ಧರ್ಮದ ಗುಡ್ಡದಲ್ಲಿ ಪಲ್ಲಕ್ಕಿ ಮಹೋತ್ಸವ

ಕೋವಿಡ್ ಭೀತಿ ನಡುವೆಯೂ ಉತ್ಸವಕ್ಕೆ ಸಾಕ್ಷಿಯಾದ ಸಹಸ್ರಾರು ಭಕ್ತರು

Team Udayavani, Oct 27, 2020, 4:43 PM IST

ballary-tdy-1

ಹೊಸಪೇಟೆ: ಕೋವಿಡ್ ಭೀತಿ ನಡುವೆಯೂ ನಾಡಹಬ್ಬ ದಸರಾ ಹಬ್ಬದ ಪ್ರಯುಕ್ತವಾಗಿ ಸಮೀಪದ ನಾಗೇನಹಳ್ಳಿ ಗ್ರಾಮದ ಧರ್ಮದ ಗುಡ್ಡದಲ್ಲಿ ಭಾನುವಾರ ಪಲ್ಲಕ್ಕಿ ಮಹೋತ್ಸವದ ಮೂಲಕ ಶ್ರೀ ಚೆನ್ನಬಸಪ್ಪ ಹಾಗೂ ನಿಜಲಿಂಗಮ್ಮ ದೇವಿಗೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು, ಬನ್ನಿ ಸಮರ್ಪಣೆ ಗೈದು ಭಕ್ತಿ ಪ್ರದರ್ಶಿಸಿದರು.

ನಗರದ ತಳವಾರ ಕೇರಿಯ ಶ್ರೀ ರಾಂಪುರ ದುರ್ಗಮ್ಮದೇವಿ, ಬಾಣದಕೇರಿ ನಿಜಲಿಂಗಮ್ಮ ದೇವಿ, ಮ್ಯಾಸಕೇರಿಯ ಹುಲಿಗೆಮ್ಮ ದೇವಿ ಹಾಗೂ ಕೊಂಗಮ್ಮ ದೇವಿ, ಉಕ್ಕಡಕೇರಿಯ ಹುಲಿಗೆಮ್ಮ ಹಾಗೂ ಜಲದುರ್ಗಮ್ಮ ದೇವಿಯ ಉತ್ಸವ ಮೂರ್ತಿಗಳನ್ನು ಫಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ, ಧರ್ಮದಗುಡ್ಡಕ್ಕೆ ಕಾಲ್ನಡಿಗೆಯಲ್ಲಿ ತೆರಳುವ ಭಕ್ತರು, ಗುಡ್ಡದ ಕೆಳಭಾಗದಲ್ಲಿರುವ ಬನ್ನಿಮರಕ್ಕೆ ಪ್ರದಕ್ಷಿಣೆ ಹಾಕಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಪಲ್ಲಕ್ಕಿ ಮೂಲಕ ಧರ್ಮದ ಗುಡ್ಡದಲ್ಲಿರುವ ಚೆನ್ನಬಸವೇಶ್ವರ ಹಾಗೂ ನಿಜಲಿಂಗಮ್ಮ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದರು. ಅಲ್ಲಿಂದ ಪಲ್ಲಕ್ಕಿ ಮಹೋತ್ಸವ ನಗರಕ್ಕೆ ಆಗಮಿಸಿ ಆಯಾ ದೇಗುಲಗಳಲ್ಲಿ ಸೇರಿ ಸಂಪನ್ನಗೊಂಡಿತು.

ಕೋವಿಡ್‌ ಹಿನ್ನಲೆಯಲ್ಲಿ ಪಲ್ಲಕ್ಕಿ ಹೊತ್ತು ಸಾಗುವವರು ಸೇರಿ 25 ಜನರಿಗೆ ಮಾತ್ರ ಪೊಲೀಸರು ಅವಕಾಶ ನೀಡಿದ್ದರು. ಹೊಸಪೇಟೆಯಿಂದ ನಾಗೇನಹಳ್ಳಿ ಗ್ರಾಮಕ್ಕೆ ಸಾಗುವ ಮಾರ್ಗಮಧ್ಯದಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನುಅಳವಡಿಸಿ, ಮಾಸ್ಕ್ ಧರಿಸದೇ ಇರುವ ಭಕ್ತರನ್ನು ವಾಪಸ್ಸು ಕಳಹಿಸಿದರು. ಬಸವದುರ್ಗ ಗ್ರಾಮದ ರಸ್ತೆ ಸೇರಿದಂತೆ ಮುಂತಾದ ರಸ್ತೆಯಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು

ಅಳಡಿಸಿದ್ದರು. ಆದರೂ ಭಕ್ತರು, ಮಾಗಣಿ ರಸ್ತೆಯ ಮೂಲಕ ಪೊಲೀಸರ ಕಣ್ಣು ತಪ್ಪಿಸಿ, ಸಹಸ್ರಾರು ಸಂಖ್ಯೆಯಲ್ಲಿ ಧರ್ಮದ ಗುಡ್ಡದಲ್ಲಿ ಜಮಾವಣೆಗೊಂಡಿದ್ದರು. ಸಚಿವ ಆನಂದ ಸಿಂಗ್‌ ಹಾಗೂ ಅವರ ಪುತ್ರ ಸಿದಾರ್ಥಸಿಂಗ್‌, ಏಳುಕೇರಿ ಮುಖಂಡರು ಹಾಗೂ ದೈವ, ಯುವಕರು, ಧರ್ಮದ ಗುಡ್ಡದ ಫಲಕ್ಕಿ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ಡಿವೈಎಸ್‌ಪಿ ರಘುಕುಮಾರ್‌ ಹಾಗೂ ಗ್ರಾಮೀಣ ಠಾಣೆಪಿಐ ಶ್ರೀನಿವಾಸ ಮೇಟಿ ಸೇರಿದಂತೆ ಇತರೆ ಅಧಿ ಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು. ಹೊಸಪೇಟೆ,ಕಮಲಾಪುರ, ನಾಗೇನಹಳ್ಳಿ, ಬಸವದುರ್ಗ,ಹೊಸೂರು ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಸಹಸ್ರಾರು ಭಕ್ತರು, ಧರ್ಮದ ಗುಡ್ಡದ ಪಲ್ಲಕ್ಕಿ ಮಹೋತ್ಸವಕ್ಕೆ ಸಾಕ್ಷಿಯಾದರು.

ದಸರಾ ವಿಜಯದ ಸಂಕೇತ :

 ಕುರುಗೋಡು: ಎಮ್ಮಿಗನೂರಿನ ಹಂಪಿ ಸಾವಿರ ಶ್ರೀ ಮಹಾಂತ ಶಿವಾಚಾರ್ಯ ಮಠದ ಮೂಲ ಗದ್ದುಗೆಗೆ ಶ್ರೀ ವಾವದೇವಾ ಶ್ರೀಗಳು ವಿಶೇಷ ಪೂಜೆಸಲ್ಲಿಸಿದರು. ನಂತರ ಮಾತನಾಡಿ, ಮಾನವ ಮೊದಲಿಗೆ ತನ್ನನ್ನು ತಾನು ಅರಿತು ಸಮಾಜಮುಖೀಯಾಗಿ ಕರ್ತವ್ಯ ನಿರ್ವಹಣೆ ಮಾಡಿದಲ್ಲಿ ಮಾತ್ರ ಸದೃಢ ಸಮಾಜ ನಿರ್ಮಾಣ ಮಾಡಲು ಸಾಧ್ಯ. ದಸರಾ ವಿಜಯದ ಸಂಕೇತವಾಗಿದೆ. ದುಷ್ಟರಿಗೆ ಶಿಕ್ಷೆ, ಶಿಷ್ಟರಿಗೆ ರಕ್ಷಣೆ ಮಾಡುವ ರೀತಿ ಮನುಷ್ಯ ದಾನವ ಗುಣಗಳನ್ನು ತೊರೆದು, ಮಾನವ ಗುಣಗಳನ್ನು ಮೈಗೂಡಿಸಿಕೊಳ್ಳುವಂತೆ ಮುಖ್ಯವಾಗಿ ತಾಯಿ ತಂದೆಯರಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆ ಭಕ್ತಿಯಿಲ್ಲದಿದ್ದರೆ ಜೀವನದುದ್ದಗಲಕ್ಕೂ ಸಂಭ್ರಮದ ಆಚರಣೆಗಳು ಕಾಣಲು ಸಾಧ್ಯವಿಲ್ಲ ಎಂದರು. ಗ್ರಾಮದ ಆರಾಧ್ಯ ದೇವರು ಶ್ರೀ ಜಡೇಶಿದ್ದೇಶಿವಯೋಗಿಗಳ ದೇವರ ಮೂರ್ತಿಗೆ ಬೆಳ್ಳಿ ಕವಚ ಅಲಂಕಾರ ಮಾಡಲಾಗಿತ್ತು.

ಟಾಪ್ ನ್ಯೂಸ್

ಮಲ್ಯ ನ್ಯಾಯಾಂಗ ನಿಂದನೆ: ಜ.18ಕ್ಕೆ ಸುಪ್ರೀಂಕೋರ್ಟ್‌ ತೀರ್ಪು

ಮಲ್ಯ ನ್ಯಾಯಾಂಗ ನಿಂದನೆ: ಜ.18ಕ್ಕೆ ಸುಪ್ರೀಂಕೋರ್ಟ್‌ ತೀರ್ಪು

ಸಲಿಂಗಕಾಮಿ ವಿವಾಹ: ವಿಚಾರಣೆಯ ನೇರ ಪ್ರಸಾರಕ್ಕೆ ಮನವಿ

ಸಲಿಂಗಕಾಮಿ ವಿವಾಹ: ವಿಚಾರಣೆಯ ನೇರ ಪ್ರಸಾರಕ್ಕೆ ಮನವಿ

ಪದ್ಮಶ್ರೀ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ನಿಧನ

ಪದ್ಮಶ್ರೀ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ನಿಧನ

ಬಿಹಾರ ವಿಧಾನಸಭೆಯಲ್ಲಿ ಮದ್ಯದ ಬಾಟಲಿ!

ಬಿಹಾರ ವಿಧಾನಸಭೆಯಲ್ಲಿ ಮದ್ಯದ ಬಾಟಲಿ!

ಅಯೋಧ್ಯೆ ತೀರ್ಪು ಧರ್ಮಾಧಾರಿತವಲ್ಲ: ಮಾಜಿ ಸಿಜೆಐ ಗೊಗೋಯ್!

ಅಯೋಧ್ಯೆ ತೀರ್ಪು ಧರ್ಮಾಧಾರಿತವಲ್ಲ: ಮಾಜಿ ಸಿಜೆಐ ಗೊಗೋಯ್!

ಅಪ್ಪ ಅರ್ಥವಾದರೂ ಮಗನ ನಡೆ ಅರ್ಥವಾಗುತ್ತಿಲ್ಲ: ಶಂಕರ್‌

ಅಪ್ಪ ಅರ್ಥವಾದರೂ ಮಗನ ನಡೆ ಅರ್ಥವಾಗುತ್ತಿಲ್ಲ: ಶಂಕರ್‌

ಭ್ರಷ್ಟಾಚಾರ ಪ್ರಕರಣ: ವಿಚಾರಣೆಗೆ ಹಾಜರಾದ ಅನಿಲ್‌ ದೇಶ್‌ಮುಖ್‌

ಭ್ರಷ್ಟಾಚಾರ ಪ್ರಕರಣ: ವಿಚಾರಣೆಗೆ ಹಾಜರಾದ ಅನಿಲ್‌ ದೇಶ್‌ಮುಖ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವ್ಯಾಸನತಾಂಡ ಗ್ರಾಮಕ್ಕೆ ದಿಢೀರ್ ಭೇಟಿ ನೀಡಿ, ಆರೋಗ್ಯ ವಿಚಾರಿಸಿದ ಶಾಸಕ ಜಿ.ಕರುಣಾಕರ ರೆಡ್ಡಿ

ವ್ಯಾಸನತಾಂಡ ಗ್ರಾಮಕ್ಕೆ ದಿಢೀರ್ ಭೇಟಿ ನೀಡಿ, ಆರೋಗ್ಯ ವಿಚಾರಿಸಿದ ಶಾಸಕ ಜಿ.ಕರುಣಾಕರ ರೆಡ್ಡಿ

ಪರೀಕ್ಷೆ ಮುಂದೂಡಲು ಪಟ್ಟು

ಪರೀಕ್ಷೆ ಮುಂದೂಡಲು ಪಟ್ಟು

Untitled-2

ಅಂಗನವಾಡಿ ಕೇಂದ್ರದ ಮೇಲ್ಛಾವಣಿ ಶಿಥಿಲ-ಆತಂಕ

12ishwarappa

ನೆಲೆ ಕಳೆದುಕೊಳ್ಳುತ್ತಿದೆ ಕಾಂಗ್ರೆಸ್‌

ಬಳ್ಳಾರಿ: ಆಫ್ರಿಕಾದಿಂದ ಬಂದ ಇಬ್ಬರು ಕ್ವಾರಂಟೈನ್ ಗೆ: ಡಾ. ಜನಾರ್ಧನ್

ಬಳ್ಳಾರಿ: ಆಫ್ರಿಕಾದಿಂದ ಬಂದ ಇಬ್ಬರು ಕ್ವಾರಂಟೈನ್ ಗೆ: ಡಾ. ಜನಾರ್ಧನ್

MUST WATCH

udayavani youtube

ಕಾಪು ಪರಿಸರದಲ್ಲಿ ಗಾಳಿ, ಗುಡುಗು, ಮಿಂಚು ಸಹಿತ ಭಾರೀ ಮಳೆ

udayavani youtube

ದನಗಳ್ಳರನ್ನು ಹಿಡಿಯಲು ಹೋದವರ ಮೇಲೆ ವಾಹನ ಚಲಾಯಿಸಿ ಹಲ್ಲೆ: ಇಬ್ಬರಿಗೆ ಗಂಭೀರ ಗಾಯ

udayavani youtube

ಸುಟ್ಟಗಾಯ ಸಂರ್ಪೂಣ ನಿವಾರಣೆ ಆಗಲು ಈ ನಾಟಿ ವೈದ್ಯರ ಬಳಿ ಇದೆ ಔಷಧಿ.

udayavani youtube

ಕಸ್ತೂರಿರಂಗನ್ ಸಮೀಕ್ಷೆ ಅವೈಜ್ಞಾನಿಕ !?

udayavani youtube

ಭಾರತದಲ್ಲಿ ವ್ಯಾಸಂಗ ಮಾಡಿದ್ದನಂತೆ ಈ ತಾಲಿಬಾನ್‌ ವಕ್ತಾರ!

ಹೊಸ ಸೇರ್ಪಡೆ

ಮಲ್ಯ ನ್ಯಾಯಾಂಗ ನಿಂದನೆ: ಜ.18ಕ್ಕೆ ಸುಪ್ರೀಂಕೋರ್ಟ್‌ ತೀರ್ಪು

ಮಲ್ಯ ನ್ಯಾಯಾಂಗ ನಿಂದನೆ: ಜ.18ಕ್ಕೆ ಸುಪ್ರೀಂಕೋರ್ಟ್‌ ತೀರ್ಪು

ಸಲಿಂಗಕಾಮಿ ವಿವಾಹ: ವಿಚಾರಣೆಯ ನೇರ ಪ್ರಸಾರಕ್ಕೆ ಮನವಿ

ಸಲಿಂಗಕಾಮಿ ವಿವಾಹ: ವಿಚಾರಣೆಯ ನೇರ ಪ್ರಸಾರಕ್ಕೆ ಮನವಿ

ಪದ್ಮಶ್ರೀ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ನಿಧನ

ಪದ್ಮಶ್ರೀ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ನಿಧನ

ಬಿಹಾರ ವಿಧಾನಸಭೆಯಲ್ಲಿ ಮದ್ಯದ ಬಾಟಲಿ!

ಬಿಹಾರ ವಿಧಾನಸಭೆಯಲ್ಲಿ ಮದ್ಯದ ಬಾಟಲಿ!

ಅಯೋಧ್ಯೆ ತೀರ್ಪು ಧರ್ಮಾಧಾರಿತವಲ್ಲ: ಮಾಜಿ ಸಿಜೆಐ ಗೊಗೋಯ್!

ಅಯೋಧ್ಯೆ ತೀರ್ಪು ಧರ್ಮಾಧಾರಿತವಲ್ಲ: ಮಾಜಿ ಸಿಜೆಐ ಗೊಗೋಯ್!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.