಗೆ ಟಿಕೇಟ್ ನೀಡಿಲ್ಲ: ಧ್ರುವನಾರಾಯಣ

ಗ್ರಾಮ ಪಂಚಾಯತಿಗೆ ಅನುದಾನ ನೀಡದೇ ಗ್ರಾಮಗಳ ಅಭಿವೃದ್ಧಿ ಕುಂಠಿತ : ಭೀಮಣ್ಣ ನಾಯ್ಕ

ಗ್ರಾಮ ಪಂಚಾಯತಿಗೆ ಅನುದಾನ ನೀಡದೇ ಗ್ರಾಮಗಳ ಅಭಿವೃದ್ಧಿ ಕುಂಠಿತ : ಭೀಮಣ್ಣ ನಾಯ್ಕ

ಪಿಂಚಣಿ ವಂಚಿತರಿಗಾಗಿ ಇಪಿಎಫ್ಒ ಹೊಸ ಪ್ಲ್ಯಾನ್

ಪಿಂಚಣಿ ವಂಚಿತರಿಗಾಗಿ ಇಪಿಎಫ್ಒ ಹೊಸ ಪ್ಲ್ಯಾನ್

1-hhjkjjlkl

ಅಭ್ಯರ್ಥಿ ಸತ್ತ ಬಳಿಕವೂ ಮತದಾನ; ಅನುಕಂಪದಲ್ಲಿ ಮತ ಹಾಕಿ ಗೆಲ್ಲಿಸಿದ ಗ್ರಾಮಸ್ಥರು !!

ಬಂಟ್ವಾಳ : ಇತ್ತಂಡಗಳ ಹೊಡೆದಾಟ, ನಾಲ್ವರು  ಪೋಲೀಸರ ವಶಕ್ಕೆ

ಬಂಟ್ವಾಳ : ಇತ್ತಂಡಗಳ ನಡುವೆ ಹೊಡೆದಾಟ, ನಾಲ್ವರು ಪೊಲೀಸರ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.