Udayavni Special

ಬೇಸಿಗೆಗೆ ಮುನ್ನವೇ ಕಲ್ಲಂಗಡಿ ಹಣ್ಣಿಗೆ ಹೆಚ್ಚಿದ ಬೇಡಿಕೆ


Team Udayavani, Feb 16, 2021, 6:23 PM IST

ಬೇಸಿಗೆಗೆ ಮುನ್ನವೇ ಕಲ್ಲಂಗಡಿ ಹಣ್ಣಿಗೆ ಹೆಚ್ಚಿದ ಬೇಡಿಕೆ

ಸಿರುಗುಪ್ಪ: ಬಿಸಿಲಿನ ಝಳಕ್ಕೆ ಜನರು ದಾಹ ತಣಿಸಿಕೊಳ್ಳಲು ಕಲ್ಲಂಗಡಿ ಹಣ್ಣಿನ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ನಗರದಲ್ಲಿ ಕಲ್ಲಂಗಡಿ ಹಣ್ಣಿಗೆ ಉತ್ತಮ ಬೇಡಿಕೆ ಬಂದಿದೆ. ಈಗಾಗಲೇ ನಗರದೆಲ್ಲೆಡೆ ಸಾಕಷ್ಟು ಕಲ್ಲಂಗಡಿ ಆಮದು ಆಗಿದ್ದು, ಅಷ್ಟೇ ಪ್ರಮಾಣದಲ್ಲಿ ಗ್ರಾಹಕರಿರುವುದು ವ್ಯಾಪಾರಿಗಳಲ್ಲಿ ಸಂತಸ ಇಮ್ಮಡಿಗೊಳಿಸಿದೆ.

ತಾಲೂಕಿನಲ್ಲಿ ಬೆಳಗ್ಗೆ ಚಳಿ ಪ್ರಮಾಣ ಹೆಚ್ಚಿದ್ದರೂ ಮಧ್ಯಾಹ್ನದ ಹೊತ್ತಿಗೆ ಬಿಸಿಲಿನ ತಾಪಮಾನ 30ರಿಂದ 32 ಡಿಗ್ರಿ ಸೆಲ್ಸಿಯಸ್‌ಗೆ ಏರಿ ಜನರು ಹೈರಾಣಾಗುತ್ತಿದ್ದಾರೆ. ಹೀಗಾಗಿ ಬೇಸಿಗೆ ಆರಂಭಕ್ಕೂ ಮುನ್ನವೇ ಕಲ್ಲಂಗಡಿ ಹಣ್ಣಿಗೆ ಬೇಡಿಕೆ ಹೆಚ್ಚಾಗಿದ್ದು, ಬಿಸಿಲಿನ ತಾಪದ ದಾಹ ತಣಿಸಲು ಜನರು ಕಲ್ಲಂಗಡಿಗೆ ಮೊರೆಯಿಟ್ಟಿದ್ದಾರೆ. ಈ ಬಾರಿ ಬೇಸಿಗೆ ಇನ್ನು ಒಂದು ತಿಂಗಳು ಮುಂಚೆ ಇರುವಾಗಲೇ ನಗರದ ಪ್ರಮುಖ ಬೀದಿಗಳಲ್ಲಿ ತಂಪು ಪಾನೀಯ ಮತ್ತು ಕಲ್ಲಂಗಡಿ ವ್ಯಾಪಾರ ಜೋರಾಗಿ ಸಾಗುತ್ತಿದೆ. ಜನವರಿ ಕೊನೆಯ ವಾರದಿಂದಲೇ ಮಧ್ಯಾಹ್ನದ ವೇಳೆಯಲ್ಲಿಉರಿಬಿಸಿಲು ಆರಂಭಗೊಂಡಿರುವುದರಿಂದ ತಂಪು ಪಾನೀಯ ಮತ್ತು ಕಲ್ಲಂಗಡಿ ವ್ಯಾಪಾರ ಜೋರಾಗಿ ನಡೆಯುತ್ತಿದೆ.

ನಗರದ ಪ್ರಮುಖ ರಸ್ತೆಗಳಲ್ಲಿ ಕಲ್ಲಂಗಡಿ ಹಣ್ಣಿನ ಅಂಗಡಿಗಳು ತೆರೆದಿವೆ. ಸೀಮಾಂಧ್ರ ಪ್ರದೇಶ ಮತ್ತು ತುಮಕೂರಿನ ಮಡಕಶಿರಸುತ್ತಮುತ್ತಲಿನಿಂದ ಕಲ್ಲಂಗಡಿ ಹಣ್ಣುಗಳುಮಾರುಕಟ್ಟೆಗೆ ಬರುತ್ತಿವೆ, ಕಲ್ಲಂಗಡಿ ಹಣ್ಣು ಒಂದು ಕೆ.ಜಿ ಲೆಕ್ಕದಲ್ಲಿ ಮಾರಾಟವಾಗುತ್ತಿದ್ದು, ಒಂದುಕೆ.ಜಿಗೆ 25ರಿಂದ 35ರ ವರೆಗೆ ಇದೆ. ಒಂದು ಪ್ಲೇಟ್‌ ಅಥವಾ ಹಣ್ಣೀನ ಒಂದು ಪೀಸ್‌ 10 ರೂ.ಕ್ಕೆ ಮಾರಾಟವಾಗುತ್ತಿದೆ. ಒಟ್ಟಾರೆ ಒಂದು ತಿಂಗಳಿಗೆ2 ರಿಂದ 3 ಲಾರಿ ಲೋಡ್‌ ಕಲ್ಲಂಗಡಿ ಹಣ್ಣುಗಳು ಮಾರಾಟ ಮಾಡುತ್ತಿರುವುದಾಗಿ ಕಲ್ಲಂಗಂಡಿ ಹಣ್ಣಿನ ವ್ಯಾಪಾರಿಗಳು ತಿಳಿಸಿದ್ದಾರೆ.

ಬೇಸಿಗೆ ದಿನಗಳಲ್ಲಿ ಉಷ್ಠಾಂಶ ಹೆಚ್ಚಿರುವುದರಿಂದ ಮನುಷ್ಯನ ದೇಹ, ದೇಹದ ನೀರಿನ ಸಮತೋಲನ ಕಾಯ್ದುಕೊಳ್ಳಬೇಕಾಗುತ್ತದೆ.ಜೊತೆಗೆ ಮನುಷ್ಯನ ದೇಹದಲ್ಲಿ ನೀರಿನ ಪ್ರಮಾಣ ಬಿಸಿಲಿನ ಝಳಕ್ಕೆ ಕಡಿಮೆಯಾಗುವುದರಿಂದನಿರ್ಜಲೀಕರಣ, ಅಜೀರ್ಣದಂತಹ ಅನಾರೋಗ್ಯಸಮಸ್ಯೆಗಳು ಉಂಟಾಗುತ್ತವೆ. ಇಂತಹ ಆರೋಗ್ಯಸಮಸ್ಯೆಗಳಿಂದ ದೂರವಿರಲು ಕಲ್ಲಂಗಡಿ ಸಹಾಯ ಮಾಡುತ್ತದೆ. ಕಲ್ಲಂಗಡಿ ಹಣ್ಣಿನಲ್ಲಿ ವಿಟಮಿನ್‌ ಸಿ ಇದ್ದು, ಮಾನವ ದೇಹಕ್ಕೆ ಹೆಚ್ಚಿನ ಪೌಷ್ಟಿಕಾಂಶಸಿಗುತ್ತದೆ. ಬಿಸಿಲಿನಲ್ಲಿ ದಾಹ ನೀಗಿಸುವ ಜೊತೆಗೆ ದೇಹದ ಆರೋಗ್ಯ ಕಾಪಾಡುವಲ್ಲಿ ಕಲ್ಲಂಗಡಿ ಹಣ್ಣು ಮುಖ್ಯವಾಗಿದೆ.

ಎಳೆನೀರಿನ ಮಾರಾಟವು ಜೋರಾಗಿನಡೆದಿದ್ದು, ರೂ.35ಕ್ಕೆ ಒಂದು ಎಳೆನೀರು ಮಾರಾಟವಾಗುತ್ತಿದೆ. ಪ್ರತಿದಿನ ನಗರದಲ್ಲಿರುವಎಳೆನೀರು ವ್ಯಾಪಾರಿಗಳು ಸುಮಾರು 500ರಿಂದ 700ಕ್ಕೂ ಹೆಚ್ಚು ಎಳೆನೀರು ಮಾರಾಟಮಾಡುತ್ತಿದ್ಧಾರೆ. ರಾಸಾಯನಿಕ ಮಿಶ್ರಿತ ತಂಪುಪಾನಿಯ ಕುಡಿದು ಆರೋಗ್ಯ ಹಾಳುಮಾಡಿಕೊಳ್ಳುವ ಬದಲು ರೈತರ ನೈಸರ್ಗಿಕ ಉತ್ಪನ್ನಗಳನ್ನು ಸೇವಿಸಿ, ರೈತರಿಗೂ ಪ್ರೋತ್ಸಾಹ ನೀಡಲು ಬೇಸಿಗೆ ಒಳ್ಳೆಯ ಸಮಯವಾಗಿದೆ.

ದಾಹ ತಣಿಸಲು ಕಲ್ಲಂಗಡಿ ಅಷ್ಟೇ ಅಲ್ಲದೇ ಎಳೆನೀರು, ಕಬ್ಬಿನ ಹಾಲು, ನಿಂಬೆರಸ, ಹಣ್ಣಿನ ರಸಕ್ಕೂ ಬೇಡಿಕೆ ಹೆಚ್ಚಾಗಿದೆ. ಒಂದು ಎಳೆನೀರು 35 ರೂ., ಒಂದು ಲೋಟ ಕಬ್ಬಿನ ಹಾಲಿಗೆ 10 ರೂ., ನಿಂಬೆ ಷರಬತ್ತು ಮತ್ತು ಸೋಡಾಕ್ಕೆ 10 ರೂ.ಬೆಲೆ ಇದೆ. ಬಿಸಿಲು ಹೆಚ್ಚಿದಂತೆ ಕಲ್ಲಂಗಡಿ ಹಣ್ಣಿಗೆ ಬೇಡಿಕೆ ಹೆಚ್ಚು, ಮಾರ್ಚ್‌, ಏಪ್ರಿಲ್‌ನಲ್ಲಿ ಮಾರಾಟ ಜೋರಾಗಿರುತ್ತದೆ. ಈಗ ಇನ್ನೂ ಪೂರ್ಣ ಪ್ರಮಾಣದ ಬೇಸಿಗೆ ಆರಂಭವಾಗಿಲ್ಲ, ಆದರೆ ವ್ಯಾಪಾರ ಜೋರಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಲಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

 

-ಆರ್‌.ಬಸವರೆಡ್ಡಿ ಕರೂರು

ಟಾಪ್ ನ್ಯೂಸ್

ಕೃಷಿ ವಿವಿ ಹಾಸ್ಟೇಲ್ ಗಳಲ್ಲಿ ಮಧ್ಯಾಹ್ನದ ಊಟಕ್ಕೆ ಸಿರಿಧಾನ್ಯ ಸೂಚನೆ: ಬಿ.ಸಿ. ಪಾಟೀಲ್

ಕೃಷಿ ವಿ.ವಿ ಹಾಸ್ಟೇಲ್ ಗಳಲ್ಲಿ ಮಧ್ಯಾಹ್ನದ ಊಟಕ್ಕೆ ಸಿರಿಧಾನ್ಯ ಸೂಚನೆ: ಬಿ.ಸಿ. ಪಾಟೀಲ್

ಮೈಸೂರು ಪಾಲಿಕೆ ಮೈತ್ರಿ ಗೊಂದಲಕ್ಕೆ ಸಿದ್ದರಾಮಯ್ಯ ಕಾರಣ: ಸಾ.ರಾ. ಮಹೇಶ್

ಮೈಸೂರು ಪಾಲಿಕೆ ಮೈತ್ರಿ ಗೊಂದಲಕ್ಕೆ ಸಿದ್ದರಾಮಯ್ಯ ಕಾರಣ: ಸಾ.ರಾ. ಮಹೇಶ್

v

ಉಪಚುನಾವಣೆ ನಡೆಯುವ ಕ್ಷೇತ್ರಗಳಿಗೆ ವಿಶೇಷ ಪ್ಯಾಕೇಜ್ ಘೋಷಣೆ ಇಲ್ಲ: ಸಿಎಂ ಯಡಿಯೂರಪ್ಪ

ಪ್ರೀತಿಸಿದ ಹುಡುಗಿಗೆ‌ ಬೇರೆ ಮದುವೆಗೆ ಸಿದ್ಧತೆ: ನೊಂದ ಪ್ರಿಯಕರ ಆತ್ಮಹತ್ಯೆಗೆ ಯತ್ನ

ಪ್ರೀತಿಸಿದ ಹುಡುಗಿಗೆ‌ ಬೇರೆ ಮದುವೆಗೆ ಸಿದ್ಧತೆ: ನೊಂದ ಪ್ರಿಯಕರ ಆತ್ಮಹತ್ಯೆಗೆ ಯತ್ನ

Congress MLA Santosh Mishra’s nephew

ಕಾಂಗ್ರೆಸ್ ಶಾಸಕ ಸಂತೋಷ್ ಸೋದರಳಿಯನ ಗುಂಡಿಕ್ಕಿ ಕೊಲೆ

ವೀಕೆಂಡ್‌ನ‌ಲ್ಲಿ ಮತ್ತೆ ಕಿಚ್ಚನ ಎಂಟ್ರಿ

ವೀಕೆಂಡ್‌ನ‌ಲ್ಲಿ ಮತ್ತೆ ಕಿಚ್ಚನ ಎಂಟ್ರಿ

ಅಕ್ರಮ ಮರಳು ಸಾಗಾಟ ತಡೆಗೆ ಸ್ಕೂಟರ್‌ನಲ್ಲಿ ತೆರಳಿ ದಾಳಿ ಮಾಡಿದ ಮಂಗಳೂರು ಕಮಿಷನರ್‌, ಡಿಸಿಪಿ!

ಅಕ್ರಮ ಮರಳು ಸಾಗಾಟ ತಡೆಗೆ ಸ್ಕೂಟರ್‌ನಲ್ಲಿ ತೆರಳಿ ದಾಳಿ ಮಾಡಿದ ಮಂಗಳೂರು ಕಮಿಷನರ್‌, ಡಿಸಿಪಿ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

small reservoir

ಕಿರು ಜಲಾಶಯ ನಿರ್ಮಾಣಕ್ಕೆ  ನೂರೆಂಟು ವಿಘ್ನ

V S Ugrappa

ನೂತನ ಜಿಲ್ಲೆ ಇನ್ನೊಂದು ಯಾದಗಿರಿ ಆಗದಿರಲಿ: ಉಗ್ರಪ್ಪ

Viayanagara National haiway

ಹೊಸ ಜಿಲ್ಲೆ ಹೆಬ್ಬಾಗಿಲಲ್ಲಿ ಭುವನೇಶ್ವರಿ ಪ್ರತಿಮೆ

ಹೊಸಪೇಟೆ: ನ್ಯಾಯಾಲಯದ ಆವರಣದಲ್ಲೇ ವಕೀಲರೊಬ್ಬರ ಬರ್ಬರ ಹತ್ಯೆ

ಹೊಸಪೇಟೆ: ನ್ಯಾಯಾಲಯದ ಆವರಣದಲ್ಲೇ ವಕೀಲರೊಬ್ಬರ ಬರ್ಬರ ಹತ್ಯೆ

bellary APMC

ನೂತನ ಕಾಯ್ದೆಯಿಂದ ನಲುಗಿದ ಎಪಿಎಂಸಿ

MUST WATCH

udayavani youtube

ದರೋಡೆಕೋರರನ್ನು ಅಟ್ಟಾಡಿಸಿದ ಜನರು.. ಯಾವ ಸಿನಿಮಾಗೂ ಕಡಿಮೆಯಿಲ್ಲ ಚೇಸಿಂಗ್ ದೃಶ್ಯ

udayavani youtube

ಕುಮಾರಸ್ವಾಮಿಯನ್ನು ನಂಬಬೇಡಿ, ಅವರೊಂದಿಗೆ ಹೊಂದಾಣಿಕೆ ಬೇಡ: ಬಿಜೆಪಿ ವರಿಷ್ಠರಿಗೆ ಯೋಗೀಶ್ವರ್

udayavani youtube

CoWin App ಸಮಸ್ಯೆ ! ಎರಡು ದಿನ ಲಸಿಕೆ ಹಂಚಿಕೆ ಇಲ್ಲ ! | Udayavani

udayavani youtube

ದಾನದ ಪರಿಕಲ್ಪನೆಯ ಕುರಿತು Dr. Gururaj Karajagi ಹೇಳಿದ ಕತೆ ಕೇಳಿ.. Part-3

udayavani youtube

ಕಾಯಕದಲ್ಲಿ ಕಟ್ಟಡ ಕಟ್ಟುವ ಮೇಸ್ತ್ರಿ; ಬಿಡುವಿನಲ್ಲಿ ಹಾಳೆ ಮುಟ್ಟಾಳೆ ತಯಾರಕರು

ಹೊಸ ಸೇರ್ಪಡೆ

ವಿಜೃಂಭಣೆಯ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ

ವಿಜೃಂಭಣೆಯ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ

ಜನರನ್ನು ರಕ್ಷಿಸುವಲ್ಲಿ ಬಿಜೆಪಿ ಸರ್ಕಾರ ವಿಫ‌ಲ

ಜನರನ್ನು ರಕ್ಷಿಸುವಲ್ಲಿ ಬಿಜೆಪಿ ಸರ್ಕಾರ ವಿಫ‌ಲ

ಕೃಷಿ ವಿವಿ ಹಾಸ್ಟೇಲ್ ಗಳಲ್ಲಿ ಮಧ್ಯಾಹ್ನದ ಊಟಕ್ಕೆ ಸಿರಿಧಾನ್ಯ ಸೂಚನೆ: ಬಿ.ಸಿ. ಪಾಟೀಲ್

ಕೃಷಿ ವಿ.ವಿ ಹಾಸ್ಟೇಲ್ ಗಳಲ್ಲಿ ಮಧ್ಯಾಹ್ನದ ಊಟಕ್ಕೆ ಸಿರಿಧಾನ್ಯ ಸೂಚನೆ: ಬಿ.ಸಿ. ಪಾಟೀಲ್

ಬಿಡಿಎ ನಿವೇಶನ ಫ್ಯಾನ್ಸಿ ನಂಬರ್‌ 1,000ಕ್ಕೆ 1.30 ಕೋಟಿ ರೂ.!

ಬಿಡಿಎ ನಿವೇಶನ ಫ್ಯಾನ್ಸಿ ನಂಬರ್‌ 1,000ಕ್ಕೆ 1.30 ಕೋಟಿ ರೂ.!

ನಗರದ 29 ಆಸ್ಪತ್ರೆಗಳಲ್ಲಿ ಲಸಿಕೆ ಸೌಲಭ್ಯ

ನಗರದ 29 ಆಸ್ಪತ್ರೆಗಳಲ್ಲಿ ಲಸಿಕೆ ಸೌಲಭ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.