ವಾಹನ ಸವಾರರಿಗೆ ಹೆದ್ದಾರಿ ಧೂಳಿನ ಅಭಿಷೇಕ!


Team Udayavani, Mar 30, 2019, 5:17 PM IST

bell-1

ಹೊಸಪೇಟೆ: ನಗರದ ಹೊರ ವಲಯದ ರಾಯರ ಕೆರೆಯ ಮೇಲೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಧೂಳ್‌ ಆವರಿಸಿ ವಾಹನ ಚಾಲಕರು ಮತ್ತು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.

ಸುಡು ಬಿಸಲು ಒಂದೆಡೆ, ಮತ್ತೂಂದೆಡೆ ಆಕಾಶದೆತ್ತರಕ್ಕೆ ಹಾರುವ ಧೂಳು ಪ್ರಯಾಣಿಕರ ವಾಹನ ಸವಾರರ ಸುಗಮ ಸಂಚಾ ರಕ್ಕೆ ಅಡ್ಡಿಯಾಗಿದ್ದು, ಹಲವು ರೋಗ-ರುಜಿ ನಗಳಿಗೆ ಆಹ್ವಾನ ನೀಡಿದೆ.

ಆಮೆಗತಿಯಲ್ಲಿ ಸಾಗಿದ ಕಾಮಗಾರಿ: ಹರಿಹರ ಹಾಗೂ ಸಂಡೂರು ರಸ್ತೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಅಪೂರ್ಣಗೊಂಡ ಕಾಮಗಾರಿಯಿಂದ ಗಣಿ ಧೂಳು ಕೇವಲ ವಾಹನ ಸವಾರರನ್ನು ಮಾತ್ರವಲ್ಲದೆ, ಪಕ್ಕದಲ್ಲಿ ಇರುವ ಶಾಲಾ-ಕಾಲೇಜು ವಿದ್ಯಾರ್ಥಿಗಳ, ಕೃಷಿಕರ ಜೀವ ಹಿಂಡುತ್ತಿದೆ.

ಕಳೆದ ಮೂರು ವರ್ಷದಿಂದ ಆಮೆಗತಿಯಲ್ಲಿ ನಡೆಯುತ್ತಿರುವ ಹೆದ್ದಾರಿ ನಿರ್ಮಾಣ ಕಾಮಗಾರಿ ಇಲ್ಲಿಯವರೆಗೂ ಪೂರ್ಣಗೊಳ್ಳದೆ, ಬರೀ ಧೂಳು ಹರಡುತ್ತಿದೆ.

ನಗರ ಪ್ರದೇಶಕ್ಕೆ ಧೂಳಿನ ಅಭಿಷೇಕ: ಕಾಮ ಗಾರಿ ಕೈಗೆತ್ತಿ ಕೊಂಡಿರುವ ಏಜನ್ಸಿ ಯ ವರು ಕನಿಷ್ಠ ಪಕ್ಷ ಧೂಳು ಹರಡದಂತೆ ರಸ್ತೆಗೆ ನೀರು ಸಿಂಪಡಿಸಲು ಮುಂದಾಗದಿರುವುದು ಸಾರ್ವಜನಿಕರ ಆಕ್ರೋ ಶಕ್ಕೆ ಕಾರ ಣ ವಾ ಗಿ ದೆ. ಹರಿಹರ ರಸ್ತೆಯಲ್ಲಿ ನ್ಯಾಷನಲ್‌ ಶಾಲೆ, ಕಾಲೇಜು ಹಾಗೂ ಟ್ರಾಫಿಕ್‌ ಪೊಲೀಸ್‌ ಠಾಣೆ ಹಾಗೂ ನೂರಾರು ಎಕರೆ ಕೃಷಿ ಭೂಮಿ ಇದೆ. ಮತ್ತು ಸಂಡೂರು ಬೈಪಾಸ್‌ ಬಳಿಯಲ್ಲಿ ಖಾಸಗಿ ಶಾಲೆಗಳು, ಜನವಸತಿ ಪ್ರದೇಶವಿದೆ. ಈ ಎರಡು ಮಾರ್ಗಗಳಿಗೆ ಅಂಡರ್‌ ಪಾಸ್‌ ಬ್ರಿಡ್ಜ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಇಲ್ಲಿಯವರೆಗೂ ಯಾವುದೇ ಪೂರ್ವ ತಯಾರಿ ನಡೆಸಿಲ್ಲ. ಇದರಿಂದ ವಿಪರೀತ ಮೈನಿಂಗ್‌ ಧೂಳು ನೇರ ನಗರಕ್ಕೆ ನುಗ್ಗುತ್ತಿದೆ.

ಕೃಷಿ ಜಮೀನಿಗೆ ತೆರಳಲು ಹರಸಾಹಸ: ಕಣವಿ ವೀರಭದ್ರೇಶ್ವರಕ್ಕೆ ಹೋಗುವ ಮಾರ್ಗದಲ್ಲಿ ಮೊದಲು ವಿರೂಪಾಕ್ಷ ನಾಯಕ ವೃತ್ತ ಇತ್ತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಳೆದ ವರ್ಷ ಅದನ್ನು ತೆರವುಗೊಳಿಸಿ ಅಂಡರ್‌ ಬ್ರಿಡ್ಜ್ ನಿರ್ಮಿಸುವ ಕಾಮಗಾರಿ ಕೈಗೆತ್ತಿಗೊಂಡಿತ್ತು. ಆದರೆ ಅದು ಕೂಡ ಅಪೂರ್ಣಗೊಂಡಿದ್ದು, ಗಣಿ ಅದಿರು ಸಾಗಣೆ ಮತ್ತು ಭಾರೀ ವಾಹನಗಳು ಮಾರ್ಗದಲ್ಲಿ ಸಂಚಾರ ಮಾಡಲು ಹರಸಹಾಸ ಪಡುವಂತಾಗಿದೆ. ಅಲ್ಲದೆ, ರಸ್ತೆಯ ಮೊಣಕಾಲುದ್ದ ತೆಗ್ಗು ಗುಂಡಿಗಳಿಂದ ರೈತರು ತಮ್ಮ ಕೃಷಿ ಜಮೀನುಗಳಿಗೆ ತೆರಳುವುದು ಕಷ್ಟಕರವಾಗಿದೆ.

ಧೂಳಿನಿಂದಾಗಿ ಟ್ರಾಫಿಕ್‌ ಪೊಲೀಸ್‌ ಠಾಣೆ ಸ್ಥಳಾಂತರ: ಅಂಡರ್‌ ಬ್ರಿಡ್ಜ್ ನಿರ್ಮಾಣ ಮಾಡುವ ಸಮೀಪದಲ್ಲಿ ಟ್ರಾಫಿಕ್‌ ಪೊಲೀಸ್‌ ಠಾಣೆ ಇದೆಯಾದರೂ, ವಿಪರೀತ ಧೂಳಿನ ಪರಿ ಣಾ ಮಕ್ಕೆ ಠಾಣೆಯನ್ನೇ ಬೇರೆಡೆ ಸ್ಥಳಾಂತರಿಸಿದ್ದಾರೆ. ಸಿಪಿಐ ಒಂದೆಡೆಯಾದರೆ, ಪಿಎಸ್‌ಐ ಇನ್ನೊಂದೆಡೆ ಇದ್ದಾರೆ. ಇದರಿಂದಾಗಿ ಠಾಣೆಗೆ ಬರುವ ಸಾರ್ವಜನಿಕರಿಗೂ ಕಿರಿಕಿರಿಯಾಗಿದೆ.

ಶಾಲೆ ಮಕ್ಕಳು ಪಾಠ ಕೇಳುವಂತಿಲ್ಲ: ಇನ್ನೂ ಶಾಲೆಗಳಲ್ಲಿ ಮಕ್ಕಳು ಪಾಠ ಕೇಳುವಂತಿಲ್ಲ. ಅಷ್ಟೋಂದು ಧೂಳು ಆವರಿಸಿರುತ್ತದೆ. ಮತ್ತು ಕೃಷಿ ಜಮೀನುಗಳ ಬೆಳೆಗಳಿಗೆ ಧೂಳ್‌ ಇದ್ದು ಬೆಳೆ ನಶಿಸಿ ಹೋಗುತ್ತಿವೆ. ಈಗಾಗಲೆ ಗಣಿ ಧೂಳಿನಿಂದ ನಗರದ ವಾಸಿಗಳಿಗೆ ದಮ್ಮು, ಕೆಮ್ಮು ಅಸ್ತಮ, ಸಂದಿವಾತ ಸೇರಿ ಹಲವು ಖಾಯಿಲೆಗಳು ಕಾಣಿಸಿಕೊಂಡಿವೆ. ಇನ್ನು ಬಳ್ಳಾರಿಗೆ ತೆರಳುವ ಬೈಪಾಸ್‌ನಲ್ಲಿ ಪಾದಾಚಾರಿಗಳು ಹೋಗುವಂತಿಲ್ಲ.

ಅಷ್ಟೊಂದು ವಾಯು ಮಾಲಿನ್ಯ ಉಂಟಾಗಿದೆ. ಅಲ್ಲದೆ, ಈಗಾಗಿರುವ ಸಿಸಿ ರಸ್ತೆ ಕಾಮಗಾರಿ ಸಹ ಕಳಪೆಯಾಗಿದ್ದು, ಅರ್ಧಂಬರ್ಧ ಕಾಮಗಾರಿಯಲ್ಲೇ ಸಿಸಿ ರಸ್ತೆ ಕಿತ್ತು ಹೋಗಿದೆ. ಇದರಿಂದಾಗಿ ಬೈಕ್‌ ಹಾಗೂ ವಾಹನ ಸವಾರರು ಸಂಕಷ್ಟ ಎದುರಿಸಬೇಕಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ
ಗ್ಯಾಮನ್‌ ಇಂಡಿಯಾ ಕಂಪನಿಯ ನಿರ್ಲಕ್ಷ್ಯಧೋರ ಣೆಯಿಂದಾಗಿ ವಾಹನ ಸವಾರರು, ಸಾರ್ವಜನಿಕರು, ಕೃಷಿಕರು ಪ್ರತಿನಿತ್ಯ ಕಿರಿಕಿರಿ ಅನುಭವಿಸಬೇಕಾಗಿದೆ.

ಗ್ಯಾಮನ್‌ ಇಂಡಿಯಾ ಕಂಪನಿ ರಸ್ತೆ ಅಭಿವೃದ್ಧಿ ಪಡಿಸುವ ಕೆಲಸ ಮಾಡುತ್ತಿಲ್ಲ. ಬದಲಿಗೆ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿ ಆಯುಷ್ಯವನ್ನು ಕಸಿದುಕೊಳ್ಳುತ್ತಿದೆ. ಈ ಧೂಳಿನಿಂದ ಈಗಾಗಲೇ ಕೃಷಿ ಭೂಮಿಗಳಲ್ಲಿ ಬೆಳೆ ಹಾಳಾಗಿವೆ. ಮತ್ತು ಶಾಲಾ ವಿದ್ಯಾರ್ಥಿಗಳು ನೆಮ್ಮದಿಯಿಂದ ಪಾಠ ಕೇಳುತ್ತಿಲ್ಲ. ಕೂಡಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಬ್ರಿಡ್ಜ್ ನಿರ್ಮಾಣದ ಪ್ರದೇಶಗಳಿಗೆ ಭೇಟಿ ನೀಡಿ ಧೂಳು ಮುಕ್ತ ರಸ್ತೆಗಳಾನ್ನಾಗಿ ಮಾಡಬೇಕು.
ಪೂಜಾರ್‌ ವೆಂಕೋಬ ನಾಯಕ, ಕೃಷಿಕ.

ರಸ್ತೆ ಅಭಿವೃದ್ಧಿ ಹೆಸರಲ್ಲಿ ವಿದ್ಯಾರ್ಥಿಗಳ ಜೀವನದಲ್ಲಿ ಪ್ರಾಧಿಕಾರ ಹಾಗೂ ಗ್ಯಾಮನ್‌ ಇಂಡಿಯಾ ಕಂಪನಿಯವರು ಚೆಲ್ಲಾಟ ಆಡುತ್ತಿದ್ದಾರೆ. ಗಣಿಧೂಳಿಗೆ ಶಾಲೆಗೆ ಬರುವುದಕ್ಕೆ ಬೇಸರವಾಗಿದೆ. ಧೂಳು ಎದ್ದೇಳದಂತೆ ಕನಿಷ್ಠ ರಸ್ತೆಗೆ ನೀರನ್ನು ಸಹ ಹಾಕುವುದಿಲ್ಲ. ಪ್ರಾಧಿಕಾರದವರು ಇದೇ ರೀತಿ ನಿರ್ಲಕ್ಷ್ಯ ಮಾಡಿದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆಯಬೇಕಾಗುತ್ತದೆ.
ಎ.ಎನ್‌.ದೀಪಾಶ್ರೀ, ಶಿವಚಂದ್ರ ತೇಜಸ್ವಿ. ವಿದ್ಯಾರ್ಥಿಗಳು, ನ್ಯಾಷನಲ್‌ ಶಾಲೆ.

ಪಿ.ಸತ್ಯನಾರಾಯಣ

ಟಾಪ್ ನ್ಯೂಸ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Neha Hiremath Case; Protest by BJP-JDS-ABVP across the state

Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್

Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್

Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್‌

Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್‌

ವಿಜಯೇಂದ್ರ

Bellary; ಕಾಂಗ್ರೆಸ್ ಏನೇ ಹಾರಾಟ ಮಾಡಿದರೂ ನಮಗೆ ಲಾಭ ಆಗುತ್ತದೆ: ವಿಜಯೇಂದ್ರ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.