ಕೊಟ್ಟೂರಲ್ಲಿ ಹೆಚ್ಚಿದ ಮರಳು ಸಾಗಾಣಿಕೆ ದಂಧೆ

ಕ್ವಾರಂಟೈನ್‌ನಲ್ಲಿ ಪೊಲೀಸರು; ಲಾಭ ಪಡೆದ ದಂಧೆಕೋರರು ವಿಶೇಷ ಪೊಲೀಸ್‌ ತಂಡ ನಿಯೋಜನೆಗೆ ಒತ್ತಾಯ

Team Udayavani, Jun 4, 2020, 4:58 PM IST

04-June-28

ಕೊಟ್ಟೂರು: ಮರೂರು ಹಳ್ಳದ ಪಕ್ಕದ ಪ್ರದೇಶದ ಮರಳನ್ನು ಕಳ್ಳ ಸಾಗಾಣಿಕೆ ಮಾಡಿರುವುದು

ಕೊಟ್ಟೂರು: ಕೋವಿಡ್ ಭೀತಿಯಿಂದ ಕೊಟ್ಟೂರು ಠಾಣೆ ಪೊಲೀಸರು ಕ್ವಾರಂಟೈನ್‌ ನಲ್ಲಿದ್ದು ಮರಳು ದಂಧೆಕೋರರು ಇದನ್ನೇ ಲಾಭವಾಗಿಸಿಕೊಂಡು ಮರಳು ಎಗ್ಗಿಲ್ಲದೆ ಮರಳು ಸಾಗಾಣಿಕೆ ನಡೆಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಪಟ್ಟಣದ ಬಿಕ್ಕಿಮರಡಿ ದುರ್ಗಾಂಬ ದೇವಾಲಯದ ಹಿಂಭಾಗದಲ್ಲಿ ನಾಲ್ಕೈದು ಟ್ರ್ಯಾಕ್ಟರ್‌ಗಳು ರಾಜಾರೋಷವಾಗಿ ಬುಧವಾರ ಗ್ರಾವಲ್‌ ಸಾಗಾಣಿಕೆಯಲ್ಲಿ ತೊಡಗಿದ್ದವು. ಕೊಟ್ಟೂರು ಪೊಲೀಸ್‌ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೇದೆಯೊಬ್ಬರಿಗೆ ಕೋವಿಡ್  ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಠಾಣೆಯ ಎಲ್ಲ ಸಿಬ್ಬಂದಿ ಕ್ವಾರಂಟೈನ್‌ನಲ್ಲಿದ್ದಾರೆ. ಹೀಗಾಗಿ ಬೇರೆ ಠಾಣೆಯಿಂದ ಈ ಠಾಣೆಗೆ ಕರ್ತವ್ಯಕ್ಕೆ ಪೊಲೀಸರನ್ನು ನಿಯೋಜಿಸಲಾಗಿದೆ. ಆದರೆ ಮರಳು ದಂಧೆಕೋರರು ಇದನ್ನೇ ಸದುಪಯೋಗ ಪಡಿಸಿಕೊಂಡು ತಮ್ಮ ಅಕ್ರಮ ಮುಂದುವರಿಸಿದ್ದಾರೆ. ತಾತ್ಕಾಲಿಕವಾಗಿ ಡ್ನೂಟಿಗೆ ಹಾಜರಾದ ಪೊಲೀಸರು ತಮ್ಮನ್ನು ಏನೂ ಮಾಡಲಾರರು ಎಂಬ ಧೈರ್ಯದಲ್ಲಿ ತಮ್ಮ ಧಂಧೆ ಮುಂದುವರಿಸಿದ್ದಾರೆ.

ಕೂಡ್ಲಿಗಿ, ಶಿರಬಿ, ಚಪ್ಪರದಹಳ್ಳಿ, ಹ್ಯಾಳ್ಯಾ, ಮರೂರು, ರಾಂಪುರ ಮಾರ್ಗದಲ್ಲಿನ ಹಳ್ಳಗಳ ಹೊಲಗಳಿಂದ ರಾತ್ರಿಯಿಂದ ಬೆಳಗಾಗುವ ತನಕ ಮರಳು ಕಳ್ಳಸಾಗಾಣಿಕೆ ನಡೆಯುತ್ತಿದೆ. ಪೊಲೀಸರು ಮರಳು ಕಳ್ಳಸಾಗಾಣಿಕೆ ಮಾಡುವ ಅನೇಕ ಟ್ರ್ಯಾಕ್ಟರ್‌ಗಳನ್ನು ಸೀಜ್‌ ಮಾಡಿರುವುದರಿಂದ ಈಗ ನಂಬರ್‌ ಪ್ಲೇಟ್‌ ಇಲ್ಲದ ಟ್ರ್ಯಾಕ್ಟರ್‌ಗಳು ಮರಳು ಸಾಗಾಣಿಕೆ ಮಾಡುತ್ತಿವೆ. ಮರಳು ಕಳ್ಳ ಸಾಗಾಣಿಕೆ ದಂಧೆಗೆ ಕಡಿವಾಣ ಹಾಕಲು ಹಗಲು ರಾತ್ರಿ ಶ್ರಮಿಸುತ್ತಿದ್ದ ಪಿಎಸ್‌ಐ ಎ. ಕಾಳಿಂಗ ಈಗ ಕ್ವಾರಂಟೈನ್‌ನಲ್ಲಿರುವುದು ಹಾಗೂ ಸಿಪಿಐ ಒಬ್ಬರೇ ಎಲ್ಲವನ್ನೂ ನಿಭಾಯಿಸಬೇಕಾಗಿರುವ ಅನಿವಾರ್ಯತೆ ಎದುರಾಗಿದೆ. ಇದು ದಂಧೆ ಹೆಚ್ಚಾಗಲು ಕಾರಣವಾಗಿದೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೊಟ್ಟೂರು ಭಾಗದಲ್ಲಿ ಮರಳು ಕಳ್ಳ ಸಾಗಾಣಿಕೆಗೆ ಕಡಿವಾಣ ಹಾಕಲು ವಿಶೇಷ ಪೊಲೀಸ್‌ ತಂಡವನ್ನು ಕರ್ತವ್ಯಕ್ಕೆ ನಿಯೋಜಿಸಬೇಕಿದೆ ಎಂದು ಸಾರ್ವಜನಿಕರ ಒತ್ತಾಯಿಸಿದ್ದಾರೆ.

ಪೊಲೀಸರು ಕ್ವಾರೈಂಟನ್‌ ನಲ್ಲಿರುವುದು ಕಳ್ಳರಿಗೆ ಆಟವಾಗಿದೆ. ಅಂತರ್ಜಲ ಹೆಚ್ಚಿಸಲು ಪಟ್ಟಣಕ್ಕೆ ಇರುವ ಕೆರೆ ಇದು ಒಂದೇ. ಆದರೆ ಅದರಲ್ಲಿ ಮರಳು ಕಳ್ಳಸಾಗಾಣಿಕೆಯಾಗುತ್ತಿರುವುದು ದುರಂತ. ಪೊಲೀಸ್‌ ಗಸ್ತು ತಿರುಗಿ ಇಂಥ ಕೃತ್ಯಗಳಿಗೆ ಕಡಿವಾಣ ಹಾಕುತ್ತಿದ್ದರು. ಆದರೆ ಈ ಕೋವಿಡ್ ಭೀತಿಯಿಂದಾಗಿ ಎಲ್ಲವೂ ನಿಂತುಹೋದ ಹಿನ್ನೆಲೆಯಲ್ಲಿ ಕಳ್ಳರ ಕಾಟ ಜೋರಾಗಿದೆ.
ಕೊಟ್ರೇಶ್‌,
ಗ್ರಾಮಸ್ಥ ಕೊಟ್ಟೂರು

ಇಂಥ ಕಳ್ಳ ಸಾಗಾಣಿಕೆ ಮಾಡುವವರು ಯಾರೇ ಆಗಲಿ ಕೂಡಲೇ ಪರಿಶೀಲಿಸಿ ಕಳ್ಳ ಸಾಗಾಣಿಕೆಗೆ ಕಡಿವಾಣ ಹಾಕುತ್ತೇವೆ. ಇಡೀ ಊರೇ ಕೋವಿಡ್ ಭೀತಿಯಲ್ಲಿರುವಾಗ ಇಂಥ ಕೃತ್ಯಗಳು ಮುಂದುವರಿಯದಂತೆ ಕ್ರಮ ಕೈಗೊಳ್ಳುತ್ತೇವೆ.
ರವೀಂದ್ರ ಕುರುಬಗಟ್ಟಿ,
ಸಿಪಿಐ, ಕೊಟ್ಟೂರು

ಎಂ. ರವಿಕುಮಾರ

ಟಾಪ್ ನ್ಯೂಸ್

ದ್ವಿಚಕ್ರ ಪ್ರಯಾಣಿಕರೇ ಗಮನಿಸಿ! ಹೆಲ್ಮೆಟ್‌ ಸಡಿಲವಾಗಿ ಧರಿಸಿದ್ದರೂ ದಂಡ!

ದ್ವಿಚಕ್ರ ಪ್ರಯಾಣಿಕರೇ ಗಮನಿಸಿ! ಹೆಲ್ಮೆಟ್‌ ಸಡಿಲವಾಗಿ ಧರಿಸಿದ್ದರೂ ದಂಡ!

thumb 1

ಹೈದರಾಬಾದ್‌-ಪಂಜಾಬ್‌ ಲಾಸ್ಟ್‌ ಶೋ; ಇಂದು ಕೊನೆಯ ಲೀಗ್‌ ಪಂದ್ಯ ; ಕೇವಲ ಔಪಚಾರಿಕ ಮುಖಾಮುಖಿ

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ: ಇಂದು ಭಾರತ ತಂಡ ಪ್ರಕಟ

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ: ಇಂದು ಭಾರತ ತಂಡ ಪ್ರಕಟ

ಸಮುದಾಯ ಮತಬ್ಯಾಂಕ್‌ನತ್ತ ಕಾಂಗ್ರೆಸ್‌ ದೃಷ್ಟಿ

ಸಮುದಾಯ ಮತಬ್ಯಾಂಕ್‌ನತ್ತ ಕಾಂಗ್ರೆಸ್‌ ದೃಷ್ಟಿ

ಬೆಳೆ ಹಾನಿ ಸಮೀಕ್ಷಾ ವರದಿಗೆ ಸಿಎಂ ಬೊಮ್ಮಾಯಿ ಸೂಚನೆ

ಬೆಳೆ ಹಾನಿ ಸಮೀಕ್ಷಾ ವರದಿಗೆ ಸಿಎಂ ಬೊಮ್ಮಾಯಿ ಸೂಚನೆ

astrology

ರವಿವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

ಮಂಗಳೂರಿನಲ್ಲಿ ವಿಮಾನ ಮಹಾದುರಂತಕ್ಕೆ 12 ವರ್ಷ

ಮಂಗಳೂರಿನಲ್ಲಿ ವಿಮಾನ ಮಹಾದುರಂತಕ್ಕೆ 12 ವರ್ಷಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

siraguppa

ಬೈಪಾಸ್‌ ರಸ್ತೆ ಕೆಸರಲ್ಲಿ ಹೂತ ಬಸ್‌: ಜನರ ಪರದಾಟ

sc-st

ಮೀಸಲಾತಿ ಹೆಚ್ಚಳಕ್ಕೆ ಅರೆಬೆತ್ತಲೆ ಪ್ರತಿಭಟನೆ

tree-park

ರಾಶಿ-ನಕ್ಷತ್ರ ಆಧಾರಿತ ಟ್ರೀ ಪಾರ್ಕ್‌ ನಿರ್ಮಾಣ

chilly

ಮೆಣಸಿನಕಾಯಿ ಮಾರುಕಟ್ಟೆಗೆ ಜಮೀನು ಮಂಜೂರು

ತುಂಗಭದ್ರಾ ಜಲಾಶಯದ ಒಳಹರಿವು ಹೆಚ್ಚಳ : ರೈತರ ಮೊಗದಲ್ಲಿ‌ ಮಂದಹಾಸ

ತುಂಗಭದ್ರಾ ಜಲಾಶಯದ ಒಳಹರಿವು ಹೆಚ್ಚಳ : ರೈತರ ಮೊಗದಲ್ಲಿ‌ ಮಂದಹಾಸ

MUST WATCH

udayavani youtube

ಶಿರ್ವ : ನೂತನ ಹೈಟೆಕ್‌ ಬಸ್ಸು ನಿಲ್ದಾಣ ಲೋಕಾರ್ಪಣೆ

udayavani youtube

ಬೆಳ್ತಂಗಡಿಯಲ್ಲೊಂದು ಗೋಡಂಬಿಯಾಕಾರದ ಮೊಟ್ಟೆ ಇಡುವ ಕೋಳಿ..

udayavani youtube

ಆಗ ನಿಮ್ಮಲ್ಲಿ 2 ಆಯ್ಕೆಗಳಿರುತ್ತವೆ .. ಅದೇನಂದ್ರೆ..

udayavani youtube

ದತ್ತಪೀಠದಲ್ಲಿ ನಮಾಜ್.. ವಿಡಿಯೋ ವೈರಲ್ : ಜಿಲ್ಲಾಧಿಕಾರಿ ಹೇಳಿದ್ದೇನು ?

udayavani youtube

ಮೆಸ್ಕಾಂ ಸಿಬ್ಬಂದಿ ಮೇಲೆ ತಂಡದಿಂದ ಹಲ್ಲೆ! ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಹೊಸ ಸೇರ್ಪಡೆ

ದ್ವಿಚಕ್ರ ಪ್ರಯಾಣಿಕರೇ ಗಮನಿಸಿ! ಹೆಲ್ಮೆಟ್‌ ಸಡಿಲವಾಗಿ ಧರಿಸಿದ್ದರೂ ದಂಡ!

ದ್ವಿಚಕ್ರ ಪ್ರಯಾಣಿಕರೇ ಗಮನಿಸಿ! ಹೆಲ್ಮೆಟ್‌ ಸಡಿಲವಾಗಿ ಧರಿಸಿದ್ದರೂ ದಂಡ!

thumb 1

ಹೈದರಾಬಾದ್‌-ಪಂಜಾಬ್‌ ಲಾಸ್ಟ್‌ ಶೋ; ಇಂದು ಕೊನೆಯ ಲೀಗ್‌ ಪಂದ್ಯ ; ಕೇವಲ ಔಪಚಾರಿಕ ಮುಖಾಮುಖಿ

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ: ಇಂದು ಭಾರತ ತಂಡ ಪ್ರಕಟ

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ: ಇಂದು ಭಾರತ ತಂಡ ಪ್ರಕಟ

ಸಮುದಾಯ ಮತಬ್ಯಾಂಕ್‌ನತ್ತ ಕಾಂಗ್ರೆಸ್‌ ದೃಷ್ಟಿ

ಸಮುದಾಯ ಮತಬ್ಯಾಂಕ್‌ನತ್ತ ಕಾಂಗ್ರೆಸ್‌ ದೃಷ್ಟಿ

ಬೆಳೆ ಹಾನಿ ಸಮೀಕ್ಷಾ ವರದಿಗೆ ಸಿಎಂ ಬೊಮ್ಮಾಯಿ ಸೂಚನೆ

ಬೆಳೆ ಹಾನಿ ಸಮೀಕ್ಷಾ ವರದಿಗೆ ಸಿಎಂ ಬೊಮ್ಮಾಯಿ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.