ಕೂಡ್ಲಿಗಿ ಪಪಂ ಆಡಳಿತ ಬಿಜೆಪಿ ತೆಕ್ಕೆಗೆ?

ಬಿಜೆಪಿ-ಜೆಡಿಎಸ್‌ ಒಳ ಒಪ್ಪಂದ

Team Udayavani, Nov 1, 2020, 7:46 PM IST

ballary-tdy-2

ಕೂಡ್ಲಿಗಿ: ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದೇ ತೀವ್ರ ಕುತೂಹಲ ಕೆರಳಿಸಿದ್ದ ಕೂಡ್ಲಿಗಿ ಪಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಕುರಿತ ಚರ್ಚೆಗೆ ಬಹುತೇಕ ತೆರೆಬಿದ್ದಂತಾಗಿದೆ. ಬಿಜೆಪಿ ಮತ್ತು ಜೆಡಿಎಸ್‌ ಒಳ ಒಪ್ಪಂದ ಮಾಡಿಕೊಂಡು ಅಧಿಕಾರದ ಗದ್ದುಗೆ ಏರುವುದು ಬಹುತೇಕ ನಿಚ್ಚಳವಾಗಿದೆ.

ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 20 ವಾರ್ಡ್‌ ಗಳಿದ್ದು, ಅಧ್ಯಕ್ಷ ಸ್ಥಾನ ಎಸ್ಸಿ ಮಹಿಳೆ ಮತ್ತು ಉಪಾಧ್ಯಕ್ಷರ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಪಪಂಗೆ ಆಯ್ಕೆ ಆಗಿರುವ 20 ಸದಸ್ಯರಲ್ಲಿ ಕಾಂಗ್ರೆಸ್‌-6, ಬಿಜೆಪಿ-6 ಮತ್ತು ಜೆಡಿಎಸ್‌-4 ಪಕ್ಷೇತರರು ಇಬ್ಬರಿದ್ದಾರೆ. ಇವರಲ್ಲಿ ಬಿಜೆಪಿಯ ಒಬ್ಬರು ಮತ್ತು ಪಕ್ಷೇತರ ಸದಸ್ಯರೊಬ್ಬರು ಮೃತಪಟ್ಟಿದ್ದಾರೆ. ಬಿಜೆಪಿಯಲ್ಲಿ ಎಸ್ಸಿ ಮಹಿಳೆ ಸದಸ್ಯೆ ಒಬ್ಬರಿದ್ದು, ಪಕ್ಷೇತರ ಸದಸ್ಯೆಯೊಬ್ಬರೂ ಇದೇ ಮೀಸಲು ಅಡಿಯಲ್ಲಿ ಇದ್ದಾರೆ. ಬಿಜೆಪಿ ಸದಸ್ಯರ ಸಂಖ್ಯೆ 6. ಶಾಸಕರು ಮತ್ತು ಸಂಸದರ ಮತ ಸೇರಿ ಒಟ್ಟು ಎಂಟು ಮತಗಳು ಬಿಜೆಪಿಯದ್ದೇ ಆಗಲಿವೆ. ಇದರೊಂದಿಗೆ ಜೆಡಿಎಸ್‌-4 ಸದಸ್ಯರು ಮತ್ತು ಪಕ್ಷೇತರ 2 ಸದಸ್ಯರ ಬೆಂಬಲ ದೊರೆತಲ್ಲಿ ಒಟ್ಟು ಬಲ -12 ಆಗಲಿದ್ದು ಅಧಿಕಾರದ ಗದ್ದುಗೆ ಏರಬಹುದಾಗಿದೆ.

ಶಾಸಕರಾದ ಗೋಪಾಲಕೃಷ್ಣ ಪಟ್ಟಣ ಪಂಚಾಯಿತಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗಾಗಿ ಜೆಡಿಎಸ್‌ ಪ್ರಮುಖರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದ್ದು, ಫಲಪ್ರದವಾದರೆ ಗದ್ದುಗೆ ಬಿಜೆಪಿ ಪಾಲಾಗುವುದು ಖಚಿತ. ಎರಡನೇ ವಾರ್ಡ್‌ನ ಬಿಜೆಪಿ ಸದಸ್ಯೆ ಎಂ. ಶಾರದಬಾಯಿ ಇವರಿಗೆ ಅಧ್ಯಕ್ಷ ಸ್ಥಾನ, 15ನೇ ವಾರ್ಡಿನ ಊರಮ್ಮ ಉಪಾಧ್ಯಕ್ಷರಾಗಿ ಆಯ್ಕೆ ಆಗುವುದು ಬಹುತೇಕ ಖಚಿತವಾಗಿದೆ. ಇನ್ನು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನವನ್ನು ಜೆಡಿಎಸ್‌ ಗೆ ಬಿಟ್ಟು ಕೊಟ್ಟಿದ್ದು, ಈ ಸ್ಥಾನಕ್ಕ ತಳಾಸ ವೆಂಕಟೇಶ ಹೆಸರು ಕೇಳಿ ಬರುತ್ತಿದೆ. ಶಾಸಕರು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನವನ್ನು ತಮ್ಮ ಪಕ್ಷಕ್ಕೆ ಇಟ್ಟುಕೊಂಡು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟು ಕೊಡುವ ಮೂಲಕ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ.

ಹೀಗೆ ಬಿಜೆಪಿ ಮತ್ತು ಜೆಡಿಎಸ್‌ ಸೇರಿ ಹೊಂದಾಣಿಕೆ ಮಾಡಿಕೊಂಡು ಪಕ್ಷೇತರರನ್ನು ಸೆಳೆದು ಪಪಂ ಆಡಳಿತವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಸಾಧ್ಯತೆಗಳು  ಇವೆ. ಬಿಜೆಪಿಗೆ ಅಧಿಕಾರ ಪಡೆಯಲು ಕೋರಂ ಬೆಂಬಲ ಇಲ್ಲದಿದ್ದರೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬೇಕೋ ಅಥವಾ ಬೇಡವೋ ಎಂಬುದನ್ನು ಪಕ್ಷ ತೀರ್ಮಾನಿಸಬೇಕಿದೆ.

ಒಳ ಒಪ್ಪಂದದ ಪ್ರಕಾರ ಈಗಾಗಲೇ ಜೆಡಿಎಸ್‌ ಮತ್ತು ಪಕ್ಷೇತರ ಸದಸ್ಯರು ಬಿಜೆಪಿಗೆ ಬೆಂಬಲಿಸಿದ್ದು, ಬಿಜೆಪಿ ಶಾಸಕರು, ಮುಖಂಡರು, ಸದಸ್ಯರು ಚರ್ಚಿಸಿ ತೀರ್ಮಾನಿಸಿದಂತೆ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುವುದು ಪಕ್ಷದ ತೀರ್ಮಾನಕ್ಕೆ ಬಿಟ್ಟ ವಿಚಾರ. ಶಾಸಕರ ಸಮ್ಮುಖದಲ್ಲಿ ಚರ್ಚೆ ನಡೆದಿದ್ದು ಉಪಾಧ್ಯಕ್ಷ ಸ್ಥಾನಕ್ಕೆ ಮೊದಲ ಹಂತದಲ್ಲಿ ಇಬ್ಬರು ಇಷ್ಟು ತಿಂಗಳುಗಳ ಕಾಲ ಅಧಿಕಾರ ನಡೆಸುವಂತೆತೀರ್ಮಾನಿಸಲಾಗಿದೆ. 15ನೇ ವಾರ್ಡಿನ ಬಿಜೆಪಿ ಸದಸ್ಯ ಊರಮ್ಮ ಇವರು ಮೊದಲು ಅನಂತರದಲ್ಲಿ 14ನೇ ವಾರ್ಡಿನ ಬಿಜೆಪಿ ಸದಸ್ಯೆ ರೇಣುಕಾಶ್ರೀ ದುರುಗೇಶರವರಿಗೆ ಬಿಟ್ಟುಕೊಡಬೇಕು ಎಂದು ಒಳ ಒಪ್ಪಂದವಾಗಿದೆ ಎಂದು ತಿಳಿದು ಬಂದಿದೆ.

ಜೆಡಿಎಸ್‌ಗೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡಲು ಬಿಜೆಪಿ ಮುಂದಾಗಿದೆ. ಅದರಲ್ಲಿ ಹಿರಿಯ ಸದಸ್ಯ 6ನೇ ವಾರ್ಡಿನ ಜೆಡಿಎಸ್‌ ಸದಸ್ಯ ತಳಾಸ ವೆಂಕಟೇಶ್‌ಗೆ ಕೊಡುವ ಬಗ್ಗೆ ತೀರ್ಮಾನಿಸಲಾಗಿದೆ. ಜೆಡಿಎಸ್‌ನಲ್ಲಿ ಸಹ ಮೊದಲು ಇಷ್ಟು ತಿಂಗಳು 20ನೇ ವಾರ್ಡಿನ ಸದಸ್ಯ ಬಾಸ್ಸು ನಾಯಕ್‌ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಪಡೆದುಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

 

-ಕೆ.ನಾಗರಾಜ್‌

ಟಾಪ್ ನ್ಯೂಸ್

1-qewqwqewq

Netizens; 10ನೇ ತರಗತಿ ಪರೀಕ್ಷೆ ಟಾಪರ್‌ ಟ್ರೋಲ್‌: ನೆಟ್ಟಿಗರಿಂದ ತರಾಟೆ

congress

Controversy;ಪಿಎಂ ಮೋದಿ ವಿರುದ್ಧ ಕಾಂಗ್ರೆಸ್‌ ಲಕ್ಷ ಸಹಿ ಅಭಿಯಾನ

1-ewewqqweqweewq

Hong Kong ಎವರೆಸ್ಟ್‌, ಎಂಡಿಎಚ್‌ ಮಸಾಲೆ ಬ್ಯಾನ್‌

1-wewqwewq

IPL; ಲಕ್ನೋ ಸೂಪರ್‌ ಜೈಂಟ್ಸ್‌ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ

court

West Bengal: 25,753 ಶಿಕ್ಷಕರ ನೇಮಕ ರದ್ದು

UGC

CUET-NET ಅಂಕಗಳ ಸಾಮಾನ್ಯೀಕರಣ ಇಲ್ಲ: ಯುಜಿಸಿ ಮುಖ್ಯಸ್ಥ

kejriwal 2

Kejriwal ಬಿಡುಗಡೆಗೆ ಪಿಐಎಲ್‌: ವಿದ್ಯಾರ್ಥಿಗೆ 75,000 ದಂಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Neha Hiremath Case; Protest by BJP-JDS-ABVP across the state

Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್

Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್

Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್‌

Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್‌

ವಿಜಯೇಂದ್ರ

Bellary; ಕಾಂಗ್ರೆಸ್ ಏನೇ ಹಾರಾಟ ಮಾಡಿದರೂ ನಮಗೆ ಲಾಭ ಆಗುತ್ತದೆ: ವಿಜಯೇಂದ್ರ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-qewqwqewq

Netizens; 10ನೇ ತರಗತಿ ಪರೀಕ್ಷೆ ಟಾಪರ್‌ ಟ್ರೋಲ್‌: ನೆಟ್ಟಿಗರಿಂದ ತರಾಟೆ

congress

Controversy;ಪಿಎಂ ಮೋದಿ ವಿರುದ್ಧ ಕಾಂಗ್ರೆಸ್‌ ಲಕ್ಷ ಸಹಿ ಅಭಿಯಾನ

1-ewewqqweqweewq

Hong Kong ಎವರೆಸ್ಟ್‌, ಎಂಡಿಎಚ್‌ ಮಸಾಲೆ ಬ್ಯಾನ್‌

1-wewqwewq

IPL; ಲಕ್ನೋ ಸೂಪರ್‌ ಜೈಂಟ್ಸ್‌ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ

court

West Bengal: 25,753 ಶಿಕ್ಷಕರ ನೇಮಕ ರದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.