ಆರೈಕೆ ಕೇಂದ್ರ ಎದುರು ಕೋವಿಡ್ ತ್ಯಾಜ್ಯ
Team Udayavani, May 1, 2021, 5:19 PM IST
ಸಿರುಗುಪ್ಪ: ನಗರದ ತಾಲೂಕು ಕ್ರೀಡಾಂಗಣದಲ್ಲಿರುವ ಕೋವಿಡ್ ಆರೈಕೆ ಕೇಂದ್ರದ ಎದುರು ಕೋವಿಡ್ ಆರೈಕೆ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ವೈದ್ಯರು ಮತ್ತು ಸಿಬ್ಬಂದಿ ಬಳಸಿದ ಮಾಸ್ಕ್, ಹ್ಯಾಂಡ್‌ಗ್ಲೌಸ್‌ಗಳು ಬೇಕಾಬಿಟ್ಟಿಯಾಗಿ ಬಿದ್ದಿವೆ.
ಕೋವಿಡ್ ಆರೈಕೆ ಕೇಂದ್ರದ ಮುಂದಿನ ಸ್ಥಳ ಕೋವಿಡ್ ಸೋಂಕು ಹರಡುವ ತಾಣವಾಗಿದೆ. ಕೋವಿಡ್ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ವಿಚಾರಿಸಲು ಬರುವ ಕುಟುಂಬದ ಸದಸ್ಯರು ಮತ್ತು ಈ ಕೇಂದ್ರದ ಮುಂದೆಯೇ ರಸ್ತೆ ಇರುವುದರಿಂದ ಈ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಸೇರಿದಂತೆ ನೂರಾರು ಜನ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಇಲ್ಲಿಯೇ ಸಂಚರಿಸುತ್ತಾರೆ. ಕೋವಿಡ್ ಆರೈಕೆ ಕೇಂದ್ರದಲ್ಲಿ ಪ್ರತಿನಿತ್ಯವೂ ವೈದ್ಯರು, ನರ್ಸ್‌ಗಳು, ನಗರಸಭೆ ಸ್ವಚ್ಛತಾ ಸಿಬ್ಬಂದಿ ಬಳಸುವ ಸುರಕ್ಷತಾ ವಸ್ತುಗಳಾದ ಪಿಪಿಇ ಕಿಟ್, ಮಾಸ್ಕ್, ಹ್ಯಾಂಡ್‌ಗ್ಲೌಸ್‌ಗಳನ್ನು ನಾಶಪಡಿಸಲು ಆರೋಗ್ಯ ಇಲಾಖೆಯು ಮಾರ್ಗಸೂಚಿ ಅನುಸರಿಸದೇ ಯಾವುದೇ ಸುರಕ್ಷತೆ ಕ್ರಮ ಪಾಲಿಸದೇ ಕೇಂದ್ರದ ಮುಂದೆಯೇ ಸುಡುತ್ತಿದ್ದಾರೆ.
ಅಲ್ಲದೆ ಕೋವಿಡ್ ಸೋಂಕಿತರು ಊಟ ಮಾಡಿದ ಎಲೆ, ಗ್ಲಾಸ್ ಇನ್ನಿತರೆ ವಸ್ತುಗಳನ್ನು ಇಲ್ಲಿಯೇ ಬೀಸಾಡುತ್ತಿದ್ದಾರೆ. ಇದರಿಂದಾಗಿ ಕೋವಿಡ್ ಆರೈಕೆ ಕೇಂದ್ರದ ಮುಂದಿನ ಆವರಣ ಕೋವಿಡ್ ಸೋಂಕಿತರು ಬಳಸಿ ಬಿಸಾಡುವ ವಸ್ತುಗಳಿಂದ ಕಲುಷಿತವಾಗುತ್ತಿದೆ. ಬೀಸಾಡಿದ ತ್ಯಾಜ್ಯವು ಗಾಳಿಗೆ ಕೋವಿಡ್ ಆರೈಕೆ ಕೇಂದ್ರ ಸುತ್ತಲು ಹರಡುತ್ತಿದೆ. ನಮ್ಮ ಕೇಂದ್ರದಲ್ಲಿ ರೋಗಿಗಳು ಮತ್ತು ನಮ್ಮ ಇಲಾಖೆ ಸಿಬ್ಬಂದಿ ಬಳಸಿ ಬೀಸಾಡುವ ವಸ್ತುಗಳನ್ನು ಟ್ರಾÂಕ್ಟರ್‌ನಲ್ಲಿ ಹೊರಗಡೆ ತೆಗೆದುಕೊಂಡು ಹೋದರೆ, ಸೋಂಕು ಹೆಚ್ಚಾಗುತ್ತದೆ ಎನ್ನುವ ಕಾರಣಕ್ಕೆ ಕೋವಿಡ್ ಆರೈಕೆ ಕೇಂದ್ರದ ಮುಂದೆಯೇ ಸುಡಲಾಗುತ್ತದೆ ಎಂದು ಕೋವಿಡ್ ಆರೈಕೆ ಕೇಂದ್ರದ ವೈದ್ಯ ರವಿಶಂಕರ್‌ರೈ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಕ್ರಮ ಗೋ ಹತ್ಯೆ ಮಾಡಿದರೆ ಆಸ್ತಿ ಮುಟ್ಟುಗೋಲು ದಂಡನಾಸ್ತ್ರ ಬಳಕೆ: ಡಾ.ಭರತ್ ಶೆಟ್ಟಿ ವೈ
ಡೋಲೋ ಮಾತ್ರೆ ತಯಾರಿಕೆ ಕಂಪನಿಗೆ ಐಟಿ ಶಾಕ್; 40 ಕಡೆ ದಾಳಿ
ತಮಿಳುನಾಡನ್ನು ಎರಡು ರಾಜ್ಯಗಳನ್ನಾಗಿ ಇಬ್ಭಾಗ ಮಾಡಬೇಕು: ಬಿಜೆಪಿ ಮುಖಂಡ ನೈನಾರ್
ಚಾಮುಂಡಿ ಬೆಟ್ಟದ ಮೂಲಸೌಕರ್ಯಕ್ಕೆ ಸಿದ್ದು ಸರಕಾರ ಕೊಟ್ಟಿದ್ದು ಹುಂಡಿ ದುಡ್ಡಾ?
ತೀರ್ಥಹಳ್ಳಿ: ಬಿಜೆಪಿ ಹಿರಿಯ ಮುಖಂಡ ರಘುವೀರ್ ಭಟ್ ವಿಧಿವಶ