ರೈತ ವಿರೋಧಿ ಕಾಯ್ದೆ ದೇಶಕ್ಕೆ ಮಾರಕ


Team Udayavani, Jan 3, 2021, 6:29 PM IST

ರೈತ ವಿರೋಧಿ ಕಾಯ್ದೆ ದೇಶಕ್ಕೆ ಮಾರಕ

ಬಳ್ಳಾರಿ: ಕೇಂದ್ರದ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆಗಳು ರೈತರನ್ನು ಮಾತ್ರ ಕಂಗಾಲು ಮಾಡುವುದಲ್ಲದೇ ಮುಂದಿನ ದಿನಗಳಲ್ಲಿ ಇಡೀದೇಶದ ಆಹಾರ ಭದ್ರತೆಯನ್ನೇ ಅಲುಗಾಡಿಸಲಿದೆ ಎಂದು ಎಐಎಂಎಸ್‌ಎಸ್‌ ರಾಜ್ಯಾಧ್ಯಕ್ಷೆ ಬಿ.ಆರ್‌. ಅಪರ್ಣಾ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆಗಳು ಹಾಗೂ ವಿದ್ಯುತ್‌ತ್ಛಕ್ತಿಬಿಲ್‌ 2020ನ್ನು ವಿರೋಧಿಸಿ ದೆಹಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಳೆದ 37 ದಿನಗಳಿಂದ ಲಕ್ಷಾಂತರರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇಡೀಕೃಷಿ ರಂಗವನ್ನು ನರೇಂದ್ರ ಮೋದಿ ಸರ್ಕಾರ, ಕಾರ್ಪೋರೇಟ್‌ ಮನೆತನಗಳಿಗೆ ನೆರವಾಗುವಂತೆ ಮಾಡಿದ್ದಾರೆ. ಈ ನಡೆಯನ್ನು ಖಂಡಿಸಿ ರೈತರು ನಡೆಸುತ್ತಿರುವ ಹೋರಾಟ ಅತ್ಯಂತ ನ್ಯಾಯೋಚಿತವಾಗಿದೆ. ಕೇವಲ ದೇಶ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಬೆಂಬಲ ಪಡೆದಿದೆ. ಈ ಕಾಯ್ದೆಗಳು ರೈತರನ್ನು ಮಾತ್ರ ಕಂಗಾಲು ಮಾಡುವಂತವುದಲ್ಲದೆ, ಇಡೀ ದೇಶದ ಆಹಾರ ಭದ್ರತೆಗೆ ಮಾರಕವಾಗಿ ಪರಿಣಮಿಸಲಿದೆ ಎಂದರು.

ಎಐಎಂಎಸ್‌ಎಸ್‌ ಅಖೀಲಭಾರತ ಸಮಿತಿಯು, ರೈತರು ದೆಹಲಿ ಚಲೋ ಕಾರ್ಯಕ್ರಮವನ್ನು ಪ್ರಾರಂಭಿಸಿದ ಮೊದಲನೇ ದಿನದಿಂದಲೇ ಅವರಹೋರಾಟಕ್ಕೆ ತನ್ನ ಸಂಪೂರ್ಣ ಬೆಂಬಲವನ್ನುವ್ಯಕ್ತ ಪಡಿಸಿದೆ. ದೇಶದಾದ್ಯಂತ ಇಂದಿನವರೆಗೂಹಲವಾರು ಪ್ರತಿಭಟನೆಗಳನ್ನು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈ ಹೋರಾಟಕ್ಕೆ ಬೆಂಬಲವ್ಯಕ್ತಪಡಿಸಿದ ಸಮಿತಿಯ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಛಬಿರಾಣಿ ಮೊಹಂತಿಯವರ ನೇತೃತ್ವದಲ್ಲಿ ರಾಷ್ಟ್ರೀಯ ಉಪಾಧ್ಯಕ್ಷೆ, ರಾಜ್ಯಾಧ್ಯಕ್ಷೆಬಿ.ಆರ್‌.ಅಪರ್ಣಾ ಮತ್ತು ಖಜಾಂಚಿ ಮೊಹುವಾ ನಂದಾ ಅವರು ನಿಯೋಗದಲ್ಲಿ ತೆರಳಿ ದೆಹಲಿಗೆತೆರಳಿ ಸಿಂಘುಗಡಿ, ಘಾಜಿಪೂರ್‌ಗಡಿ, ಠೆಕ್ರಿಗಡಿ,ಷಹಜಾನ್‌ಪುರ್‌ ಗಡಿಗೆ ಭೇಟಿ ನೀಡಿ ಹೋರಾಟದ ವಾಸ್ತವಾಂಶವನ್ನು ಅರಿತಿದ್ದೇವೆ ಎಂದು ವಿವರಿಸಿದರು.

ಕೇಂದ್ರ ಸರ್ಕಾರ ಕಾಯ್ದೆಗಳನ್ನು ಹಿಂಪಡೆಯುವವರೆಗೂ ರೈತರು ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ. ಇದು ನಮ್ಮ ಅಳಿವು ಉಳಿವಿನ ಪ್ರಶ್ನೆಯಾಗಿದೆ. ನಾವು ಮಕ್ಕಳೊಂದಿಗೆ ಬಂದಿದ್ದೇವೆ.ನಮ್ಮ ಪ್ರಾಣತ್ಯಾಗವಾದರೂ ಸರಿಯೇ ಸರ್ಕಾರ ಈಕಾಯ್ದೆಗಳನ್ನು ಹಿಂಪಡೆಯುವವರೆಗೂ ಇಲ್ಲಿಂದಹಿಂದೆ ಸರಿಯುವುದಿಲ್ಲ ಎಂದು ಘೋಷಣೆ ಕೂಗಿ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಎಐಎಂಎಸ್‌ಎಸ್‌ನ ಜಿಲ್ಲಾ ಮುಖಂಡರಾದ ಎಂ.ಎನ್‌ ಮಂಜುಳಾ, ಎ. ಶಾಂತ, ಕೆ.ಎಂ. ಈಶ್ವರಿ, ರೇಖಾ. ವಿದ್ಯಾವತಿ, ಗಿರೀಜಾ, ಪದ್ಮಾವತಿ, ಅಹಲ್ಯಾ, ವಿಜಯಲಕ್ಷ್ಮೀ ಇದ್ದರು.

ಟಾಪ್ ನ್ಯೂಸ್

ಜಮ್ಮು-ಕಾಶ್ಮೀರ: ಉಗ್ರರ ದಾಳಿ ಸಂಚು ವಿಫಲ, ಶಸ್ತ್ರಾಸ್ತ್ರ ಸಹಿತ ಮೂವರ ಬಂಧನ

ಜಮ್ಮು-ಕಾಶ್ಮೀರ: ಉಗ್ರರ ದಾಳಿ ಸಂಚು ವಿಫಲ, ಶಸ್ತ್ರಾಸ್ತ್ರ ಸಹಿತ ಮೂವರ ಬಂಧನ

1-fffdsf

ನಾವು ಇಂದು ವಿಷವರ್ತುಲದಲ್ಲಿ ಸಿಲುಕಿದ್ದೇವೆ : ಸ್ಪೀಕರ್ ಕಾಗೇರಿ

Ranu Mondal sings trending song Kacha Badam

ವೈರಲ್ ಸಾಂಗ್ ‘ಕಚಾ ಬದಾಮ್’ ಹಾಡಿ ಟ್ರೋಲಾದ ರಾನು ಮಂಡಲ್: ವಿಡಿಯೋ ನೋಡಿ

13gold

ಹಾಡ ಹಗಲೇ ಜ್ಯುವೆಲರಿ ಅಂಗಡಿ ದರೋಡೆ ಯತ್ನ: ಮಹಿಳೆ ಪೊಲೀಸ್ ವಶಕ್ಕೆ

Gandhi

ಇಸ್ರೇಲ್ ಜತೆ ಒಪ್ಪಂದ- ಪೆಗಾಸಸ್ ಬಳಸಿ ಗೂಢಚಾರಿಕೆ; ಮೋದಿ ಸರ್ಕಾರದಿಂದ ದೇಶದ್ರೋಹ; ರಾಹುಲ್

12CTravi

ಶಾಸಕ ಸಿ.ಟಿ.ರವಿ ತಂದೆ ತಿಮ್ಮೇಗೌಡ ನಿಧನ

ಬಂಟ್ವಾಳ: ಪಾಣೆಮಂಗಳೂರಿನ ಕಿರುಸೇತುವೆಯಿಂದ ತೋಡಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಬಂಟ್ವಾಳ: ಪಾಣೆಮಂಗಳೂರಿನ ಕಿರುಸೇತುವೆಯಿಂದ ತೋಡಿಗೆ ಹಾರಿ ವ್ಯಕ್ತಿ ಆತ್ಮಹತ್ಯೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ballari news

ಎಸ್ಸಿ-ಎಸ್ಟಿ ಕಾಲೋನಿ ಅಭಿವೃದ್ದಿಗೆ ಆದ್ಯತೆ ನೀಡಿ

ballari news

ಶ್ರೀರಾಮುಲುಗೆ ಉಸುವಾರಿ-ಸಿಂಗ್‌ಗೆ ಕೊಪ್ಪಳ ಜವಾಬ್ದಾರಿ

್ಗಹಹಗಹಗದಗ

ಶಿವಕುಮಾರ ಶ್ರೀಗಳ ಬದುಕೇ ಶಿವಮಯ

ಚ್ಗೆಹಮನಬವಚಸಗಹದಗಹಗ್ದಸ

ಸೆಕ್ಯೂರಿಟಿ ಗಾರ್ಡ್‌ ಕುಟುಂಬಕ್ಕೆ ಪರಿಹಾರಕ್ಕಾಗಿ ಪ್ರತಿಭಟನೆ

ಅಂಗನವಾಡಿ ಕೇಂದ್ರದಲ್ಲಿ ಎಸ್ಸಿ, ಎಸ್ಟಿ ಅಂಗನವಾಡಿ ಮಕ್ಕಳಿಗೆ ಮೊಟ್ಟೆ ವಿತರಣೆ

ಅಂಗನವಾಡಿ ಕೇಂದ್ರದಲ್ಲಿ ಎಸ್ಸಿ, ಎಸ್ಟಿ ಅಂಗನವಾಡಿ ಮಕ್ಕಳಿಗೆ ಮೊಟ್ಟೆ ವಿತರಣೆ

MUST WATCH

udayavani youtube

ಉಳ್ಳಾಲ : ಆತ್ಮಹತ್ಯೆಗೆ ಯತ್ನಿಸಿದ ಪ್ರಿಯತಮೆಯನ್ನು ರಕ್ಷಿಸಲು ಹೋದ ಪ್ರಿಯಕರ ಸಮುದ್ರಪಾಲು

udayavani youtube

ಚಿಕ್ಕಮಗಳೂರು : ಅರಣ್ಯ ಪ್ರದೇಶದಲ್ಲಿ ನವವಿವಾಹಿತೆ ಅನುಮಾನಾಸ್ಪದ ಸಾವು

udayavani youtube

ಹುತಾತ್ಮ ಸೈನಿಕ ಮಗನ ಪ್ರತಿಮೆ ನಿರ್ಮಿಸಿದ ತಾಯಿ

udayavani youtube

ಇಲ್ಲಿದೆ ‘ಶುದ್ಧ’ ಸಾವಯವ ಅಕ್ಕಿ !ನೀವು ಕೇಳಿಯೇ ಇರದ 3 ವಿಶೇಷತೆಗಳು

udayavani youtube

400 ಕೋಟಿ ಬೆಲೆಬಾಳುವ 47 ಕೆಜಿ ಹೆರಾಯಿನ್ವಶಪಡಿಸಿಕೊಂಡ BSF

ಹೊಸ ಸೇರ್ಪಡೆ

ಜಮ್ಮು-ಕಾಶ್ಮೀರ: ಉಗ್ರರ ದಾಳಿ ಸಂಚು ವಿಫಲ, ಶಸ್ತ್ರಾಸ್ತ್ರ ಸಹಿತ ಮೂವರ ಬಂಧನ

ಜಮ್ಮು-ಕಾಶ್ಮೀರ: ಉಗ್ರರ ದಾಳಿ ಸಂಚು ವಿಫಲ, ಶಸ್ತ್ರಾಸ್ತ್ರ ಸಹಿತ ಮೂವರ ಬಂಧನ

1-fffdsf

ನಾವು ಇಂದು ವಿಷವರ್ತುಲದಲ್ಲಿ ಸಿಲುಕಿದ್ದೇವೆ : ಸ್ಪೀಕರ್ ಕಾಗೇರಿ

15covid

ಕೋವಿಡ್‌ನಿಂದ ಮೃತಪಟ್ಟ ಕುಟುಂಬಕ್ಕೆ ಪರಿಹಾರ

Ranu Mondal sings trending song Kacha Badam

ವೈರಲ್ ಸಾಂಗ್ ‘ಕಚಾ ಬದಾಮ್’ ಹಾಡಿ ಟ್ರೋಲಾದ ರಾನು ಮಂಡಲ್: ವಿಡಿಯೋ ನೋಡಿ

14water

ಶುದ್ದ ಕುಡಿಯುವ ನೀರಿನ ಘಟಕಕ್ಕೆ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.