ಹಂಪಿ ಉತ್ಸವ : 4-5 ವೇದಿಕೆ ನಿರ್ಮಾಣ

Team Udayavani, Feb 9, 2019, 6:42 AM IST

ಹೊಸಪೇಟೆ: ಮಾ.2 ಮತ್ತು 3ರಂದು ನಡೆಯಲಿರುವ ಹಂಪಿ ಉತ್ಸವದ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಡಾ| ರಾಮ್‌ಪ್ರಸಾತ್‌ ಮನೋಹರ್‌ ಹಂಪಿಗೆ ಭೇಟಿ ನೀಡಿ ವೇದಿಕೆ ಸಿದ್ಧತೆ ಕುರಿತು ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿÇ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌ ಸೂಚನೆ ಮೇರೆಗೆ ಮಾ.2, 3 ರಂದು ಹಂಪಿ ಉತ್ಸವ ನಡೆಸುತ್ತಿದ್ದು, ವೇದಿಕೆಗಳ ಸಿದ್ಧತೆ ಕುರಿತು ಸ್ಥಳ ಪರಿಶೀಲನೆ ನಡೆಸಲಾಗಿದೆ. ಒಟ್ಟು 4 ರಿಂದ 5 ವೇದಿಕೆಗಳನ್ನು ನಿರ್ಮಿಸಲಾಗುವುದು. ಇರುವ ಅನುದಾನದಲ್ಲಿಯೇ ಅಚ್ಚುಕಟ್ಟಾಗಿ ಉತ್ಸವ ಆಚರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಹಂಪಿಯ ಎದುರು ಬಸವಣ್ಣ, ಸಾಸಿವೆಕಾಳು ಗಣಪತಿ, ಕಡಲೆಕಾಯಿ ಗಣಪತಿ ಸೇರಿದಂತೆ ಇನ್ನಿತರೆ ಸ್ಥಳ ಪರಿಶೀಲನೆ ನಡೆಸಿದ್ದು ವೇದಿಕೆಗಳನ್ನು ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಬರ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಗುತ್ತಿದೆ.ಇರುವ ಬಜೆಟ್ ಅಲ್ಲಿಯೇ ನಡೆಸಲಾಗುತ್ತಿದೆ. ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಸಾರ್ವಜನಿಕರಿಗೆ ಹೊಸಪೇಟೆ, ಕಂಪ್ಲಿ ಸೇರಿಸುವಂತೆ ಇತರೆ ಕಡೆಗಳಿಂದ ಉತ್ಸವಕ್ಕೆ ಆಗಮಿಸುವ ಸಲುವಾಗಿ ಉಚಿತ ಬಸ್‌ ವ್ಯವಸ್ಥೆ ಮಾಡಲಾಗುತ್ತದೆ. ಕುಡಿವ ನೀರು, ಪುಸ್ತಕ ಮಳಿಗೆ, ಆಹಾರ ಮೇಳ ನಡೆಯಲಿದೆ ಎಂದು ತಿಳಿಸಿದರು.

ಸಮಯದ ಕೊರತೆ ಹಿನ್ನೆಲೆಯಲ್ಲಿ ಧ್ವನಿ ಬೆಳಕು ಕಾರ್ಯಕ್ರಮ ಇರುವುದಿಲ್ಲ. ಎರಡು ಮಾತ್ರ ಉತ್ಸವ ನಡೆಸುತ್ತಿರುವುದರಿಂದ ಹಂಪಿ ಬೈಸ್ಕೈ ಇರುವುದಿಲ್ಲ ಎಂದರು.

ಚುನಾವಣೆ ಘೋಷಣೆಯಾದರೂ ಆಯೋಗದಿಂದ ಅನುಮತಿ ಪಡೆದು ಉತ್ಸವ ಆಚರಿಸಲಾಗುವುದು. ಈಗ 3 ಕೋಟಿ ಅನುದಾನವಿದೆ. ಹಂಪಿ ಉತ್ಸವಕ್ಕೆ ಒತ್ತಾಯ ಮಾಡಿದವರು. ಸಹ ಅನುದಾನಕ್ಕೆ ದೇಣಿಗೆ ನೀಡಲು ಕೋರುವೆ ಎಂದು ತಿಳಿಸಿದರು. ಎಸಿ ಲೋಕೇಶ್‌, ಹೆಚ‌್ಚುವರಿ ಎಸ್ಪಿ ಲಾವಣ್ಯ, ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿ ಕಾಳಿಮುತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದೇರ್ಶಕ ನಾಗರಾಜ್‌ ಇನ್ನಿತರರಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ