ಪಕ್ಷಭೇದ ಮರೆತು ಹಂಪಿ ಉತ್ಸವ ನಡೆಸಿ

Team Udayavani, Jan 14, 2019, 9:46 AM IST

ಕಂಪ್ಲಿ: ರಾಜ್ಯ ಪಕ್ಷಭೇದ ಮರೆತು ಇತಿಹಾಸ ಸಾರುವ ವೈಭವದ ಹಂಪಿ ಉತ್ಸವವನ್ನು ಪ್ರತಿ ವರ್ಷ ಆಚರಿಸಬೇಕು ಎಂದು ಉಜ್ಜಯಿನಿ ಪೀಠದ ಜಗದ್ಗುರು ಸಿದ್ದಲಿಂಗರಾಜ ದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯ ವ್ಯಕ್ತಪಡಿಸಿದರು.

ಸಮೀಪದ ಬುಕ್ಕಸಾಗರ ಗ್ರಾಮದ ಕರಿಸಿದ್ದೇಶ್ವರ ಸಂಸ್ಥಾನ ಮಠ ಆವರಣದಲ್ಲಿ ಲಿಂ| ಕರಿಸಿದ್ದೇಶ್ವರ ಶಿವಾಚಾರ್ಯ ಶಿವಯೋಗಿಗಳ 6ನೇ ವರ್ಷದ ಪುಣ್ಯಾರಾಧನೆ ಹಾಗೂ ಕರಿಸಿದ್ದೇಶ್ವರ ತಾತನವರ ಜಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಧರ್ಮಜಾಗೃತಿ ಸಭೆಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಪ್ರತಿ ವರ್ಷದಲ್ಲಿ ಮೈಸೂರು ದಸರಾ ಉತ್ಸವವನ್ನು ಆಚರಿಸಿಕೊಂಡು ಬರುತ್ತಿದೆ. ಆದರೆ, ವಿಜಯನಗರ ಸಾಮ್ರಾಜ್ಯದ ಗತವೈಭವ ನೆನಪಿಸುವ ಹಂಪಿ ಉತ್ಸವ ಆಚರಣೆಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರುತ್ತಿರುವುದು ವಿಷಾದನೀಯವಾಗಿದೆ.

ಇತಿಹಾಸ ಮೆಲುಕು ಹಾಕಿ ನೋಡಿದಾಗ ವಿಜಯನಗರ ಸಾಮ್ರಾಜ್ಯವನ್ನು ದೊಡ್ಡ ಮಟ್ಟದಲ್ಲಿ ಶ್ರೀಕೃಷ್ಣದೇವರ ಕಟ್ಟಿ ಆಳಿದ್ದಾರೆ. ಪ್ರಾಚೀನ ಕಾಲದಲ್ಲಿ ಹಂಪಿ ಉತ್ಸವ ಅದ್ಧೂರಿಯಾಗಿ ನಡೆದುಕೊಂಡು ಬಂದಿದೆ. ವಿಜಯನಗರ ಸಾಮ್ರಾಜ್ಯದ ಪತನದ ನಂತರದಲ್ಲಿ ಮೈಸೂರು ದಸರಾ ಉತ್ಸವ ಆಚರಣೆಗೆ ಅಣಿಯಾಯಿತು. ಸರ್ಕಾರ ಮೈಸೂರು ದಸರಾ ಉತ್ಸವ ಮಾಡುತ್ತದೆ. ಆದರೆ, ಹಂಪಿ ಉತ್ಸವ ಆಚರಣೆಗೆ ಮಲತಾಯಿ ಧೋರಣೆ ತೋರುತ್ತಿರುವುದು ವಿಪರ್ಯಾಸ ಸಂಗತಿ. ಸರ್ಕಾರ ಹಾಗೂ ಎಲ್ಲ ಪಕ್ಷಗಳು ಪಕ್ಷಭೇದ ಮರೆತು ಪ್ರತಿ ವರ್ಷದಲ್ಲಿ ಹಂಪಿ ಉತ್ಸವ ಆಚರಿಸಲು ಗೆಜೆಟ್‌ನಲ್ಲಿ ಅನುಮೋದನೆ ಹೊರಡಿಸಬೇಕು. ಯಾವುದೇ ಪಕ್ಷ ಸರ್ಕಾರದ ಚುಕ್ಕಾಣಿ ಹಿಡಿದರೂ, ಪ್ರತಿ ವರ್ಷ ಹಂಪಿ ಉತ್ಸವ ಆಚರಿಸಬೇಕೆಂದು ಧರ್ಮಸಭೆಯಲ್ಲಿ ಒತ್ತಾಯಿಸಿದರು.

ಕರಿಸಿದ್ದೇಶ್ವರ ಸಂಸ್ಥಾನ ಮಠದ ಪೀಠಾಧಿ ಪತಿಗಳಾದ ವಿಶ್ವಾರಾಧ್ಯ ಕರಿಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿ ಅಧ್ಯಕ್ಷತೆ ವಹಿಸಿ, ಶ್ರೀಮಠದ ಸದ್ಭಕ್ತರ ಆಸಕ್ತಿಯಿಂದ ಲಿಂಗೈಕ್ಯ ಶ್ರೀಗಳ ಜಾತ್ರಾ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ಜರುಗುತ್ತಿದೆ. ಪ್ರತಿಯೊಬ್ಬರೂ ಶ್ರೀಮಠದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಪ್ರತಿವರ್ಷ ಶ್ರೀಮಠದಿಂದ ಕೊಡ ಮಾಡುವ ‘ಕರಿಸಿದ್ದ ಶ್ರೀ’ ಪ್ರಶಸ್ತಿಯನ್ನು ಗಂಗಾವತಿ ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ| ಶರಣಬಸಪ್ಪ ಕೋಲ್ಕಾರ್‌ ಅವರಿಗೆ ನೀಡಿ ಗೌರವಿಸಲಾಯಿತು.

ತೆಕ್ಕಲಕೋಟೆ ಹಂದ್ಯಾಳುಮಠದ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿ, ಕುರುಗೋಡು ರಾಘವಾಂಕ ಶಿವಾಚಾರ್ಯ ಮಹಾಸ್ವಾಮಿ, ಹೆಬ್ಟಾಳು ನಾಗಭೂಷಣ ಶಿವಾಚಾರ್ಯ ಸ್ವಾಮಿಜಿ, ಎಮ್ಮಿಗನೂರು ವಾಮದೇವ ಮಹಾಂತ ಶಿವಾಚಾರ್ಯ ಮಹಾಸ್ವಾಮಿ, ರೌಡಕುಂದ ಮರಿಸಿದ್ದಲಿಂಗ ಶಿವಾಚಾರ್ಯ, ಮಾಜಿ ಶಾಸಕ ರತನ್‌ಸಿಂಗ್‌, ಗ್ರಾಪಂ ಅಧ್ಯಕ್ಷ ಅಲ್ಲಿಪುರ ತಿಮ್ಮಪ್ಪ, ಗೊಗ್ಗ ಚನ್ನಬಸವರಾಜಸ್ವಾಮಿ, ಪಿ.ಮೂಕಯ್ಯಸ್ವಾಮಿ, ಎಸ್‌.ಎಸ್‌.ಎಂ. ಚನ್ನಯ್ಯಸ್ವಾಮಿ, ಸಾಲಿ ಸಿದ್ದಯ್ಯ, ಎಸ್‌.ಡಿ. ಬಸವರಾಜ, ವಿಶ್ವನಾಥ, ಕವಿತಾ ಈಶ್ವರಸಿಂಗ್‌, ವಾಣಿಶ್ರೀ ಹಾಗೂ ಸುತ್ತಲಿನ ಗ್ರಾಮದ ಭಕ್ತರು ಹಾಗೂ ಮಹಿಳೆಯರು ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಹೊಸಪೇಟೆ: ತಮ್ಮೊಳ ಗಿನ ನೋವು-ನಲಿವುಗಳನ್ನು ಮರೆ ಮಾಚಿ ಅಭಿನಯ ನೀಡುವ ಅನೇಕ ಕಲಾವಿದರು, ಉತ್ತಮ ಸಮಾಜ ನಿರ್ಮಾಣಕ್ಕೆ ನಾಂದಿಯಾಗಿದ್ದಾರೆ ಎಂದು ಬಳ್ಳಾರಿ ವಲಯದ...

  • ಬಾಳೆಹೊನ್ನೂರು: ಆಧುನಿಕತೆಯ ಭರಾಟೆ ಹಾಗೂ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಇಂದು ಗ್ರಂಥಾಲಯಗಳು ಘನತೆಯನ್ನು ಕಳೆದುಕೊಳ್ಳುತ್ತಿವೆ ಎಂಬುದಕ್ಕೆ ಬಾಳೆಹೊನ್ನೂರಿನ...

  • ಬಳ್ಳಾರಿ: ಚುನಾವಣಾ ನೀತಿ ಸಂಹಿತೆ, ಬರ ನಾನಾ ಕಾರಣಗಳಿಂದ ಮುಂದೂಡಿಕೆಯಾಗುತ್ತಲೇ ಬಂದಿದ್ದ ಈ ವರ್ಷದ ಹಂಪಿ ಉತ್ಸವವನ್ನು 2020 ಜ.11ಮತ್ತು 12ರಂದು ಅತ್ಯಂತ ವಿಜೃಂಭಣೆಯಿಂದ...

  • ಹರಪನಹಳ್ಳಿ: ತಾಲೂಕಿನಾದ್ಯಂತ ಸೋಮವಾರ ಸಂಜೆ ಮತ್ತು ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ಭತ್ತ, ಈರುಳ್ಳಿ ಸೇರಿದಂತೆ ನೂರಾರು ಎಕರೆ ಬೆಳೆ ಜಲಾವೃತಗೊಂಡಿವೆ. ಸಿಡಿಲು...

  • ಬಳ್ಳಾರಿ: ಭಾರೀ ಮಳೆಯ ಕಾರಣದಿಂದ ತುಂಗಭದ್ರಾ ಜಲಾಶಯದಿಂದ ನದಿಯ ಕೆಳ ಪಾತ್ರಕ್ಕೆ ಹೆಚ್ಚುವರಿ ನೀರನ್ನು ಹರಿಯಬಿಟ್ಟ ಪರಿಣಾಮ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಬಾಗೇವಾಡಿ...

ಹೊಸ ಸೇರ್ಪಡೆ

  • ಪುಟ್ಟಿಯ ಮನೆಯ ಹಿತ್ತಲಿನಲ್ಲಿ ದಟ್ಟನೆ ಗಿಡ ಮರ ಬಳ್ಳಿ ಹೂ ಚೆಲ್ಲಿ ಬಟ್ಟಲು ಹಿಡಿದು ಬಟಾಣಿ ಕಡಿಯುತ ಪುಟ್ಟಿಯು ಹಿತ್ತಲ ಕಡೆಗೆ ನೋಡಿದಳು ಮರದಲಿ ನಾಮದ ಅಳಿಲು...

  • ಬಂಟ್ವಾಳ: ಮಂಗಳೂರು ಮನಪಾ ಚುನಾವಣೆ ಘೋಷಣೆಯಾಗಿ ನೀತಿಸಂಹಿತೆ ಜಾರಿಯಲ್ಲಿರುವ ಕಾರಣ ಪ್ರಮುಖ ಸಭೆಗಳು ಬಂಟ್ವಾಳಕ್ಕೆ ಸ್ಥಳಾಂತರಗೊಳ್ಳುತ್ತಿದ್ದು, ಬುಧವಾರ...

  • ಜಾದೂ ಮಾಡುವವರು ವಸ್ತುಗಳನ್ನು ನಾಪತ್ತೆ ಮಾಡುವುದು. ಮತ್ತೆ ಅವುಗಳನ್ನು ಕರೆತಂದು ತೋರಿಸುವುದು ಎಲ್ಲವೂ ಮಾಮೂಲು. ಆದರೆ, ವಸ್ತುಗಳನ್ನು ಬಿಟ್ಟು ಬೇರೇನು ಜಾದು...

  • ಬೆಂಗಳೂರು: "ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತಹ ಕಡತಗಳನ್ನು ಇಡಲು ಪ್ರತ್ಯೇಕ ಕೊಠಡಿಯಿಲ್ಲ. ಆರೋಪಿಗಳನ್ನು ಠಾಣೆಗೆ ಕರೆತಂದರೆ ಬಂಧಿಸಿಡಲು ಸೆಲ್‌ ಇಲ್ಲವೇ...

  • ಬೆಂಗಳೂರು: ಮಹದಾಯಿ ನದಿಯಿಂದ ಕರ್ನಾಟಕಕ್ಕೆ ಕುಡಿಯುವ ನೀರಿಗಾಗಿ ಕಳಸಾ-ಬಂಡೂರಿ ಯೋಜನೆ ಕೈಗೆತ್ತಿಕೊಳ್ಳಲು ಕೇಂದ್ರ ಪರಿಸರ ಇಲಾಖೆ ಅನುಮತಿ ನೀಡಿದ್ದು, ಇದರಿಂದ...