Udayavni Special

ಪ್ರತ್ಯೇಕತೆ ಕಾವು; ಉತ್ತರ ನಿರ್ಲಕ್ಷ್ಯದ ವಿರುದ್ಧ ಹೆಚ್ಚಿದೆ ದನಿ​​​​​

Team Udayavani, Jul 28, 2018, 6:00 AM IST

b-sriramulu-n.jpg

ಬಳ್ಳಾರಿ: ಉತ್ತರ ಕರ್ನಾಟಕ ನಿರ್ಲಕ್ಷ್ಯ ವಿಚಾರ ದಿನೇ ದಿನೇ ಕಾವು ಪಡೆದುಕೊಳ್ಳುತ್ತಿದೆ. ನಿರ್ಲಕ್ಷ್ಯ ಮುಂದುವರಿದರೆ ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ಅವಕಾಶ ನೀಡಿದಂತಾಗುತ್ತದೆ ಎಂದು ಉತ್ತರ ಕರ್ನಾಟಕದ ವಿವಿಧ ನಾಯಕರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಿರುವ ಕುರಿತು ಚರ್ಚೆಗೆ ಬನ್ನಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಸವಾಲು ಹಾಕಿರುವ ಬೆನ್ನಲ್ಲೇ ಬಿಜೆಪಿ ನಾಯಕ ಶ್ರೀರಾಮುಲು, ಜನರನ್ನು ಪದೇ ಪದೇ ಕೆಣಕಬೇಡಿ ಎಂದು ಎಚ್ಚರಿಸಿದ್ದಾರೆ. ವಿವಿಧ ಮಠಾಧೀಶರೂ ಉತ್ತರ ಕರ್ನಾಟಕದ ಅಭಿವೃದ್ಧಿಯತ್ತ ಗಮನಹರಿಸಿ ಎಂದು ಕಿವಿಮಾತು ಹೇಳಿದ್ದಾರೆ.

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರು, ಉತ್ತರ ಕರ್ನಾಟಕ ಅಭಿವೃದ್ಧಿಯತ್ತ ನಿರ್ಲಕ್ಷ್ಯ ವಹಿಸಿದರೆ ಪ್ರತ್ಯೇಕ ರಾಜ್ಯಕ್ಕಾಗಿ ತೆಲಂಗಾಣ ಮಾದರಿಯಲ್ಲಿ ಹೋರಾಟ ನಡೆಸುವುದು ಅನಿವಾರ್ಯ ಎಂದು ಬಿಜೆಪಿ ನಾಯಕ ಬಿ.ಶ್ರೀರಾಮುಲು ಎಚ್ಚರಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿಯವರು ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಿದ್ದಾರೆ. ಸಾಲಮನ್ನಾಕ್ಕಾಗಿ ಕೊಪ್ಪಳದಲ್ಲಿ ರೈತರು ಪ್ರತಿಭಟಿಸಿದ್ದನ್ನು ಟೀಕಿಸಿದ್ದಾರೆ. ಉತ್ತರ ಕರ್ನಾಟಕದ ರೈತರು, ಜನರನ್ನು ಪದೇ ಪದೇ ಕೆಣಕುತ್ತಿದ್ದಾರೆ ಎಂದು ದೂರಿದರು.

ಉತ್ತರ ಕರ್ನಾಟಕದ ನಿರ್ಲಕ್ಷ್ಯ ಕುರಿತು ಕಾಂಗ್ರೆಸ್‌ನ ಹಿರಿಯ ಮುಖಂಡ ಎಚ್‌.ಕೆ.ಪಾಟೀಲ್‌ ಅವರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗೆ ಮುಂದುವರಿದರೆ ಉತ್ತರ ಕರ್ನಾಟಕವನ್ನು ಪ್ರತ್ಯೇಕಗೊಳಿಸಬೇಕೆಂಬ ತೀವ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ರಾಜೀನಾಮೆ ಹೊಸದಲ್ಲ
ನನಗೆ ರಾಜಕೀಯ ಮುಖ್ಯವಲ್ಲ. ರಾಜೀನಾಮೆ ಕೊಡುವುದು ಹೊಸದೇನಲ್ಲ. ಹಿಂದೆಯೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸಂಸದನಾಗಿದ್ದೇನೆ. ಹೀಗಾಗಿ ನನಗೆ ಜನರೇ ಮುಖ್ಯ. ಮೈತ್ರಿ ಸರ್ಕಾರ ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಯೋಜನೆಗಳ ಅನುಷ್ಠಾನ, ಅನುದಾನ ನೀಡುವಲ್ಲಿ ಅನ್ಯಾಯ ಮುಂದುವರಿಸಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪ್ರತ್ಯೇಕ ರಾಜ್ಯಕ್ಕಾಗಿ ತೆಲಂಗಾಣ ಮಾದರಿಯಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ರಾಮುಲು ಎಚ್ಚರಿಸಿದರು.

ಕುಮಾರಸ್ವಾಮಿಯವರು ಕೇವಲ ಐದಾರು ಜಿಲ್ಲೆಗಳ ಮುಖ್ಯಮಂತ್ರಿಯಂತೆ ವರ್ತಿಸುತ್ತಿದ್ದಾರೆ. ಮುಖ್ಯಮಂತ್ರಿ ಸ್ಥಾನ ದೊರೆತ ನಂತರ ನಾಡಿನ ಜನರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಇಂಥ ಮುಖ್ಯಮಂತ್ರಿಯನ್ನು ರಾಜ್ಯದ ಜನ ಹಿಂದೆಂದೂ ಕಂಡಿರಲಿಲ್ಲ. ಸಾಲಮನ್ನಾ ವಿಚಾರದಲ್ಲಿ ವಚನ ಭ್ರಷ್ಟರಾದ ಕುಮಾರಸ್ವಾಮಿ, ರೈತರಲ್ಲಿ ಅನಾವಶ್ಯಕ ಗೊಂದಲ ಮೂಡಿಸುತ್ತಿದ್ದಾರೆ ಎಂದರು.

ಜೆಡಿಎಸ್‌ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದಿಲ್ಲ ಎಂದು ಕುಮಾರಸ್ವಾಮಿ ನಾಟಕವಾಡುತ್ತಿದ್ದಾರೆ. ಮೈತ್ರಿ ಸರ್ಕಾರ ರಚನೆಯಾಗಿ ಎರಡು ತಿಂಗಳಾದರೂ ಟೇಕ್‌ಆಫ್‌ ಆಗದೆ ನಿಷ್ಕಿಯಗೊಂಡಿದೆ. ಸಿಎಂ ಆದ ಬಳಿಕ ಉತ್ತರ ಕರ್ನಾಟಕ ಪ್ರವಾಸ ಕೈಗೊಳ್ಳದೆ ಕೇವಲ ಹಾಸನ, ಮಂಡ್ಯ, ರಾಮನಗರ ಸೇರಿ ಐದಾರು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದ್ದಾರೆ ಎಂದು ಆರೋಪಿಸಿದರು.

ಅಭಿವೃದ್ಧಿ ಅಲಕ್ಷ್ಯವೇ ಈ ಕೂಗಿಗೆ ಕಾರಣ ದಿಂಗಾಲೇಶ್ವರ ಶ್ರೀ
ದಾವಣಗೆರೆ:
ಸಮಗ್ರ ಕರ್ನಾಟಕ ಒಂದೇ ಎಂಬ ಭಾವನೆಯಿಂದ ಅಭಿವೃದ್ಧಿ ಮಾಡಿದ್ದೇ ಆದಲ್ಲಿ ಪ್ರತ್ಯೇಕ ರಾಜ್ಯದ ಅವಶ್ಯಕತೆ ಇಲ್ಲ. ಆದರೆ, ಈಗಿನ ಧೋರಣೆಯೇ ಮುಂದುವರಿದಲ್ಲಿ ಪ್ರತ್ಯೇಕತೆ ನಿಟ್ಟಿನಲ್ಲಿ ಉತ್ತರ ಕರ್ನಾಟಕದ ಸ್ವಾಮೀಜಿಗಳು ಚಿಂತನೆ ನಡೆಸುವ ಕಾಲ ಬಂದೀತು ಎಂದು ಗದಗ ಜಿಲ್ಲೆ ಬಾಳೆಹೊಸೂರಿನ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಎಚ್ಚರಿಸಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಪ್ರತ್ಯೇಕ ರಾಜ್ಯ ಸ್ಥಾಪನೆ ಆಗಬೇಕು ಎನ್ನುವ ಪ್ರಸಂಗ ಸದ್ಯಕ್ಕೆ ಇಲ್ಲವಾದರೂ ಅಭಿವೃದ್ಧಿ ವಿಚಾರವಾಗಿ ತಾರತಮ್ಯ ಮಾಡುತ್ತಿರುವುದೇ ಪ್ರತ್ಯೇಕತೆ ಕೂಗಿಗೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಿದರು.

ಚುನಾವಣೆ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಬಹು ಮುಖ್ಯ ವಿಚಾರ, ಸಮಸ್ಯೆ ಪ್ರಸ್ತಾಪಿಸಿ, ಸರ್ಕಾರ ರಚನೆ ನಂತರ ಉತ್ತರ ಕರ್ನಾಟಕವನ್ನು ನಿರ್ಲಕ್ಷé ಮಾಡುವುದನ್ನು ಕಾಣುತ್ತಲೇ ಬರುತ್ತಿದ್ದೇವೆ. ಉತ್ತರ ಕರ್ನಾಟಕವನ್ನು “ಬಳಕೆ ಕರ್ನಾಟಕ’…ದಂತೆ ಮಾಡಿಕೊಳ್ಳುವ ಧೋರಣೆ ಕೈ ಬಿಡಬೇಕು. ಇದೇ ಧೋರಣೆ ಮುಂದುವರೆದಲ್ಲಿ ತೆಲಂಗಾಣ, ಸೀಮಾಂಧ್ರ ಮಾದರಿಯಲ್ಲಿ ಪ್ರತ್ಯೇಕಿಸುವ ಕಾಲ ಸನ್ನಿಹಿತ ಆಗಬಹುದು. ಅಭಿವೃದ್ಧಿ ವಿಚಾರವಾಗಿ ತಾರತಮ್ಯ ಮುಂದುವರಿದಿದ್ದೇ ಆದಲ್ಲಿ ಪ್ರತ್ಯೇಕ ರಾಜ್ಯದ ಕೂಗಿಗೆ ಉತ್ತರ ಕರ್ನಾಟಕದ ಸ್ವಾಮೀಜಿಗಳು ಚಿಂತನೆ ನಡೆಸಬೇಕಾಗುತ್ತದೆ ಎಂದು ಹೇಳಿದರು.

ಉತ್ತರ ಕರ್ನಾಟಕದವರಿಗೆ ರಾಜ್ಯ ಇಬ್ಭಾಗಿಸುವ ಬಯಕೆ ಇಲ್ಲ: ಜಯ ಮೃತ್ಯುಂಜಯ ಸ್ವಾಮೀಜಿ
ದಾವಣಗೆರೆ:
ಕರ್ನಾಟಕವನ್ನು ಎರಡು ಭಾಗ ಮಾಡಬೇಕು ಎಂಬುದು ಉತ್ತರ ಕರ್ನಾಟಕದ ಜನರ ಯಾರ ಹೃದಯದಲ್ಲೂ ಇಲ್ಲ. ಅನ್ಯಾಯ, ನಿರೀಕ್ಷಿತ ಸೌಲಭ್ಯ ಸಿಗದೇ ಹೋದಾಗ ಪ್ರತ್ಯೇಕತೆ ಕೂಗು ಸಾಮಾನ್ಯ. ಆ ಕೂಗು ಶಮನವಾಗಲು ಸಂಬಂಧಿತರು ಉತ್ತರ ಕರ್ನಾಟಕಕ್ಕೆ ಸೂಕ್ತ ನ್ಯಾಯ ಒದಗಿಸಲು ಮುಂದಾಗಬೇಕು ಎಂದು ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟುಕೊಂಡು ಆ. 2 ರಂದು ಕರೆ ನೀಡಿರುವ 13 ಜಿಲ್ಲೆಗಳ ಬಂದ್‌ ಹಿನ್ನೆಲೆಯಲ್ಲಿ ಈಗಾಗಲೇ ಬೆಳಗಾವಿಯಲ್ಲಿ ಉತ್ತರ ಕರ್ನಾಟಕದ ಸ್ವಾಮೀಜಿಗಳ ಸಭೆ ನಡೆದಿದೆ. ಮತ್ತೂಮ್ಮೆ ಜು. 31 ರಂದು ಉತ್ತರ ಕರ್ನಾಟಕದ ಸ್ವಾಮೀಜಿಗಳ ಸಭೆ ನಡೆಯಲಿದೆ. ಆ ಸಭೆಯ ಉದ್ದೇಶ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ವಿಚಾರವಾಗಿಯೇ ಹೊರತು ಬೇರೆ ಯಾವುದೇ ವಿಚಾರಕ್ಕಾಗಿ ಅಲ್ಲವೇ ಅಲ್ಲ ಎಂದು ಸ್ವಾಮೀಜಿ ಸ್ಪಷ್ಟಪಡಿಸಿದರು.

ಉತ್ತರ ಕರ್ನಾಟಕ ಭಾಗಕ್ಕೆ ಈ ಹಿಂದೆ ಅನ್ಯಾಯವಾದಾಗ, ಸೌಲಭ್ಯ ಸಿಗದಿದ್ದಾಗ ಹಲವಾರು ಬಾರಿ ಪ್ರತ್ಯೇಕತೆ ಕೂಗು ಕೇಳಿ ಬಂದಿದೆ. 70 ವರ್ಷಗಳಿಂದ ಉತ್ತರ ಕರ್ನಾಟಕ ಹಿಂದುಳಿದ ಪ್ರದೇಶವಾಗಿದೆ. ಕೃಷ್ಣಾ ನದಿ, ಮಹದಾಯಿ ವಿಚಾರದಲ್ಲಿ ಅನ್ಯಾಯವಾದಾಗ ಅಂತಹ ಕೂಗು ಕೇಳಿ ಬಂದಿತ್ತು. ಈಗ ಮತ್ತೆ ಕೇಳಿ ಬರುತ್ತಿದೆ. ನಮಗೆ ಅನ್ಯಾಯವಾಗಿದೆ ಎಂದು ಆ ರೀತಿ ಹೇಳುತ್ತಿದ್ದಾರೆ. ಉತ್ತರ ಕರ್ನಾಟಕದವರಿಗೆ ಪ್ರತ್ಯೇಕ ಆಗಬೇಕು ಎಂಬ ಬಯಕೆ ಇಲ್ಲ. ಅಭಿವೃದ್ಧಿ ಆಗಬೇಕು ಎಂಬ ಬಯಕೆ ಇದೆ ಎಂದರು.

ಪ್ರತ್ಯೇಕ ರಾಜ್ಯ ಬೇಡಿಕೆ ಸರಿಯಲ್ಲ: ಸಂಸದೆ ಶೋಭಾ
ಮೈಸೂರು
: ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟುಕೊಂಡು ಉತ್ತರ ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಂಸದೆ ಶೋಭಾ ಕರಂದ್ಲಾಜೆ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದರೆ ಎಲ್ಲಾ ಸಮಸ್ಯೆಗಳಿಗೂ ಉತ್ತರ ಸಿಗುವುದಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕೆಂಬ ಬೇಡಿಕೆ ಇಟ್ಟಿರುವುದು ಸರಿಯಲ್ಲ. ಅಲ್ಲದೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದ ಮಾತ್ರಕ್ಕೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುವುದಿಲ್ಲ ಎಂದರು.

ಈಗಾಗಲೇ ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳು ಪ್ರತ್ಯೇಕವಾದ ನಂತರ ಈ ರಾಜ್ಯಗಳು ದುರ್ಬಲಗೊಂಡಿದ್ದು, ಈ ಪರಿಸ್ಥಿತಿ ನಮ್ಮ ರಾಜ್ಯಕ್ಕೂ ಬರಬಾರದು. ಅಲ್ಲದೆ ಮಹದಾಯಿ, ಕೃಷ್ಣ, ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ನ್ಯಾಯ ಸಿಗಬೇಕಾದರೆ ಇಡೀ ರಾಜ್ಯದ ಜನರು ಒಗ್ಗಟ್ಟಿನಿಂದಿರಬೇಕು. ಉತ್ತರ ಕರ್ನಾಟಕದ ಜನರೊಂದಿಗೆ ಬಿಜೆಪಿ ಸದಾ ಇರಲಿದೆ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಖ್ಯಮಂತ್ರಿ ರಾಜನಾಗಿದ್ದು, ರಾಜ್ಯದ ಎಲ್ಲಾ ಭಾಗಗಳ ಜನರ ಸಮಸ್ಯೆಗೆ ಮುಖ್ಯಮಂತ್ರಿಗಳು ಸಮಾನವಾಗಿ ಸ್ಪಂದಿಸಬೇಕು. ಆದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಕೇವಲ ಮೂರ್ನಾಲ್ಕು ಜಿಲ್ಲೆಗೆ ಮಾತ್ರ ಸೀಮಿತರಾಗಿದ್ದು, ಇದೇ ಕಾರಣದಿಂದ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕೆಂಬ ಕೂಗು ಎದ್ದಿದೆ ಎಂದು ಕುಮಾರಸ್ವಾಮಿ ವಿರುದ್ಧ ವಾಗ್ಧಾಳಿ ನಡೆಸಿದರು.

ಟಾಪ್ ನ್ಯೂಸ್

ಗ್ರಾಮ ಸಹಾಯಕರ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪ: ಡಿ.ಕೆ.ಶಿವಕುಮಾರ್‌

ಗ್ರಾಮ ಸಹಾಯಕರ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪ: ಡಿ.ಕೆ.ಶಿವಕುಮಾರ್‌

ಸಿಧು ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸುವೆ; ಪಂಜಾಬ್‌ ಮಾಜಿ ಸಿಎಂ ಕ್ಯಾಪ್ಟನ್‌ ಗುಡುಗು

ಸಿಧು ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸುವೆ; ಪಂಜಾಬ್‌ ಮಾಜಿ ಸಿಎಂ ಕ್ಯಾಪ್ಟನ್‌ ಗುಡುಗು

ಡೆಲ್ಲಿ ಟಾಪರ್‌; ಮೇಲೇಳದ ಹೈದರಾಬಾದ್‌

ಡೆಲ್ಲಿ ಟಾಪರ್‌; ಮೇಲೇಳದ ಹೈದರಾಬಾದ್‌

ಭೋಗ್ಯದ ಜಾಗ ಅನ್ಯ ಉದ್ದೇಶಗಳಿಗೆ ಬಳಸಿದರೆ ಕ್ರಮ: ಸಚಿವ ಅಶೋಕ್‌

ಭೋಗ್ಯದ ಜಾಗ ಅನ್ಯ ಉದ್ದೇಶಗಳಿಗೆ ಬಳಸಿದರೆ ಕ್ರಮ: ಸಚಿವ ಅಶೋಕ್‌

ಹತ್ತು ವರ್ಷದಲ್ಲಿ 2.33 ಲಕ್ಷ ಮನೆ ಪೂರ್ಣ: ಸಚಿವ ಸೋಮಣ್ಣ

ಹತ್ತು ವರ್ಷದಲ್ಲಿ 2.33 ಲಕ್ಷ ಮನೆ ಪೂರ್ಣ: ಸಚಿವ ಸೋಮಣ್ಣ

ಮೂರು ತಿಂಗಳಲ್ಲಿ ಲೆಕ್ಕಪತ್ರಪರಿಶೋಧನೆ ಮಾಡಿ: ಸುಪ್ರೀಂ

ಮೂರು ತಿಂಗಳಲ್ಲಿ ಲೆಕ್ಕಪತ್ರಪರಿಶೋಧನೆ ಮಾಡಿ: ಸುಪ್ರೀಂ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೃಷಿ ಉತ್ಪನ್ನ ಬೇಡಿಕೆ ಹೆಚ್ಚಿಸಲು ಸಂಶೋಧನೆ ಕೈಗೊಳ್ಳಿ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೃಷಿ ಉತ್ಪನ್ನ ಬೇಡಿಕೆ ಹೆಚ್ಚಿಸಲು ಸಂಶೋಧನೆ ಕೈಗೊಳ್ಳಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗ್ರಾಮ ಸಹಾಯಕರ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪ: ಡಿ.ಕೆ.ಶಿವಕುಮಾರ್‌

ಗ್ರಾಮ ಸಹಾಯಕರ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪ: ಡಿ.ಕೆ.ಶಿವಕುಮಾರ್‌

ಭೋಗ್ಯದ ಜಾಗ ಅನ್ಯ ಉದ್ದೇಶಗಳಿಗೆ ಬಳಸಿದರೆ ಕ್ರಮ: ಸಚಿವ ಅಶೋಕ್‌

ಭೋಗ್ಯದ ಜಾಗ ಅನ್ಯ ಉದ್ದೇಶಗಳಿಗೆ ಬಳಸಿದರೆ ಕ್ರಮ: ಸಚಿವ ಅಶೋಕ್‌

ಹತ್ತು ವರ್ಷದಲ್ಲಿ 2.33 ಲಕ್ಷ ಮನೆ ಪೂರ್ಣ: ಸಚಿವ ಸೋಮಣ್ಣ

ಹತ್ತು ವರ್ಷದಲ್ಲಿ 2.33 ಲಕ್ಷ ಮನೆ ಪೂರ್ಣ: ಸಚಿವ ಸೋಮಣ್ಣ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೃಷಿ ಉತ್ಪನ್ನ ಬೇಡಿಕೆ ಹೆಚ್ಚಿಸಲು ಸಂಶೋಧನೆ ಕೈಗೊಳ್ಳಿ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೃಷಿ ಉತ್ಪನ್ನ ಬೇಡಿಕೆ ಹೆಚ್ಚಿಸಲು ಸಂಶೋಧನೆ ಕೈಗೊಳ್ಳಿ

ಬೆಳಗಾವಿ : 28ರಿಂದ ಸವದತ್ತಿ ಶ್ರೀ ಯಲ್ಲಮ್ಮ ದೇವಿ ದರ್ಶನ ಭಾಗ್ಯ

ಬೆಳಗಾವಿ : 28ರಿಂದ ಸವದತ್ತಿ ಶ್ರೀ ಯಲ್ಲಮ್ಮ ದೇವಿ ದರ್ಶನ ಭಾಗ್ಯ

MUST WATCH

udayavani youtube

ಈ ಹೋಟೆಲ್‌ನಲ್ಲಿ ಸೀರೆಗಿಲ್ಲ ಅವಕಾಶ!

udayavani youtube

22 ಕಿ.ಮೀ ದೂರ ಬಿಟ್ಟು ಬಂದರೂ ಲಾರಿ ಹತ್ತಿ ಮತ್ತೆ ಅದೇ ಜಾಗಕ್ಕೆ ಬಂದ ಕೋತಿ

udayavani youtube

ಉಗ್ರ ಎಂದು ಕಾಶ್ಮೀರ ದೇವಾಲಯದಲ್ಲಿ ಪೊಲೀಸ್ ಕಾನ್ಸ್ ಸ್ಟೇಬಲ್ ಗೆ ಗುಂಡಿಕ್ಕಿ ಹತ್ಯೆ

udayavani youtube

ಪಿತ್ರೋಡಿ ಹೊಳೆಗೆ ಸೇರುತ್ತಿವೆ ಮಲಿನ ತ್ಯಾಜ್ಯಗಳು, ದಡ ಸೇರುತ್ತಿವೆ ಸತ್ತ ಮೀನುಗಳು

udayavani youtube

ನಟನ ಯಶಸ್ಸು ಎಲ್ಲಿದೆಯಂದ್ರೆ..

ಹೊಸ ಸೇರ್ಪಡೆ

ಗ್ರಾಮ ಸಹಾಯಕರ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪ: ಡಿ.ಕೆ.ಶಿವಕುಮಾರ್‌

ಗ್ರಾಮ ಸಹಾಯಕರ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪ: ಡಿ.ಕೆ.ಶಿವಕುಮಾರ್‌

ಸಿಧು ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸುವೆ; ಪಂಜಾಬ್‌ ಮಾಜಿ ಸಿಎಂ ಕ್ಯಾಪ್ಟನ್‌ ಗುಡುಗು

ಸಿಧು ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸುವೆ; ಪಂಜಾಬ್‌ ಮಾಜಿ ಸಿಎಂ ಕ್ಯಾಪ್ಟನ್‌ ಗುಡುಗು

ಡೆಲ್ಲಿ ಟಾಪರ್‌; ಮೇಲೇಳದ ಹೈದರಾಬಾದ್‌

ಡೆಲ್ಲಿ ಟಾಪರ್‌; ಮೇಲೇಳದ ಹೈದರಾಬಾದ್‌

ಭೋಗ್ಯದ ಜಾಗ ಅನ್ಯ ಉದ್ದೇಶಗಳಿಗೆ ಬಳಸಿದರೆ ಕ್ರಮ: ಸಚಿವ ಅಶೋಕ್‌

ಭೋಗ್ಯದ ಜಾಗ ಅನ್ಯ ಉದ್ದೇಶಗಳಿಗೆ ಬಳಸಿದರೆ ಕ್ರಮ: ಸಚಿವ ಅಶೋಕ್‌

ಹತ್ತು ವರ್ಷದಲ್ಲಿ 2.33 ಲಕ್ಷ ಮನೆ ಪೂರ್ಣ: ಸಚಿವ ಸೋಮಣ್ಣ

ಹತ್ತು ವರ್ಷದಲ್ಲಿ 2.33 ಲಕ್ಷ ಮನೆ ಪೂರ್ಣ: ಸಚಿವ ಸೋಮಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.