ಸವಾಲು ಹಾಕಿದ ಮಾತ್ರಕ್ಕೆ ಸಿದ್ದುವಿರುದ್ಧ ಸ್ಪರ್ಧಿಸಲ್ಲ: ರಾಮುಲು
Team Udayavani, Dec 1, 2022, 9:49 PM IST
ಬಳ್ಳಾರಿ: ಸವಾಲು ಹಾಕುತ್ತಾರೆ ಎಂದು ನಾನು ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ಮಾಡಲ್ಲ. ಪಕ್ಷ ಎಲ್ಲಿ ಟಿಕೆಟ್ ನೀಡುತ್ತದೋ ಅಲ್ಲಿ ಸ್ಪರ್ಧೆ ಮಾಡುತ್ತೇನೆಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, 2010ರಲ್ಲಿ ಸಿದ್ದರಾಮಯ್ಯ, ಇದೀಗ ಎಐಸಿಸಿ ಮುಖಂಡ ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೋ ಪಾದಯಾತ್ರೆ ಸ್ವಾರ್ಥದಿಂದ ಕೂಡಿದೆ. 2013ರಿಂದ ರಾಜ್ಯದಲ್ಲಿ ಐದು ವರ್ಷ ಕಾಂಗ್ರೆಸ್ ಅಧಿಕಾರ ಹಿಡಿದಾಗ ನಮ್ಮ ಭಾಗಕ್ಕೆ ಏನೂ ಮಾಡಲಿಲ್ಲ. ಪುಂಗಿ ಮತ್ತು ಡೊಂಗಿ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್, ತಾವು ಅ ಧಿಕಾರದಲ್ಲಿದ್ದಾಗ ಎಸ್ಸಿ, ಎಸ್ಟಿಗೆ ಏಕೆ ಮೀಸಲಾತಿ ಹೆಚ್ಚಿಸಲಿಲ್ಲ. ಬಿಜೆಪಿಯಿಂದ ಮಾತ್ರ ಮೀಸಲಾತಿ ಹೆಚ್ಚಳ ಮಾಡಲು ಸಾಧ್ಯವಾಯಿತು. 2023ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಎಸ್ಸಿ ಮತ್ತು ಎಸ್ಟಿ ಸಮಾಜದವರು ಬಿಜೆಪಿ ಪರವಾಗಿ ನಿಲ್ಲುತ್ತಾರೆಂಬ ವಿಶ್ವಾಸ ವ್ಯಕ್ತಪಡಿಸಿದರು.
ನಾನು ಸಾಮಾನ್ಯ ವ್ಯಕ್ತಿ, ಕಾರ್ಯಕರ್ತರಿಂದಲೇ ನಾನು, ನನಗೆ ಸ್ಥಾನಮಾನ ಏನೂ ಇಲ್ಲ. ಪ್ರಬಂಧಕರು, ಪಕ್ಷದ ಕಾರ್ಯಕರ್ತರು, ಮುಖಂಡರು ಎಸ್ಟಿ ಸಮಾವೇಶದ ಯಶಸ್ವಿಗೆ ಕಾರಣರಾಗಿದ್ದಾರೆ. ಗುಜರಾತ್‌ನಲ್ಲಿ ಗುರುವಾರ ಮೊದಲ ಹಂತದ ಮತದಾನ ನಡೆದಿದೆ. ಅಲ್ಲಿ ಕಾಂಗ್ರೆಸ್‌ಗೆ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ. ಸದ್ಯ ಕಾಂಗ್ರೆಸ್ ದೇಶದ ಮೂರು ರಾಜ್ಯದಲ್ಲಿ ಅ ಧಿಕಾರದಲ್ಲಿದ್ದು ಅಲ್ಲಿಯೂ ನೆಲಕಚ್ಚಲಿದೆ. ರೌಡಿ ಶೀಟರ್‌ಗಳನ್ನು ಬಿಜೆಪಿ ಸೇರಿಸಿಕೊಳ್ಳಲು ಸಾಧ್ಯವೇ ಇಲ್ಲ. ಈ ಬಗ್ಗೆ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಈಗಾಗಲೇ ಸ್ವಷ್ಟವಾಗಿ ಹೇಳಿದ್ದಾರೆ. ಕಾಂಗ್ರೆಸ್‌ನವರ ಹಿನ್ನೆಲೆ ನೋಡಿದ್ರೇ ಗೊತ್ತಾಗ್ತದೆ ಅವರಲ್ಲೇ ಗೂಂಡಾಗಳು ಹೆಚ್ಚಾಗಿ ಇರುವುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಲಂಚಕ್ಕೆ ಬೇಡಿಕೆ: ಕೇಂದ್ರ ಪುರಾತತ್ವ ಇಲಾಖೆಯ ಮೂವರು ಅಧಿಕಾರಿಗಳು ಸಿಬಿಐ ಬಲೆಗೆ
ಆನೆಗೊಂದಿ-ಸಾಣಾಪೂರ ಭಾಗದ ಅನಧಿಕೃತ ಹೊಟೇಲ್ಗಳ ತೆರವಿಗೆ ಮುಂದಾದ ಅಧಿಕಾರಿಗಳು
ಹು-ಧಾ ಕೇಂದ್ರ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಮಂತ್ರ ಪಠಣ
ಶಿವಾಜಿ, ಬಸವೇಶ್ವರ, ಬುದ್ಧ, ಗಾಂಧೀಜಿಯನ್ನೇ ಬಿಡದವರು ನನ್ನನ್ನು ಬಿಡುತ್ತಾರಾ: ಕುಮಾರಸ್ವಾಮಿ
ಕಲಿಕೆಯ “ಜಂಬೋ” ಅವಕಾಶ: ಪೋದಾರ್ ಲರ್ನ್ ಸ್ಕೂಲ್