ಗ್ರಾಪಂ ಚುನಾವಣೆ: 3031 ನಾಮಪತ್ರ ಸಲ್ಲಿಕೆ


Team Udayavani, Dec 13, 2020, 4:44 PM IST

ಗ್ರಾಪಂ ಚುನಾವಣೆ: 3031 ನಾಮಪತ್ರ ಸಲ್ಲಿಕೆ

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಲು ಡಿ.11 ಕೊನೆ ದಿನವಾಗಿದ್ದು,ಐದು ತಾಲೂಕುಗಳಲ್ಲಿ ಒಟ್ಟು 3031 ನಾಮಪತ್ರಗಳು ಸಲ್ಲಿಕೆಯಾಗಿವೆ. ಜಿಲ್ಲೆಯ ಸಿರುಗುಪ್ಪ ಮತ್ತು ಕುರುಗೋಡು ತಾಲೂಕುಗಳಲ್ಲಿ ತಲಾ ಒಂದು ಗ್ರಾಪಂ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಯಾಗಿಲ್ಲ.

ಜಿಲ್ಲೆಯ ಬಳ್ಳಾರಿ ತಾಲೂಕು, ಹೊಸಪೇಟೆ, ಸಿರುಗುಪ್ಪ, ಕುರುಗೋಡು ಮತ್ತು ಕಂಪ್ಲಿತಾಲೂಕುಗಳಲ್ಲಿನ ಒಟ್ಟು 87 ಗ್ರಾಮ ಪಂಚಾಯತ್‌ನ 1738 ಚುನಾವಣೆ ನಡೆಯಲಿದೆ. ಕಳೆದ ಡಿ.7ರಂದು ಅಧಿಸೂಚನೆ ಪ್ರಕಟವಾಗಿ ನಾಮಪತ್ರ ಸಲ್ಲಿಕೆಗೆ ಚಾಲನೆ ನೀಡಲಾಗಿದ್ದು, ಡಿ.11 ರಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿತ್ತು. ಒಟ್ಟಾರೆ ಸಲ್ಲಿಕೆಯಾಗಿರುವ ನಾಮಪತ್ರಗಳ ಪೈಕಿ ಅನುಸೂಚಿತ ಜಾತಿಯ ಪುರುಷ 339, ಮಹಿಳೆಯರು 408, ಪರಿಶಿಷ್ಟ ಪಂಗಡದ ಪುರುಷ 253, ಮಹಿಳೆಯರು 342, ಹಿಂದುಳಿದ ಅ ವರ್ಗದ ಪುರುಷ 61, ಮಹಿಳೆಯರು 105, ಹಿಂದುಳಿದ ಬಿ ವರ್ಗದಪುರುಷ 30, ಮಹಿಳೆಯರು 6, ಸಾಮಾನ್ಯ ವರ್ಗದ ಪುರುಷ 868, 629 ಮಹಿಳೆಯರು ಸೇರಿದ್ದಾರೆ. ಒಟ್ಟು 1490 ಮಹಿಳೆಯರು, 1541 ಪುರುಷರು ಸೇರಿ 3031 ನಾಮಪತ್ರ ಸಲ್ಲಿಕೆಯಾಗಿವೆ.

ಮೊದಲ ಹಂತದ ಚುನಾವಣೆಯಲ್ಲಿ ಬಳ್ಳಾರಿ ತಾಲ್ಲೂಕಿನ 25 ಗ್ರಾಮ ಪಂಚಾಯತ್‌ನ 522 ಸ್ಥಾನಗಳಿಗೆ, ಕುರುಗೋಡು ತಾಲೂಕಿನ 12ಗ್ರಾಪಂಗಳ 241, ಸಿರಗುಪ್ಪ ತಾಲೂಕಿನ 27ಗ್ರಾಪಂಗಳ 489 ಸ್ಥಾನ, ಹೊಸಪೇಟೆ ತಾಲೂಕಿನ 13 ಗ್ರಾಪಂಗಳ 274 ಸ್ಥಾನ, ಕಂಪ್ಲಿ ತಾಲ್ಲೂಕಿನ 10ಗ್ರಾಪಂನ 212 ಸದಸ್ಯತ್ವ ಸ್ಥಾನಗಳಿಗೆ ಚುನಾವಣೆನಡೆಯಬೇಕಿದೆ. ಡಿ. 17ರವರೆಗೆ ನಾಮಪತ್ರ ವಾಪಸ್‌ ಪಡೆಯಲು ಅವಕಾಶ ಇದೆ. ಡಿ. 22ರಂದು ಮೊದಲ ಹಂತದ ಚುನಾವಣೆಗೆ ಮತದಾನ ನಡೆಯಲಿದೆ.

ಇದೀಗ ಚುನಾವಣೆಯ ಮೊದಲ ಹೆಜ್ಜೆ ಮುಗಿದಂತೆ ಆಗಿದೆ. ಸಲ್ಲಿಕೆಯಾಗಿರುವನಾಮಪತ್ರಗಳ ಪರಿಶೀಲನೆ ಕಾರ್ಯ ಅದಾಗಲೇ ನಡೆದಿದೆ. ಈಗಾಗಲೇ ನಾಮಪತ್ರ ಸಲ್ಲಿಸಿದವರುಪೈಕಿ ಕೆಲವರು ಕಣದಿಂದ ಹಿಂದೆ ಸರಿಯಲಿದ್ದಾರೆ.ಸ್ಪರ್ಧಾಕಾಂಕ್ಷಿಗಳು ಯಾರನ್ನು ಹಿಂದೆ ಸರಿಸಬೇಕು,ಯಾರು ಕಣದಲ್ಲಿ ಇರಬೇಕೆಂಬುದರ ನಿರ್ಧಾರಕ್ಕೆಕಾಲಾವಕಾಶ ಇದೆ. ಈ ವೇಳೆ ಗೆಲ್ಲಲೇಬೇಕೆಂಬ ಅಭ್ಯರ್ಥಿ ತನ್ನ ಕ್ಷೇತ್ರದಲ್ಲಿರುವ ಹತ್ತಿರದ ಸ್ಪ ರ್ಧಿಯ ಮನವೊಲಿಸುವ ಕಾರ್ಯ ಮಾಡಲಿದ್ದಾರೆ. ಒಂದು ವೇಳೆ ಯಶ ಕಂಡರೆ ಕೆಲ ಸ್ಪರ್ಧಾಕಾಂಕ್ಷಿಗಳು ತಮ್ಮ ಉಮೇದುವಾರಿಕೆ ಹಿಂಪಡೆಯಲಿದ್ದಾರೆ. ಅದಾದ ನಂತರ ನಿಜವಾದ ಅಖಾಡ ಸಿದ್ಧಗೊಳ್ಳಲಿದೆ.

ಚುನಾವಣೆ ಬಹಿಷ್ಕಾರ: ಕುರುಗೋಡು ತಾಲೂಕಿನ ಬಸವಪುರ ಗ್ರಾಮವನ್ನು ಕುರುಗೋಡು ಪಟ್ಟಣ ಪಂಚಾಯತ್‌ಗೆ ಸೇರಿಸಬೇಕೆಂದು ಆಗ್ರಹಿಸಿ ಈಬಾರಿಯ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ. ಇದೇ ಕಾರಣಕ್ಕೆ ಈ ಗ್ರಾಮದ ಒಂದು ಗ್ರಾಪಂ ಸ್ಥಾನಕ್ಕೆ ಯಾವುದೇ ನಾಮಪತ್ರ ಸಲ್ಲಿಕೆ ಆಗಿಲ್ಲ.ಇದೇ ರೀತಿ ಸಿರಗುಪ್ಪ ತಾಲ್ಲೂಕಿನ ಸಿರಿಗೇರಿ ಗ್ರಾಮ ಪಂಚಾಯತ್‌ ಅನ್ನು ಪಟ್ಟಣ ಪಂಚಾಯತ್‌ ಆಗಿಮೇಲ್ದರ್ಜೆಗೆ ಏರಿಸಲು ಆಗ್ರಹಿಸಿ ಈ ಬಾರಿಯಚುನಾವಣೆ ಬಹಿಷ್ಕರಿಸಿದ್ದಾರೆ. ಹೀಗಾಗಿ ಸಿರಿಗೇರಿಯ 33 ಸ್ಥಾನ, ಸಿದ್ದರಾಮಪುರದ ಒಂದು ಗ್ರಾಮ ಪಂಚಾಯತ್‌ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಆಗಿಲ್ಲ.

ಟಾಪ್ ನ್ಯೂಸ್

ಶಿರ್ವ, ಕುಂದಾಪುರದಲ್ಲಿ ಅಕ್ರಮ ಮರಳುಗಾರಿಕೆ

ಶಿರ್ವ, ಕುಂದಾಪುರದಲ್ಲಿ ಅಕ್ರಮ ಮರಳುಗಾರಿಕೆ

ತಂತ್ರಜ್ಞಾನ ಆಧಾರಿತ ಕಾರ್ಯನಿರ್ವಹಣೆಗೆ ಆದ್ಯತೆ; ಪಿಟಿಝೆಡ್‌ ಕೆಮರಾ ಬಳಕೆ

ತಂತ್ರಜ್ಞಾನ ಆಧಾರಿತ ಕಾರ್ಯನಿರ್ವಹಣೆಗೆ ಆದ್ಯತೆ; ಪಿಟಿಝೆಡ್‌ ಕೆಮರಾ ಬಳಕೆ

ಸೋಮೇಶ್ವರ ಬೀಚ್‌: ರಾತ್ರಿ ವೇಳೆ ಡಿಜೆ ಪಾರ್ಟಿ; ಶಬ್ದ ಮಾಲಿನ್ಯದ ಬಗ್ಗೆ ಸ್ಥಳೀಯರಿಂದ ದೂರು

ಸೋಮೇಶ್ವರ ಬೀಚ್‌: ರಾತ್ರಿ ವೇಳೆ ಡಿಜೆ ಪಾರ್ಟಿ; ಶಬ್ದ ಮಾಲಿನ್ಯದ ಬಗ್ಗೆ ಸ್ಥಳೀಯರಿಂದ ದೂರು

ಎನ್‌ಐಎಯಿಂದ ಮುಂದುವರಿದ ದಾಳಿ

ಜಮ್ಮು- ಕಾಶ್ಮೀರ: ಎನ್‌ಐಎಯಿಂದ ಮುಂದುವರಿದ ದಾಳಿ

ಕೇರಳದಲ್ಲಿ ಇನ್ನೂ 2 ವಾರ ಮಳೆ;  9 ಆಣೆಕಟ್ಟಿಗೆ ರೆಡ್‌, 7 ಜಿಲ್ಲೆಗೆ ಯೆಲ್ಲೋ ಅಲರ್ಟ್‌

ಕೇರಳದಲ್ಲಿ ಇನ್ನೂ 2 ವಾರ ಮಳೆ;  9 ಆಣೆಕಟ್ಟಿಗೆ ರೆಡ್‌, 7 ಜಿಲ್ಲೆಗೆ ಯೆಲ್ಲೋ ಅಲರ್ಟ್‌

ಶೀಘ್ರ 5 ಸಾವಿರ ಶಿಕ್ಷಕರ ನೇಮಕಾತಿ: ಸಚಿವ ಬಿ.ಸಿ.ನಾಗೇಶ್‌

ಶೀಘ್ರ 5 ಸಾವಿರ ಶಿಕ್ಷಕರ ನೇಮಕಾತಿ: ಸಚಿವ ಬಿ.ಸಿ.ನಾಗೇಶ್‌

ನಟ ಆಸಿಫ್ ಶೇಖ್‌ ವರ್ಲ್ಡ್ ರೆಕಾರ್ಡ್‌

ನಟ ಆಸಿಫ್ ಶೇಖ್‌ ವರ್ಲ್ಡ್ ರೆಕಾರ್ಡ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

hampi news

ಹಂಪಿ ಸ್ಮಾರಕಕ್ಕೆ ಬೆಳಕಿನ ಚಿತ್ತಾರ

ballari news

ಶ್ರೀ ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ

ಯುವಸಮೂಹದ ಮೇಲಿದೆ ದೇಶದ ಜವಾಬ್ದಾರಿ: ನ್ಯಾ| ನಾಗೇಶ್‌

ಯುವಸಮೂಹದ ಮೇಲಿದೆ ದೇಶದ ಜವಾಬ್ದಾರಿ: ನ್ಯಾ| ನಾಗೇಶ್‌

ಬಳ್ಳಾರಿಯಲ್ಲಿ 3ನೇ ಕ್ಯಾಂಟೀನ್‌ ಆರಂಭ

ಬಳ್ಳಾರಿಯಲ್ಲಿ 3ನೇ ಕ್ಯಾಂಟೀನ್‌ ಆರಂಭ

Untitled-1

ಆರ್ ಎಸ್ಎಸ್ ಬಗ್ಗೆ ಮಾತನಾಡುವ ಕುಮಾರಸ್ವಾಮಿ ಒಬ್ಬ ಬುದ್ಧಿಮಾಂದ್ಯ: ಸೋಮಶೇಖರ ರೆಡ್ಡಿ

MUST WATCH

udayavani youtube

ಆಟೋ ಚಾಲಕನ ನತದೃಷ್ಟ ಕಥೆಯಿದು

udayavani youtube

ನಮ್ಮ ದೇಶ ಕರ್ತವ್ಯ ಪಾಲಿಸಿದೆ : ಪ್ರಧಾನಿ ನರೇಂದ್ರ ಮೋದಿ

udayavani youtube

ಶೆಟ್ಟಿ ನೀನು ಹುಡುಗಿ ತರ ಮಾತಾಡ್ತೀಯ

udayavani youtube

POLYHOUSE ನಲ್ಲಿ ಸೌತೆಕಾಯಿ ತರಕಾರಿ ಕೃಷಿ; ಇಲ್ಲಿದೆ ಸಂಪೂರ್ಣ ಮಾಹಿತಿ…

udayavani youtube

ನೂರು ಕೋಟಿ ಡೋಸ್‌ ಲಸಿಕಾ ಗುರಿ ತಲುಪಿದ ಸಂಭ್ರಮ

ಹೊಸ ಸೇರ್ಪಡೆ

ರಾಜಕಾಲುವೆ ಅವ್ಯವಸ್ಥೆಯಿಂದ ತಡೆಗೋಡೆ ಕುಸಿತ; ಕಟ್ಟಡಕ್ಕೆ ಅಪಾಯ

ರಾಜಕಾಲುವೆ ಅವ್ಯವಸ್ಥೆಯಿಂದ ತಡೆಗೋಡೆ ಕುಸಿತ; ಕಟ್ಟಡಕ್ಕೆ ಅಪಾಯ

ನಾಳೆ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ವರ್ಧಂತಿ ಆಚರಣೆ

ನಾಳೆ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ವರ್ಧಂತಿ ಆಚರಣೆ

ಶಿರ್ವ, ಕುಂದಾಪುರದಲ್ಲಿ ಅಕ್ರಮ ಮರಳುಗಾರಿಕೆ

ಶಿರ್ವ, ಕುಂದಾಪುರದಲ್ಲಿ ಅಕ್ರಮ ಮರಳುಗಾರಿಕೆ

ತಂತ್ರಜ್ಞಾನ ಆಧಾರಿತ ಕಾರ್ಯನಿರ್ವಹಣೆಗೆ ಆದ್ಯತೆ; ಪಿಟಿಝೆಡ್‌ ಕೆಮರಾ ಬಳಕೆ

ತಂತ್ರಜ್ಞಾನ ಆಧಾರಿತ ಕಾರ್ಯನಿರ್ವಹಣೆಗೆ ಆದ್ಯತೆ; ಪಿಟಿಝೆಡ್‌ ಕೆಮರಾ ಬಳಕೆ

ಭರದಿಂದ ಸಾಗುತ್ತಿದೆ ಜೀರ್ಣೋದ್ಧಾರ ಕಾಮಗಾರಿ

ಭರದಿಂದ ಸಾಗುತ್ತಿದೆ ಜೀರ್ಣೋದ್ಧಾರ ಕಾಮಗಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.