ಹಂಪಿ ಉತ್ಸವದಲ್ಲಿಲ್ಲ ಅನ್ನದಾತನ ಉತ್ಸಾಹ!


Team Udayavani, Nov 6, 2017, 10:43 AM IST

hampi-1.jpg

ಹಂಪಿ: ಸಾಂಸ್ಕೃತಿಕ ಲೋಕದ ಸಿರಿವಂತಿಕೆ ಸಾರುವ ಹಾಗೂ ವಿಜಯನಗರ ಸಾಮ್ರಾಜ್ಯದ ಐತಿಹಾಸಿಕ ಕ್ಷಣಗಳ ಸ್ಮರಣೆಗಾಗಿ ದಿ| ಮಾಜಿ ಸಚಿವ ಎಂ.ಪಿ.ಪ್ರಕಾಶ್‌ ಆರಂಭಿಸಿದ ಹಂಪಿ ಉತ್ಸವ ಎರಡು ದಶಕಗಳನ್ನು ಪೂರೈಸಿದೆ. ವಿವಿಧ ಕಲಾ ಪ್ರಕಾರಗಳನ್ನು ಪರಿಚಯಿಸುವುದರ ಜೊತೆಗೆ ಪ್ರತಿ ವರ್ಷ ಒಂದಿಲ್ಲೊಂದು ಹೊಸ ವಿಚಾರಗಳನ್ನು ಹೊತ್ತು ತರುತ್ತಿದ್ದ ಹಂಪಿ ಉತ್ಸವ ಈ ಬಾರಿ ಕೃಷಿ ವಿಚಾರ ಸಂಕಿರಣ ಕೈ ಬಿಟ್ಟದ್ದು ಕೃಷಿಪ್ರಿಯರಿಗೆ ನಿರಾಸೆ ತಂದಿದೆ.

ಕಳೆದ ವರ್ಷದಿಂದ ಆರಂಭಗೊಂಡಿದ್ದ ಕೃಷಿ ವಿಚಾರ ಸಂಕಿರಣಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿತ್ತು. ನಾಡಿನ ದೂರದ ಜಿಲ್ಲೆಗಳ ಅನೇಕ ರೈತರು ಕೃಷಿಗೋಷ್ಠಿಯಲ್ಲಿ ಪಾಲ್ಗೊಂಡು ಒಕ್ಕಲುತನದ ಅನೇಕ ಬಗೆಗಳನ್ನು ಅರಿತುಕೊಂಡಿದ್ದರು. ಈ ಸಲವೂ ಹೊಲ-ಬೆಳೆಗಳ ಮಾಹಿತಿ ಬಯಸಿ ಅನೇಕ ರೈತರು ಹಂಪಿ ಉತ್ಸವಕ್ಕೆ ಬಂದರಾದರೂ ಅವರಿಗೆ ಸಾಹಿತ್ಯ, ಸಂಗೀತ, ನೃತ್ಯದ ಹೊರತಾಗಿ ಬೇರೆನೂ ಸಿಗಲಿಲ್ಲ. 

ಕೃಷಿ ವಿಚಾರ ಸಂಕಿರಣವನ್ನು ಹಂಪಿ ಉತ್ಸವದಲ್ಲಿ ಆರಂಭಿಸಿದ ಕೀರ್ತಿ ಬಳ್ಳಾರಿಯ ಈಗಿನ ಜಿಲ್ಲಾಧಿಕಾರಿ ಡಾ| ವಿ.ರಾಮಪ್ರಸಾತ ಮನೋಹರ್‌ ಅವರಿಗೆ ಸೇರುತ್ತದೆ. ಕಳೆದ ವರ್ಷ ಆರಂಭಗೊಂಡಿದ್ದ ಈ ವಿಚಾರಗೋಷ್ಠಿಯನ್ನು ಸ್ವತಃ ಅವರೇ ಉದ್ಘಾಟಿಸಿದ್ದರು. ಇನ್ನು ಮುಂದೆ ಪ್ರತಿ ವರ್ಷ ಹಂಪಿ ಉತ್ಸವದಲ್ಲಿ ಕೃಷಿಗೆ ಪೂರಕ ಗೋಷ್ಠಿಗಳನ್ನು ನಡೆಸುವ ಭರವಸೆಯನ್ನೂ ನೀಡಿದ್ದರು.

ಸಮೃದ್ಧ ಮಳೆ ಕಾರಣವಾಯಿತೇ?: ಕಳೆದ ಬಾರಿ ಹಂಪಿ ಉತ್ಸವ ನಡೆದಾಗ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಎಂ.ಪಿ.ಪ್ರಕಾಶ್‌ ಅವರ ಕನಸಿನ ಉತ್ಸವ ನಿಲ್ಲಬಾರದು ಎನ್ನುವ ಕೂಗು ಒಂದೆಡೆಯಾದರೆ, ಬಳ್ಳಾರಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳು ಬರಗಾಲದಿಂದ ತತ್ತರಿಸುವ ಈ ಸಂದರ್ಭದಲ್ಲಿ ಉತ್ಸವದ ಗೊಡವೆ ಬಿಡಿ ಎನ್ನುವ ಧ್ವನಿ ಮತ್ತೂಂದೆಡೆಯಾಗಿತ್ತು.

ಕೊನೆಗೂ ಎಲ್ಲ ಸಾಧಕ-ಬಾಧಕಗಳನ್ನು ಚಿಂತಿಸಿ ಹಂಪಿ ಉತ್ಸವ ಸ್ಥಗಿತಗೊಳಿವುದು ಬೇಡ ಎಂದು ತೀರ್ಮಾನಿಸಿ ನಡೆಸಲಾಯಿತು. ಬರಗಾಲ ಎಂದಾಕ್ಷಣ ಸಹಜವಾಗಿ ರೈತ ಕಣ್ಮುಂದೆ ಬರುತ್ತಾನೆ. ಈ ಉತ್ಸವದಲ್ಲಿ ರೈತನ ಒಳಗೊಳ್ಳುವಿಕೆಯೂ ಇರಲಿ ಎನ್ನುವ ಸದುದ್ದೇಶದಿಂದ ಕೃಷಿ ವಿಚಾರ ಸಂಕಿರಣ ಪರಿಚಯಿಸಲಾಯಿತು.

ಪ್ರಗತಿಪರ ರೈತ ಡಾ| ಮಲ್ಲಣ್ಣ ನಾಗರಾಳ ಸಹಜ ಕೃಷಿ ಮತ್ತು ಯುವಕರು ಕೃಷಿ ಕಡೆ ಹೊರಳಲಿ ಎನ್ನುವ ಸಂದೇಶ ನೀಡಿದ್ದರು. ಬೇಸಾಯ ತಜ್ಞ ಡಾ| ವಿ.ಎಸ್‌. ಸುರಕೋಡ್‌ ಬರ ನಿರ್ವಹಣೆ ಮತ್ತು ಮಿತ ನೀರು ಬಳಕೆ ಕುರಿತು ಉಪನ್ಯಾಸ ನೀಡಿದ್ದರು.

ಈ ಸಲ ರಾಜ್ಯದ ಬಹುತೇಕ ಕಡೆ ಸಮೃದ್ಧ ಮಳೆ ಸುರಿದಿದೆ. ಬಳ್ಳಾರಿ ಜಿಲ್ಲೆಯಲ್ಲೂ ಸಹ ವರುಣನ ಆರ್ಭಟ ಜೋರಾಗಿತ್ತು. ಜಿಲ್ಲೆಯ ತುಂಗಭದ್ರಾ ಜಲಾಶಯ ಮತ್ತೇ ಬಾಗಿನ ಸ್ವೀಕರಿಸಿದೆ. ಎಡ-ಬಲದಂಡೆ ಕಾಲುವೆಗಳಿಗೆ ಸಾಕೆನಿಸುವಷ್ಟು ಪ್ರಮಾಣದಲ್ಲಿ ನೀರು ಹರಿಸಲಾಗಿದೆ. ಮಳೆ-ಬೆಳೆಯ ಸಮೃದ್ಧಿಯ ಈ ದಿನಗಳೇ ಕೃಷಿ ವಿಚಾರ ಸಂಕಿರಣ ಮರೆಯಲು ಕಾರಣವಾಯಿತೇ? ಎನ್ನುವ ಅಭಿಪ್ರಾಯಗಳು ರೈತಾಪಿ ಜನರಿಂದ ವ್ಯಕ್ತವಾಗಿವೆ.

ಬಸವರಾಜ ಕರುಗಲ್‌

ಕ‌ೃಷಿ, ಕೃಷಿಕನನ್ನು ನಿರ್ಲಕ್ಷಿಸಿದರೆ ಎಲ್ಲರಿಗೂ ತೊಂದರೆ ಎಂಬುದನ್ನು ವಿವರಿಸಬೇಕಿಲ್ಲ. ಕಳೆದ ವರ್ಷ ಆರಂಭಗೊಂಡಿದ್ದ ಕೃಷಿ ವಿಚಾರ ಸಂಕಿರಣ ಈ ವರ್ಷ ಮರೆತು ಹೋಗಿದೆ. ಮಳೆಯಾದರೂ ಸಹ ರೈತನಿಗೆ ಸಮಸ್ಯೆಗಳು ಇದ್ದದ್ದೇ. ಈಗ
ವಿವಿಧ ಬೆಳೆಗಳಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಈ ಕುರಿತು ಹಂಪಿ ಉತ್ಸವದಲ್ಲಿ ಚಿಂತನ-ಮಂಥನ ನಡೆಯಬೇಕಿತ್ತು. ಉತ್ಸವ ಎಂದರೆ ಹಾಡುವುದು, ಕುಣಿಯುವುದು ಮಾತ್ರವಲ್ಲ, ಜ್ಞಾನದ ಹಂಚಿಕೆಯೂ ಆಗಬೇಕು.
ಹನುಮಂತಪ್ಪ ಹೊಳಿಯಾಚೆ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಹೈ.ಕ ವಿಭಾಗ.

ಬಳ್ಳಾರಿ ಜಿಲ್ಲಾಡಳಿತ ರೈತನನ್ನು ಕಡೆಗಣಿಸಿಲ್ಲ. ಕೃಷಿಕರಿಗಾಗಿ ಈ ಬಾರಿ ಎತ್ತಿನ ಬಂಡಿ ಉತ್ಸವ ನಡೆಸಲಾಗಿದೆ. 300ಕ್ಕೂ ಅಧಿಕ ಎತ್ತಿನ ಬಂಡಿಗಳು ಪಾಲ್ಗೊಂಡಿದ್ದವು. ಕಳೆದ ಬಾರಿ ಕೃಷಿ ವಿಚಾರ ಸಂಕಿರಣದಲ್ಲಿ ಎಲ್ಲ ರೈತರಿಗೂ ಚರ್ಚಿಸಲು ವೇದಿಕೆ ಸಿಗುತ್ತಿಲ್ಲ ಎಂಬ ಅಭಿಪ್ರಾಯ ಬಂದಿದ್ದರಿಂದ ಕೃಷಿ ವಿಚಾರಗೋಷ್ಠಿಯನ್ನು ನವೆಂಬರ್‌ ಕೊನೆಗೆ ಕೃಷಿ ಕಾಲೇಜಿನಲ್ಲಿ ಆಯೋಜಿಸಲು ಸಿದ್ಧತೆ ನಡೆಸಲಾಗುವುದು. 
 ಡಾ| ವಿ.ರಾಮಪ್ರಸಾತ್‌ ಮನೋಹರ್‌, ಜಿಲ್ಲಾಧಿಕಾರಿ, ಬಳ್ಳಾರಿ

ಬಾಯಲ್ಲಿ ಎನ್ನಡ.. ಮನದಲ್ಲಿ ಕನ್ನಡ!
ಹಂಪಿ: ಏಮನ್ನಾ… ಬಾಗುನ್ನಾವನ್ನಾ… ಟಿಫಿನ್‌ ಅಯನ್ನಾನ… ಎಕ್ಕುಂಡಿಕ್ಕನ್ನಾ…ಮಲ್ಲೇಮೇ ಅಕ್ಕಾ… ಅಂತಾ ಪನಿ ಅಯನಾ… ಎಲಾಗುಂದಿ ಉತ್ಸವವಮ್‌… ಇವು ಹಂಪಿಯ ಎಲ್ಲೆಡೆ ಸಾಮಾನ್ಯವಾಗಿ ಕೇಳಿ ಬರುವ ತೆಲುಗು ಪದಗಳು. ಗಂಡುಮೆಟ್ಟಿನ ಭೂಮಿ ಎಂದೇ ಕರೆಯಲ್ಪಡುವ ಹಂಪಿ ಮತ್ತು ಸುತ್ತಮುತ್ತ ಪ್ರದೇಶದಲ್ಲಿ ತೆಲುಗು ಭಾಷೆಯೇ ಪ್ರಮುಖ ಸಂಹವನ ಭಾಷೆ.

ಅಂತಹ ಏಮನ್ನಾ… ಬಾಗುನ್ನಾವನ್ನಾ… ಭಾಷೆಯ ದಟ್ಟ ಪ್ರಭಾವದ ನಡುವೆಯೂ ಹಂಪಿ ಉತ್ಸವ ವರ್ಷ ದಿಂದ ವರ್ಷಕ್ಕೆ ಜನರ ಉತ್ಸವವಾಗುತ್ತಿದೆ. ಇದು ಇಲ್ಲಿನ ಜನರ ಕನ್ನಡದ ಅಭಿಮಾನದ ದ್ಯೋತಕ. ಹಂಪಿಯ ಜನರಲ್ಲಿ ತೆಲುಗು ಭಾಷೆ ಹಾಸುಹೊಕ್ಕಾಗಿದೆ. ಒಂದರ್ಥದಲ್ಲಿ ತೆಲುಗು ಇಲ್ಲಿ ಜೀವಭಾಷೆ. ಆದರೂ, ಇಲ್ಲಿನ ಜನ ಎಂದೆಂದಿಗೂ ಕನ್ನಡತನವ ಬಿಟ್ಟವರೇ ಅಲ್ಲ. ಮನೆ, ಮಾರುಕಟ್ಟೆ, ಹೊರಗಡೆ ಯಾವ ಭಾಷೆಯನ್ನಾಡಲಿ ಕನ್ನಡದ ವಿಷಯಕ್ಕೆ ಬಂದಾಗ ಇಲ್ಲಿನ ಜನರು ನಿಲ್ಲುವುದೇ ಕನ್ನಡಮ್ಮನ ಪರ ಎನ್ನುವುದಕ್ಕೆ 1987ರಲ್ಲಿ ಸಣ್ಣದಾಗಿ ಪ್ರಾರಂಭವಾದ ಹಂಪಿ ಉತ್ಸವ ಈಗೀಗ ಮನೆಯ ಉತ್ಸವವಾಗುವತ್ತ ಸಾಗುತ್ತಿರುವುದೇ ಸಾಕ್ಷಿ. 

ತೆಲುಗು ಜೀವನಾಧಾರ ಭಾಷೆ ಆದರೆ, ಕನ್ನಡ ಜೀವದ ಭಾಷೆ ಎಂಬುದನ್ನು ಹಂಪಿ ಹಾಗೂ ಸುತ್ತಮುತ್ತಲ ಪ್ರದೇಶದ ಜನರು ಸಾರಿ ಸಾರಿ ಹೇಳುತ್ತಿದ್ದಾರೆ. ಹಂಪಿ ಉತ್ಸವದಲ್ಲಿ ಅಪ್ಪಿತಪ್ಪಿಯೂ ತೆಲುಗು ಕೇಳಿ ಬರುವುದೇ ಇಲ್ಲ. ಅದರೆ,
ಇಲ್ಲಿ ಐಸ್‌ ಮಾರುವ ಅಂಗಡಿಯ ಹುಡುಗನಿಂದ ಹಿಡಿದು ಐಷಾರಾಮಿ ಹೋಟೆಲ್‌, ಸಣ್ಣ ಅಂಗಡಿಯಿಂದ ಹಿಡಿದು ಬಹುದೊಡ್ಡ ಮಳಿಗೆಯಲ್ಲಿ ಥಟ್ಟನೆ ಕೇಳಿ ಬರುವುದು ತೆಲುಗು. ಇಂತಹ ವಾತಾವರಣದ ನಡುವೆಯೂ ಕನ್ನಡಮ್ಮನ ನಿತ್ಯೋತ್ಸವ ನಡೆಯುತ್ತಲೇ ಇದೆ. 

ಟಾಪ್ ನ್ಯೂಸ್

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Loksabha election; ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

Neha Hiremath Case; Protest by BJP-JDS-ABVP across the state

Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್

Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್

Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್‌

Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.