ಮೆಕ್ಕೆ ಜೋಳ ದರ ಕುಸಿತ: ಅನ್ನದಾತ ಕಂಗಾಲು

ಉತ್ತಮ ದರಕ್ಕಾಗಿ ಚಾತಕ ಪಕ್ಷಿಯಂತೆ ಕಾಯುವ ಸ್ಥಿತಿ | ಕೊರೊನಾ ಹೊಡೆತಕ್ಕೆ ಇಳಿದ ದರ

Team Udayavani, Mar 20, 2020, 12:59 PM IST

20-March-9

ಹೂವಿನಹಡಗಲಿ: ತಾಲೂಕಿನಲ್ಲಿ ರೈತರು ಬೆಳೆದ ಮೆಕ್ಕೆಜೋಳಕ್ಕೆ ಉತ್ತಮ ದರ ಸಿಗದೇ ರೈತರು ಕಂಗಾಲಾಗಿದ್ದಾರೆ. ತಾಲೂಕಿನಲ್ಲಿ ರೈತರು ಬೆಳೆದ ಮೆಕ್ಕೆಜೋಳ ವ್ಯಾಪಾರ ಮಾಡದೇ ಹಾಗೆಯೇ ತೆನೆ ಸಮೇತ ಇಟ್ಟುಕೊಂಡಿದ್ದಾರೆ. ಇನ್ನೂ ಕೆಲವರು ಜಿನ್‌ ಮಾಡಿಸಿ ದರ ಸಿಗದೇ ಉತ್ತಮ ದರಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಕಳೆದ ನಾಲ್ಕಾರು ತಿಂಗಳಿಂದಲೂ ರೈತರು ತಮ್ಮ ಮೆಕ್ಕೆಜೋಳ ಬೆಳೆಯನ್ನು ಹಾಗೆಯೇ ಇಟ್ಟುಕೊಂಡಿದ್ದರು. ನವೆಂಬರ್‌-ಡಿಸೆಂಬರ್‌ ಆಸುಪಾಸಿನಲ್ಲಿ ಉತ್ತಮ ದರ ದೊರಕಿತ್ತಾದರೂ ರೈತರು ಇನ್ನೂ ಹೆಚ್ಚಿನ ನಿರೀಕ್ಷೆಯಿಂದಾಗಿ ತಮ್ಮ ಬೆಳೆಯನ್ನು ಮಾರಾಟ ಮಾಡದೇ ಹಾಗೆಯೇ ಇಟ್ಟುಕೊಂಡಿದ್ದರು.

ಅಕ್ಟೋಬರ್‌-ನವೆಂಬರ್‌ ತಿಂಗಳಲ್ಲಿ ಪ್ರತಿ ಕ್ವಿಂಟಲ್‌ ಮೆಕ್ಕೆಜೋಳಕ್ಕೆ ಸುಮಾರು 2100 ರೂಗಳವರೆಗೆ ದರ ನಿಗದಿಯಾಗಿತ್ತು. ಆದರೆ ಕೆಲ ರೈತರು ಹೆಚ್ಚಿನ ದರ ನಿರೀಕ್ಷೆಗಾಗಿ ತಮ್ಮ ಬೆಳೆಯನ್ನು ಹಾಗೆಯೇ ಇಟ್ಟುಕೊಂಡಿದ್ದರು.

ಈಗ ವಿಶ್ವ ವ್ಯಾಪಿ ಹಬ್ಬಿರುವ ಕೊರೊನಾ ದುಷ್ಪರಿಣಾಮದಿಂದಾಗಿ ರೈತರ ಮೇಲೆ ತುಂಬಾ ಹೊಡೆತ ಬಿದ್ದಿದ್ದು ಮೆಕ್ಕೆಜೋಳ ತೆಗೆದುಕೊಳ್ಳಲು ಯಾರೊಬ್ಬರು ಮುಂದೆ ಬಾರದೇ ದರ ಪಾತಾಳಕ್ಕೆ ಕುಸಿದಿದೆ. ಪ್ರತಿ ಕ್ವಿಂಟಲ್‌ಗೆ 2100 ರೂ ಇದ್ದದ್ದು ಈಗ 1200 ಹಾಗೂ 1000 ರೂಗಳಿಗೆ ಮಾರಾಟ ಮಾಡಲು ದರ ನಿಗದಿ ಮಾಡುತ್ತಿದ್ದಾರೆ.

ಇದರಿಂದಾಗಿ ರೈತರಿಗೆ ಪ್ರತಿ ಕ್ವಿಂಟಲ್‌ಗೆ ಬರೋಬ್ಬರಿ ಸಾವಿರ ರೂಗಳ ನಷ್ಟವಾಗುತ್ತಿದ್ದು ರೈತನ ಪರಿಸ್ಥಿತಿ ಚಿಂತಾಜನಕವಾಗಿದೆ. ಮೆಕ್ಕೆಜೋಳ ಖರೀದಿ ಕೇಂದ್ರ: ತಾಲೂಕಿನಲ್ಲಿ ಇಗಾಗಲೇ ಕೆಲ ರೈತ ಸಂಘಟನೆಗಳು, ಮುಖಂಡರುಗಳು ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ಒತ್ತಾಯ ಮಾಡಿದ್ದಾರೆ. ಅಲ್ಲದೆ ಸ್ವತಃ ಕ್ಷೇತ್ರದ ಶಾಸಕರೇ ಸರ್ಕಾರದ ಹಂತದಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ಸರ್ಕಾರದ ಹಂತದಲ್ಲಿ ಗಮನ ಸೆಳೆಯಲಾಗುವುದು ಎಂದು ಹೇಳಿದ್ದಾರೆ.

ಸರ್ಕಾರ ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಈ ಕೂಡಲೇ ತೆರೆದು ರೈತರ ಸಹಾಯಕ್ಕೆ ಧಾವಿಸಬೇಕಾಗಿದೆ. ಇಲ್ಲವಾದಲ್ಲಿ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಿದೆ.

ರೈತರು ಬೆಳೆದಿರುವ ಮೆಕ್ಕೆಜೋಳಕ್ಕೆ ಬೆಲೆ ಇಲ್ಲದೆ ಕಂಗಾಲಾಗಿದ್ದಾನೆ. ಈ ಕೂಡಲೇ ರಾಜ್ಯ ಸರ್ಕಾರ ರೈತರಿಗೆ ಅನುಕೂಲವಾಗಲು ಖರೀದಿ ಕೇಂದ್ರ ಆರಂಭಿಸಬೇಕು. ರಾಜ್ಯ ಸರ್ಕಾರ ತಕ್ಷಣ ರೈತರ ನೆರವಿಗೆ ಧಾವಿಸಬೇಕು.
ಬಿ.ಎಲ್‌. ಶ್ರೀಧರ,
ರೈತ ಮುಖಂಡರು

ವಿಶ್ವನಾಥ ಹಳ್ಳಿಗುಡಿ

ಟಾಪ್ ನ್ಯೂಸ್

ಎಸೆಸೆಲ್ಸಿ ಪರೀಕ್ಷೆ ಫ‌ಲಿತಾಂಶ: ರಾಜ್ಯದ ಶೇ. 16 ವಿದ್ಯಾರ್ಥಿಗಳಿ ಗೆ “ಎ ಪ್ಲಸ್‌’ ಗ್ರೇಡ್‌

ಎಸೆಸೆಲ್ಸಿ ಪರೀಕ್ಷೆ ಫ‌ಲಿತಾಂಶ: ರಾಜ್ಯದ ಶೇ. 16 ವಿದ್ಯಾರ್ಥಿಗಳಿ ಗೆ “ಎ ಪ್ಲಸ್‌’ ಗ್ರೇಡ್‌

ಯಾಸಿನ್‌ ಮಲಿಕ್‌ ದೋಷಿ- ದೆಹಲಿ ವಿಶೇಷ ನ್ಯಾಯಾಲಯದ ತೀರ್ಪು

ಯಾಸಿನ್‌ ಮಲಿಕ್‌ ದೋಷಿ- ದೆಹಲಿ ವಿಶೇಷ ನ್ಯಾಯಾಲಯದ ತೀರ್ಪು

ಮರಳಿನ ಮೋಡಿಗೆ ಮಾಯವಾದ ಬುರ್ಜ್‌ ಖಲೀಫಾ!

ಮರಳಿನ ಮೋಡಿಗೆ ಮಾಯವಾದ ಬುರ್ಜ್‌ ಖಲೀಫಾ!

ಸಂಘರ್ಷದ ನಡುವೆ ಶಾಂತಿ ಪಸರಿಸುವ ನವ ಭಾರತ ನಿರ್ಮಾಣ ಮಾಡಿ : ಯುವಜನತೆಗೆ ಪ್ರಧಾನಿ ಮೋದಿ ಕರೆ

ಸಂಘರ್ಷದ ನಡುವೆ ಶಾಂತಿ ಪಸರಿಸುವ ನವ ಭಾರತ ನಿರ್ಮಾಣ ಮಾಡಿ : ಯುವಜನತೆಗೆ ಪ್ರಧಾನಿ ಮೋದಿ ಕರೆ

ಕಾಂಗ್ರೆಸ್‌ ಭದ್ರಕೋಟೆಗೆ ಹೊಸ ಮುಖಗಳ ಲಗ್ಗೆ

ಕಾಂಗ್ರೆಸ್‌ ಭದ್ರಕೋಟೆಗೆ ಹೊಸ ಮುಖಗಳ ಲಗ್ಗೆ

ಮಸೀದಿಯೋ ಅಥವಾ ಮಂದಿರವೋ…? ಬಾಬ್ರಿ ಮಸೀದಿಯಿಂದ ಕುತುಬ್‌ ಮಿನಾರ್‌ವರೆಗೆ…

ಮಸೀದಿಯೋ ಅಥವಾ ಮಂದಿರವೋ…? ಬಾಬ್ರಿ ಮಸೀದಿಯಿಂದ ಕುತುಬ್‌ ಮಿನಾರ್‌ವರೆಗೆ…

ಆರ್ಥಿಕ ಪ್ರಗತಿಗೆ ತಡೆಯಾಗಿರುವ ಹಣದುಬ್ಬರ

ಆರ್ಥಿಕ ಪ್ರಗತಿಗೆ ತಡೆಯಾಗಿರುವ ಹಣದುಬ್ಬರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

skin-horn

ಚರ್ಮ-ಕೊಂಬು ಮಾರಾಟ: ಇಬ್ಬರ ಬಂಧನ

water

24×7 ಕುಡಿವ ನೀರಿನ ಯೋಜನೆ ವಿಫಲ

wage

ಬಾಕಿ ವೇತನ-ಕೋವಿಡ್‌ ಭತ್ಯೆಗಾಗಿ ನೌಕರರ ಪಟ್ಟು

center

ಸ್ಮಶಾನದ ಅವಶ್ಯಕತೆ ಇದ್ದಲ್ಲಿ ಅರ್ಜಿ ಸಲ್ಲಿಸಿ: ಜಿಲ್ಲಾಧಿಕಾರಿ

ballary

3 ಹೊಸ ತಾಲೂಕು.. ನೂರಾರು ಕೊರತೆ

MUST WATCH

udayavani youtube

ಎಸ್ಸೆಸ್ಸೆಲ್ಸಿ ಫಲಿತಾಂಶ : ಶಿರಸಿ ಸರಕಾರಿ ಶಾಲಾ ವಿದ್ಯಾರ್ಥಿಗಳ ಸಾಧನೆ

udayavani youtube

ಒಳ್ಳೆಯ ಆರೋಗ್ಯಕ್ಕೆ ಯಾವ ರೀತಿ ವ್ಯಾಯಾಮ ಮಾಡಬೇಕು ?

udayavani youtube

ಬೆಳಗ್ಗೆ 4 ಗಂಟೆಗೆ ಎದ್ದು ಫಿಶಿಂಗ್ ಕೆಲಸಕ್ಕೆ ಹೋಗುತ್ತಿದ್ದ ಉಡುಪಿಯ ವಿದ್ಯಾರ್ಥಿಗೆ 625 ಅಂಕ

udayavani youtube

ಕೃಷಿ ಚಟುವಟಿಕೆ ಕಂಡು ಖುಷಿ ಪಟ್ಟ ರಾಶಿ ರಾಶಿ ಕೊಕ್ಕರೆಗಳು !!

udayavani youtube

ಶಿವಮೊಗ್ಗದಲ್ಲಿ ರಸ್ತೆ ತುಂಬೆಲ್ಲಾ ನೀರು… ಅಪಾಯಕ್ಕೆ ಅಹ್ವಾನ ನೀಡುತ್ತಿವೆ ಗುಂಡಿಗಳು..

ಹೊಸ ಸೇರ್ಪಡೆ

ಹೈದರಾಬಾದ್‌: ಕಿಡ್ನಿಯಲ್ಲಿದ್ದವು 206 ಕಲ್ಲು!

ಹೈದರಾಬಾದ್‌: ಕಿಡ್ನಿಯಲ್ಲಿದ್ದವು 206 ಕಲ್ಲು!

ಟ್ರಂಪ್‌ ಬರಹಗಳಿಗೆ ಟ್ವಿಟರ್‌ ಮತ್ತೆ ನಿಷೇಧ

ಟ್ರಂಪ್‌ ಬರಹಗಳಿಗೆ ಟ್ವಿಟರ್‌ ಮತ್ತೆ ನಿಷೇಧ

ಪ್ರೊ ಲೀಗ್‌ ಹಾಕಿ : ಅಮಿತ್‌ ರೋಹಿದಾಸ್‌ ನಾಯಕ

ಪ್ರೊ ಲೀಗ್‌ ಹಾಕಿ : ಅಮಿತ್‌ ರೋಹಿದಾಸ್‌ ನಾಯಕ

ಆಗಸ್ಟ್‌ನಿಂದ ಬಿಎಸ್ಸೆನ್ನೆಲ್‌ 4ಜಿ ಸೇವೆ

ಆಗಸ್ಟ್‌ನಿಂದ ಬಿಎಸ್ಸೆನ್ನೆಲ್‌ 4ಜಿ ಸೇವೆ

ಎಸೆಸೆಲ್ಸಿ ಪರೀಕ್ಷೆ ಫ‌ಲಿತಾಂಶ: ರಾಜ್ಯದ ಶೇ. 16 ವಿದ್ಯಾರ್ಥಿಗಳಿ ಗೆ “ಎ ಪ್ಲಸ್‌’ ಗ್ರೇಡ್‌

ಎಸೆಸೆಲ್ಸಿ ಪರೀಕ್ಷೆ ಫ‌ಲಿತಾಂಶ: ರಾಜ್ಯದ ಶೇ. 16 ವಿದ್ಯಾರ್ಥಿಗಳಿ ಗೆ “ಎ ಪ್ಲಸ್‌’ ಗ್ರೇಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.