Udayavni Special

ಬಸ್‌ ನಿಲ್ದಾಣದಲ್ಲಿಲ್ಲ ಮೂಲ ಸೌಲಭ್ಯ!

ಬಿರು ಬಿಸಿಲಲ್ಲೇ ನಿಂತು ಬಸ್‌ಗಾಗಿ ಕಾಯುವ ಸ್ಥಿತಿ ಪ್ರಯಾಣಿಕರದು

Team Udayavani, Feb 17, 2020, 2:45 PM IST

17-February-17

ಕುರುಗೋಡು: ಐಹಾಸಿಕ ಕ್ಷೇತ್ರ ಎಂಬ ಖ್ಯಾತಿ ಪಡೆದ ಕುರುಗೋಡು ನೂತನ ತಾಲೂಕಿನಲ್ಲಿ ಸರಿಯಾದ ಬಸ್‌ ನಿಲ್ದಾಣದ ವ್ಯವಸ್ಥೆಯಿಲ್ಲದೆ ಪ್ರಯಾಣಿಕರು ಹಾಗೂ ಶಾಲಾ – ಕಾಲೇಜು ವಿದ್ಯಾರ್ಥಿಗಳು ನಾಡಗೌಡರ ಮುಖ್ಯ ವೃತ್ತದ ಬಳಿಯಲ್ಲಿ ಬಸ್‌ಗಾಗಿ ಗಂಟೆ ಗಟ್ಟಲೇ ಕಾದು ಬಿಸಿಲಲ್ಲೇ ಬೆವರು ಹರಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.

ಈ ಹಿಂದೆ ಕುರುಗೋಡಿನ ಸರಕಾರಿ ಬಾಲಕರ ಪ್ರೌಢಶಾಲೆಯ ಎದುರುಗಡೆ 1992-93ರಲ್ಲಿ ಬಸ್‌ ನಿಲ್ದಾಣ ನಿರ್ಮಾಣಗೊಂಡಿತ್ತು. ಇದನ್ನು ಅಂದಿನ ಶಾಸಕ ಶಿವರಾಮರೆಡ್ಡಿ ಉದ್ಘಾಟಿಸಿದ್ದರು. ಆದರೆ ಸುಮಾರು ವರ್ಷಗಳಿಂದ ಈ ನಿಲ್ದಾಣವು ಶಿಥಿಲಾವ್ಯಸ್ಥೆಯಲ್ಲಿದ್ದು ಅದರಲ್ಲಿ ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಶೌಚಾಲಯ ಸೇರಿದಂತೆ ಮೂಲ ಸೌಲಭ್ಯಗಳಿಂದ ವಂಚಿತಗೊಂಡಿದೆ. ಸುತ್ತಮುತ್ತ ತಡೆಗೋಡೆ, ನಿಲ್ದಾಣದ ಆವರಣದಲ್ಲಿ ಸ್ವತ್ಛತೆ ಕೊರತೆಯಿಂದ ಯಾವ ಪ್ರಯಾಣಿಕರು ಬಸ್‌ ನಿಲ್ದಾಣದ ಕಡೆಗೆ ಹೋಗದೆ ಮುಖ್ಯ ವೃತ್ತದಲ್ಲಿ ಬಿಸಿಲಲ್ಲೆ ನಿಂತು ಬಸ್‌ ಕಾಯುತ್ತಿದ್ದಾರೆ.

ಇದೀಗ ಎರಡು ಮೂರು ತಿಂಗಳಿಂದ ಬಸ್‌ ನಿಲ್ದಾಣದ ಸುತ್ತ ತಡೆಗೋಡೆ ಕಾಮಗಾರಿ ಮತ್ತು ಆವರಣದಲ್ಲಿ ಸಿಸಿ ರಸ್ತೆ ಕಾಮಗಾರಿ ನಡೆಸುತ್ತಿದ್ದು, ತುಂಬ ಮಂದಗತಿಯಲ್ಲಿ ಕೆಲಸ ನಡೆಯುತ್ತಿರುವುದರಿಂದ ನನೆಗುದಿಗೆ ಬಿದ್ದಿದೆ. ನಿಲ್ದಾಣದ ಕಟ್ಟಡದ ಮೇಲ್ಛಾವಣಿ ಕಾಂಕ್ರೀಟ್‌ ಪದರು ಎಲ್ಲೆಂದರಲ್ಲಿ ಉದುರುತ್ತಿದೆ. ಅಲ್ಲದೆ ಅದಕ್ಕೆ ಸಂಪರ್ಕ ಹೊಂದಿರುವ ಬೆಡ್‌ಗಳು ಕೂಡ ಸಿಮೆಂಟ್‌ ಪದರು ಉದುರಿ ರಾಡ್‌ಗಳು ಹೊರಗಡೆ ಬಿದ್ದಿವೆ. ಇಷ್ಟೆಲ್ಲಾ ಸಮಸ್ಯೆಯಿಂದ ಇರುವ ಬಸ್‌ ನಿಲ್ದಾಣವು ಇದನ್ನೆಲ್ಲಾ ಬದಿಗಿರಿಸಿ ಅನುದಾನದ ನೆಪ ಹೇಳಿಕೊಂಡು ಕೇವಲ ತಡೆಗೋಡೆ ಮತ್ತು ಸಿಸಿ ರಸ್ತೆ ಕಾಮಗಾರಿಯನ್ನು ಮಾತ್ರ ನಡೆಸುತ್ತಿದ್ದಾರೆ.

ವೃದ್ಧರಿಗೆ ಸಮಸ್ಯೆ: ಕುರುಗೋಡಲ್ಲಿ ಬಸ್‌ ನಿಲ್ದಾಣದಲ್ಲಿ ಸರಿಯಾದ ವ್ಯವಸ್ಥೆ ಇಲ್ಲದಿರುವುದರಿಂದ ಮುಖ್ಯ ವೃತ್ತದಲ್ಲಿ ಬಸ್‌ಗಾಗಿ ನಿಲ್ಲುವ ವೃದ್ಧರಿಗೆ, ರೋಗಿಗಳಿಗೆ, ಚಿಣ್ಣರಿಗೆ ಸಮಸ್ಯೆಯಾಗುತ್ತಿದೆ. ನೆರಳಿನ ವ್ಯವಸ್ಥೆ, ಕುಳಿತುಕೊಳ್ಳವುದಕ್ಕೆ ಇಲ್ಲದಿರುವುದರಿಂದ ಕಷ್ಟಕರವಾಗಿದೆ. ಇನ್ನೂ ಕುರುಗೋಡು ಹೊರ ಪ್ರದೇಶದ ವ್ಯಾಪ್ತಿಯಲ್ಲಿರುವ ಕಲ್ಲು ಗಣಿಗಾರಿಕೆಯ ಕ್ವಾರಿಗಳಿಂದ ನಿತ್ಯ ಬೆಳಗ್ಗೆ ಮತ್ತು ಸಂಜೆ ವೇಳೆ ಕಲ್ಲುಗಳು ಸಾಗಣಿಕೆ ಮಾಡುವ ಟಿಪ್ಪರ್‌ಗಳು ಅಡ್ಡಾದಿಡ್ಡಿಯಾಗಿ ಓಡಾಡುತ್ತಿದ್ದು ಅದರಿಂದ ಬರುವ ಧೂಳು ಮತ್ತು ಇತರೆ ವಾಹನಗಳ ಧೂಳಿನ ಮಧ್ಯೆ ಡಬ್ಬಿ ಅಂಗಡಿಗಳ ಸಂದುಗಳಲ್ಲಿ ಬಸ್‌ಗಳಿಗಾಗಿ ಕಾದು ನಿಲ್ಲುವ ಅನಿವಾರ್ಯತೆ ಎದುರಾಗಿದೆ.

ವೃತ್ತದ ಬಳಿ ನೂತನ ಬಸ್‌ ನಿಲ್ದಾಣ ನಿರ್ಮಾಣಕ್ಕೆ ಒತ್ತಾಯ: ಈ ಹಿಂದೆ ಮುಖ್ಯವೃತ್ತದ
ಬಳಿಯಲ್ಲಿದ್ದಂತಹ ಹಳೆ ಬಸ್‌ ನಿಲ್ದಾಣದ ಜಾಗದಲ್ಲಿ ಪ್ರಯಾಣಿಕರಿಗೆ ನೂತನ ಬಸ್‌ ನಿಲ್ದಾಣದ ವ್ಯವಸ್ಥೆ ಮಾಡದೆ ಅ ಜಾಗದಲ್ಲಿ ಏಕಾಏಕಿ ಉದ್ಯಾನವನ ನಿರ್ಮಾಣ ಮಾಡಿದ್ದಾರೆ. ಆದ್ದರಿಂದ ಸುತ್ತಮುತ್ತಲಿನ 24 ಹಳ್ಳಿಯ ಜನರು ಅತಿ ಹೆಚ್ಚಿನ ಸಂಖ್ಯೆಯಲ್ಲಿ
ಕುರುಗೋಡು ತಾಲೂಕಿನಲ್ಲಿ ಪ್ರಮುಖವಾಗಿರುವ ನಾಡಗೌಡರ ಮುಖ್ಯವೃತ್ತಕ್ಕೆ ಸೇರಿಕೊಳ್ಳುತ್ತಾರೆ. ಜನರ ಪ್ರತಿಯೊಂದು ಕೆಲಸಕ್ಕೆ ನಾಡಗೌಡರ ಮುಖ್ಯವೃತ್ತದ ಬಳಿಯಲ್ಲಿ ಬಂದು ವ್ಯವಹಾರ ಸೇರಿದಂತೆ ಇತರೆ ಕಾರ್ಯಗಳು ಅಲ್ಲಿಂದ ಪ್ರಾರಂಭವಾಗುತ್ತವೆ. ಆದ್ದರಿಂದ ವೃತ್ತದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹಾಗೂ ಬೇರೆ ಕಡೆ ತೆರಳುವ ಪ್ರಯಾಣಿಕರು ದಾಸ್ತಿ ವೃತ್ತದಲ್ಲಿ ನಿಲ್ಲುವುದರಿಂದ ಅದರ ಪಕ್ಕದಲ್ಲಿ ನೂತನ ಬಸ್‌ ನಿಲ್ದಾಣ ನಿರ್ಮಾಣ ಮಾಡಬೇಕು ಎಂಬುವುದು ತಾಲೂಕಿನ ಪ್ರಗತಿಪರ ಸಂಘಟನೆಯವರು ಹಾಗೂ ಮುಖಂಡರ ಒತ್ತಾಯವಾಗಿದೆ.

ಜಾತ್ರೆಗೆ ಬರುವ ಭಕ್ತಾದಿಗಳಿಗೆ ತೊಂದರೆ: ಮಾ. 9ರಂದು ಕುರುಗೋಡಿನ ಅರಾಧ್ಯ ದೈವ ಶ್ರೀ
ದೊಡ್ಡಬಸವೇಶ್ವರ ಜಾತ್ರಾ ಮಹೋತ್ಸವವಿದ್ದು ಪ್ರತಿ ವರ್ಷ ಜಾತ್ರೆಗೆ ಕಂಪ್ಲಿ ಮಾರ್ಗವಾಗಿ ಬರುವ ಗಂಗಾವತಿ, ಕಲ್ಲುಕಂಬ, ಎಮ್ಮಿಗನೂರು, ಗುತ್ತಿಗನೂರು, ಕುಡಿತಿನಿ ಹೊಸಪೇಟೆ ಸೇರಿದಂತೆ ಬಹುತೇಕ ಗ್ರಾಮಗಳಿಂದ ಬರುವ ಪ್ರಯಾಣಿಕರು ಮತ್ತು ಭಕ್ತಾದಿ ಗಳ ಎತ್ತನ ಬಂಡಿ, ಬಿರು ಬಿಸಿಲಲ್ಲೇ ನಿಂತು ಬಸ್‌ಗಾಗಿ ಕಾಯುವ ಸ್ಥಿತಿ ಪ್ರಯಾಣಿಕರದು ಬಿರು ಬಿಸಿಲಲ್ಲೇ ನಿಂತು ಬಸ್‌ಗಾಗಿ ಕಾಯುವ ಸ್ಥಿತಿ ಪ್ರಯಾಣಿಕರದು ಟ್ರ್ಯಾ ಕ್ಟರ್‌ಗಳು, ಕಾರುಗಳು ಇತರೆ ಪ್ರತಿಯೊಂದು ವಾಹನಗಳು ಬಸ್‌ ನಿಲ್ದಾಣದ ಆವರಣದಲ್ಲಿ ಸೇರಿಕೊಳ್ಳುತ್ತಿದ್ದು ಈ ವರ್ಷ ನಿಲ್ದಾಣದ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿರುವುದರಿಂದ ಬರುವ ಪ್ರಯಾಣಿಕರಿಗೆ ಹಾಗೂ ಭಕ್ತಾ ದಿಗಳಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ.

ಈಗಾಗಲೇ ಮುಖ್ಯ ವೃತ್ತದ ಬಳಿಯಲ್ಲಿ ಹಳೆ ಬಸ್‌ ನಿಲ್ದಾಣವಿತ್ತು. ಅದರ ಜಾಗದಲ್ಲಿ ಉದ್ಯಾನವನ ಮಾಡಿದ್ದಾರೆ. ವೃತ್ತದಲ್ಲಿ ಹೆಚ್ಚು ಜನ ಸೇರುವುದರಿಂದ ನೂತನ ನಿಲ್ದಾಣ ಮಾಡಿದರೆ ಎಲ್ಲರಿಗೂ ಅನುಕೂಲವಾಗಲಿದೆ. ಈಗಾಗಲೇ ಇರುವ ಬಸ್‌ ನಿಲ್ದಾಣ ಶಿಥಿಲಾವ್ಯಸ್ಥೆ ತಲುಪಿದೆ. ಅದರಲ್ಲಿ ಸೌಲಭ್ಯಗಳು ಇಲ್ಲ. ಅಲ್ಲಿಗೆ ಯಾರು ಹೋಗುವುದಿಲ್ಲ. ನಿಲ್ದಾಣದ ಎಲ್ಲವು ದುರಸ್ತಿ ಮಾಡದೆ ಅನುದಾನ ನೆಪ ಹೇಳಿ ತಮಗೆ ಬೇಕಿದ್ದ ಕಾಮಗಾರಿ ನಡೆಸುತ್ತಿದ್ದಾರೆ. ಅದು ಮಂದಗತಿಯಲ್ಲಿ ಸಾಗುತ್ತಿದೆ. ಇದರಿಂದ ಪ್ರಯಾಣಿಕರು ಬಿಸಿಲಲ್ಲಿ ನಿಂತು ಬಸ್‌ಗಾಗಿ ಕಾಯಬೇಕಾದ ಸ್ಥಿತಿ ಇದೆ.
ಎಚ್‌.ಎಂ. ವಿಶ್ವನಾಥ ಸ್ವಾಮಿ, ಬೀದಿ ಬದಿ
ವ್ಯಾಪಾರಿಗಳ ಸಂಘದ ಜಿಲ್ಲಾ ಕಾರ್ಯದರ್ಶಿ

ಬಸ್‌ ನಿಲ್ದಾಣದಲ್ಲಿ ನಡೆಯುವ ಕಾಮಗಾರಿಗಳು ಮುಗಿಯುವ ಹಂತದಲ್ಲಿವೆ. ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಶೌಚಾಲಯಗಳ ವ್ಯವಸ್ಥೆ ಮಾಡಿಕೊಡುವಂತೆ ಇಂಜಿನಿಯರ್‌ ಗಳಿಗೆ ತಿಳಿಸಿದ್ದೇನೆ. ಇನ್ಮುಂದೆ ನಿಲ್ದಾಣದಲ್ಲಿ ಯಾರೇ ಬಂದು ಅಸ್ವಚ್ಛತೆ ವಾತಾವರಣ ನಿರ್ಮಾಣ ಮಾಡಲು ಅವಕಾಶ ಇಲ್ಲ. ನಮ್ಮ ಸಿಬ್ಬಂದಿ ಇರುತ್ತಾರೆ. ಅದರಲ್ಲಿ ಜಾತ್ರೆ ಹತ್ತಿರ ಬಂದಿರುವುದರಿಂದ ಪ್ರಯಾಣಿಕರಿಗೆ ಬೇಕಾದ ಸೌಲಭ್ಯಗಳು ನಿಲ್ದಾಣದಲ್ಲಿ ಸಿಗಲಿದೆ.
ಗಂಗಾಧರ್‌ ಕುರುಗೋಡು,
ಬಸ್‌ ಘಟಕದ ವ್ಯವಸ್ಥಾಪಕ

„ಸುಧಾಕರ್‌ ಮಣ್ಣೂರು

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಒಂದೇ ದಿನದಲ್ಲಿ ಸೋಂಕಿತರ ಸಂಖ್ಯೆ ಜಿಗಿತ: 24 ಗಂಟೆಯಲ್ಲಿ 773 ಸೋಂಕಿತರು

ಒಂದೇ ದಿನದಲ್ಲಿ ಸೋಂಕಿತರ ಸಂಖ್ಯೆ ಜಿಗಿತ: 24 ಗಂಟೆಯಲ್ಲಿ 773 ಸೋಂಕಿತರು

ನನಗೆ ಗೌರವ ಬೇಡ, ಬದಲಿಗೆ ಒಂದು ಬಡ ಕುಟುಂಬದ ಜವಾಬ್ದಾರಿ ವಹಿಸಿಕೊಳ್ಳಿ: ಮೋದಿ ಕರೆ

ನನಗೆ ಗೌರವ ಬೇಡ, ಬದಲಿಗೆ ಒಂದು ಬಡ ಕುಟುಂಬದ ಜವಾಬ್ದಾರಿ ವಹಿಸಿಕೊಳ್ಳಿ: ಮೋದಿ ಕರೆ

ಲಾಕ್‌ಡೌನ್‌ ಬಿಗಿಗೊಳಿಸಲು ಸಿಎಂ ಸೂಚನೆ

ಲಾಕ್‌ಡೌನ್‌ ಬಿಗಿಗೊಳಿಸಲು ಸಿಎಂ ಸೂಚನೆ

ಆನ್‌ಲೈನ್‌ ತರಗತಿಗೂ ಎದುರಾಗುತ್ತಿದೆ ತಾಂತ್ರಿಕ ಸಮಸ್ಯೆ

ಆನ್‌ಲೈನ್‌ ತರಗತಿಗೂ ಎದುರಾಗುತ್ತಿದೆ ತಾಂತ್ರಿಕ ಸಮಸ್ಯೆ

ಕೋವಿಡ್ ಸೋಂಕು ವಿಚಾರದಲ್ಲಿ ನಿರ್ದಿಷ್ಟ ಸಮುದಾಯಕ್ಕೆ ಕಳಂಕ ಬೇಡ: ಕೇಂದ್ರದ ಮನವಿ

ಕೋವಿಡ್ ಸೋಂಕು ವಿಚಾರದಲ್ಲಿ ನಿರ್ದಿಷ್ಟ ಸಮುದಾಯಕ್ಕೆ ಕಳಂಕ ಬೇಡ: ಕೇಂದ್ರದ ಮನವಿ

ಬೆನ್‌ ಸ್ಟೋಕ್ಸ್‌ ವಿಸ್ಡನ್‌ ವರ್ಷದ ಶ್ರೇಷ್ಠ ಕ್ರಿಕೆಟಿಗ

ಬೆನ್‌ ಸ್ಟೋಕ್ಸ್‌ ವಿಸ್ಡನ್‌ ವರ್ಷದ ಶ್ರೇಷ್ಠ ಕ್ರಿಕೆಟಿಗ

ಅಪಾಯ ಕೇಂದ್ರಗಳಲ್ಲಿ ಲಾಕ್‌ಡೌನ್‌ ವಿಸ್ತರಣೆ

ಅಪಾಯ ಕೇಂದ್ರಗಳಲ್ಲಿ ಲಾಕ್‌ಡೌನ್‌ ವಿಸ್ತರಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

08-April-38

ಸಾರ್ವಜನಿಕರಿಗೆ ಬಾಳೆಗೊನೆ ಉಚಿತ ಹಂಚಿಕೆ

08-April-12

ಕೊರೊನಾ ಹೆಚ್ಚದಂತೆ ಎಚ್ಚರ ವಹಿಸಿ

07-April-24

ಗ್ರಾಮಲೆಕ್ಕಾಧಿಕಾರಿಗಳ ಲೊಕೇಶನ್‌ ಪಡೆಯಿರಿ

07-April-09

ಪ್ರಾಂಗಣದಲ್ಲಷ್ಟೇ ಬ್ರಹ್ಮ ರಥೋತ್ಸವ

ಹಸಿರುಕ್ರಾಂತಿ ಹರಿಕಾರ ಡಾ| ಬಾಬುಜೀ

ಹಸಿರುಕ್ರಾಂತಿ ಹರಿಕಾರ ಡಾ| ಬಾಬುಜೀ

MUST WATCH

udayavani youtube

Coronavirus Lockdown : ಮಟ್ಟುಗುಳ್ಳ ಮಂದಗತಿಯ ಮಾರುಕಟ್ಟೆ Saddens Muttugulla Growers

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

ಹೊಸ ಸೇರ್ಪಡೆ

ಒಂದೇ ದಿನದಲ್ಲಿ ಸೋಂಕಿತರ ಸಂಖ್ಯೆ ಜಿಗಿತ: 24 ಗಂಟೆಯಲ್ಲಿ 773 ಸೋಂಕಿತರು

ಒಂದೇ ದಿನದಲ್ಲಿ ಸೋಂಕಿತರ ಸಂಖ್ಯೆ ಜಿಗಿತ: 24 ಗಂಟೆಯಲ್ಲಿ 773 ಸೋಂಕಿತರು

ನನಗೆ ಗೌರವ ಬೇಡ, ಬದಲಿಗೆ ಒಂದು ಬಡ ಕುಟುಂಬದ ಜವಾಬ್ದಾರಿ ವಹಿಸಿಕೊಳ್ಳಿ: ಮೋದಿ ಕರೆ

ನನಗೆ ಗೌರವ ಬೇಡ, ಬದಲಿಗೆ ಒಂದು ಬಡ ಕುಟುಂಬದ ಜವಾಬ್ದಾರಿ ವಹಿಸಿಕೊಳ್ಳಿ: ಮೋದಿ ಕರೆ

ಲಾಕ್‌ಡೌನ್‌ ಬಿಗಿಗೊಳಿಸಲು ಸಿಎಂ ಸೂಚನೆ

ಲಾಕ್‌ಡೌನ್‌ ಬಿಗಿಗೊಳಿಸಲು ಸಿಎಂ ಸೂಚನೆ

ಇಂದು ಸಚಿವ ಸಂಪುಟ ಸಭೆ

ಇಂದು ಸಚಿವ ಸಂಪುಟ ಸಭೆ

ಲಾಕ್ ಡೌನ್ ಸ್ವಲ್ಪ ಸಡಿಲಿಸಿ ಇಬ್ಬರು ಹೆಂಡ್ತೀರ ಮನೆಗೆ ಹೋಗ್ಬೇಕು ನಂಗೆ!

ಲಾಕ್ ಡೌನ್ ಸ್ವಲ್ಪ ಸಡಿಲಿಸಿ ಇಬ್ಬರು ಹೆಂಡ್ತೀರ ಮನೆಗೆ ಹೋಗ್ಬೇಕು ನಂಗೆ!