
ಕುರುಗೋಡು: ರೈತರು ಅಕ್ರಮವಾಗಿ ಅಳವಡಿಸಿದ ಪೈಪ್ ತೆರವು ಮಾಡಿದ ಅಧಿಕಾರಿಗಳು
Team Udayavani, Jan 26, 2023, 8:07 PM IST

ಕುರುಗೋಡು: ಸಮೀಪದ ಸೋಮಲಾಪುರ ಮತ್ತು ಚೀಟಿಗಿನಹಾಳ್ ಗ್ರಾಮಗಳ ಮದ್ಯೆ ಎಲ್. ಎಲ್. ಸಿ ಕಾಲುವೆ ನಡಿವೆ ಡಿಷ್ಟುಬೂಟಾರ್ ನಲ್ಲಿ ಅಕ್ರಮ ವಾಗಿ ಕಾಲುವೆಗಳಿಗೆ ಪೈಪ್ ಗಳನ್ನು ರೈತರು ಅಳವಡಿಸಿ ಜಮೀನು ಗಳಿಗೆ ನೀರು ಹರಿಸುತಿದ್ದ ಸ್ಥಳಕ್ಕೆ ಕುರುಗೋಡು ಪೊಲೀಸರ ಸಹಕಾರದೊಂದಿಗೆ ನೀರಾವರಿ ಇಲಾಖೆ ಎಇಇ ಧರ್ಮನಾಯ್ಕ್ ಭೇಟಿ ನೀಡಿ ಜೆಸಿಬಿ ಮೂಲಕ ಸುಮಾರು 30 ಕ್ಕೂ ಹೆಚ್ಚು ಪೈಪ್ ಗಳನ್ನು ತೆರವು ಗೊಳಿಸಿದರು.
ಇದೆ ವೇಳೆ ಎಇಇ ಧರ್ಮನಾಯ್ಕ್ ಮಾತನಾಡಿ, ಸೋಮಲಾಪುರ ಎಲ್. ಎಲ್. ಸಿ ಕಾಲುವೆ ನಡಿವೆ ಡಿಷ್ಟುಬೂಟಾರ್ ನಲ್ಲಿ ಕೆಲ ರೈತರು ಕಾಲುವೆಯಿಂದ ಗ್ರಾವೆಲ್ ಒಳಗಡೆಯಿಂದ ಜಮೀನು ಗಳಿಗೆ ಅಕ್ರಮವಾಗಿ ಪೈಪ್ ಗಳನ್ನು ಅಳವಡಿಸಿ ಕೃಷಿ ಭೂಮಿ ಗಳಿಗೆ ನೀರು ಹರಿಸುತ್ತಿರುವ ವಿಷಯ ಖಚಿತ ಮಾಹಿತಿ ಮೇರೆಗೆ ತಿಳಿದ ನಂತರ ಸ್ಥಳಕ್ಕೆ ನೀರಾವರಿ ಇಲಾಖೆ ಸಿಬ್ಬಂದಿಗಳು ಭೇಟಿ ಪೈಪ್ ಗಳನ್ನು ತೆರವು ಮಾಡಲಾಗಿದೆ. ಇದರಿಂದ ಕೆಳ ಮಟ್ಟದ ರೈತರಿಗೆ ಸರಿಯಾಗಿ ನೀರು ತಲುಪುತಿಲ್ಲ ಇದರ ಬಗ್ಗೆ ಅನೇಕ ದೂರವಾಣಿ ಕರೆಗಳು ಮಾಡಿ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಅಲ್ಲದೆ ಇಲಾಖೆ ವರೆಗೆ ಬಂದು ರೈತರು ಅಧಿಕಾರಿಗಳೊಂದಿಗೆ ವಗ್ವಾದ ಮಾಡುತ್ತಾರೆ ಆದ್ದರಿಂದ ಅಕ್ರಮ ವಾಗಿ ಅಳವಡಿಸುವ ಪೈಪ್ ಗಳನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ತೆರವು ಮಾಡಲಾಗುತ್ತದೆ. ಇನ್ನೂ ಬೇರೆ ಬೇರೆ ಕಡೆ ಗಳಲ್ಲಿ ಇದೆ ಸಮಸ್ಯ ಗಳು ಕಂಡು ಬಂದರೆ ಅಂತಹ ರೈತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅಲ್ಲದೆ ಈಗಾಗಲೇ ಅಕ್ರಮ ವಾಗಿ ಪೈಪ್ ಅಳವಡಿಸಿರುವ ರೈತರಿಗೆ ಇಲಾಖೆ ವತಿಯಿಂದ ನೋಟಿಸ್ ನೀಡಿ ಮುಂಜಾಗೃತವಾಗಿ ಎಚ್ಚರಿಕೆ ನೀಡಲಾಗಿದೆ ಒಂದು ವೇಳೆ ಮತ್ತೆ ಇದೆ ಕಾರ್ಯಗಳು ಮುಂದುವರಿಸಿದರೆ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿ ಆಯ್ಕೆ: ನಳಿನ್ ಕುಮಾರ್ ಕಟೀಲ್

ಇಬ್ಬರು ಶಾಸಕರ ರಾಜೀನಾಮೆ? ಶಿರಸಿಯತ್ತ ಎಲ್ಲರ ಚಿತ್ತ!

ಮುಂಬೈ-ಚೆನ್ನೈ ಅಲ್ಲ, ಐಪಿಎಲ್ ವಿಜೇತರ ಬಗ್ಗೆ ಭವಿಷ್ಯ ನುಡಿದ ಮೈಕಲ್ ವಾನ್

ಹುಣಸೂರು: ಮೊದಲ ವರ್ಷಧಾರೆಗೆ ನೂರಾರು ಎಕರೆ ಬಾಳೆ ಬೆಳೆ ನಾಶ, ಲಕ್ಷಾಂತರ ರೂ. ನಷ್ಟ

ಗುಜರಾತ್ ನಲ್ಲಿ ಪ್ರಧಾನಿ ಮೋದಿ ವಿರುದ್ಧ ಪೋಸ್ಟರ್ ಅಭಿಯಾನ; 8 ಮಂದಿ ಬಂಧನ: ವರದಿ