ಸತತ ಮಳೆಗೆ ತತ್ತರಿಸಿದ ಬಳ್ಳಾರಿ ಜನತೆ

Team Udayavani, Oct 28, 2019, 10:42 AM IST

ಬಳ್ಳಾರಿ: ದೀಪಾವಳಿ ಹಬ್ಬದ ಅಮವಾಸ್ಯೆ ದಿನವಾದ ಸೋಮವಾರ ಬೆಳಗಿನಜಾವ ಸತತವಾಗಿ ಸುರಿದ ‌ಮಹಾಮಳೆಗೆ ಗಣಿನಾಡು ಬಳ್ಳಾರಿ ಜಿಲ್ಲೆ ತತ್ತರಿಸಿದೆ.

ಬಳ್ಲಾರಿ ತಾಲೂಕಿನ‌ ಸಂಜೀವರಾಯನಕೊಪಟೆ, ಇಬ್ರಾಹಿಂಪುರ ಬಹುತೇಕ ಗ್ರಾಮಗಳು ಮಳೆ ನೀರಿನಿಂದ ಜಲಾವೃತಗೊಂಡಿವೆ. ಸಂಜೀವರಾಯನಕೊಪಟೆ ಗ್ರಾಮದಿಂದ‌ ಸಮೀಪದ ಚರಕುಂಟೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮೇಲ್ಸೆತುವೆ ಸಂಪೂರ್ಣವಾಗಿ ಜಲಾವೃತಗೊಂಡಿದೆ.

ರಸ್ತೆಯುದ್ಧಕ್ಕೂ ಇರುವ ವಿದ್ಯುತ್ ಕಂಬಗಳು ಮಳೆಯ ಅಬ್ಬರದಿಂದ ಒಂದು ಕಡೆ ವಾಲಿವೆ. ಮಳೆಯ ನೀರಿನಿಂದ ಕಂಬಗಳು ಯಾವ ಸಂದರ್ಭದಲ್ಲಾದ್ರೂ ಧರೆಗೆ ಉರುಳುವ ಸಾಧ್ಯತೆ ಹೆಚ್ಚಿದೆ. ಇನ್ನು ಚರಕುಂಟೆ ಗ್ರಾಮಸ್ಥರು ಅತ್ತ ದೀಪಾವಳಿ ಹಬ್ಬದ ಆಚರಣೆಗೂ ಸಿದ್ಧರಾಗದೇ, ಕೃಷಿ ವಟುವಟಿಕೆಯಲ್ಲಿ ತಟಸ್ಥರಾಗಿದ್ದಾರೆ.

ಅಲ್ಲದೇ, ಇಬ್ರಾಹಿಂಪುರ ಗ್ರಾಮದಲ್ಲಂತೂ ಈ ಮಹಾಮಳೆಯ ನೀರಿನಿಂದ ಇಡೀ ಗ್ರಾಮವೆಲ್ಲ ಜಲಾವೃತಗೊಂಡಿದೆ. ಗ್ರಾಮದ  ರಾಜ ಬೀದಿ ಹಾಗೂ ಪ್ರಮುಖ ರಸ್ತೆಯೆಲ್ಲೆಲ್ಲಾ ನೀರು ನುಗ್ಗಿದೆ. ಅದರಿಂದ ಗ್ರಾಮಸ್ಥರಿಗೆ ದೀಪಾವಳಿ ಹಬ್ಬವನ್ನು ಈ‌ ಮಳೆಯ ನೀರಿನಲ್ಲೇ ಕಳೆಯುವಂತಾಗಿದೆ.

ಈ ವಿಭಾಗದಿಂದ ಇನ್ನಷ್ಟು

  • ಹೊಸಪೇಟೆ: ಮಾನವನ ದುರಾಸೆಗೆ ಮೈ-ಮನ ಮಾತ್ರ ಕಲುಷಿತಗೊಂಡಿಲ್ಲ. ನಮ್ಮ ಸುತ್ತಮುತ್ತಲಿನ ಪರಿಸರವೂ ಕೂಡ ಕಲುಷಿತಗೊಳ್ಳುತ್ತಿದೆ ಎಂದು ಹಂಪಿ ವಿದ್ಯಾರಣ್ಯ ಪೀಠಾಧ್ಯಕ್ಷ...

  • ದಾವಣಗೆರೆ: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಪ್ಲಾಸ್ಟಿಕ್‌ ನಿಷೇಧದ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಪದ್ಮಾ...

  • ಬಳ್ಳಾರಿ: ದೇಶದಲ್ಲಿ ಹಿಂದೂ ಧರ್ಮಕ್ಕೆ ಸಂಬಂಧಿಸಿದ ಎಲ್ಲ ವಿಚಾರಗಳನ್ನು ನಾಶ ಮಾಡಲು ಎಲ್ಲ ರೀತಿಯ ಪ್ರಯತ್ನಗಳು ನಡೆಯುತ್ತಿವೆ ಎಂದು ಹಿಂದೂ ಜಾಗರಣ ವೇದಿಕೆಯ...

  • ಕೂಡ್ಲಿಗಿ: ಹ್ಯಾಳ್ಯಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಜಮೀನು ಬದು ನಿರ್ಮಾಣ ಕಾಮಗಾರಿ ಜೆಸಿಬಿಯಿಂದ ನಡೆದಿದೆ ಹಾಗೂ ಖಾಸಗಿ ಬಡಾವಣೆಗಳಿಗೆ ಶೇ. 78 ನಿವೇಶನಗಳನ್ನು...

  • ವೆಂಕೋಬಿ ಸಂಗನಕಲ್ಲು ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳಲ್ಲಿ ಪೈಪೋಟಿ ಏರ್ಪಟ್ಟಿದ್ದು, ಹಾಲಿ ಜಿಲ್ಲಾಧ್ಯಕ್ಷ...

ಹೊಸ ಸೇರ್ಪಡೆ