ಬಟ್ಟೆ ವ್ಯಾಪಾರಿಗಳಿಗೆ ತಟ್ಟಿತು ಲಾಕ್‌ಡೌನ್ ಬಿಸಿ
Team Udayavani, May 22, 2021, 10:58 AM IST
ಸಿರುಗುಪ್ಪ: ಮದುವೆ ಸೀಜನ್ ಆರಂಭವಾದರೆ ಸಾಕು ಬಟ್ಟೆ ಅಂಗಡಿಗಳ ಮಾಲೀಕರು ವರ್ಷದ ಗಳಿಕೆಯನ್ನು ಈ ಸೀಜನ್‌ನಲ್ಲಿಯೇ ಲಾಭತೆಗೆಯುತ್ತಿದ್ದರು. ಸದ್ಯ ಕೊರೊನಾ ಹಿನ್ನೆಲೆ ಲಾಕ್‌ಡೌನ್ ಘೋಷಿಸಿರುವುದರಿಂದ ವ್ಯಾಪಾರ ಸಂಪೂರ್ಣ ಕುಂಠಿತಗೊಂಡಿದೆ.
ಮದುವೆ ಸೀಜನ್ ಜೊತೆಗೆ ರಂಜಾನ್, ಬಸವ ಜಯಂತಿ, ಅಕ್ಷಯ ತೃತೀಯ ವೇಳೇ ಬಟ್ಟೆ ಅಂಗಡಿಗಳ ಮಾಲೀಕರಿಗೆ ಜೋರು ವ್ಯಾಪಾರದ ಕಾಲವಾಗಿತ್ತು. ಆದರೆ ಎಲ್ಲ ಹಬ್ಬಗಳನ್ನು ಸರಳವಾಗಿ ಆಚರಿಸುವಂತೆ,ಮದುವೆ ನಡೆಸದಂತೆ ಸರ್ಕಾರ ನಿರ್ದೇಶನನೀಡಿರುವುದರಿಂದ ವರ್ಷದ ಗಳಿಕೆಯನ್ನು ಲಾಕ್ ಡೌನ್ ನುಂಗಿಹಾಕಿದೆ.
ಬಟ್ಟೆ, ಬಂಗಾರ, ಪಾತ್ರೆಗಳ ಅಂಗಡಿ ಸಂಪೂರ್ಣಬಂದಾಗಿದ್ದು, ಇದರಿಂದ ವ್ಯಾಪಾರಿಗಳಿಗೆಮಾತ್ರವಲ್ಲದೆ ಗ್ರಾಹಕರಿಗೂ ತೊಂದರೆಯಾಗುತ್ತಿದೆ.ನಿಯಮಗಳಿಂದಾಗಿ ಮದುವೆಯಾಗುವವರಿಗೆ ಬಟ್ಟೆ ದೊರಕದೆ ಪರದಾಡುತ್ತಿದ್ದಾರೆ. ನಗರದಲ್ಲಿಸಣ್ಣಪುಟ್ಟ ಅಂಗಡಿಗಳು ಸೇರಿದಂತೆ 150ಕ್ಕೂ ಹೆಚ್ಚುಬಟ್ಟೆ ಅಂಗಡಿಗಳಿದ್ದು, ಕೆಲವು ಅಂಗಡಿಗಳನ್ನು ಬಿಟ್ಟರೆ ಉಳಿದೆಲ್ಲ ಅಂಗಡಿಗಳು ಬಾಡಿಗೆ ಕಟ್ಟಡದಲ್ಲಿನಡೆಯುತ್ತವೆ. ಎಲ್ಲ ಕಟ್ಟಡಗಳಿಗೆ ದುಬಾರಿಬಾಡಿಗೆ ಮತ್ತು ಮುಂಗಡ ನೀಡಲಾಗಿದೆ. ಕಳೆದ ಒಂದು ವರ್ಷದಿಂದ ಕೊರೊನಾ ಕಷ್ಟದಿಂದಾಗಿಸರಿಯಾಗಿ ವ್ಯಾಪಾರ ವಹಿವಾಟುಗಳಿಲ್ಲದ ಕಾರಣಸರಿಯಾಗಿ ಬಾಡಿಗೆ ಕಟ್ಟಲು ಸಾಧ್ಯವಾಗದೆ,ಕುಟುಂಬಗಳ ನಿರ್ವಹಣೆಯು ಮಾಡದಂತ ಸ್ಥಿತಿ ನಿರ್ಮಾಣವಾಗಿದೆ.
ಬಟ್ಟೆ ಅಂಗಡಿಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಮುಂಗಡ ಹಣ ನೀಡಲಾಗಿದೆ.ಅವರಿಗೆ ಪ್ರತಿ ತಿಂಗಳು ಸಂಬಳ ಕೊಡಬೇಕು, ವಿದ್ಯುತ್ ಬಿಲ್ ಕಟ್ಟುವುದು ಕೂಡ ಕಷ್ಟವಾಗುತ್ತಿದೆ. ನಮ್ಮಅಂಗಡಿಗಳಿಗೆ ಖಾಯಂ ಗ್ರಾಹಕರಿದ್ದಾರೆ, ಅವರಿಗೆಲ್ಲತೊಂದರೆಯಾಗುತ್ತಿದೆ. ಉಳಿದ ಅಂಗಡಿಗಳಂತೆನಮಗೂ ವ್ಯಾಪಾರ ಮಾಡಲು ಅವಕಾಶನೀಡಬೇಕೆಂದು ಬಟ್ಟೆ ಅಂಗಡಿಗಳ ಮಾಲೀಕರು ಒತ್ತಾಯಿಸಿದ್ದಾರೆ.
ಒಂದು ಲಕ್ಷ ಮುಂಗಡ ಹಣಕೊಟ್ಟು,3 ಲಕ್ಷ ಬಂಡವಾಳ ಹೂಡಿಕೆ ಮಾಡಿ ಬಟ್ಟೆ ಅಂಗಡಿತೆರೆದಿದ್ದೇನೆ. ಅಂಗಡಿ ತೆರೆದ ಒಂದೇ ವಾರದಲ್ಲಿ ಜನತಾಕರ್ಫ್ಯೂ ಜಾರಿಗೊಳಿಸಲಾಯಿತು. ಸಂಪೂರ್ಣ ಲಾಕ್‌ಡೌನ್ ಗೊಳಿಸಲಾಗಿದೆ. 10ಸಾವಿರ ಬಾಡಿಗೆ ಕಟ್ಟಬೇಕು, ಕುಟುಂಬದ ನಿರ್ವಹಣೆಯು ಕಷ್ಟವಾಗುತ್ತಿದೆ. ಸಣ್ಣ ವ್ಯಾಪಾರಿಗಳನ್ನು ಗಮನದಲ್ಲಿಟ್ಟುಕೊಂಡು ಲಾಕ್‌ಡೌನ್ ವೇಳೆಯಲ್ಲಿ ಸಮಯವನ್ನ ನಿಗದಿ ಪಡಿಸಿ ವ್ಯಾಪಾರಕ್ಕೆಅವಕಾಶ ನೀಡಬೇಕು ಎಂದು ಬಟ್ಟೆ ವ್ಯಾಪಾರಿ ಸಿದ್ದಣ್ಣ ಮನವಿ ಮಾಡಿದ್ದಾರೆ.
ಆದರೆ ಸರ್ಕಾರದಿಂದ ಬಟ್ಟೆ ಅಂಗಡಿ ತೆರೆಯಲು ಅವಕಾಶವಿಲ್ಲ, ಸರ್ಕಾರದ ನಿರ್ದೇಶನ ಪಾಲನೆ ಮಾಡುವುದು ನಮ್ಮ ಕರ್ತವ್ಯ, ಆದರೆ ಕೋವಿಡ್ ಬಗ್ಗೆ ಜಾಗೃತಿ ಅಗತ್ಯವಾಗಿದೆ. ಕೇವಲ ಸರ್ಕಾರದಿಂದನಿಯಂತ್ರಿಸಲು ಸಾಧ್ಯವಿಲ್ಲ. ಸಾರ್ವಜನಿಕರುಗಂಭೀರವಾಗಿ ಪರಿಗಣಿಸಬೇಕು. ಸರ್ಕಾರದಿಂದನಿರ್ದೇಶನ ಬಂದರೆ ಅವಕಾಶ ನೀಡಲಾಗುತ್ತದೆ ಎಂದು ನಗರಸಭೆ ಅಧಿಕಾರಿಗಳು ಹೇಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಮಲ್ಲಾರು : ಗಾಳಿ ಮಳೆಗೆ ಹಾರಿ ಹೋದ ಶಾಲೆಯ ಮೇಲ್ಛಾವಣಿ, ವಿದ್ಯಾರ್ಥಿಗಳು ಕಂಗಾಲು
ಬಾಳೆ ಕೃಷಿ ಮಾಡಿ ಸೈ ಎನಿಸಿಕೊಂಡಿರುವ ಕಳಸದ ಪ್ರಕಾಶ್ ಕುಮಾರ್
ಕಾಪು ತಾಲೂಕಿನಾದ್ಯಂತ ಭಾರೀ ಮಳೆ ತಗ್ಗು ಪ್ರದೇಶಗಳಲ್ಲಿ ನೆರೆ ಭೀತಿ
ಮಹಾ ತಿರುವು ; ಏಕನಾಥ್ ಶಿಂಧೆಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟು ಕೊಟ್ಟ ಬಿಜೆಪಿ
ಸುರತ್ಕಲ್ ಸುತ್ತಮುತ್ತ 15 ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು
ಹೊಸ ಸೇರ್ಪಡೆ
ಮಣಿಪುರ: ಧಾರಾಕಾರ ಮಳೆಗೆ ಭಾರೀ ಭೂಕುಸಿತ-14 ಮಂದಿ ಸಾವು, 60 ಜನರು ಜೀವಂತ ಸಮಾಧಿ?
ವಿದ್ಯುತ್ ಕಂಬಕ್ಕೆ ಬಿಯರ್ ಸಾಗಿಸುತ್ತಿದ್ದ ಲಾರಿ ಡಿಕ್ಕಿ; ಚಾಲಕ ಸ್ಥಳದಲ್ಲೇ ಸಾವು
ಸಾಮಾನ್ಯ ಮನುಷ್ಯನ ಅಸಾಮಾನ್ಯ ಶಕ್ತಿ: ಇಂದಿನಿಂದ ‘ಬೈರಾಗಿ’ ದರ್ಶನ
ಚೇತನಾ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ, ಸಿದ್ದಾಪುರ (ಉ.ಕ.)
ದಾಖಲೆಯ ದೂರಕ್ಕೆ ಜಾವೆಲಿನ್ ಎಸೆದ ನೀರಜ್ ಚೋಪ್ರಾ; ಹೊಸ ದಾಖಲೆ ಬರೆದ ಚಿನ್ನದ ಹುಡುಗ| Video