ಜನಾರ್ಧನ ರೆಡ್ಡಿ ಜನ್ಮದಿನ: ಚಿನ್ನ, ಬೆಳ್ಳಿ ನಾಣ್ಯಗಳಿಂದ ತುಲಾಭಾರ ಮಾಡಿದ ಅಭಿಮಾನಿಗಳು


Team Udayavani, Jan 11, 2022, 12:42 PM IST

ಜನಾರ್ಧನ ರೆಡ್ಡಿ ಜನ್ಮದಿನ: ಚಿನ್ನ, ಬೆಳ್ಳಿ ನಾಣ್ಯಗಳಿಂದ ತುಲಾಭಾರ ಮಾಡಿದ ಅಭಿಮಾನಿಗಳು

ಬಳ್ಳಾರಿ : ಮಾಜಿ ಸಚಿವ ಜನಾರ್ದನ ರೆಡ್ಡಿಯವರ 55ನೇ ಜನ್ಮದಿನದ ನಿಮಿತ್ತ ಅವರ ಅಭಿಮಾನಿಗಳಿಂದ ಚಿನ್ನ, ಬೆಳ್ಳಿ ಮತ್ತು ಐದು ರೂ. ಕಾಯಿನ್ ಗಳಿಂದ ತುಲಾಭಾರ ಮಾಡಲಾಯಿತು.

ನಗರದ ಕನಕದುರ್ಗಮ್ಮ ದೇವಸ್ಥಾನದಲ್ಲಿ ದಂಪತಿ ಸಮೇತ ವಿಶೇಷ ಪೂಜೆ ಸಲ್ಲಿಸಿದ ಜನಾರ್ಧನ ರೆಡ್ಡಿಯವರಿಗೆ ಬಳಿಕ ಅವರ ಅಭಿಮಾನಿಗಳು 55 ಬೆಳ್ಳಿ ನಾಣ್ಯ, 55 ಬಂಗಾರದ ನಾಣ್ಯ ಜೊತೆಗೆ ಐದು ರೂಪಾಯಿ ಮತ್ತು ಹತ್ತು ರೂಪಾಯಿ ನಾಣ್ಯಗಳಿಂದ ತುಲಾಭಾರ ಮಾಡಿ ಗಮನ ಸೆಳೆದರು.

ಮಾತೃಜಿಲ್ಲೆ ಬಳ್ಳಾರಿಯಲ್ಲಿ ವಾಸ ಮಾಡಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಜನಾರ್ಧನ ರೆಡ್ಡಿಯವರು ದಶಕದ ಬಳಿಕ ಜನ್ಮದಿನದವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಮಾಜಿ ಸಚಿವ ಜನಾರ್ಧನ ರೆಡ್ಡಿಗೆ ಅವರ ಆಪ್ತ ಸಚಿವ ಬಿ.ಶ್ರೀರಾಮುಲು ಸಾಥ್ ನೀಡಿದರು.

ಇದನ್ನೂ ಓದಿ:ಭಂಡತನ, ಬಂಡೆತನ ಬೇಡ.. ಎಲ್ಲದಕ್ಕೂ ಸಮರ್ಥವಾಗಿ ಉತ್ತರ ಕೊಡ್ತೀವಿ:ಅಶ್ವತ್ಥನಾರಾಯಣ್ ಟಾಂಗ್

ಬಳಿಕ ಸುದ್ದಿಗಾರರೊಂದಿಗೆ ಮಾತನಡಿದ ಜನಾರ್ಧನ ರೆಡ್ಡಿಯವರು, ನಾನು ಬಳ್ಳಾರಿಗೆ ಬಂದರೆ ಕನಕ ದುರ್ಗಮ್ಮ ದೇವಸ್ಥಾನಕ್ಕೆ ತುಲಾಭಾರ ಮಾಡಿ ಅರ್ಪಿಸುವುದಾಗಿ ಅಭಿಮಾನಿಗಳು ಹರಕೆ ಹೊತ್ತಿದ್ದರು. ಅದರಂತೆ ನನ್ನ ಜನ್ಮದಿನದ ನಿಮಿತ್ತ ಇಂದು ತುಲಾಭಾರ ಮಾಡಿದ್ದಾರೆ. ಹನ್ನೊಂದು ವರ್ಷಗಳ ಬಳಿಕ ಅದ್ಧೂರಿಯಾಗಿ ಬಳ್ಳಾರಿಯಲ್ಲಿ ಹುಟ್ಟುಹಬ್ಬ ಆಚರಿಸಿ ಕೊಳ್ಳುತ್ತಿದ್ದೇನೆ ಎಂದ ಅವರು, ರಾಜಕೀಯ ಮಾತನಾಡುವುದಿಲ್ಲ. ಅದಕ್ಕೊಂದು ಸಮಯ ನಿಗದಿ‌ ಮಾಡಿ ಮಾತನಾಡುವೆ ಎಂದು ತಿಳಿಸಿದರು.

ಪುತ್ರನ ಸಿನಿರಂಗ ಪ್ರವೇಶ

ಇದೇ ವೇಳೆ ತನ್ನ ಮಗ ಕಿರೀಟಿ ರೆಡ್ಡಿ ಚಿತ್ರರಂಗ ಪ್ರವೇಶ ಬಗ್ಗೆ ಪ್ರತಿಕ್ರಿಯಿಸಿದ ಜನಾರ್ಧನ ರೆಡ್ಡಿ, ಇದೇ ಜ.20ರಂದು ಸಿನಿಮಾ ಪ್ರಾರಂಭವಾಗಬೇಕಿತ್ತು. ಕೊರೊನಾ ಹಿನ್ನೆಲೆ ಮುಂದೂಡಲಾಗಿದೆ.

ಕನ್ನಡ ಮತ್ತು ತೆಲುಗು ಎರಡು ಭಾಷೆಗಳಲ್ಲಿ ಸಿನಿಮಾವನ್ನು ಏಕಕಾಲಕ್ಕೆ ನಿರ್ಮಾಣ ಮಾಡಲಿದ್ದೇವೆ. ಮುಂದಿನ ತಿಂಗಳು ಸೆಟ್ ಎರಲಿದೆ ಎಂದು ಸ್ಪಷ್ಡಪಡಿಸಿದರು.

ಬಳ್ಳಾರಿಯವರೇ ಆದ ತೆಲುಗಿನ ” ಈಗ”‌ ನಿನಿಮಾದ ನಿರ್ಮಾಪಕ ಸಾಯಿ ಕೊರ್ರಪಾಟಿ ಈ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ.  ಮಾಯಬಜಾರ ಚಿತ್ರದ ನಿರ್ದೇಶಕ ರಾಧಕೃಷ್ಣ ನಿರ್ದೇಶನ ಮಾಡಲಿದ್ದಾರೆ ಎಂದರು.

ಟಾಪ್ ನ್ಯೂಸ್

ಸಂಸ್ಕೃತ ವಿಶ್ವ ಭಾಷೆ: ಉಡುಪಿ ಪುತ್ತಿಗೆ ಮಠದ ಶ್ರೀ

ಸಂಸ್ಕೃತ ವಿಶ್ವ ಭಾಷೆ: ಉಡುಪಿ ಪುತ್ತಿಗೆ ಮಠದ ಶ್ರೀ

ragini dwivedi

ಬರ್ತ್ ಡೇ ಗೆ ‘ಸಾರಿ’ ಗಿಫ್ಟ್;  ಹೊಸಬರ ಜೊತೆ ರಾಗಿಣಿ ಚಿತ್ರ…

10PSI

ಪಿಎಸ್‌ಐ ನೇಮಕಾತಿ: ದೈಹಿಕ ಪರೀಕ್ಷೆಯಲ್ಲೂ ಅಕ್ರಮ?

cancer

ಮಹಿಳೆಯರಲ್ಲಿ ಕೌಟುಂಬಿಕ ಕ್ಯಾನ್ಸ ರ್‌ ಸಿಂಡ್ರೋಮ್‌ಗಳು ಮತು ವಂಶವಾಹಿ ಪರೀಕ್ಷೆ

ಉತ್ತರ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: ಬೀದರ್ ನ ಏಳು ಜನ‌ರ ದುರ್ಮರಣ

ಉತ್ತರ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: ಬೀದರ್ ನ ಏಳು ಜನ‌ರ ದುರ್ಮರಣ

1-fsfsdf

ರಾಜ್ಯಸಭಾ ಚುನಾವಣೆ : ಕಾಂಗ್ರೆಸ್ ನಾಯಕರ ಭೇಟಿಯಾದ ಜೆಡಿಎಸ್ ನ ಕುಪೇಂದ್ರ ರೆಡ್ಡಿ

parameshwar

ದಲಿತ ಸಿಎಂ ವಿಚಾರ: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರಿಗೂ ಅವಕಾಶವಿದೆ ಎಂದ ಪರಮೇಶ್ವರ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bayalu-pata

ಸ್ವಂತ ಕಟ್ಟಡವಿಲ್ಲದೇ ಬಯಲಲ್ಲೇ ಪಾಠ!

siraguppa1

ಮೂಲ ಸೌಕರ್ಯವಿಲ್ಲದೇ ರಾವಿಹಾಳು

flood

ಪ್ರತಿವರ್ಷ ಪ್ರವಾಹ; ಇಲ್ಲ ಶಾಶ್ವತ ಪರಿಹಾರ

ಅಕ್ಷರ ದಾಸೋಹ ಬಿಸಿಯೂಟದಲ್ಲಿ ಹುಳು ಪತ್ತೆ: ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡ ಪೋಷಕರು

ಅಕ್ಷರ ದಾಸೋಹ ಬಿಸಿಯೂಟದಲ್ಲಿ ಹುಳು ಪತ್ತೆ: ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡ ಪೋಷಕರು

ballary1

ಜೋಳ ಖರೀದಿ ಅವ್ಯವಹಾರ ತನಿಖೆಗೆ ಸಮಿತಿ

MUST WATCH

udayavani youtube

ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ | ಕೊಟ್ಟಿಗೆಹಾರ

udayavani youtube

ಮಸೀದಿಗಳಾಗಿ ಮಾರ್ಪಾಡಾದ 30 ಸಾವಿರ ದೇವಾಲಯಗಳನ್ನೂ ವಾಪಸ್ ಪಡೆಯುತ್ತೇವೆ : ಮುತಾಲಿಕ್

udayavani youtube

ಜೀರ್ಣೋದ್ದಾರ ನೆಪದಲ್ಲಿ ಪಂಪಾ ಸರೋವರದ ಮೂರ್ತಿಗಳ ಸ್ಥಳಾಂತರ : ಸಂಜೀವ ಮರಡಿ ವಿರೋಧ

udayavani youtube

ಗ್ರಾ.ಪಂ ಸದಸ್ಯನಿಗೆ ಕಪಾಳ ಮೋಕ್ಷ : ಪಿಎಸ್ ಐ ಅಮಾನತ್ತಿಗೆ ಒತ್ತಾಯಿಸಿ ಠಾಣೆಗೆ ಮುತ್ತಿಗೆ

udayavani youtube

ಅಂಬೇಡ್ಕರ್ ಅವರ ಕಿವಿಮಾತನ್ನು ನೆಹರು ಕೇಳಲಿಲ್ಲ : ಬಸನಗೌಡ ಪಾಟೀಲ್ ಯತ್ನಾಳ

ಹೊಸ ಸೇರ್ಪಡೆ

ನರಚನಹಳ್ಳಿಯಲ್ಲಿ ಭಾರೀ ಮಳೆ: ಬ್ಯಾರನ್‌ ಗೋಡೆ ಕುಸಿತ

ನರಚನಹಳ್ಳಿಯಲ್ಲಿ ಭಾರೀ ಮಳೆ: ಬ್ಯಾರನ್‌ ಗೋಡೆ ಕುಸಿತ

11checkdam

ಚೆಕ್‌ ಡ್ಯಾಂ ನಿರ್ಮಾಣ ಹಂತದಲ್ಲೇ ಕಳಪೆ!

16

ಕಾರ್ಮಿಕರು ಆಯುಷ್ಮಾನ್ ಕಾರ್ಡ್‌ ಪಡೆಯಿರಿ

ಸಂಸ್ಕೃತ ವಿಶ್ವ ಭಾಷೆ: ಉಡುಪಿ ಪುತ್ತಿಗೆ ಮಠದ ಶ್ರೀ

ಸಂಸ್ಕೃತ ವಿಶ್ವ ಭಾಷೆ: ಉಡುಪಿ ಪುತ್ತಿಗೆ ಮಠದ ಶ್ರೀ

ragini dwivedi

ಬರ್ತ್ ಡೇ ಗೆ ‘ಸಾರಿ’ ಗಿಫ್ಟ್;  ಹೊಸಬರ ಜೊತೆ ರಾಗಿಣಿ ಚಿತ್ರ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.