ಹಂಪಿ ವಿಜಯನಗರ ಅಲ್ಲ, ಕರ್ನಾಟಕ ಸಾಮ್ರಾಜ್ಯ


Team Udayavani, Feb 4, 2019, 9:32 AM IST

bell-2.jpg

ಹೊಸಪೇಟೆ: ವಿಶ್ವಪರಂಪರೆ ಪಟ್ಟಿಯಲ್ಲಿರುವ ಐತಿಹಾಸಿಕ ಪ್ರವಾಸಿ ತಾಣ ಹಂಪಿ. ಇಂದು ನಾವು ಅಂದುಕೊಂಡಂತೆ ವಿಜಯನಗರ ಸಾಮ್ರಾಜ್ಯ ಅಲ್ಲ, ಅದು ಕರ್ನಾಟಕ ಸಾಮ್ರಾಜ್ಯವಾಗಿತ್ತು ಎಂದು ಫ್ರಾನ್ಸ್‌ನಲ್ಲಿ ನೆಲೆಸಿರುವ ಇತಿಹಾಸ ತಜ್ಞೆ ಡಾ| ವಸುಂಧರಾ ಫಿಲಿಯೋಜಾ ಹೇಳಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸಾಮ್ರಾಜ್ಯ ಎಂದು ಹೇಳಲು ಸುಮಾರು 30ಕ್ಕೂ ಹೆಚ್ಚು ಮೇಲ್ಟಟ್ಟು ಶಾಸನಗಳು ಹಾಗೂ ಸಾಹಿತ್ಯಾಧಾರಗಳು ಸಿಗುತ್ತವೆ. ಆದರೆ, ವಿಜಯನಗರ ಸಾಮ್ರಾಜ್ಯ ಎಂದು ಹೇಳಲು ಎಲ್ಲಿಯೂ ಪೂರಕ ದಾಖಲೆಗಳು ಸಿಕ್ಕಿಲ್ಲ. ಅಂದು ಹಂಪಿಗೆ ಭೇಟಿ ನೀಡಿದ್ದ ರಾಬರ್ಟ್‌ ಸಿವೆಲ್‌ ಎಂಬ ವಿದೇಶಿ ಪ್ರವಾಸಿಗ ಕರ್ನಾಟಕ ಸಾಮ್ರಾಜ್ಯ ಎಂದು ಬರೆಯುವ ಬದಲಾಗಿ ವಿಜಯನಗರ ಸಾಮ್ರಾಜ್ಯ ಎಂದು ತಪ್ಪು ಬರೆಯುವ ಮೂಲಕ ಇತಿಹಾಸ ತಿರುಚಿದ್ದಾರೆ ಎಂದು ಆರೋಪಿಸಿದರು.

ವಿಜಯ ನಗರ ಸಾಮ್ರಾಜ್ಯ ಎಂಬುದೇ ಶುದ್ಧ ಸುಳ್ಳು. ಅದು ಸ್ಥಾಪನೆಗೊಳ್ಳಲಿಲ್ಲ. ಕ್ರಿಶ 1336-1337 ಹೊತ್ತಿನಲ್ಲಿ ಹೊಯ್ಸಳ ಮುಮ್ಮಡಿ ಬಲ್ಲಾಳನು ಮುಸ್ಲಿಂರನ್ನು ದಕ್ಷಿಣ ಭಾರತದಿಂದ ಹೊರ ಹಾಕಲು ಹರಸಹಾಸ ಮಾಡುತ್ತಿದ್ದ ಸಂದರ್ಭದಲ್ಲಿ ಬಹುಶಃ ಅವನು ಶೃಂಗೇರಿ ಪೀಠದ ವಿದ್ಯಾತೀರ್ಥ ಸ್ವಾಮೀಜಿಗಳನ್ನು ಭೇಟಿ ಮಾಡಿ ಹೊರ ದಾಳಿಗಳನ್ನು ಎದುರಿಸಲು ಹಿಂದೂಗಳಿಗೆ ಒಬ್ಬನೇ ರಾಜನಿರಬೇಕು ಎಂದು ಅದರಂತೆ ನಡೆದುಕೊಳ್ಳಲು ತಮ್ಮ ಶಿಷ್ಯರಾದ ಮಾಧವಾಚಾರ್ಯರನ್ನು ನೇಮಿಸಿದನು. ಎಲ್ಲ ಮಾಂಡಲಿಕ ರಾಜರಿಗೂ ಹೊಯ್ಸಳ ಬಳಗ ಗುಟ್ಟಾಗಿ ಸಭೆ ನಡೆಸಿ ಒಬ್ಬ ವೀರನನ್ನು ಹಂಪಿಯಲ್ಲಿ ನೇಮಕ ಮಾಡಿದರು. ಈ ಸಂಬಂಧಕ್ಕೆ ಒಬ್ಬನೇ ಹಿಂದೂ ರಾಜನಂದರೆ ಹೊಯ್ಸಳ ಮುಮ್ಮಡಿ ಬಲ್ಲಾಳ ಹಾಗೂ ಅವರ ಮಗ ನಾಲ್ಮಡಿ ಬಲ್ಲಾಳ. ಅವನಿಗೆ ಹಂಪಿಯ ಒಡೆಯ, ವಿರೂಪಾಕ್ಷ ಬಲ್ಲಾಳ ಎಂಬ ಹೆಸರಿದ್ದವು. ಹೊಯ್ಸಳರಿಗೆ ಸಮಕಾಲೀನವರಾದ ಸೇವುಣರು, ಕರ್ನಾಟಕದ ರಾಜರು ಎಂದು ಕರೆಯುತ್ತಿದ್ದರು ಎಂದರು.

ಹೊಯ್ಸಳರಿಗೆ ಕರ್ನಾಟಕಧೀಶರರು ಎಂದು ಕರೆಯುತ್ತಿದ್ದರು. ಮುಂದೆ ಅವರ ರಾಜ್ಯಕ್ಕೆ ಕರ್ನಾಟಕ ಎಂದು ರಾಜಧಾನಿಯನ್ನಾಗಿಸಿಕೊಂಡರು. ಈ ಸಂಬಂಧಕ್ಕೆ ಮುಖ್ಯಪಾತ್ರ ವಹಿಸಿದವರು ವಿದ್ಯಾರಣ್ಯರಲ್ಲ, ಅವರ ಗುರುಗಳಾದ ವ್ಯಾಸತೀರ್ಥರು. ವ್ಯಾಸತೀರ್ಥರ ಶಿಷ್ಯರಾಗಿದ್ದ ಮಾಧವಾಚಾರ್ಯರು ಮುದೊಂದು ದಿನ ಸನ್ಯಾಸ ದೀಕ್ಷೆ ಪಡೆದು ವಿದ್ಯಾರಣ್ಯರಾದರು. ಕಾಲ ಕ್ರಮೇಣ ಗುರುವಿನ ಹೆಸರು ಮರೆಯಾದಂತೆ ದಂತಕಥೆಗಳು 17-18ನೇ ಶತಮಾನದಲ್ಲಿ ಹುಟ್ಟಿಕೊಂಡವು ಎಂದರು.

ಮಾಧವಾಚಾರ್ಯರೇ ವಿದ್ಯಾರಣ್ಯರಾದರು ಎಂಬುದುನ್ನು ಅವರ ಕೃತಿಗಳಾದ ಪುರಾಣಸಾರ, ಪರಶರ ಮಾಧವೀಯ ಹಾಗೂ ಜೀವನ ಮುಕ್ತಿಯಿಂದ ತಿಳಿದು ಬರುತ್ತದೆ. ಅವರು ಹರಿಹರ ಬುಕ್ಕರಿಗೆ ಮಂತ್ರಿಯಾಗಿದ್ದರು ಎಂಬುದು ಈ ಕೃತಿಗಳಲ್ಲಿ ಉಲ್ಲೇಖವಿದೆ. ಈ ಎಲ್ಲ ಮೂಲಗಳಿಂದ ಹಂಪಿ ವಿಜಯನಗರ ಸಾಮ್ರಾಜ್ಯವಲ್ಲ, ಕರ್ನಾಟಕ ಸಾಮ್ರಾಜ್ಯ ಎಂದರು. ಅವರ ಪತಿ ಪಿಯರ್‌ ಸಿಲ್ವೆ„ನ್‌ ಫಿಲಿಯೋಜಾ ಇದ್ದರು.

ಟಾಪ್ ನ್ಯೂಸ್

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

Neha Hiremath Case; Protest by BJP-JDS-ABVP across the state

Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.