ಜಲಾಶಯಗಳ ನೀರು ಸದ್ಬಳಕೆಗೆ ಸರ್ಕಾರದ ಸಂಕಲ್ಪ: ಡಿಕೆಶಿ

Team Udayavani, Aug 16, 2018, 3:46 PM IST

ಹೊಸಪೇಟೆ: ರಾಜ್ಯದ ಜಲಾಶಯಗಳ ಒಂದು ಹನಿ ನೀರು ಕೂಡ ನಿರುಪಯುಕ್ತವಾಗದಂತೆ ಅಗತ್ಯ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಸಂಕಲ್ಪ ಮಾಡಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದರು.

ಸಮೀಪದ ಟಿ.ಬಿ.ಡ್ಯಾಂನಲ್ಲಿ ಬುಧವಾರ ಸಂಜೆ ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಂಗಭದ್ರಾ ಜಲಾಶಯದಿಂದ ಒಂದು ಲಕ್ಷಕ್ಕೂ ಅಧಿಕ ನೀರು ಹೊರ ಹೋಗುತ್ತಿದೆ. ಪ್ರತಿ ಹನಿ ನೀರು ಉಪಯೋಗವಾಗಬೇಕು ಎಂಬ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಈ ಕುರಿತಂತೆ ಈಗಾಗಲೇ 210ಕ್ಕೂ ಹೆಚ್ಚು ದೇಶಿ ವಿದೇಶಿಯರು ಹಾಗೂ ಸ್ಥಳೀಯರಿಂದ ಸಲಹೆ ಸೂಚನೆ ಪಡೆಯಲಾಗಿದೆ. ಅವರ ಸಲಹೆಯನ್ವಯ ಸರ್ಕಾರ ಕಾರ್ಯಕ್ರಮ ರೂಪಿಸಲಿದೆ ಎಂದರು.

ತುಂಗಭದ್ರಾ ಜಲಾಶಯದಲ್ಲಿ 30 ಟಿಎಂಸಿ ಗೂ ಅಧಿಕ ಹೂಳು ತುಂಬಿದ್ದು, ಇದರಿಂದ ಹೆಚ್ಚುವರಿ ನೀರು ನಿರುಪಯುಕ್ತವಾಗಿ
ಸಮುದ್ರ ಸೇರುತ್ತಿದೆ. ಈ ಬಗ್ಗೆ ತಜ್ಞರಿಂದ ವರದಿ ಪಡೆಯಲಾಗಿದೆ. ಸಮಾನಾಂತರ ಜಲಾಶಯಗಳ ನಿರ್ಮಾಣ ಕುರಿತು ಚಿಂತನೆ ನಡೆಸಲಾಗುತ್ತಿದೆ. ಸ್ಥಳಗಳ ಪರಿಶೀಲನೆ ನಡೆಸಲಾಗಿದೆ ಎಂದರು.

ಮಹದಾಯಿ ತೀರ್ಪು ಸಮಾಧಾನ ತಂದಿಲ್ಲ. ರಾಜ್ಯಕ್ಕೆ ನ್ಯಾಯ ಒದಗಿಸಿಲ್ಲ. ನಮ್ಮ ಪಾಲು ನಮಗೆ ಸಿಕ್ಕಿಲ್ಲ. 34 ಟಿಎಂಸಿ ನೀರು ಕೇಳಲಾಗಿತ್ತು. ಆದರೆ 13.5 ಟಿಎಂಸಿ ನೀರು ಮಾತ್ರ ನೀಡಲಾಗಿದೆ. ಕುಡಿಯಲು ಮಾತ್ರ 9.5 ಟಿಎಂಸಿ ನೀರು ನೀಡಿದ್ದಾರೆ. ವಿದ್ಯುತ್‌ ಬಳಕೆಗೆ 8 ಟಿಎಂಸಿ ಮಾತ್ರ ನೀಡಲಾಗಿದೆ. ಆದರೆ ವಿರೋಧ ಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಉತ್ತಮ ತೀರ್ಪು ಎಂದು ಬಿಂಬಿಸಲು ಹೊರಟಿದ್ದಾರೆ.

ಈ ಕುರಿತು ಜನಪ್ರತಿನಿಧಿಗಳು ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಸರ್ಕಾರ ಹೋರಾಟ ನಡೆಸಲಿದೆ ಎಂದರು. ಸಣ್ಣ ನೀರಾವರಿ ಸಚಿವ ವೆಂಕಟರಾವ್‌ ನಾಡಗೌಡ, ಅರಣ್ಯ ಸಚಿವ ಶಂಕರ್‌, ಸಂಸದ ಕರಡಿ ಸಂಗಣ್ಣ, ಶಾಸಕರಾದ ಆನಂದ್‌ಸಿಂಗ್‌, ಬಿ.ನಾಗೇಂದ್ರ, ಈ. ತುಕಾರಾಂ, ಜೆ.ಎನ್‌. ಗಣೇಶ, ಭೀಮಾನಾಯ್ಕ, ರಾಘವೇಂದ್ರ ಹಿಟ್ನಾಳ್‌, ಅಮರೇಗೌಡ ಬಯ್ನಾಪುರ, ಪ್ರತಾಪ್‌ ಗೌಡ ಪಾಟೀಲ್‌, ಜಿಲ್ಲಾಧಿಕಾರಿ ಡಾ.ರಾಮ್‌ ಪ್ರಸಾತ್‌ ಮನೋಹರ್‌, ಕೊಪ್ಪಳ ಡಿಸಿ ಪಿ.ಸುನೀಲ್‌ ಕುಮಾರ್‌, ಸಹಾಯಕ ಆಯುಕ್ತರಾದ ಗಾರ್ಗಿ ಜೈನ್‌, ತಹಶೀಲ್ದಾರ್‌ ಎಚ್‌.ವಿಶ್ವನಾಥ ಸೇರಿದಂತೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ