ವಿಜೃಂಭಣೆಯ ತೇರು ಹನುಮಪ್ಪ ರಥೋತ್ಸವ
Team Udayavani, Mar 21, 2021, 9:03 PM IST
ಹೂವಿನಹಡಗಲಿ : ತೇರು ಹನುಮಪ್ಪ ಜಾತ್ರೆ ಪ್ರಯುಕ್ತ ವಿಜೃಂಭಣೆ ರಥೋತ್ಸವ ಜರುಗಿತು. ರಥೋತ್ಸವದ ನಿಮಿತ್ತವಾಗಿ ಪಟ್ಟಣದ ರಾಮಸ್ವಾಮಿ ರಾಕೇಶಯ್ಯ ಶ್ರೀರಾಮ ದೇವ ಹಾಗೂ ಆಂಜಿನೇಯನನ್ನು ತೇರು ಹನುಮಪ್ಪ ದೇವಸ್ಥಾನಕ್ಕೆ ಪಲ್ಲಕ್ಕಿಯಲ್ಲಿ ಕರೆ ತರಲಾಯಿತು.
ನಂತರದಲ್ಲಿ ರಥೋತ್ಸವದ ಸುತ್ತು ಮೂರು ಸುತ್ತು ಪ್ರದಕ್ಷಿಣೆ ಮಾಡಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥ ಮುಂದಕ್ಕೆ ಸಾಗುತ್ತಿದ್ದಂತೆ ಭಕ್ತರು ತೇರಿಗೆ ಉತ್ತತ್ತಿ ಹಾಗೂ ಬಾಳೆ ಹಣ್ಣನ್ನು ಸಮರ್ಪಿಸಿದರು.
ರಥೋತ್ಸವದಲ್ಲಿ ಶ್ರೀರಾಮಸ್ವಾಮಿ ರಾಕೇಶಯ್ಯನವರು, ಸ್ಥಳೀಯ ಗವಿಮಠದ ಶ್ರೀಗಳಾದ ಡಾ| ಹಿರಿಶಾಂತ ವೀರ ಮಹಾಸ್ವಾಮೀಜಿ, ಹರ ಗುರು ಚರ ಮೂರ್ತಿಗಳು, ಕ್ಷೇತ್ರದ ಶಾಸಕ ಪಿ.ಟಿ.ಪರಮೇಶ್ವರನಾಯ್ಕ, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಟಿ. ಭರತ್ ,ಪುರಸಭೆ ಅಧ್ಯಕ್ಷ ವಾರದ ಗೌಸುಮೊಹದ್ದಿನ್, ದೇವಸ್ಥಾನ ಕಮಿಟಿ ಅಧ್ಯಕ್ಷ ಆಟವಾಳಗಿ ಕೊಟ್ರೇಶ್.ಕೆ.ಗೋಣೆಪ್ಪ ಒಳಗೊಂಡಂತೆ ದೇವಸ್ಥಾನ ಕಮಿಟಿ ಸರ್ವಸದಸ್ಯರು ಹಾಗೂ ಅನೇಕರಿದ್ದರು.