Udayavni Special

ತಂಬಾಕು ನಿಯಂತ್ರಣ ಸಮಿತಿ ರಚಿಸಿ


Team Udayavani, Nov 12, 2020, 5:01 PM IST

ತಂಬಾಕು ನಿಯಂತ್ರಣ ಸಮಿತಿ ರಚಿಸಿ

ಬಳ್ಳಾರಿ: ಗ್ರಾಮ ಪಂಚಾಯತ್‌ ಮಟ್ಟದಲ್ಲಿ ತಂಬಾಕು ನಿಯಂತ್ರಣ ಕುರಿತು ಟಾಸ್ಕ್ ಫೋರ್ಸ್‌ ಸಮಿತಿ ರಚಿಸಿ ಪರಿಣಾಮಕಾರಿ ಅನುಷ್ಠಾನಕ್ಕೆಮುಂದಾಗುವಂತೆ ಅಪರ ಜಿಲ್ಲಾಧಿ ಕಾರಿ ಪಿ.ಎಸ್‌.ಮಂಜುನಾಥ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಡಿಯೋ ಕಾನ್ಫರೆನ್ಸ್‌ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ತಂಬಾಕುನಿಯಂತ್ರಣ ಕೋಶದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಲ್ಲ ಶಾಲಾ-ಕಾಲೇಜುಗಳ 200 ಮೀಟರ್‌ ವ್ಯಾಪ್ತಿಯಲ್ಲಿ ತಂಬಾಕು-ತಂಬಾಕು ಉತ್ಪನ್ನಗಳ ಮಾರಾಟ ನಿಷೇ ಧಿಸಬೇಕು ಮತ್ತು ಈ ಕುರಿತು ಗೋಡೆಬರಹ ಹಾಗೂ ನಾಮಫಲಕ ಹಾಕಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕೊಟ್ಟೂರು, ಹರಪನಳ್ಳಿ ತಾಲೂಕುಗಳ ವ್ಯಾಪ್ತಿಯಲ್ಲಿ ತಂಬಾಕು ಬೆಳೆಬೆಳೆಯಲಾಗುತ್ತಿದ್ದು, ಈ ಬೆಳೆ ಬೆಳೆಯುತ್ತಿರುವ ರೈತರಿಗೆ ತಂಬಾಕು ದುಷ್ಪರಿಣಾಮಗಳ ಬಗ್ಗೆ ತಿಳಿಸಿ ಬೇರೆ ಬೆಳೆ ಬೆಳೆಯುವ ಬಗ್ಗೆ ಮನವೊಲಿಸುವ ಕೆಲಸ ಮಾಡುವಂತೆ ಅವರು ಉತ್ಪಾದಕರ ಹೆಸರಿರದ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಳ್ಳುವುದರ ಜತೆಗೆ ದಂಡ ಹಾಕುವ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ ಪರವಾನಗಿ ಹೊಂದಿರುವ ಬಾರ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಕಡ್ಡಾಯವಾಗಿ ಸ್ಮೋಕ್‌ ಝೋನ್‌ ಮಾಡಬೇಕು ಮತ್ತು ಧೂಮಪಾನ ರಹಿತ ಪ್ರದೇಶವೆಂದು ಘೋಷಿಸುವ ಕುರಿತು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದ ಅವರು ಅಂಗಡಿಗಳಿಗೆಲೈಸೆನ್ಸ್‌ ನೀಡುವ ಸಂದರ್ಭದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧ ಮತ್ತು 18 ವರ್ಷದೊಳಗಿನ ಮಕ್ಕಳಿಗೆ ತಂಬಾಕು ನೀಡದಿರುವ ಕುರಿತ ನಾಮಫಲಕಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ಸೂಚಿಸಬೇಕು ಎಂದರು.

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ನಿಷೇಧಕ್ಕೆ ಸಂಬಂಧಿಸಿದ ಸೆಕ್ಷನ್‌ 4 ಅಡಿ ಫಲಕಗಳನ್ನು ಹಾಕಬೇಕು ಎಂದರು. ವಿವಿಧ ವಿಷಯಗಳ ಕುರಿತು ಸುಧೀರ್ಘ‌ವಾಗಿ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಜಿಪಂ ಉಪಕಾರ್ಯದರ್ಶಿ ಶರಣಪ್ಪ, ಡಿಎಚ್‌ಒ ಡಾ| ಎಚ್‌.ಎಲ್‌.ಜನಾರ್ಧನ್‌, ಜಿಲ್ಲಾ ಶಸ್ತ್ರಚಿಕಿತ್ಸಕ ಎನ್‌.ಬಸರೆಡ್ಡಿ, ಡಿಎಸ್‌ಒ ಡಾ| ಮರಿಯಂಬಿವಿ.ಕೆ., ಡಿಟಿಒ ಡಾ| ಇಂದ್ರಾಣಿ, ಜಿಲ್ಲಾ ಅಂಕಿತ ಮತ್ತು ಆಹಾರ ಸುರಕ್ಷಿತಾ ಅಧಿಕಾರಿಗಳಾದ ಡಾ| ರುದ್ರಗೌಡ ಪಾಟೀಲ್‌, ಡಿಎಚ್‌ಇಒ ಈಶ್ವರ್‌ ದಾಸಪ್ಪನವರ್‌, ಮಹಾನಗರ ಪಾಲಿಕೆ ಆರೋಗ್ಯ ಅಧಿಕಾರಿಗಳಾದ ಡಾ| ಹನುಮಂತಪ್ಪ, ದಂತತಜ್ಞ ಡಾ| ಪ್ರಶಾಂತ್‌, ಬೋಜರಾಜ್‌, ಎನ್‌ಸಿಡಿ ಕನ್ಸ್‌ಲ್ಟೆಂಟ್‌ ಡಾ| ಜಮೀನ್‌ ತಾಜ್‌, ಮೌನೇಶ್‌, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ನಾಗರಾಜ್‌, ಕಾರ್ಮಿಕ ನಿರೀಕ್ಷರ ಅಧಿಕಾರಿಗಳು ಸೇರಿದಂತೆ ಇನ್ನಿತರರು ಇದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಸಂಕ್ರಾಂತಿ ಹಬ್ಬದ ಬಳಿಕ ವಿದ್ಯಾಗಮ ಪುನರಾರಂಭ?

ಸಂಕ್ರಾಂತಿ ಹಬ್ಬದ ಬಳಿಕ ವಿದ್ಯಾಗಮ ಪುನರಾರಂಭ?

Soil-2

ಮಣ್ಣು ಅಳಿದರೆ ಜೀವ ಸಂಕುಲಕ್ಕೆ ಸಂಚಕಾರ

ಸಾಂಬಾರ ಉದ್ದಿಮೆ ಸಾಮ್ರಾಜ್ಯ ಕಟ್ಟಿದ ಟಾಂಗಾವಾಲಾ

ಸಾಂಬಾರ ಉದ್ದಿಮೆ ಸಾಮ್ರಾಜ್ಯ ಕಟ್ಟಿದ ಟಾಂಗಾವಾಲಾ

ಚೀನದಿಂದ ‘ಸೂಪರ್‌ ಸೈನಿಕ’ರ ಸೃಷ್ಟಿ

ಚೀನದಿಂದ ‘ಸೂಪರ್‌ ಸೈನಿಕ’ರ ಸೃಷ್ಟಿ

Times

ಭಾರತ ಮೂಲದ 15 ವರ್ಷದ ಸಂಶೋಧಕಿಗೆ ಟೈಮ್ಸ್‌  ಪುರಸ್ಕಾರ

Modi

ಕೋಟಿ ಕಾರ್ಯಕರ್ತರಿಗೆ ಲಸಿಕೆ; ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಘೋಷಣೆ

Train

ಸಚಿವರ ಭೇಟಿಗೆ ಸಂಸದರ ಭರವಸೆ






ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರೈತ ವಿರೋಧಿ ಕಾಯ್ದೆ  ವಾಪಸ್‌ಗೆ ಆಗ್ರಹ

ರೈತ ವಿರೋಧಿ ಕಾಯ್ದೆ ವಾಪಸ್‌ಗೆ ಆಗ್ರಹ

ಮೆಣಸಿನಕಾಯಿಗೆ ಬೂದಿ ರೋಗದ ಕಾಟ!

ಮೆಣಸಿನಕಾಯಿಗೆ ಬೂದಿ ರೋಗದ ಕಾಟ!

ನಿರ್ಲಕ್ಷ್ಯಕ್ಕೆ ಸಾಕ್ಷಿಯಾಯ್ತು ಅಂಬೇಡ್ಕರ್‌ ಭವನ!

ನಿರ್ಲಕ್ಷ್ಯಕ್ಕೆ ಸಾಕ್ಷಿಯಾಯ್ತು ಅಂಬೇಡ್ಕರ್‌ ಭವನ!

ಕ್ಷಯ ರೋಗ ನಿರ್ಮೂಲನೆಗೆ ಸಹಕರಿಸಿ

ಕ್ಷಯ ರೋಗ ನಿರ್ಮೂಲನೆಗೆ ಸಹಕರಿಸಿ

ನಿಗದಿತ ಕಾಲಮಿತಿಯಲ್ಲಿ  ಸೇವೆ ಒದಗಿಸಿ

ನಿಗದಿತ ಕಾಲಮಿತಿಯಲ್ಲಿ ಸೇವೆ ಒದಗಿಸಿ

MUST WATCH

udayavani youtube

ಮಂಗಳೂರು ದೋಣಿ ದುರಂತದಲ್ಲಿ ಮೃತಪಟ್ಟವರಲ್ಲಿ ಅನ್ಸಾರ್ ಎಂಬಾತನ ಮೃತ ದೇಹಕ್ಕಾಗಿ ಹುಡುಕಾಟ

udayavani youtube

ಕುಂದಾಪುರ: ಬಾವಿಗೆ ಬಿದ್ದ ಜಿಂಕೆಯ ರಕ್ಷಣೆ

udayavani youtube

ಅನಾರೋಗ್ಯಕ್ಕೆ ಕುಗ್ಗದೆ ಕೃಷಿಯಲ್ಲಿ ಬದುಕು ಬದಲಿಸಿಕೊಂಡ ಸಾಧಕ

udayavani youtube

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕೂಡಲೇ ಆಗಬೇಕು: ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

udayavani youtube

ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾರಂಭವಾಗಿರುವ ದೇಶಿ ಉತ್ಪನ್ನಗಳ ಮಳಿಗೆ

ಹೊಸ ಸೇರ್ಪಡೆ

ಇನ್ನೂ ಪತ್ತೆಯಾಗದ ಓರ್ವ ಮೀನುಗಾರ

ಸಂಕ್ರಾಂತಿ ಹಬ್ಬದ ಬಳಿಕ ವಿದ್ಯಾಗಮ ಪುನರಾರಂಭ?

ಸಂಕ್ರಾಂತಿ ಹಬ್ಬದ ಬಳಿಕ ವಿದ್ಯಾಗಮ ಪುನರಾರಂಭ?

Soil-2

ಮಣ್ಣು ಅಳಿದರೆ ಜೀವ ಸಂಕುಲಕ್ಕೆ ಸಂಚಕಾರ

ಸಾಂಬಾರ ಉದ್ದಿಮೆ ಸಾಮ್ರಾಜ್ಯ ಕಟ್ಟಿದ ಟಾಂಗಾವಾಲಾ

ಸಾಂಬಾರ ಉದ್ದಿಮೆ ಸಾಮ್ರಾಜ್ಯ ಕಟ್ಟಿದ ಟಾಂಗಾವಾಲಾ

ಚೀನದಿಂದ ‘ಸೂಪರ್‌ ಸೈನಿಕ’ರ ಸೃಷ್ಟಿ

ಚೀನದಿಂದ ‘ಸೂಪರ್‌ ಸೈನಿಕ’ರ ಸೃಷ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.