ಐತಿಹಾಸಿಕ ಮೈಲಾರ ಜಾತ್ರೆಗೆ ಅದ್ಧೂರಿ ತೆರೆ


Team Udayavani, Feb 25, 2019, 6:46 AM IST

dvg-6.jpg

ಹೂವಿನಹಡಗಲಿ: ನಾಡಿನ ಸುಪ್ರಸಿದ್ಧ ಮೈಲಾರ ಜಾತ್ರೆಗೆ ಅದ್ಧೂರಿ ತೆರೆ ಬಿತ್ತು. ಜಾತ್ರೆಗೆ ಬಂದಿದ್ದ ಲಕ್ಷಾಂತರ ಭಕ್ತರಿಗೆ ಜಿಲ್ಲಾಡಳಿತ ಕಳೆದ ವಾರದಿಂದಲೂ ಸಕಲ ಸಿದ್ಧತೆ ಕೈಗೊಂಡಿದ್ದು, ಬಂದಂತಹ ಭಕ್ತಾದಿಗಳಿಗೆ ಇದನ್ನೆಲ್ಲ ತಲುಪಿಸುವಲ್ಲಿ ಯಶಸ್ವಿಯಾಯಿತು.

ಭಕ್ತರಿಗೆ ಕುಡಿಯುವ ನೀರಿಗಾಗಿ 20 ಕಡೆಯಲ್ಲಿ ವ್ಯವಸ್ಥೆ ಮಾಡಲಾಗಿದ್ದು, 7 ಹ್ಯಾಂಡ್‌ಪಂಪ್‌ಗ್ಳು ಅಲ್ಲದೆ ಜಾತ್ರೆಯಲ್ಲಿ ಬೀಡು ಬಿಟ್ಟಿದ್ದ ಭಕ್ತಾದಿಗಳ ಸವಾರಿ ಬಂಡಿಯ ಸಮೀಪದಲ್ಲಿ ಸಾಕಾಗುವಷ್ಟು ನೀರು ಒದಗಿಸುವ ವ್ಯವಸ್ಥೆ ಮಾಡಲಾಗಿದೆ.

ಇನ್ನು ಜಾತ್ರೆಯ ಪ್ರದೇಶದ ತುಂಬೆಲ್ಲಾ ವಿದ್ಯುತ್‌ ವ್ಯವಸ್ಥೆ ಕೈಗೊಳ್ಳಲಾಗಿದ್ದು, ಜೆಸ್ಕಾಂ ಮೊದಲೆ ತಯಾರು ಮಾಡಿಕೊಂಡಿದ್ದ ಕ್ರಿಯಾ ಯೋಜನೆಯಂತೆ, ಕಾರ್ಣಿಕದ ಸ್ಥಳ ಡೆಂಕನ ಮರಡಿ, ಜಾತ್ರಾ ಪ್ರದೇಶ ಒಳಗೊಂಡಂತೆ ಒಟ್ಟು 140 ವಿದ್ಯುತ್‌ ಕಂಬ ಹಾಕಲಾಗಿದ್ದು, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯವರು ಕೊರೆಯಿಸಲಾಗಿದ್ದ ಹಾಗೂ ನೂತನವಾಗಿ ಅಳವಡಿಸಲಾಗಿದ್ದ ಸಿಸ್ಟನಗಳಿಗೆ ಯಾವುದೇ ತೊಂದರೆಯಾಗದಂತೆ ವಿದ್ಯುತ್‌ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಗ್ರಾಪಂನಿಂದಾಗಿ 2.50 ಲಕ್ಷ ಹಾಗೂ ದೇವಸ್ಥಾನ ಕಮಿಟಿಯಿಂದಾಗಿ 2.50 ಲಕ್ಷ ರೂ.ಗಳನ್ನು ಜೆಸ್ಕಾಂ ಇಲಾಖೆಗೆ ಪಾವತಿ ಮಾಡಲಾಗಿದ್ದು, ಒಟ್ಟಾರೆ ಸುಮಾರು 25 ಜನ ಸಿಬ್ಬಂದಿ ಹಗಲಿರುಳು ಕಾರ್ಯ ಮಾಡಿ ಯಾವುದೇ ಒಂದು ಸಣ್ಣ ತೊಂದರೆಯಾಗದಂತೆ ನೋಡಿಕೊಂಡಿರುವುದು ಶ್ಲಾಘನೀಯ. 

ಇನ್ನೂ ಸ್ವತ್ಛತೆ ಕಡೆಗೂ ಸಹ ಅಷ್ಟೇ ಗಮನ ಹರಿಸಲಾಗಿದ್ದು, ಗ್ರಾಪಂ ಅಧಿಕಾರಿಗಳು ಜಾತ್ರಾ ಸ್ಥಳದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಶೌಚಾಲಯ ನಿರ್ಮಾಣ ಒಳಗೊಂಡಂತೆ ದೇವಸ್ಥಾನದಲ್ಲಿ ಪ್ರತಿ ಗಂಟೆಗೊಮ್ಮೆ ಕಸ ಗುಡಿಸುವ ಮೂಲಕವಾಗಿ ಸ್ವತ್ಛತೆ ಕಡೆಗೂ ಹೆಚ್ಚಿನ ಗಮನಹರಿಸಲಾಗಿತ್ತು. 

ಇನ್ನೂ ಜಾತ್ರೆಯಲ್ಲಿ ಜನ, ಜಾನುವಾರುಗಳ ಆರೋಗ್ಯದ ಕಡೆಗೂ ಸಹ ಹೆಚ್ಚಿನ ಗಮನ ನೀಡಲಾಗಿದೆ. ಜಾತ್ರೆಯ 4 ಕಡೆಯಲ್ಲಿ ಆಸ್ಪತ್ರೆ ಪ್ರಾರಂಭ ಮಾಡಲಾಗಿದ್ದು, ಸುಮಾರು 25 ಜನ ವೈದ್ಯರ ತಂಡ ಒಳಗೊಂಡಂತೆ ಇತರೆ ಸಿಬ್ಬಂದಿ ಸಹ ಭಕ್ತರ ಆರೋಗ್ಯ ಕುರಿತು ಕಾಳಜಿ ವಹಿಸಿದ್ದರು.

ಇನ್ನೂ ಈ ಬಾರಿ ವಿಶೇಷವಾಗಿದ್ದು, ಕಾರ್ಣಿಕದ ಗೊರವಯ್ಯ ಕಾರ್ಣಿಕ ನುಡಿ ಹೇಳಲು ವಿಶೇಷ ಭದ್ರತೆ ಒದಗಿಸಿ ಯಾವುದೇ ರೀತಿಯಲ್ಲಿ ಗೊಂದಲವಾಗದಂತೆ ಅಧುನಿಕವಾದ ಧ್ವನಿ ಪರಿಕರ ಅಳವಡಿಸಲಾಗಿತ್ತು. ಜಿಲ್ಲಾಧಿಕಾರಿ ಡಾ.ರಾಮ್‌ ಪ್ರಸಾತ್‌, ಸಿಇಒ ಕೆ. ನಿತೀಶ್‌, ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಮಹೇಶ್‌, ತಹಶೀಲ್ದಾರ್‌ ಕೆ.ರಾಘವೇಂದ್ರರಾವ್‌, ಇಒಯು.ಎಚ್‌. ಸೋಮಶೇಖರ್‌ ಸೇರಿದಂತೆ ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳ ಸಹಕಾರದಿಂದಾಗಿ ಈ ವರ್ಷದ ಮೈಲಾರ ಜಾತ್ರೆ ಪ್ರತಿ ವರ್ಷದ ಜಾತ್ರೆಗಿಂತಲೂ ಕೆಲವೊಂದು ವಿಶೇಷತೆಗೆ ಸಾಕ್ಷಿಯಾಗಿತ್ತು.

ಟಾಪ್ ನ್ಯೂಸ್

ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ : 500ಗ್ರಾಂ ಗಾಂಜಾ ವಶ, ಒಬ್ಬನ ಬಂಧನ

ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ : 500 ಗ್ರಾಂ. ಗಾಂಜಾ ವಶ, ಓರ್ವನ ಬಂಧನ

1-ewrwe

ವಿದ್ಯಾರ್ಥಿಗಳೊಂದಿಗೆ ಕುಳಿತು ಬಿಸಿಯೂಟ ಸವಿದ ಆಹಾರ ನಿಗಮದ ಅಧ್ಯಕ್ಷ ನಡಹಳ್ಳಿ

ಕನ್ನಡದಲ್ಲೇ ಸಹಿ ಸಂಪೂರ್ಣ ಜಾರಿಗೆ ಬಂದರೆ ಸ್ವಾಗತಾರ್ಹ : ಶ್ರೀನಿವಾಸ ಮೂರ್ತಿ ಕುಲಕರ್ಣಿ

ಕನ್ನಡದಲ್ಲೇ ಸಹಿ ಸಂಪೂರ್ಣ ಜಾರಿಗೆ ಬಂದರೆ ಸ್ವಾಗತಾರ್ಹ : ಶ್ರೀನಿವಾಸ ಮೂರ್ತಿ ಕುಲಕರ್ಣಿ

1-rrr

ಕೈಗಾರಿಕೆಗಳಿಗೆ ಭೂಮಿ ನೀಡಲು ಶೀಘ್ರದಲ್ಲೇ ಹೊಸ ನೀತಿ: ಸಚಿವ ನಿರಾಣಿ

1-trtr

ಟಿಕೆಟ್ ಇಲ್ಲದೇ ಪರದಾಟ: 1300 ಭಕ್ತರಿಗೆ ತಿಮ್ಮಪ್ಪನ ದರ್ಶನ ಮಾಡಿಸಿದ ಎಸ್.ಆರ್.ವಿಶ್ವನಾಥ್

1-www

15 ಕೋಟಿ ಸದಸ್ಯರನ್ನು ಹೊಂದಿದ ಏಕೈಕ ಪಕ್ಷ ಬಿಜೆಪಿ : ಸಚಿವ ಹಾಲಪ್ಪ ಆಚಾರ್

congress

ಗೃಹಸಚಿವರ ತವರಿನಲ್ಲಿ ಪಟ್ಟಣ ಪಂಚಾಯತಿ ಕಾಂಗ್ರೆಸ್ ಪಾಲು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ballari news

ಅಭಿವೃದ್ಧಿಗೆ ರೆರಾ ಕಾಯ್ದೆ ಪಾಲನೆ ಕಡ್ಡಾಯ

ಹೊಸ ಶಿಕ್ಷಣ ನೀತಿ ಜಾರಿ ವಿರೋಧಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯಿಂದ ಪ್ರತಿಭಟನೆ

ಹೊಸ ಶಿಕ್ಷಣ ನೀತಿ ಜಾರಿ ವಿರೋಧಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯಿಂದ ಪ್ರತಿಭಟನೆ

ತಾಕತ್ತಿದ್ದರೆ ದಲಿತ ಸಿಎಂ, ಮುಸ್ಲಿಂ ಅಧ್ಯಕ್ಷರನ್ನು ನೇಮಿಸಿ: ಶ್ರೀರಾಮುಲು

ತಾಕತ್ತಿದ್ದರೆ ದಲಿತ ಸಿಎಂ, ಮುಸ್ಲಿಂ ಅಧ್ಯಕ್ಷರನ್ನು ನೇಮಿಸಿ: ಶ್ರೀರಾಮುಲು

ನೆಲಕ್ಕುರುಳಿದ ಭತ್ತ: ಅಧಿಕಾರಿಗಳಿಂದ ಸಮೀಕ್ಷೆ

ನೆಲಕ್ಕುರುಳಿದ ಭತ್ತ: ಅಧಿಕಾರಿಗಳಿಂದ ಸಮೀಕ್ಷೆ

ಆದ್ಯತಾ ವಲಯ ಬೆಳವಣಿಗೆಗೆ ಸಾಲ ನೀಡಿAdyatha

ಆದ್ಯತಾ ವಲಯ ಬೆಳವಣಿಗೆಗೆ ಸಾಲ ನೀಡಿ

MUST WATCH

udayavani youtube

ಭತ್ತ ಬೇಸಾಯದಲ್ಲಿ ಯಂತ್ರೋಪಕರಣಗಳ ಬಳಕೆಯಿಂದ ಅಧಿಕ ಆದಾಯಕ್ಕೊಂದು ದಾರಿ

udayavani youtube

ರಾಜಸ್ಥಾನದ ಸಿಕ್ಸ್ ಸೆನ್ಸ್ ಫೋರ್ಟ್ ನಲ್ಲಿ ನೆರವೇರಲಿದೆಯಂತೆ ವಿಕ್ಕಿ – ಕತ್ರಿನಾ ಮದುವೆ

udayavani youtube

ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಹಾಡಿಗೆ ಹೆಜ್ಜೆ ಹಾಕಿದ ಸಿಎಂ ಬೊಮ್ಮಾಯಿ

udayavani youtube

ಕಾಪು ಕಡಲ ಕಿನಾರೆಯಲ್ಲಿ ‘ಕನ್ನಡಕ್ಕಾಗಿ ನಾವು ಗೀತ ಗಾಯನ’ ಕಾರ್ಯಕ್ರಮ ಸಂಪನ್ನ

udayavani youtube

ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮೊಳಗಿದ ಬಾರಿಸು ಕನ್ನಡ ಡಿಂಡಿಮವ

ಹೊಸ ಸೇರ್ಪಡೆ

davanagere news

30 ರಿಂದ ರಾಜ್ಯ ಮಟ್ಟದ ವಿವಿಧ ಪ್ರಶಸ್ತಿ ವಿತರಣೆ: ಶೆಣೈ

kottigehara news

ಗ್ರಾಪಂ ಸಂಕೀರ್ಣಕ್ಕೆ ಜಿಪಂ ಸಿಇಒ ಭೇಟಿ

ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ : 500ಗ್ರಾಂ ಗಾಂಜಾ ವಶ, ಒಬ್ಬನ ಬಂಧನ

ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ : 500 ಗ್ರಾಂ. ಗಾಂಜಾ ವಶ, ಓರ್ವನ ಬಂಧನ

Vehicle parking

ವಾಹನ ನಿಲುಗಡೆಗೆ ಶುಲ್ಕ

shivamogga news

ಸರ್ಕಾರದಿಂದ ಕುಡಿಯುವ ನೀರೂ ಮಾರಾಟ: ಆರೋಪ-ವಿರೋಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.