Udayavni Special

ಏ.10ರವರೆಗೆ ಎಲ್‌ಎಲ್‌ಸಿ ಕಾಲುವೆಗೆ ನೀರು


Team Udayavani, Mar 27, 2021, 7:36 PM IST

jhgfghnjhg

ಬಳ್ಳಾರಿ: ತುಂಗಭದ್ರಾ ಜಲಾಶಯದಿಂದ ಎಲ್‌ಎಲ್‌ಸಿ ಕಾಲುವೆಗಳಿಗೆ ಏಪ್ರಿಲ್‌ 10ರವರೆಗೆ ನೀರು ಹರಿಸಲು ತುಂಗಭದ್ರಾ ಮಂಡಳಿ ಅಧಿ ಕಾರಿಗಳು ಮೌಖೀಕವಾಗಿ ಒಪ್ಪಿಗೆ ಸೂಚಿಸಿದ್ದಾರೆ ಎಂದು ತುಂಗಭದ್ರಾ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮ ಗೌಡ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.31ರವರೆಗೆ ಬೇಸಿಗೆ ಬೆಳೆಗೆ ಕಾಲುವೆಗಳ ಮುಖಾಂತರ ನೀರು ಬಿಡುವುದಕ್ಕೆ ಈ ಹಿಂದೆ ಐಸಿಸಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ, ಬದಲಾದ ಕಾಲಘಟ್ಟದಲ್ಲಿ ಬೆಳೆಗಳಿಗೆ ಅನುಕೂಲವಾಗುವಂತೆ ಏ.10ರವರೆಗೆ ನೀರು ಬಿಡುವಂತೆ ಅಧಿ ಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗಿತ್ತು. ರೈತರ ಸಮಸ್ಯೆ ಅರಿತ ಅಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸಿ, ಏಪ್ರಿಲ್‌ 10ರವರೆಗೆ ನೀರು ಬಿಡಲು ಮೌಖೀಕವಾಗಿ ಒಪ್ಪಿಗೆ ನೀಡಿದ್ದಾರೆ.

ಅಧಿಕೃ ಆದೇಶ ಪ್ರತಿಯನ್ನು ಸಹಿಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ಸಿಂಗ್‌ ಅವರಿಗೆ ಕಳುಹಿಸಿಕೊಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದರು. ಬಳ್ಳಾರಿ- ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಹಾಲಿ ಇರುವ ಬೆಳೆಗೆ ಇನ್ನೂ ನೀರು ಬೇಕಿದೆ. ಒಂದು ವೇಳೆ ನೀರು ನಿಲ್ಲಿಸಿದರೆ ಈ ಭಾಗದ ರೈತರಿಗೆ ತೀವ್ರ ತೊಂದರೆ ಆಗಲಿದೆ. ಬಿರುಬೇಸಿಗೆ ಬೆಳೆಗಳಿಗೆ ನೀರಿನ ಅಭಾವ ಎದುರಾಗಿ ಬೆಳೆಗಳೆಲ್ಲ ಸಂಪೂರ್ಣವಾಗಿ ಒಣಗಿ ಹೋಗಲಿವೆ. ಹೀಗಾಗಿ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಉಸ್ತುವಾರಿ ಸಚಿವ ಆನಂದ ಸಿಂಗ್‌ ಅಲ್ಲದೆ ತುಂಗಭದ್ರಾ ಮಂಡಳಿ ಮತ್ತು ಬೋರ್ಡ್‌ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿ, ಸಮಸ್ಯೆಯನ್ನು ತಿಳಿಸಲಾಗಿತ್ತು ಎಂದ ಅವರು, ಹಾಲಿ ಅಧಿಕಾರಿಗಳು ಏ. 10ರವರೆಗೆ ನೀರು ಬಿಡುವುದಕ್ಕೆ ಮೌಖೀಕ ಒಪ್ಪಿಗೆ ನೀಡಿದ್ದಾರೆ. ಲಿಖೀತ ಒಪ್ಪಿಗೆಯನ್ನು ಕೂಡ ಶೀಘ್ರದಲ್ಲೇ ನೀಡಲಿದ್ದಾರೆ ಎಂದರು.

ಹಾಲಿ ಜಲಾಶಯದಲ್ಲಿ 17 ಟಿಎಂಸಿ ನೀರಿದೆ. ಈ ಪೈಕಿ 2 ಟಿಎಂಸಿ ನೀರು ಡೆಡ್‌ಸ್ಟೋರೇಜ್‌, 1 ಟಿಎಂಸಿ ನೀರು ಆವಿಯಾಗಿ ವಾತಾವರಣ ಸೇರುತ್ತದೆ. ಅಲ್ಲಿಗೆ ಜಲಾಶಯದಲ್ಲಿ ಉಳಿಯುವುದು 13 ಟಿಎಂಸಿ ನೀರು ಮಾತ್ರ. ಇದರಲ್ಲಿ 5.657 ಟಿಎಂಸಿ ಆಂಧ್ರದ ಪಾಲಿದೆ. ಕರ್ನಾಟಕದ ಪಾಲಿಗೆ 7.934 ಟಿಎಂಸಿ ಮಾತ್ರ ಉಳಿಯುತ್ತದೆ ಎಂದು ಅವರು ವಿವರಿಸಿದರು. ಲಭ್ಯ ನೀರಿನಲ್ಲಿ ಬೇಸಿಗೆ ಬೆಳೆ ಸಂರಕ್ಷಿಸಲಾಗುವುದಿಲ್ಲ. ಆದರೆ, ಭದ್ರಾ ಜಲಾಶಯದಿಂದ 1.6 ಟಿಎಂಸಿ ನೀರು ಬರುತ್ತಿದೆ. ಆದರೆ, ಜೊತೆಗೆ ಕೈಗಾರಿಕೆಗಳಿಗೆ ನೀರು ಹರಿಸುವುದನ್ನು ಬಿಡಲು ನಿಲ್ಲಿಸಿದರೆ ಅನುಕೂಲವಾಗುತ್ತದೆ.

ಜಿಂದಾಲ್‌ ಸೇರಿ ನಾನಾ ಕಾರ್ಖಾನೆಗಳಿಗೆ ಪೂರೈಸುವ ನೀರಿನ ಪಾಲು ರೈತರಿಗೆ ನೀಡಿದರೆ ನೀರು ಸಿಗಲಿದೆ. ಜತೆಗೆ ನದಿ ಮೂಲಕ ಆಂಧ್ರಕ್ಕೆ ಕೊಡಲಿರುವ ನೀರಲ್ಲಿ ಅರ್ಧ ಟಿಎಂಸಿಯನ್ನು ಉಳಿಸಿಕೊಳ್ಳುವಂತೆ ತೆಲಂಗಾಣದ ಸರ್ಕಾರವನ್ನು ಮನವೊಲಿಸಿ ಈ ಭಾಗದ ರೈತರಿಗೆ ಅನುಕೂಲ ಆಗುವುದು ಎಂದು ಅವರು ಹೇಳಿದರು. ಸಂಘದ ಮುಖಂಡರಾದ ಗಂಗಾವತಿ ವೀರೇಶ, ಜಾಲಿಹಾಳ್‌ ಶ್ರೀಧರಗೌಡ, ಶ್ರೀಧರಗಡ್ಡೆ ವೀರನಗೌಡ, ಕಂಪ್ಲಿ ಸತ್ಯನಾರಾಯಣ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ಟಾಪ್ ನ್ಯೂಸ್

hfghfg

ರಾಖಿ ಸಾವಂತ್ ತಾಯಿಯ ಜೀವ ಉಳಿಸಿದ ಬಾಲಿವುಡ್ ನಟ ಸಲ್ಮಾನ್ ಖಾನ್

ಶಿಕ್ಷಣ ಸಚಿವ ಸುರೇಶ್ ಕುಮಾರ್ ಆಪ್ತ ಸಹಾಯಕ ಕೋವಿಡ್‌ಗೆ ಬಲಿ

ಶಿಕ್ಷಣ ಸಚಿವ ಸುರೇಶ್ ಕುಮಾರ್ ಆಪ್ತ ಸಹಾಯಕ ಕೋವಿಡ್‌ಗೆ ಬಲಿ

ಚಗಬಹ್ಗದಸ಻

ಪ್ರೊ. ಜಿ. ವೆಂಕಟಸುಬ್ಬಯ್ಯ ನಿಧನ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ : ಮೋದಿ ಟ್ವೀಟ್

್ಗ್ಹಗಹಜಗ್

ಆರೋಗ್ಯ ಕ್ಷೇತ್ರಕ್ಕೆ ₹30 ಸಾವಿರ ಕೋಟಿ ಮೀಸಲಿಡಬೇಕು : ಡಿ.ಕೆ. ಶಿವಕುಮಾರ್

Reached out to PM Modi for additional vaccines, medicines: Mamata

ಹೆಚ್ಚುವರಿ ಕೋವಿಡ್ ಲಸಿಕೆ ಪೂರೈಸಿ :  ಮೋದಿಗೆ ದೀದಿ ಪತ್ರ

ಕಜಹಯತಹಗರ4ತ

ರಮೇಶ್ ಜಾರಕಿಹೊಳಿ ಕೋವಿಡ್ ನಿಂದ ಗುಣಮುಖ : ನಾಳೆ SIT ವಿಚಾರಣೆಗೆ ಹಾಜರಾಗುವುದು ಡೌಟ್!

hfghfxc

ಕೋವಿಡ್ ಹೆಚ್ಚಳ ಹಿನ್ನೆಲೆ : ನಾಳೆ ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-19

ರಸ್ತೆ ನಿಯಮ ಪಾಲನೆಗೆ ಸೈಕಲ್‌ ಜಾಗೃತಿ

18-18

ರಸ್ತೆ ರಿಪೇರಿ ಬರದಲ್ಲಿ ಬುಡ್ಡೆಕಲ್ಲು ಮಾಯ!

18-16

ಕೋವಿಡ್‌ 2ನೇ ಅಲೆ: ಕಠಿಣ ಕ್ರಮಕ್ಕೆ ಸೂಚನೆ

ತದಸದಸ್ಸ್ದ

ಮತ್ತೂಮ್ಮೆ ಲಾಕ್‌ ಡೌನ್‌ ಮಾಡಲ್ಲ : ಶ್ರೀರಾಮುಲು

,mnbff

ಮುಗಿಯದ ಸಾರಿಗೆ ಮುಷ್ಟರ: ತಪ್ಪದ ಪರದಾಟ

MUST WATCH

udayavani youtube

ಕೋಣಗಳು ಏನನ್ನು ತಿಂದು ದಷ್ಟಪುಷ್ಟವಾಗಿ ಬೆಳೆಯುತ್ತವೆ ?

udayavani youtube

ಆಕಸ್ಮಾತ್ ನಾನು ಕೊರೊನಾದಿಂದ ಸತ್ತೋದ್ರೆ ನೀವೇ ಕಾರಣ : Guru Prasad

udayavani youtube

ದೆಹಲಿಯಲ್ಲಿ ಬೆಡ್, ಆಕ್ಸಿಜನ್ ಅಭಾವ ಮುಂದುವರಿಕೆ

udayavani youtube

ಮಾಸ್ಕ್ ಹಾಕದೆ ವಾಗ್ವಾದ ಮಾಡಿದ ವ್ಯಾಪಾರಿಗೆ ಕಪಾಳಮೋಕ್ಷ

udayavani youtube

ಕಡಿಮೆ ಭೂಮಿಯಲ್ಲಿ ಲಾಭದಾಯಕ ಕೈತೋಟ

ಹೊಸ ಸೇರ್ಪಡೆ

hfghfg

ರಾಖಿ ಸಾವಂತ್ ತಾಯಿಯ ಜೀವ ಉಳಿಸಿದ ಬಾಲಿವುಡ್ ನಟ ಸಲ್ಮಾನ್ ಖಾನ್

incident held at hasana

ಎಲ್ಲೆಂದರಲ್ಲಿ ಗಂಡು ಕರು ಬಿಟ್ಟು ಹೋಗುತ್ತಿರುವ ಜನ

Hospitalized Infected

ಆಸ್ಪತ್ರೆಗೆ ದಾಖಲಾದ ಸೋಂಕಿತರು ಊರೆಲ್ಲಾ ಓಡಾಟ!

Committed to development

ಪ.ಪಂಗಡ ಜನಾಂಗ ಅಭಿವೃದ್ಧಿಗೆ ಬದ್ದ

Zero interest loan facility

ಬದುಕಿಗೆ ಶೂನ್ಯ ಬಡ್ಡಿ ಸಾಲ ಸೌಲಭ್ಯ ಆಸರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.