ಕಮಲಾಪುರದಲ್ಲಿ ಕೋವಿಡ್-19 ಜಾಗೃತಿ
Team Udayavani, Apr 24, 2020, 5:57 PM IST
ಹೊಸಪೇಟೆ: ಕಮಲಾಪುರದಲ್ಲಿ ಕೋವಿಡ್-19 ಜಾಗೃತಿ ಅಭಿಯಾನ ನಡೆಯಿತು.
ಹೊಸಪೇಟೆ: ಕೋವಿಡ್ ವೈರಸ್ ಹೆಮ್ಮಾರಿಯನ್ನು ಹೊಡೆದೊಡಿಸಲು ಸಾಮಾಜಿಕ ಅಂತರ ಒಂದೇ ಮದ್ದಾಗಿದ್ದು, ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸರಕಾರದ ನಿಯಮಗಳನ್ನು ಪಾಲನೆ ಮಾಡಬೇಕೆಂದು ಕಮಲಾಪುರ ಪೊಲೀಸ್ ಠಾಣೆಯ ಪಿಎಸ್‌ಐ ಶಶಿಧರ್ ವೈ. ಸಲಹೆ ನೀಡಿದರು.
ತಾಲೂಕಿನ ಕಮಲಾಪುರ ಪಟ್ಟಣ ಪಂಚಾಯಿತಿ, ಆರೋಗ್ಯ ಇಲಾಖೆ ಸಿಬ್ಬಂದಿ ಗುರುವಾರ ಆಯೋಜಿಸಿದ್ದ ಕೋವಿಡ್ -19 ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದರು. ಕೋವಿಡ್ ವೈರಸ್ ವಿರುದ್ಧ ಆರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸರು, ಪತ್ರಕರ್ತರು , ಕಂದಾಯ ಇಲಾಖೆ ಸಿಬ್ಬಂದಿ ಸಾಕಷ್ಟು ಶ್ರಮ ಪಡುತ್ತಿದ್ದಾರೆ. ಜನರ ಆರೋಗ್ಯದ ಹಿತದೃಷ್ಟಿಯಿಂದ ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ನಿಮ್ಮ ಕುಟುಂಬಗಳಿಗಾಗಿ, ನಾವು ದುಡಿಯುತ್ತಿದ್ದೇವೆ. ನಮಗಾಗಿ, ನಿಮಗಾಗಿ ದಯಮಾಡಿ ಮನೆಯಲ್ಲೇ ಇರಿ, ಲಾಕ್ ಡೌನ್ ಪಾಲನೆ ಮಾಡಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ಪಟ್ಟಣ ಮುಖ್ಯಾಧಿಕಾರಿ ನಾಗೇಶ್, ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಭಾಗಿಯಾಗಿದ್ದರು.