ಶ್ರೀರಾಮುಲು ಪುತ್ರಿ ಮದುವೆಗೆ ಪ್ರಧಾನಿ ಮೋದಿ ಶುಭಾಶಯ ಪತ್ರ

Team Udayavani, Feb 21, 2020, 8:36 PM IST

ಬಳ್ಳಾರಿ: ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರ ಪುತ್ರಿ ರಕ್ಷಿತಾ ಅವರ ವಿವಾಹಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ.

ಸಚಿವ ಶ್ರೀರಾಮುಲು ಅವರ ಮಗಳ ಮದುವೆ ಮಾರ್ಚ್‌ 5ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಈಚೆಗೆ ಮೋದಿಯವರನ್ನು ಭೇಟಿಯಾಗಿದ್ದ ಶ್ರೀರಾಮುಲು ಮದುವೆಗೆ ಆಹ್ವಾನಿಸಿದ್ದರು. ಇದಕ್ಕೆ ಪ್ರತಿಯಾಗಿ ಮೋದಿ ಅವರು ಶುಭಾಶಯ ಪತ್ರ ಕಳುಹಿಸಿದ್ದಾರೆ.

“ನಿಮ್ಮ ಮಗಳ ಮದುವೆಗೆ ನನ್ನನ್ನು ಆಹ್ವಾನಿಸಿದ್ದಕ್ಕಾಗಿ ಧನ್ಯವಾದಗಳು. ಮದುವೆ ಸಮೃದ್ಧಿ ಮತ್ತು ಅದ್ಭುತ ಹಂಚಿಕೆಯ ಅನುಭವಗಳಿಂದ ತುಂಬಿದೆ. ಮದುವೆಯಲ್ಲಿ ಸಂಭ್ರಮ, ಸಂತೋಷ ಮನೆ ಮಾಡಿದೆ. ಮದುವೆಯಾಗುತ್ತಿರುವ ನವ ವಧು-ವರರು ತಮ್ಮ ಜೀವನದ ಅತ್ಯಂತ ಪ್ರಮುಖ ಘಟ್ಟವನ್ನು ಆರಂಭಿಸುತ್ತಿದ್ದಾರೆ. ಅವರ ಜೀವನದ ಈ ಪ್ರಯಾಣ ಸಂತೋಷದಿಂದ ಮುಂದುವರಿಯಬೇಕೆಂದು ಪ್ರಾರ್ಥಿಸುವೆ.

ಈ ವಿಶೇಷ ಸಂದರ್ಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ನವ ವಧು-ವರರಾದ ರಕ್ಷಿತಾ ಹಾಗೂ ಸಂಜೀವ ರೆಡ್ಡಿ ಮತ್ತು ಕುಟುಂಬದವರು, ಸ್ನೇಹಿತರು ಪ್ರೀತಿ ಪಾತ್ರರೆಲ್ಲರಿಗೂ ಅಭಿನಂದನೆಗಳು’ ಎಂದು ಮೋದಿಯವರು ಪತ್ರದಲ್ಲಿ ಶುಭಕೋರಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ