ಬಿಜೆಪಿ ಸಮಾವೇಶದಲ್ಲಿ 20 ಸಾವಿರಕ್ಕೂ ಹೆಚ್ಚು ಜನ ಭಾಗಿ

Team Udayavani, Jan 6, 2018, 2:14 PM IST

ಬಳ್ಳಾರಿ: ನಗರದಲ್ಲಿ ಶುಕ್ರವಾರ ಜರುಗಿದ ಬಿಜೆಪಿ ಪರಿವರ್ತನಾ ಯಾತ್ರೆಯ ಅಂಗವಾಗಿ ಜರುಗಿದ ಬೃಹತ್‌ ಸಮಾವೇಶದಲ್ಲಿ 20 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ರಾಜ್ಯ ಉಸ್ತುವಾರಿ ಮುರಳೀಧರ ರಾವ್‌, ಮಾಜಿ ಸಿಎಂ ಜಗದೀಶ ಶೆಟ್ಟರ್‌, ಸಂಸದ ಬಿ.ಶ್ರೀರಾಮುಲು, ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿ ಮುಂತಾದವರು  ಬೈಕ್‌ ರ್ಯಾಲಿಯ ಹಿಂದೆ ತೆರೆದ ವಾಹನದಲ್ಲಿ ಸಮಾವೇಶ ಸ್ಥಳವಾದ ಜಿಲ್ಲಾ ಕ್ರೀಡಾಂಗಣಕ್ಕೆ ಆಗಮಿಸಿದರು.

ಬಿಎಸ್‌ನೈ ಅವರು ವೇದಿಕೆ ಹತ್ತುವ ಮುನ್ನ ನಗರದ ಶ್ರೀ ಬಾಲಾಂಜನೇಯ ದೇವಸ್ಥಾನದ ಗೋಶಾಲೆಯ ಗಂಗಾ ಹೆಸರಿನ ಗೋವು ಮತ್ತು ಕರುವಿಗೆ ಪೂಜೆ ಸಲ್ಲಿಸಿ, ಹೂ ಹಾರ ಹಾಕಿ, ರೇಶ್ಮೆ ಸೀರೆ ನೀಡಿ, ಬಾಳೇ ಹಣ್ಣು ತಿನ್ನಿಸಿ ವೇದಿಕೆ ಹತ್ತಿದರು. ಸಮಾವೇಶದಲ್ಲಿ ಜನರ ಆಕರ್ಷಣೆಗೆ ಮಹಿಳೆಯರಿದ್ದ ಡೊಳ್ಳು ವಾದನ, ಸಾಂಪ್ರದಾಯಿಕ ಕಹಳೆ ವಾದನಗಳು ಕಳೆ ನೀಡಿದವು. ನಗರದ ವಿವಿಧ ಸ್ಲಂ ಪ್ರದೇಸಗಳಿಂದ ಬಿಜೆಪಿ ಕಾರ್ಯಕರ್ತರು ಸಾವಿರಾರು
ಮಹಿಳೆಯರನ್ನು ಸಮಾವೇಶಕ್ಕೆ ಕರೆತಂದಿದ್ದರು. ಅನೇಕ ಮಹಿಳೆಯರು ತಮ್ಮ ಚಿಕ್ಕಮಕ್ಕಳೊಂದಿಗೆ ಸಮಾವೇಶಕ್ಕೆ ಆಗಮಿಸಿದ್ದರೆ, ಶಾಲೆಗಳ ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಆಗಮಿಸಿದ್ದರು. 

ಎದ್ದ ಜನರನ್ನು ಕುಳ್ಳಿರಿಸಿದ ಸೋಮಶೇಖರರೆಡ್ಡಿ: ಎಂಟು ಸಾವಿರ ಕುರ್ಚಿಗಳನ್ನು ಹಾಕಲಾಗಿದ್ದ ಸಮಾವೇಶ ಆರಂಭವಾಗುತ್ತಿದ್ದಂತೆ ಕೆಲವು ಜನರು ಎದ್ದು ಹೋಗಲು ಆರಂಭಿಸಿದರು. ಆಗ ಮಾಜಿ ಶಾಸಕ ಸೋಮಶೇಖರರೆಡ್ಡಿ ವೇದಿಕೆಯಿಂದ ಇಳಿದು ಜನರನ್ನು ಕುಳ್ಳಿರಿಸುವ ಪ್ರಯತ್ನ ಮಾಡಿದರು.

ಬಿಜೆಪಿ ಶಕ್ತಿ ಪ್ರದರ್ಶನ: ಬೆಳಿಗ್ಗೆ ಜರುಗಿದ ಸುದ್ದಿಗೋಷ್ಠಿಯಲ್ಲಿ ಬಳ್ಳಾರಿ ನಗರ ಅಭ್ಯರ್ಥಿಯ ಹೆಸರು ಪ್ರಕಟಿಸಲು ಪತ್ರಕರ್ತರು ಕೋರಿದಾಗ ಬಿಎಸ್‌ಬೈ ಸಮಾವೇಶದಲ್ಲಿ ಸೇರಿದ ಜನರನ್ನು ಆಧರಿಸಿ ಘೋಷಿಸುತ್ತೇನೆ ಎಂದಿದ್ದರು. ಅಂತೆಯೇ ಜನ ಸಂಖ್ಯೆಯನ್ನು ನೋಡಿದ ಬಿಎಸ್‌ವೈ ನಗರ ಕ್ಷೇತ್ರದಿಂದ ಸೋಮಶೇಖರರೆಡ್ಡಿ ಸ್ಪರ್ಧಿಸಲಿದ್ದಾರೆ. ಮತದಾರರು ಅವರನ್ನು ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ