ಕೆರೆ ಭರ್ತಿಗಾಗಿ ಒತ್ತಾಯಿಸಿ ಹೆದ್ದಾರಿ ಬಂದ್‌

Team Udayavani, Jan 22, 2020, 2:54 PM IST

ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯದಿಂದ ಕಾರ್ಖಾನೆ ನೀರು ಪಡೆಯುತ್ತಿರುವ ಜೆಎಸ್‌ಡಬ್ಲ್ಯೂ ಸಂಸ್ಥೆ, ಜನ-ಜಾನುವಾರುಗಳ ಕುಡಿಯುವ ನೀರಿಗಾಗಿ ಬೈಲುವದ್ದಿಗೇರಿ ಗ್ರಾಮದ ಕೆರೆ ಭರ್ತಿ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಮಂಗಳವಾರ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಗ್ರಾಮದ ಕೆರೆ ಪಕ್ಕದಲ್ಲಿ ಜಮಾವಣೆಗೊಂಡ ಪ್ರತಿಭಟನೆ ನಡೆಸಿದ ಪ್ರತಿಭಟನಕಾರರು, ತಮ್ಮೆಲ್ಲ ದನ-ಕರು-ಕುರಿ-ಮೇಕೆಗಳನ್ನು ರಸ್ತೆಯಲ್ಲಿ ಬಿಟ್ಟು, ಪ್ರತಿಭಟನೆ ನಡೆಸಿದರು. ಬೈಲುವದ್ದಿಗೇರಿ ಕೆರೆ ಪುರಾತನ ಕಾಲದಲ್ಲಿ ನಿರ್ಮಿಸಿರುವುದು. ಸಾರ್ವಜನಿಕರ ಕುಡಿಯುವ ನೀರಿನ ಸಲುವಾಗಿ ಹಾಗೂ ಜಾನುವಾರುಗಳಿಗಾಗಿ 35 ಎಕರೆಯಲ್ಲಿ ಕೆರೆ ನಿರ್ಮಿಸಲಾಗಿದೆ. ಮಳೆ ಅಭಾವದಿಂದ ಕೆರೆ ಬತ್ತಿ ಹೋಗಿದೆ. ಹಾಗಾಗಿ ಜಿಂದಾಲ್‌ ಸಂಸ್ಥೆಯ ನೀರಿನ ಪೈಪ್‌ ಲೈನ್‌ ಗ್ರಾಮದಿಂದ ಹಾದು ಹೋಗಿದೆ. ಆ ಪೈಪ್‌ಲೈನ್‌ನಿಂದ ವರ್ಷಕ್ಕೆ ಎರಡು ಬಾರಿ ಕೆರೆ ಭರ್ತಿ ಮಾಡಿಸಬೇಕು ಎಂದು ಆಗ್ರಹಿಸಿದರು.

ಬೇಸಿಗೆ ಕಾಲದಲ್ಲಿ ಜನರು ನೀರಿಗಾಗಿ ತತ್ತರಿಸಿ ಹೋಗಿದ್ದಾರೆ. ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜವಾಗಿಲ್ಲ. ಒಂದು ವೇಳೆ ಬೇಡಿಕೆ ಈಡೇರದಿದ್ದರೇ ಪೈಪ್‌ಲೈನ್‌ನಿಂದ ಸ್ವತಃ ತಾವೇ ಕೆರೆಗೆ ನೀರು ಹರಿಸಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಮುಖಂಡರಾದ ಬೈಲವದ್ದಗೇರಿ ಫ‌ಣೀಂದ್ರಗೌಡ, ಅಪ್ಪಣಹಳ್ಳಿ ಗಂಗಾಧರಪ್ಪ, ಹನುವಾಳ ವಿಶ್ವನಾಥ, ಬಸವರಾಜ, ಯತ್ನಟ್ಟಿ ಯಂಕಪ್ಪ, ಕಪಗಲ್ಲ ವೀರೇಶಪ್ಪ, ಮೂಲಿಮನಿ ಗೋವಿಂದ ರೆಡ್ಡಿ, ಕೋರಿ ಫ‌ಕೀರಪ್ಪ, ಮೂಕಪ್ಪ, ಕಾಕುಬಾಳ ಜಡಿಯಪ್ಪ, ಒಳಚಿ ಜಡಿಯಪ್ಪ, ಹೊನ್ನೂರಪ್ಪ ಇನ್ನಿತರರಿದ್ದರು. ಬೈಲುವದ್ದಗೇರಿ, ಧರ್ಮಸಾಗರ, ಗುಂಡ್ಲವದ್ದಗೇರಿ ಹಾಗೂ ಕಾಕುಬಾಳು ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ