
ಮತಕ್ಕಾಗಿ ಮಾಂಸ, ಸಿಹಿ ತಿನಿಸು ವಿತರಣೆ!
ರಂಗೇರಿದ ಗ್ರಾಮ ಪಂಚಾಯತ್ ಚುನಾವಣೆ,ಮತದಾರರ ಮನವೊಲಿಕೆಗೆ ಅಭ್ಯರ್ಥಿಗಳ ಕಸರತು
Team Udayavani, Dec 20, 2020, 4:51 PM IST

ಬಳ್ಳಾರಿ: ಜಿಲ್ಲೆಯ ಗ್ರಾಪಂ ಸ್ಥಾನವೊಂದಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿ ತಮ್ಮ ಚಿಹ್ನೆಯಾದ ಸರ ನೀಡಿ ಮತಯಾಚನೆಗಿಳಿದಿರುವುದು
ಬಳ್ಳಾರಿ: ಮೊದಲನೇ ಹಂತದ ಗ್ರಾಮ ಪಂಚಾಯಿತಿ ಚುನಾವಣಾ ಕಣ ದಿನೇದಿನೆ ರಂಗೇರಿದ್ದು, ಮತದಾರರ ಮನವೊಲಿಸುವಲ್ಲಿ ನಿರತರಾಗಿರುವ ಅಭ್ಯರ್ಥಿಗಳು,ಮಾಂಸಾಹಾರಿಗಳಿಗೆ ಕೋಳಿ ಮಾಂಸ, ಸಸ್ಯಹಾರಿಗಳಿಗೆ ಸಿಹಿ ತಿನಿಸಿನ ಬಾಕ್ಸ್‌ಗಳನ್ನು ನೀಡುವಲ್ಲಿ ನಿರತರಾಗಿದ್ದಾರೆ. ಕೆಲ ಗ್ರಾಮಗಳಲ್ಲಿ ಮತದಾರರನ್ನು ಆಧರಿಸಿ ಸಾವಿರಾರುರೂ.ಗಳನ್ನು ಮುಂಗಡವಾಗಿ ನೀಡುವ ಮತದಾರರನ್ನುಕಾಯ್ದಿರಿಸಿಕೊಳ್ಳುವ ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಿವೆ.
ಜಿಲ್ಲೆಯಲ್ಲಿ ಮೊದಲನೇ ಹಂತದಲ್ಲಿ ಬಳ್ಳಾರಿ, ಕುರುಗೋಡು, ಕಂಪ್ಲಿ, ಸಿರುಗುಪ್ಪ, ಹೊಸಪೇಟೆತಾಲೂಕುಗಳ 86 ಗ್ರಾಪಂಗಳಿಗೆ ಡಿ. 22ರಂದು ಮತದಾನ ಪ್ರಕ್ರಿಯೆ ನಡೆಯಲಿದ್ದು, ದಿನೇದಿನೆ ಬಿರುಸುಗೊಳ್ಳುತ್ತಿರುವ ಚುನಾವನಾ ಕಾವು ರಂಗೇರಿದೆ. ಮತದಾನಕ್ಕೆ ಇನ್ನೆರಡು ದಿನಗಳು ಮಾತ್ರ ಬಾಕಿಉಳಿದಿದ್ದು, ಈ ನಡುವೆ ಮತದಾರರನ್ನು ಸೆಳೆಯುವ, ಆಮಿಷವೊಡ್ಡಿ ಮನವೊಲಿಸುವ, ಮನೆಗಳಿಗೆ ಸಸ್ಯ ಮತ್ತಮಾಂಸಾಹಾರವನ್ನು ಪೂರೈಸುವ, ಮದ್ಯ ವಿತರಿಸುವ, ಹಣ ನೀಡುವ ಎಲ್ಲ ರೀತಿಯ ತಂತ್ರಗಳು ತೆರೆಮರೆಯಲ್ಲಿ ಸದ್ದಿಲ್ಲದೇ ನಡೆಯುತ್ತಿವೆ. ಸುಗ್ಗಿಯ ಕಾಲವಾದ ಈಗ್ರಾಮೀಣ ಭಾಗದಲ್ಲಿ ಜನ ಹೆಚ್ಚಿರುವುದೇ ಹೊಲಗಳಲ್ಲಿ.
ಒಂದೇ ಕಡೆ ಮನೆಯಲ್ಲಿಸಿಗಬೇಕಾದರೆ ಬೆಳಗ್ಗೆ 8 ಗಂಟೆಯ ಒಳಗೆ ಇಲ್ಲವೇ ಸಂಜೆ 6 ಗಂಟೆಯ ನಂತರ ಅವರವರ ಮನೆಯಲ್ಲಿ ಭೇಟಿ ಮಾಡಬೇಕು. ಇದೇಕಾರಣಕ್ಕೆ ಅಭ್ಯರ್ಥಿಗಳು ಮತ್ತವರ ಬೆಂಬಲಿಗರು ಬೆಳಗ್ಗೆ5 ಗಂಟೆಯಿಂದಲೇ ಮತಬೇಟೆ ಆರಂಭಿಸುತ್ತಿದ್ದಾರೆ. ಇನ್ನು ಸಂಜೆ 6 ಗಂಟೆ ನಂತರ ಹೋಟೆಲ್, ಗುಡಿ, ಪಂಚಾಯತ್ ಕಟ್ಟೆ, ಅರಳಿಮರದ ಕಟ್ಟೆ, ಮಸೀದಿ ಗುಡಿ ಹೀಗೆ ಎಲ್ಲೆಲ್ಲಿ ಜನರು ಕುಳಿತು ಮಾತನಾಡುತ್ತಾರೋಅಲ್ಲಿಗೇ ಹಾಜರಾಗುವ ಅಭ್ಯರ್ಥಿಗಳು, ಮಾವಅಣ್ಣ, ಅಳಿಯ, ಚಿಕ್ಕಪ್ಪ, ದೊಡ್ಡಪ್ಪ ಎಂದು ಅತ್ಯಂತ ಚಿರಪರಿಚಿತರಂತೆ ಮಾತನಾಡಿ ಇದೊಂದು ಬಾರಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡುತ್ತಿದ್ದಾರೆ. ಈ ಎಲ್ಲ ತಂತ್ರಗಾರಿಕೆಗಳು ಅಭ್ಯರ್ಥಿಗಳಿಗೆ ಎಷ್ಟರ ಮಟ್ಟಿಗೆ ಸಹಕಾರಿಯಾಗಿವೆ ಎಂಬುದು ಮತ ಎಣಿಕೆ ಬಳಿಕವೇ ಸ್ಪಷ್ಟವಾಗಲಿದೆ.
ಮಾಂಸಾಹಾರ ವಿತರಣೆ: ಮತದಾರರ ಮನವೊಲಿಸುವಲ್ಲಿ ನಿರತರಾಗಿರುವ ಅಭ್ಯರ್ಥಿಗಳು, ಮಾಂಸಾಹಾರ ಸೇವಿಸುವವವರಿಗೆ ಕೋಳಿ ಮಾಂಸವನ್ನು ನೀಡುತ್ತಿದ್ದಾರೆ. ಸಂಜೆಯಾಗುತ್ತಿದ್ದಂತೆ ಇಡೀ ಊರಲ್ಲಿ ಮಸಾಲೆ ವಾಸನೆ ಘಮಘಮಿಸುತ್ತದೆ. ಈ ಹಿನ್ನೆಲೆಯಲ್ಲಿಮಾಂಸದ ಅಂಗಡಿ, ಮದ್ಯದ ಅಂಗಡಿಗಳು ಸದ್ಯ ಅತೀಜನಸಂದಣಿ ಇರುವ ಜಾಗಗಳಾಗಿ ಮಾರ್ಪಟ್ಟಿವೆ. ಮಾಂಸದ ವ್ಯಾಪಾರಿ ಇದುವರಗೆ ಮಾಡದಷ್ಟು ಕೆಲಸವನ್ನು ಈಗ ಪ್ರತಿನಿತ್ಯ ಮಾಡುವಂತಾಗಿದೆ. ಎಲ್ಲರೂ ಒಂದೇ ದಿನ ಚಿಕನ್ ನೀಡಿದರೆ ಮತದಾರರು ಬೇಡ ಎನ್ನಬಹುದೆಂಬ ಕಾರಣಕ್ಕೆ ಒಂದೊಂದು ದಿನ ಒಬ್ಬೊಬ್ಬ ಅಭ್ಯರ್ಥಿ ಚಿಕನ್ ಹಂಚುತ್ತಿದ್ದಾರೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಚಿಕನ್ ಸ್ಟಾಲ್ ದಿನವಿಡೀ ಕಾರ್ಯ ನಿರ್ವಹಿಸುವಂತೆ ಆಗಿದೆ.
ಮನೆಯಲ್ಲಿ ತಿನ್ನದವರಿಗೆ ಹೊರಗೆ: ಮನೆಯಲ್ಲಿ ಮಾಂಸ ಸೇವನೆ ಮಾಡದವರಿಗೆ ಹೊರಗಡೆ ವ್ಯವಸ್ಥೆ ಮಾಡುವ ಕಾರ್ಯವೂ ಸಹ ಕಂಡುಬರುತ್ತಿದೆ. ಶುದ್ಧ ಸಸ್ಯಹಾರಿಗಳ ಮನೆಗಳಲ್ಲಿನ ಮತದಾರರಿಗೆ ಹೋಟೆಲ್, ಊರಹೊರಗಿನ ಹೊಲ, ತೋಟದ ಮನೆ, ಡಾಬಾಗಳಲ್ಲಿ ಮಾಂಸದೂಟದ ಔತಣಗಳನ್ನು ಏರ್ಪಡಿಸಲಾಗುತ್ತಿದೆ. ಅಭ್ಯರ್ಥಿಗಳ ಪರ ಇರುವ ಗುಂಪುಗಳು ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿವೆ ಎಂದು ತಿಳಿದು ಬಂದಿದೆ. ಮನೆಗೆ ಇಂತಿಷ್ಟು ಹಣ: ಇನ್ನು ಕೆಲವೊಂದು ಗ್ರಾಮಗಳಲ್ಲಿ ಚುನಾವಣೆಯನ್ನು ತೀರಾ ಪ್ರತಿಷ್ಠೆಯಾಗಿ ಸ್ವೀಕರಿಸಿರುವವರು ಗೆಲ್ಲಲೇಬೇಕೆಂದು ಪಣತೊಟ್ಟಿರುವ ಅಭ್ಯರ್ಥಿಗಳು, ಯಾವುದೇ ವಸ್ತುಗಳನ್ನು ನೀಡದೇ ನೇರವಾಗಿ ಹಣ ನೀಡುವ ಮೂಲಕ ಮತದಾರರ ಮನವೊಲಿಕೆಯಲ್ಲಿ ತೊಡಗಿದ್ದಾರೆ. ಮನೆಗಳಲ್ಲಿನ ಮತದಾರರನ್ನು ಆಧರಿಸಿ, ಸಾವಿರಾರು ರೂ.ಗಳನ್ನು ಈಗಿನಿಂದಲೇ ಹಂಚಿಕೆ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
ಈ ಮೂಲಕ ಮತದಾರರನ್ನು ಈಗಿನಿಂದಲೇ ಮನವೊಲಿಸುವ ಪ್ರಕ್ರಿಯೆಗಳು ನಿರಂತರವಾಗಿ ನಡೆಯುತ್ತಿವೆ.
–ವೆಂಕೋಬಿ ಸಂಗನಕಲ್ಲು
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

ಯಾರು ಬೇಕಾದರೂ ಸುಲಭವಾಗಿ ನಂದಿ ಬಟ್ಟಲು ಹೂವಿನಿಂದ ಸುಂದರ ಹಾರ ತಯಾಸಬಹುದು
ಹೊಸ ಸೇರ್ಪಡೆ

ಕಲ್ಯಾಣಪುರ -ಸಂತೆಕಟ್ಟೆ ಓವರ್ಪಾಸ್ ಕಾಮಗಾರಿ: ಇಂದಿನಿಂದ ಬದಲಿ ಮಾರ್ಗ “ಪ್ರಯೋಗ’

ರಾಶಿ ಫಲ: ದೂರದ ವ್ಯವಹಾರಗಳಲ್ಲಿ ಅಧಿಕ ಧನಾರ್ಜನೆ, ಜವಾಬ್ದಾರಿಯುತ ಕೆಲಸ ನಿರ್ವಹಣೆ

ಪುಂಜಾಲಕಟ್ಟೆ-ಚಾರ್ಮಾಡಿ ರಸ್ತೆ: 725 ಕೋ.ರೂ. ವೆಚ್ಚದ ಅಭಿವೃದ್ಧಿ ಕಾರ್ಯ ಆರಂಭ

ಟಿಕೆಟ್ ಆಕಾಂಕ್ಷಿಗಳಿಗೆ ಗ್ರಾಮ ವಾಸ್ತವ್ಯ ಟಾಸ್ಕ್

ಕೃಷ್ಣ, ಹನುಮಂತ ವಿಶ್ವದ ಶ್ರೇಷ್ಠ ರಾಜತಾಂತ್ರಿಕರು: ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿಕೆ