ಕೃಷ್ಣಾ-ತುಂಗಭದ್ರಾ ನದಿ ಜೋಡಣೆ

Team Udayavani, Jan 6, 2018, 2:18 PM IST

06-30.jpg

ಸಿರುಗುಪ್ಪ: ಕೃಷ್ಣಾ ನದಿಯಿಂದ ತುಂಗಭದ್ರಾ ನದಿಗೆ ನದಿ ಜೋಡಣೆ ಮಾಡಿ ಈ ಭಾಗದ ರೈತರು ಬೆಳೆ ಬೆಳೆಯಲು ಅನುಕೂಲ ಮಾಡಿ ಕೊಡುವುದಾಗಿ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಭರವಸೆ ನೀಡಿದರು.

ನಗರದ ತಾಲೂಕು ಕ್ರೀಡಾಂಗಣದಲ್ಲಿ ಬಿಜೆಪಿ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಬಿಜೆಪಿ ಪರಿವರ್ತನಾ ಯಾತ್ರೆ ಸಭೆಯಲ್ಲಿ ಅವರು
ಮಾತನಾಡಿದರು. ರಾಜ್ಯದಲ್ಲಿ ಹಿಂದು ಪರ ಸಂಘಟನೆಯ ಕಾರ್ಯಕರ್ತರ ಕೊಲೆಗಳು ನಿರಂತರವಾಗಿ ನಡೆಯುತ್ತಿದ್ದು, ಇದನ್ನು ತಡೆಯಲು ರಾಜ್ಯ
ಸರ್ಕಾರ ವಿಫಲವಾಗಿದೆ. ಕರ್ನಾಟಕವನ್ನು ಕೇರಳ ರಾಜ್ಯವನ್ನಾಗಿ ಮಾಡಲು ಬಿಡುವುದಿಲ್ಲ ಎಂದರು. 2009ರಲ್ಲಿ ರಾಜ್ಯದಲ್ಲಿ ಅತಿವೃಷ್ಟಿ ಉಂಟಾಗಿ ಈ
ಭಾಗದ ಜನರ ಮನೆ ಮಠಗಳು ಮುಳುಗಡೆಯಾದ ಪ್ರದೇಶಗಳಲ್ಲಿ ನವ ಗ್ರಾಮಗಳ ನಿರ್ಮಾಣಕ್ಕಾಗಿ 5 ರಿಂದ 6ಸಾವಿರ ಕೋಟಿ ರೂ.ಗಳನ್ನು ವೆಚ್ಚಮಾಡಿ ಜನರಿಗೆ ಆಶ್ರಯ ಕಲ್ಪಿಸಿದ್ದೇವೆ. ಕೆಲಸ ಮಾಡುವ ಮನಸ್ಸಿರಬೇಕು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಯಾವುದೇ ಕೆಲಸ
ಮಾಡುವ ಆಸಕ್ತಿಯಿಲ್ಲ, ಸುಮಾರು 25 ಸಾವಿರ ಜನ ಸಾಗರ ಸೇರಿದ್ದು, ಈ ಕ್ಷೇತ್ರದ ಮಾಜಿ ಶಾಸಕ ಎಂ.ಎಸ್‌. ಸೋಮಲಿಂಗಪ್ಪ 25ಸಾವಿರ
ಮತಗಳ ಅಂತರದಿಂದ ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಆಡಳಿತ ನಡೆಸುವಲ್ಲಿ ವಿಫಲವಾಗಿದೆ. ನಮ್ಮ ಆಡಳಿತದಲ್ಲಿ ಸಾವಿರಾರು ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಆದರೆ ಈ ಸರ್ಕಾರ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿಲ್ಲ ಎಂದು
ಆರೋಪಿಸಿದರು.  ನಾನು ಮುಖ್ಯಮಂತ್ರಿಯಾಗಿದ್ದಾಗ ಸಿರಗುಪ್ಪ ತಾಲೂಕಿನ ರಾರಾವಿ ಸೇತುವೆ ನಿರ್ಮಾಣಕ್ಕಾಗಿ 50 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಭೂಮಿ ಪೂಜೆ ಮಾಡಿ ಕಾಮಗಾರಿ ಆರಂಭಿಸಿದ್ದರೂ ಇಂದಿಗೂ ಸೇತುವೆಯ ಕಾಮಗಾರಿ ಮುಗಿದಿಲ್ಲ ಎಂದರು.

ಜನ ಸಾಮಾನ್ಯರಿಗೆ ಸರಳ ರೀತಿಯಲ್ಲಿ ದೊರೆಯಬೇಕಾದ ಮರಳು ಸಿಗುತ್ತಿಲ್ಲ. ಕಾಂಗ್ರೆಸ್‌ ಶಾಸಕರು, ಅವರ ಸಂಬಂಧಿಕರಿಗೆ ಮಾತ್ರ ಮಾರಾಟ
ಮಾಡಲು ಮರಳು ದೊರೆಯುತ್ತಿದೆ. ಆದರೆ, ಜನಸಾಮಾನ್ಯರಿಗೆ ದೊರೆಯುತ್ತಿಲ್ಲವಾದರೂ ಮಲೇಷಿಯಾದಿಂದ ಮರಳು ತರಿಸುವ
ವ್ಯವಹಾರದಲ್ಲಿಯೂ ಪರ್ಸೆಂಟೇಜ್‌ ವ್ಯವಹಾರ ನಡೆಸಿದ್ದಾರೆ ಎಂದು ದೂರಿದರು.

ರಾಜ್ಯ ಉಸ್ತುವಾರಿ ಮುರಳಿಧರ ರಾವ್‌ ಮಾತನಾಡಿ, ಸಿದ್ದರಾಮಯ್ಯನವರೇ ನಿಮ್ಮ ಅವಧಿ ಮುಗಿದಿದೆ. ನೀವಿನ್ನು ಸೀಟು ಖಾಲಿ ಮಾಡಿ ಮನೆಗೆ ಹೋಗಿ. ಕರ್ನಾಟಕಕ್ಕೆ ರಾಹುಲ್‌ ಗಾಂಧಿ  ಯನ್ನು ಕರೆತಂದರೂ ಪ್ರಯೋಜನವಾಗುವುದಿಲ್ಲ. ಇತ್ತೀಚೆಗೆ ನಡೆದ ಗುಜರಾತ, ಮತ್ತು ಹಿಮಾಚಲ
ಪ್ರದೇಶದಲ್ಲಿ ನಡೆದ ಚುನಾವಣೆಯಲ್ಲಿ ಫೇಲಾದ ರಾಹುಲ್‌ ಗಾಂಧಿ ಯನ್ನು ಕರ್ನಾಟಕಕ್ಕೆ ಕರೆತಂದರೆ ಇಲ್ಲಿಯೂ ಸೋಲುವುದು ಖಚಿತ ಎಂದರು.

ಗಲಿಬಿಲಿ: ವೇದಿಕೆಯ ಎಡಭಾಗದಲ್ಲಿ ಅಳವಡಿಸಲಾದ ಫ್ಯಾನ್‌ ವಿದ್ಯುತ್‌ ಅವಘಡದಿಂದ ಸುಟ್ಟಿದ್ದರಿಂದ ಕೊಂಚಹೊತ್ತು ವೇದಿಕೆಯಲ್ಲಿ
ಗಲಿಬಿಲಿ ಕಂಡುಬಂದಿತು. ಸಕಾಲಕ್ಕೆ ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿ ನಂದಿಸಿದರು. ಮಾಜಿ ಶಾಸಕ ಎಂ.ಎಸ್‌. ಸೋಮಲಿಂಗಪ್ಪ, ಶಿಸ್ತು ಸಮಿತಿ ರಾಜ್ಯಾಧ್ಯಕ್ಷ ಶಂಕ್ರಪ್ಪ, ಜಿಲ್ಲಾಧ್ಯಕ್ಷ ಕೆ. ಚನ್ನಬಸವನಗೌಡ ಮಾತನಾಡಿದರು. ಸಂಸದ ಕರಡಿಸಂಗಣ್ಣ, ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ, ಮಾಜಿ ಸಂಸದರಾದ ಪಕ್ಕೀರಪ್ಪ, ಜೆ. ಶಾಂತಾ, ವಿರೂಪಾಕ್ಷಪ್ಪ, ಶಾಸಕ ಟಿ.ಎಚ್‌. ಸುರೇಶ್‌ಬಾಬು, ಮಾಜಿ ಸಚಿವ ರೇಣುಕಾಚಾರ್ಯ, ಮಾಜಿ
ಶಾಸಕ ಜಿ. ಸೋಮಶೇಖರರೆಡ್ಡಿ, ಜಿಲ್ಲಾ ಮುಖಂಡರಾದ ಗುತ್ತಿಗನೂರು ವಿರೂಪಾಕ್ಷಗೌಡ, ಗುರುಲಿಂಗನಗೌಡ, ಮೂಳ್ಳೂರು ಪಂಪಾಪತಿ ಶೆಟ್ಟಿ,
ಕೆ. ರಾಮಲಿಂಗಪ್ಪ, ಜಿಲ್ಲಾ ಸಂಚಾಲಕ ಅನಿಲ್‌ಕುಮಾರ್‌, ಡಾ| ಮಹಿಪಾಲ್‌, ಡಾ| ಬಿ.ಕೆ. ಸುಂದರ್‌ ಇತರರು ಇದ್ದರು.

ಬಿಜೆಪಿ ರಾಜಾ ಜೆಪಿ ರಾಜ್ಯಾಧ್ಯಕ್ಷರಿಗೆ ಅದೂ ಗೆ ಅದ್ಧೂರಿ ಸ್ವಾಗತ 
ಸಿರುಗುಪ್ಪ: ನಗರದಲ್ಲಿ ಶುಕ್ರವಾರ ಸಂಜೆ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಗೆ ಅಗಮಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರಿಗೆ
ಸಾವಿರಾರು ಕಾರ್ಯಕರ್ತರು ಬೈಕ್‌ ರ್ಯಾಲಿ ಹಾಗೂ ಮಹಿಳಾ ತಂಡಗಳಿಂದ ಡೊಳ್ಳು ಕುಣಿತ, ವೀರಾಗಾಸೆ, ಹಗಲು ವೇಷಧಾರಿಗಳಿಂದ
ಕುಣಿತ, ರಾಮ್‌ಡೋಲ್‌ಗ‌ಳ ಮೂಲಕ ಸ್ವಾಗತಿಸಲಾಯಿತು. ನಂತರ ವೇದಿಕೆಗೆ ಅಗಮಿಸಿದ ರಾಜ್ಯ ಮುಖಂಡರನ್ನು ವಿಶೇಷವಾಗಿ ಮುಸ್ಲಿಂ
ಮಹಿಳಾ ಕಾರ್ಯಕರ್ತರು ಪುಷ್ಪ ಗುಚ್ಚಗಳನ್ನು ಅರ್ಪಿಸುವ ಮೂಲಕ ಸ್ವಾಗತ ಬಯಸಿದರು. 

ಕಾರ್ಯಕ್ರಮಕ್ಕೆ ಆಗಮಿಸಿದ ಕಾರ್ಯಕರ್ತರನ್ನು ಹಿಡಿದಿಡುವ ನಿಟ್ಟಿನಲ್ಲಿ ನಿರಂತರವಾಗಿ ಮಧ್ಯಾಹ್ನದಿಂದ ಸಂಜೆವರೆಗೆ ಸಂಗೀತಾ, ಹಾಸ್ಯ,
ನೃತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಭೆಗೆ ಮುನ್ನ ಮನರಂಜನೆ ನೀಡಲಾಯಿತು.

ಟಾಪ್ ನ್ಯೂಸ್

ವದಂತಿ ಹಬ್ಬಿಸುವವರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಲಿ

ವದಂತಿ ಹಬ್ಬಿಸುವವರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಲಿ

ಕ್ರಿಪ್ಟೋ ವಿಧೇಯಕ ಪರಿಷ್ಕರಿಸಿ ಮಂಡನೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌

ಕ್ರಿಪ್ಟೋ ವಿಧೇಯಕ ಪರಿಷ್ಕರಿಸಿ ಮಂಡನೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌

“ಹಣಕಾಸು ಇಲ್ಲದಿದ್ದರೆ ಹೊಸ ತಾಲೂಕು ರದ್ದುಪಡಿಸಿಬಿಡಿ’: ಸರ್ಕಾರಕ್ಕೆ ಹೈಕೋರ್ಟ್‌ ಚಾಟಿ

“ಹಣಕಾಸು ಇಲ್ಲದಿದ್ದರೆ ಹೊಸ ತಾಲೂಕು ರದ್ದುಪಡಿಸಿಬಿಡಿ’: ಸರ್ಕಾರಕ್ಕೆ ಹೈಕೋರ್ಟ್‌ ಚಾಟಿ

ಧರ್ಮಸ್ಥಳ ದೀಪೋತ್ಸವ: ಹೊಸಕಟ್ಟೆ ಉತ್ಸವ

ಧರ್ಮಸ್ಥಳ ದೀಪೋತ್ಸವ: ಹೊಸಕಟ್ಟೆ ಉತ್ಸವ

3 ತಿಂಗಳಲ್ಲ; 3 ದಿನಕ್ಕೊಮ್ಮೆ ಬಿಡುಗಡೆ!ಪರಿಹಾರ ವ್ಯವಸ್ಥೆಯಲ್ಲಿ ಬದಲಾವಣೆ; ಸಚಿವ ಅಶೋಕ್‌

3 ತಿಂಗಳಲ್ಲ; 3 ದಿನಕ್ಕೊಮ್ಮೆ ಬಿಡುಗಡೆ!ಪರಿಹಾರ ವ್ಯವಸ್ಥೆಯಲ್ಲಿ ಬದಲಾವಣೆ; ಸಚಿವ ಅಶೋಕ್‌

ಪ್ರಥಮ ಪ್ರಾಶಸ್ತ್ಯ ಮತಕ್ಕಷ್ಟೆ ತಂತ್ರ; ಬಿಜೆಪಿ, ಕಾಂಗ್ರೆಸ್‌ನಿಂದ ತಂತ್ರಗಾರಿಕೆ

ಪ್ರಥಮ ಪ್ರಾಶಸ್ತ್ಯ ಮತಕ್ಕಷ್ಟೆ ತಂತ್ರ; ಬಿಜೆಪಿ, ಕಾಂಗ್ರೆಸ್‌ನಿಂದ ತಂತ್ರಗಾರಿಕೆ

ಚಾರ್‌ಧಾಮ್‌ ದೇವಸ್ಥಾನಂ ಕಾಯ್ದೆ ರದ್ದು

ಚಾರ್‌ಧಾಮ್‌ ದೇವಸ್ಥಾನಂ ಕಾಯ್ದೆ ರದ್ದುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವ್ಯಾಸನತಾಂಡ ಗ್ರಾಮಕ್ಕೆ ದಿಢೀರ್ ಭೇಟಿ ನೀಡಿ, ಆರೋಗ್ಯ ವಿಚಾರಿಸಿದ ಶಾಸಕ ಜಿ.ಕರುಣಾಕರ ರೆಡ್ಡಿ

ವ್ಯಾಸನತಾಂಡ ಗ್ರಾಮಕ್ಕೆ ದಿಢೀರ್ ಭೇಟಿ ನೀಡಿ, ಆರೋಗ್ಯ ವಿಚಾರಿಸಿದ ಶಾಸಕ ಜಿ.ಕರುಣಾಕರ ರೆಡ್ಡಿ

ಪರೀಕ್ಷೆ ಮುಂದೂಡಲು ಪಟ್ಟು

ಪರೀಕ್ಷೆ ಮುಂದೂಡಲು ಪಟ್ಟು

Untitled-2

ಅಂಗನವಾಡಿ ಕೇಂದ್ರದ ಮೇಲ್ಛಾವಣಿ ಶಿಥಿಲ-ಆತಂಕ

12ishwarappa

ನೆಲೆ ಕಳೆದುಕೊಳ್ಳುತ್ತಿದೆ ಕಾಂಗ್ರೆಸ್‌

ಬಳ್ಳಾರಿ: ಆಫ್ರಿಕಾದಿಂದ ಬಂದ ಇಬ್ಬರು ಕ್ವಾರಂಟೈನ್ ಗೆ: ಡಾ. ಜನಾರ್ಧನ್

ಬಳ್ಳಾರಿ: ಆಫ್ರಿಕಾದಿಂದ ಬಂದ ಇಬ್ಬರು ಕ್ವಾರಂಟೈನ್ ಗೆ: ಡಾ. ಜನಾರ್ಧನ್

MUST WATCH

udayavani youtube

ಕಾಪು ಪರಿಸರದಲ್ಲಿ ಗಾಳಿ, ಗುಡುಗು, ಮಿಂಚು ಸಹಿತ ಭಾರೀ ಮಳೆ

udayavani youtube

ದನಗಳ್ಳರನ್ನು ಹಿಡಿಯಲು ಹೋದವರ ಮೇಲೆ ವಾಹನ ಚಲಾಯಿಸಿ ಹಲ್ಲೆ: ಇಬ್ಬರಿಗೆ ಗಂಭೀರ ಗಾಯ

udayavani youtube

ಸುಟ್ಟಗಾಯ ಸಂರ್ಪೂಣ ನಿವಾರಣೆ ಆಗಲು ಈ ನಾಟಿ ವೈದ್ಯರ ಬಳಿ ಇದೆ ಔಷಧಿ.

udayavani youtube

ಕಸ್ತೂರಿರಂಗನ್ ಸಮೀಕ್ಷೆ ಅವೈಜ್ಞಾನಿಕ !?

udayavani youtube

ಭಾರತದಲ್ಲಿ ವ್ಯಾಸಂಗ ಮಾಡಿದ್ದನಂತೆ ಈ ತಾಲಿಬಾನ್‌ ವಕ್ತಾರ!

ಹೊಸ ಸೇರ್ಪಡೆ

ವದಂತಿ ಹಬ್ಬಿಸುವವರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಲಿ

ವದಂತಿ ಹಬ್ಬಿಸುವವರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಲಿ

ಕ್ರಿಪ್ಟೋ ವಿಧೇಯಕ ಪರಿಷ್ಕರಿಸಿ ಮಂಡನೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌

ಕ್ರಿಪ್ಟೋ ವಿಧೇಯಕ ಪರಿಷ್ಕರಿಸಿ ಮಂಡನೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌

“ಹಣಕಾಸು ಇಲ್ಲದಿದ್ದರೆ ಹೊಸ ತಾಲೂಕು ರದ್ದುಪಡಿಸಿಬಿಡಿ’: ಸರ್ಕಾರಕ್ಕೆ ಹೈಕೋರ್ಟ್‌ ಚಾಟಿ

“ಹಣಕಾಸು ಇಲ್ಲದಿದ್ದರೆ ಹೊಸ ತಾಲೂಕು ರದ್ದುಪಡಿಸಿಬಿಡಿ’: ಸರ್ಕಾರಕ್ಕೆ ಹೈಕೋರ್ಟ್‌ ಚಾಟಿ

ಧರ್ಮಸ್ಥಳ ದೀಪೋತ್ಸವ: ಹೊಸಕಟ್ಟೆ ಉತ್ಸವ

ಧರ್ಮಸ್ಥಳ ದೀಪೋತ್ಸವ: ಹೊಸಕಟ್ಟೆ ಉತ್ಸವ

3 ತಿಂಗಳಲ್ಲ; 3 ದಿನಕ್ಕೊಮ್ಮೆ ಬಿಡುಗಡೆ!ಪರಿಹಾರ ವ್ಯವಸ್ಥೆಯಲ್ಲಿ ಬದಲಾವಣೆ; ಸಚಿವ ಅಶೋಕ್‌

3 ತಿಂಗಳಲ್ಲ; 3 ದಿನಕ್ಕೊಮ್ಮೆ ಬಿಡುಗಡೆ!ಪರಿಹಾರ ವ್ಯವಸ್ಥೆಯಲ್ಲಿ ಬದಲಾವಣೆ; ಸಚಿವ ಅಶೋಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.