Udayavni Special

ಹಂಪಿ; ಗರಿಗೆದರಿದ ಪ್ರವಾಸೋದ್ಯಮ ಚಟುವಟಿಕೆ

ಎರಡನೇ ಅಲೆ ಹೊಡೆತಕ್ಕೆ ಹಂಪಿ ಪ್ರವಾಸೋದ್ಯಮಕ್ಕೆ ತೀವ್ರ ಆರ್ಥಿಕ ಹೊಡೆತ ಬಿದ್ದಿತ್ತು.

Team Udayavani, Sep 11, 2021, 2:21 PM IST

ಹಂಪಿ; ಗರಿಗೆದರಿದ ಪ್ರವಾಸೋದ್ಯಮ ಚಟುವಟಿಕೆ

ಹೊಸಪೇಟೆ: ಕೊರೊನಾ ಮೂರನೇ ಅಲೆ ಭೀತಿಯ ಹಿನ್ನೆಲೆಯಲ್ಲಿ ಕಳೆದ ತಿಂಗಳು ವಿಶ್ವವಿಖ್ಯಾತ ಹಂಪಿಗೆ ಭೇಟಿಗೆ ನಿರ್ಬಂಧ ಹೇರಿದ್ದ ಜಿಲ್ಲಾಡಳಿತ ತೆರವುಗೊಳಿಸಿ, ಪ್ರವಾಸಿಗರಿಗೆ ಮುಕ್ತ ಅವಕಾಶ ನೀಡಿದೆ. ಕಳೆದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ವ್ಯಾಪ್ತಿಯ ದೇವಾಲಯ ಹಾಗೂ ಸ್ಮಾರಕಗಳ ವೀಕ್ಷಣೆಗೆ ಆ.14ರಂದು ನಿಷೇಧ ಹೇರಿದ್ದ ಜಿಲ್ಲಾಡಳಿತ ನಿರ್ಬಂಧ ತೆರವುಗೊಳಿಸಿ, ಪ್ರವಾಸಿಗರ ಭೇಟಿಗೆ ಮುಕ್ತ ಅವಕಾಶ ಕಲ್ಪಿಸಿದೆ.

ಶನಿವಾರ ಹಾಗೂ ಭಾನುವಾರ ರಜೆ ದಿನಗಳಲ್ಲಿ ಇನ್ನುಂದೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಹಂಪಿಗೆ ಭೇಟಿ ನೀಡಲಿದ್ದು, ಪ್ರವಾಸೋದ್ಯಮ ಚಟುವಟಿಕೆಗಳು ಗರಿಗೆದರಲಿವೆ. ಕೊರೊನಾ ಮೂರನೇ ಅಲೆ ಹಿನ್ನೆಲೆಯಲ್ಲಿ ಕಳೆದ ತಿಂಗಳು ಪ್ರತಿ ಶನಿವಾರ, ಭಾನುವಾರ ಸೋಮವಾರ ಹಾಗೂ ಅಮಾವಾಸ್ಯೆ ದಿನದಲ್ಲಿ ಕೂಡ ಪ್ರವಾಸಿಗರ ಭೇಟಿಗೆ ಜಿಲ್ಲಾಡಳಿತ ಕಡಿವಾಣ ಹಾಕಿತ್ತು. ಇದರಿಂದಾಗಿ ವಾರದಲ್ಲಿ ನಾಲ್ಕು ದಿನ ಮಾತ್ರ ಪ್ರವಾಸಿಗರು ಹಂಪಿಗೆ ಭೇಟಿ ನೀಡಬಹುದಿತ್ತು.

ಕೊರೊನಾ ಎರಡೂ ಅಲೆಗಳಿಂದ ತೀವ್ರ ಹಿನ್ನಡೆ ಅನುಭವಿಸಿದ್ದ ಹಂಪಿ ಪ್ರವಾಸೋದ್ಯಮಕ್ಕೆ ಮತ್ತಷ್ಟು ಆರ್ಥಿಕ ಸಂಕಷ್ಟ ಎದುರಾಗಿತ್ತು. ಹಂಪಿ ಪ್ರವಾಸೋದ್ಯಮದಿಂದ ಬದುಕು ಕಟ್ಟಿಕೊಂಡಿದ್ದ ಗೈಡ್‌ಗಳು, ಹೋಟೆಲ್‌, ರೆಸ್ಟೋರೆಂಟ್‌ ಸಣ್ಣ-ಪುಟ್ಟ ವ್ಯಾಪಾರ-ವಹಿವಾಟು ನಡೆಸಿಕೊಂಡು ಅನೇಕರು ತೊಂದರೆಗೆ ಒಳಗಾಗಿದ್ದರು. ಈಗ ಹಂಪಿಗೆ ಪ್ರವಾಸಿಗರ ಭೇಟಿಗೆ ಜಿಲ್ಲಾಡಳಿತ ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರು, ಹಂಪಿಯ ಕಡೆ ಮುಖ ಮಾಡಲಿದ್ದು, ಪ್ರವಾಸೊದ್ಯಮದಲ್ಲಿ ಕೊಂಚ ಮಟ್ಟಿಗೆ ಚೇತರಿಕೆ ಕಾಣುವ ಲಕ್ಷಣಗಳು ಗೋಚರವಾಗುತ್ತಿವೆ.

ಕೊರೊನಾ ಎರಡು ಅಲೆಗಳ ಲಾಕ್‌ಡೌನ್‌ನಿಂದ ಎಲ್ಲೂಹೊರಹೋಗಲು ಸಾಧ್ಯವಾಗಿರಲ್ಲಿಲ್ಲ. ಶನಿವಾರಹಾಗೂ ಭಾನುವಾರ ರಜೆ ದಿನಗಳಲ್ಲಿ ಹಂಪಿಗೆ ಭೇಟಿ ನೀಡಿ ಸ್ಮಾರಕ ವೀಕ್ಷಣೆ ಮಾಡುವ ಅವಕಾಶ ಸಿಕ್ಕಿರುವುದು ಸಂತಸ ತಂದಿದೆ.
ಸುರೇಶ್‌, ಪ್ರವಾಸಿಗ, ದಾವಣಗೆರೆ

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ವ್ಯಾಪ್ತಿಯಹಂಪಿ, ಕಮಲಾಪುರ ಹಾಗೂ ವೆಂಕಟಾಪುರ ವ್ಯಾಪ್ತಿ ಗೆಒಳಪಡುವ ದೇವಾಲಯ ಹಾಗೂ ಸ್ಮಾರಕಗಳ ವೀಕ್ಷಣೆಗೆ ಆ.14ರಂದುಹೇರಿದ್ದ ನಿರ್ಬಂಧ ಗುರುವಾರ ತೆರವುಗೊಳಿಸಿ, ಪ್ರವಾಸಿಗರಿಗೆ ಮುಕ್ತ ಅವಕಾಶಕಲ್ಪಿಸಿದೆ.
ಪವನ್‌ ಕುಮಾರ್‌ಮಾಲಿಪಾಟಿ,
ಜಿಲ್ಲಾಧಿಕಾರಿಗಳು, ಬಳ್ಳಾರಿ ಮತ್ತು
ವಿಜಯನಗರ

ಕಳೆದ ಕೊರೊನಾ ಒಂದು ಮತ್ತು ಎರಡನೇ ಅಲೆ ಹೊಡೆತಕ್ಕೆ ಹಂಪಿ ಪ್ರವಾಸೋದ್ಯಮಕ್ಕೆ ತೀವ್ರ ಆರ್ಥಿಕ ಹೊಡೆತ ಬಿದ್ದಿತ್ತು. ಇದರ ನಡುವೆಯೂ ಕೊರೊನಾ ಮೂರನೇ ಅಲೆ ಭೀತಿಹಿನ್ನೆಲೆಯಲ್ಲಿಕಳೆದ ಹಂಪಿ ಭೇಟಿಗೆ ನಿಷೇಧಹೇರಲಾಗಿತ್ತು. ಇದರಿಂದಾಗಿ ಹೊಟೇಲ್‌, ರೆಸ್ಟೋರೆಂಟ್‌, ಸಣ್ಣ-ಪುಟ್ಟ ವ್ಯಾಪಾರ ವಹಿವಾಟಿಗೆಹಿನ್ನಡೆಯಾಗಿತ್ತು. ಇದೀಗ ಹಂಪಿಗೆ ಭೇಟಿಗೆ ಅವಕಾಶ ನೀಡಿದಹಿನ್ನೆಲೆಯಲ್ಲಿ ಸ್ವಲ್ಪ ಮಟ್ಟಿಗೆ ಅನುಕೂಲವಾಗಲಿದೆ.

ಅಂಬರೇಶ್‌ ವಾಲ್ಮೀಕಿ, ಗೈಡ್‌, ಕಮಲಾಪುರ

*ಪಿ.ಸತ್ಯನಾರಾಯಣ

ಟಾಪ್ ನ್ಯೂಸ್

ದೇಶಕ್ಕೆ ಲಸಿಕೆ; ಪಕ್ಷಕ್ಕೆ ಜ್ವರ 

ದೇಶಕ್ಕೆ ಲಸಿಕೆ; ಪಕ್ಷಕ್ಕೆ ಜ್ವರ 

ವಿದೇಶಿ ಮಕ್ಕಳ ದತ್ತು ಸ್ವೀಕಾರ ಇನ್ನು ಸುಲಭ?

ವಿದೇಶಿ ಮಕ್ಕಳ ದತ್ತು ಸ್ವೀಕಾರ ಇನ್ನು ಸುಲಭ?

ಫೋರ್ಡ್‌ ಉತ್ಪಾದನಾ ಘಟಕಗಳು ಎಂಜಿ ತೆಕ್ಕೆಗೆ?

ಫೋರ್ಡ್‌ ಉತ್ಪಾದನಾ ಘಟಕಗಳು ಎಂಜಿ ತೆಕ್ಕೆಗೆ?

ರಾಜ್ಯಸಭಾ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಅಂತಿಮ

ರಾಜ್ಯಸಭಾ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಅಂತಿಮ

gfjfytfyjt

ಬೆಳಗಾವಿ:  ಕೊಳವೆ ಬಾವಿಗೆ ಬಿದ್ದಿದ್ದ ಮಗು ಸಾವು

ವಿಶ್ವಸಂಸ್ಥೆಯ ಎಸ್‌ಡಿಜಿ ವಕೀಲರಾಗಿ ನೋಬೆಲ್‌ ಶಾಂತಿ ಪುರಸ್ಕೃತ ಕೈಲಾಶ್‌ ಸತ್ಯಾರ್ಥಿ ನೇಮಕ

ವಿಶ್ವಸಂಸ್ಥೆಯ ಎಸ್‌ಡಿಜಿ ವಕೀಲರಾಗಿ ನೋಬೆಲ್‌ ಶಾಂತಿ ಪುರಸ್ಕೃತ ಕೈಲಾಶ್‌ ಸತ್ಯಾರ್ಥಿ ನೇಮಕ

gfgrr

ತಾಂತ್ರಿಕ ದೋಷ : ರನ್‍ವೇನಲ್ಲೆ ನಿಂತ ಏರ್‌ ಇಂಡಿಯಾ ವಿಮಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೊಮ್ಮಾಯಿ ಸರ್ಕಾರ ಜನಪರ ಆಡಳಿತ ನಡೆಸುತ್ತಿದೆ : ಶಾಸಕ ಸೋಮಲಿಂಗಪ್ಪ

ಬೊಮ್ಮಾಯಿ ಸರ್ಕಾರ ಜನಪರ ಆಡಳಿತ ನಡೆಸುತ್ತಿದೆ : ಶಾಸಕ ಸೋಮಲಿಂಗಪ್ಪ

hampi news

ಐತಿಹಾಸಿಕ ಹಂಪಿಯಲ್ಲಿ ಶೌಚಗೃಹ ನಿರ್ಮಾಣಕ್ಕೂ ಗ್ರಹಣ!

ballari news

ವೈರಲ್‌ ಆಡಿಯೋದ ವ್ಯಕ್ತಿ ಮಾನಸಿಕ ಅಸ್ವಸ್ಥ!

ಸ್ವಂತ ಹಣದಿಂದ ಶೌಚಾಲಯ ದುರಸ್ತಿ

ಸ್ವಂತ ಹಣದಿಂದ ಶೌಚಾಲಯ ದುರಸ್ತಿ

incident held at ballari

ತುಂಗಭದ್ರಾ ಜಲಾಶಯದಿಂದ ಹೆಚ್ಚುವರಿ ನೀರು ನದಿಗೆ :ನದಿ ತೀರದ ಹಂಪಿ ಸ್ಮಾರಕಗಳು ಜಲಾವೃತ

MUST WATCH

udayavani youtube

ರೆಡ್ ಸಿಗ್ನಲ್ ಬೀಳುತ್ತಿದ್ದಂತೆ ನಡು ರಸ್ತೆಯಲ್ಲಿ ಡ್ಯಾನ್ಸ್ ಮಾಡಿದ ಮಾಡೆಲ್

udayavani youtube

ಕ್ಯಾಪ್ಟನ್ ಅಭಿಮನ್ಯು ಮೊಮ್ಮಗನ ಜೊತೆಗೆ ಸಿಹಿ ತಿನಿಸಿ ಶುಭ ಹಾರೈಸಿದ ಮೋದದೇವಿ ಒಡೆಯರ್

udayavani youtube

ಕಾಲ ಅಂದ್ರೇನು?

udayavani youtube

ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆ

udayavani youtube

ಸರ್ವೇ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ರೈತನ ಏಕಾಂಗಿ ಪ್ರತಿಭಟನೆ

ಹೊಸ ಸೇರ್ಪಡೆ

ದೇಶಕ್ಕೆ ಲಸಿಕೆ; ಪಕ್ಷಕ್ಕೆ ಜ್ವರ 

ದೇಶಕ್ಕೆ ಲಸಿಕೆ; ಪಕ್ಷಕ್ಕೆ ಜ್ವರ 

ವಿದೇಶಿ ಮಕ್ಕಳ ದತ್ತು ಸ್ವೀಕಾರ ಇನ್ನು ಸುಲಭ?

ವಿದೇಶಿ ಮಕ್ಕಳ ದತ್ತು ಸ್ವೀಕಾರ ಇನ್ನು ಸುಲಭ?

ಫೋರ್ಡ್‌ ಉತ್ಪಾದನಾ ಘಟಕಗಳು ಎಂಜಿ ತೆಕ್ಕೆಗೆ?

ಫೋರ್ಡ್‌ ಉತ್ಪಾದನಾ ಘಟಕಗಳು ಎಂಜಿ ತೆಕ್ಕೆಗೆ?

ರಾಜ್ಯಸಭಾ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಅಂತಿಮ

ರಾಜ್ಯಸಭಾ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಅಂತಿಮ

xfser4er4

ಪಾಕ್ ಪಿಎಂ ಈತನಿಗೆ ಗುಡ್ ಫ್ರೆಂಡ್|ಸಿಎಂ ಸ್ಥಾನಕ್ಕೆ ಸಿಧು ಆಯ್ಕೆಗೆ ನನ್ನ ವಿರೋಧ ಇದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.